Rain News : ರಾಜ್ಯದ ಈ ಜಿಲ್ಲೆಗಳಲ್ಲಿ ಮಳೆಯ ತೀವ್ರತೆ ಹೆಚ್ಚಾದ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಸಾಧ್ಯತೆ.!

Picsart 25 07 20 23 26 15 619

WhatsApp Group Telegram Group

ಇದೀಗ ರಾಜ್ಯದಲ್ಲಿ ಮತ್ತೊಮ್ಮೆ ಮುಂಗಾರು ಚುರುಕಾಗಿದೆ. ಕರ್ನಾಟಕದಲ್ಲಿ ಜುಲೈ ಮಧ್ಯ ಭಾಗದಿಂದ ಮಳೆರಾಯನ ಆರ್ಭಟ ಮತ್ತೆ ಪ್ರಬಲವಾಗಿದ್ದು, ಮುಂದಿನ ಮೂರು ದಿನಗಳು ಬಹುತೇಕ ಜಿಲ್ಲೆಗಳಿಗೆ ಭಾರೀ ಮಳೆಯ ಮುನ್ಸೂಚನೆಯಿದೆ. ಹವಾಮಾನ ಇಲಾಖೆ (Weather department) ನೀಡಿರುವ ಎಚ್ಚರಿಕೆಯಿಂದ ಹಲವಾರು ಜಿಲ್ಲೆಗಳಲ್ಲಿ ಮುಂಜಾಗ್ರತಾ ಕ್ರಮಗಳು ಜಾರಿಗೊಳ್ಳುತ್ತಿವೆ. ಮುಂಗಾರು ಚಟುವಟಿಕೆಗಳು ಮತ್ತೆ ಚುರುಕಾಗಿರುವ ಈ ಸಂದರ್ಭದಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆಯ (Holiday declared for schools and colleges) ಸಾಧ್ಯತೆ ಕೂಡ ಹೆಚ್ಚಾಗಿದೆ. ಈ ಸಂದರ್ಭದಲ್ಲಿ ಎಲ್ಲೆಲ್ಲಿ ಯಾವ ಮುನ್ಸೂಚನೆಗಳು ಹೊರಬಿದ್ದಿವೆ? ಯಾವ ಜಿಲ್ಲೆಗಳಿಗೆ ಎಚ್ಚರಿಕೆಯನ್ನು ನೀಡಲಾಗಿದೆ? ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಹೌದು, ಭಾರೀ ಮಳೆಯ ಮುನ್ಸೂಚನೆಯ ನಡುವೆ ರಾಜ್ಯ ಸರ್ಕಾರ (State government) ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಹವಾಮಾನ ತೀವ್ರತೆ, ಪ್ರದೇಶಾನುಸಾರ ಎಚ್ಚರಿಕೆ ಸೂಚನೆಗಳು ನೀಡಲಾಗಿದ್ದು, ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸುವ ಸಾಧ್ಯತೆ ಇದೆ.

ರಾಜ್ಯದಲ್ಲಿ ಮಳೆ ಚುರುಕು: ಮೂರು ದಿನ ಭಾರೀ ಮಳೆಯ ಮುನ್ಸೂಚನೆ

ಕರ್ನಾಟಕದಲ್ಲಿ ಮುಂಗಾರು ಮಳೆ (Monsoon rain) ಮತ್ತೆ ಆರ್ಭಟವನ್ನು ಶುರುಮಾಡಿಕೊಂಡಿದೆ.  ಹವಾಮಾನ ಇಲಾಖೆ ಪ್ರಕಾರ, ಮುಂದಿನ ಮೂರು ದಿನಗಳ ಕಾಲ ರಾಜ್ಯದ ಹಲವು ಭಾಗಗಳಲ್ಲಿ ಸಾಧಾರಣದಿಂದ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಮಟ್ಟದಲ್ಲಿ ಮುಂಜಾಗ್ರತಾ ಕ್ರಮವಾಗಿ ವಿವಿಧ ಅಲರ್ಟ್‌ಗಳನ್ನೂ (Various alerts have also been issued as a precautionary measure) ಪ್ರಕಟಿಸಲಾಗಿದೆ.

ಯಾವ ಜಿಲ್ಲೆಗೆ ಯಾವ ಅಲರ್ಟ್?

ರೆಡ್ ಅಲರ್ಟ್ (Red Alert):
ಕೊಡಗು ಜಿಲ್ಲೆಗೆ ಭಾರೀ ಮಳೆಯ ಭೀತಿಯ ಹಿನ್ನೆಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.

ಆರೆಂಜ್ ಅಲರ್ಟ್ (Orange Alert):
ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಮೈಸೂರು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲಿ ಭಾರೀ ಮಳೆ ಸಾಧ್ಯತೆ ಇರುವುದರಿಂದ ಆರೆಂಜ್ ಅಲರ್ಟ್ ನೀಡಲಾಗಿದೆ.

ಯೆಲ್ಲೋ ಅಲರ್ಟ್ (Yellow Alert):
ಬೆಂಗಳೂರು, ಮಂಡ್ಯ, ರಾಮನಗರ ಸೇರಿದಂತೆ ಇನ್ನಿತರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಕರಾವಳಿ ಜಿಲ್ಲೆಗಳ ಪರಿಸ್ಥಿತಿ ಗಂಭೀರ:

ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮುಂಗಾರು ಗರಿಷ್ಟ ಮಟ್ಟ ತಲುಪುವ ಸಾಧ್ಯತೆ ಇದೆ. ಈ ಭಾಗಗಳಲ್ಲಿ ಒಡೆದು ಬೀಳುವ ಭಾರಿ ಮಳೆಯೊಂದಿಗೆ ಗಂಟೆಗೆ 30-40 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ. ಹೀಗಾಗಿ ಕರಾವಳಿ ಭಾಗದ ಮೀನುಗಾರರಿಗೆ (For coastal fishermen) ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.

ಬೆಂಗಳೂರು ಹವಾಮಾನ ವಿವರ:

ರಾಜ್ಯದ ರಾಜಧಾನಿ ಬೆಂಗಳೂರು (Capital of state) ನಗರದಲ್ಲಿ ಜುಲೈ 19ರಂದು ಮೋಡಕವಿದ ವಾತಾವರಣವಿತ್ತು. ಈ ಹಿನ್ನೆಲೆ ಸಾಧಾರಣ ಮಳೆಯಾಗಿದೆ. 
ಗರಿಷ್ಠ ತಾಪಮಾನ: 25° ಸೆಲ್ಸಿಯಸ್
ಕನಿಷ್ಠ ತಾಪಮಾನ: 21° ಸೆಲ್ಸಿಯಸ್ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಶಾಲಾ-ಕಾಲೇಜುಗಳಿಗೆ ರಜೆ ಸಾಧ್ಯತೆ:

ವರುಣಾರ್ಭಟ ಜೋರಾಗಿರುವಂತಹ  ಸಾಧ್ಯತೆ ಇರುವುದರಿಂದ, ಮಕ್ಕಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕೆಲವು ಜಿಲ್ಲೆಗಳಲ್ಲಿ ಶಾಲಾ ಮತ್ತು ಕಾಲೇಜುಗಳಿಗೆ ತಾತ್ಕಾಲಿಕ ರಜೆ ಘೋಷಿಸುವ ಸಾಧ್ಯತೆಯಿದೆ. ಕಳೆದ ದಿನಗಳಲ್ಲಿ ಕೆಲವು ಜಿಲ್ಲೆಗಳಲ್ಲಿ ಈ ರೀತಿಯ ಕ್ರಮವನ್ನ ಜಿಲ್ಲಾಡಳಿತಗಳು(District Administrations) ಜಾರಿಗೆ ತಂದಿದ್ದವು, ವಿದ್ಯಾಭ್ಯಾಸ ಹಿಂದುಳಿಯದಂತೆ ಸರಿದೂಗಿಸುವ ನಿರ್ಧಾರಗಳನ್ನು ಕೂಡ ತೆಗೆದುಕೊಳ್ಳಲಾಗಿದೆ.

ಭಾರೀ ಮಳೆಯ ಮುನ್ಸೂಚನೆ ಹೊಂದಿರುವ ಜಿಲ್ಲೆಗಳ ಪಟ್ಟಿ:

ದಕ್ಷಿಣ ಕನ್ನಡ
ಉತ್ತರ ಕನ್ನಡ
ಉಡುಪಿ
ಕೊಡಗು
ಗದಗ
ಕೊಪ್ಪಳ
ಬೆಳಗಾವಿ
ವಿಜಯಪುರ
ಮೈಸೂರು
ಶಿವಮೊಗ್ಗ
ಚಿಕ್ಕಮಗಳೂರು
ಚಿತ್ರದುರ್ಗ
ಧಾರವಾಡ
ಕೋಲಾರ
ಬೀದ‌ರ್
ಕಲಬುರಗಿ

ಒಟ್ಟಾರೆಯಾಗಿ, ಮುಂಗಾರು ಮಳೆ ಚುರುಕುಕೊಳ್ಳುತ್ತಿದ್ದು, ಈ ಸಮಯದಲ್ಲಿ ಸಾರ್ವಜನಿಕರು ಹವಾಮಾನ ಇಲಾಖೆ ಸೂಚನೆಗಳನ್ನು ಪಾಲಿಸಿ ಮುಂಜಾಗ್ರತಾ ಕ್ರಮ (Precautionary measure) ತೆಗೆದುಕೊಳ್ಳುವುದು ಬಹು ಮುಖ್ಯ. ಪ್ರವಾಹ ಪ್ರದೇಶಗಳಿಂದ ದೂರವಿರುವುದು, ಮಕ್ಕಳನ್ನು ಸುರಕ್ಷಿತ ಸ್ಥಳಗಳಲ್ಲಿ ಇರಿಸುವುದು, ಹಾಗೂ ನಿರಂತರವಾಗಿ ಸ್ಥಳೀಯ ಆಡಳಿತದಿಂದ ಪ್ರಕಟವಾಗುವ ಮಾಹಿತಿಗಳನ್ನು ಗಮನಿಸುವುದು ಅಗತ್ಯವಾಗಿದೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

 

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!