Job Alert : ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ 7 ಸಾವಿರಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ ಅಹ್ವಾನ!

locopilot

ಇದೀಗ ಒಂದು ಸಿಹಿ ಸುದ್ದಿ ತಿಳಿದು ಬಂದಿದೆ. ಅದೇಷ್ಟೋ ಸರಕಾರದ ಉದ್ಯೋಗ ಅವಕಾಶಗಳು ಪ್ರತಿವರ್ಷ ಬಿಡುಗಡೆ ಆಗುತ್ತವೆ. ಎಲ್ಲರೂ ಸರ್ಕಾರದ ಉದ್ಯೋಗಕ್ಕಾಗಿ ಕಾಯುತ್ತಿರುತ್ತಾರೆ. ಇಂದು ಜಗತ್ತು ಬಹಳ ಸ್ಪರ್ಧಾತ್ಮಕ ಯುಗವಾಗಿದ್ದರಿಂದ ( Competative period ) ಉದ್ಯೋಗ ದಲ್ಲಿ ಕೂಡ ಬಹಳ ಪೈಪೋಟಿ ಇರುತ್ತದೆ. ನೀವೇನಾದರೂ ಉದ್ಯೋಗ ಹುಡುಕುತ್ತಿದ್ದರೆ ರೈಲ್ವೆ ಇಲಾಖೆಯಲ್ಲಿ ಬಹಳಷ್ಟು ಉದ್ಯೋಗಗಳು ಖಾಲಿ ಇವೆ. ಅದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ರೈಲ್ವೆ ಇಲಾಖೆಯಲ್ಲಿ 7000 ಹುದ್ದೆಗಳು ( 7000 posts in Railway department ) :

ಇದೀಗ ರೈಲ್ವೆ ಇಲಾಖೆಯು ಜಾರಿಗೊಳಿಸಿದ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಈ ಇಲಾಖೆಯಲ್ಲಿ 7000 ಕ್ಕೂ ಹೆಚ್ಚು ಹುದ್ದೆಗಳು ಲಭ್ಯವಿವೆ. ರೈಲ್ವೆ ನೇಮಕಾತಿ ಮಂಡಳಿಯು ಸಹಾಯಕ ಲೋಕೋ ಪೈಲಟ್‌ಗಳಾಗಿ ( Loko Pilot ) ಅರ್ಜಿಯನ್ನು ಆಹ್ವಾನಿಸಲಾಗಿದೆ. ಇದಕ್ಕಾಗಿ ಜನವರಿ 20 ಮತ್ತು ಫೆಬ್ರವರಿ 19 ರ ನಡುವೆ ಅವರ ಅಧಿಕೃತ ವೆಬ್‌ಸೈಟ್‌ ನ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸುವಿಕೆಯ  ಕೊನೆಯ ದಿನಾಂಕ ( Last date for Application ) :

ಅರ್ಜಿ ಸಲ್ಲಿಸಲು ಕೊನೆಯ ದಿನ ಫೆಬ್ರವರಿ 19, 2024 ಆಗಿರುತ್ತದೆ.

ಹಾಗೆಯೇ ರೈಲ್ವೆ ಇಲಾಖೆಯ ಉದ್ಯೋಗಗಳಿಗಾಗಿ ನೀವು ಕೂಡ ಅರ್ಜಿ ಸಲ್ಲಿಸಲು ಬಯಸಿದರೆ, ನೀವು ಆನ್‌ಲೈನ್‌ ನ ಮೂಲಕ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

– ಸಾಮಾನ್ಯ ( OBC ) ಮತ್ತು ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಾಗಿ 500 ರೂಪಾಯಿ ನಿಗದಿಪಡಿಸಲಾಗಿದೆ.

– ಎಸ್ ಟಿ , ಎಸ್ ಸಿ ( SC/ST ), ವಿಶೇಷ ಚೇತನ ( Handicaps ) ಮತ್ತು ಮಹಿಳಾ ( Women’s ) ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು 250 ರೂಪಾಯಿ ನಿಗದಿಪಡಿಸಲಾಗಿದೆ.

ವಿದ್ಯಾರ್ಹತೆ :

ಎಲೆಕ್ಟ್ರಿಷಿಯನ್,ಮಿಲ್ ರೈಟ್, ಇನ್ಸ್ಟ್ರುಮೆಂಟ್ ಮೆಕ್ಯಾನಿಕ್, ಪಿಟ್ಟರ್ / ಎಲೆಕ್ಟ್ರಿಕಲ್ ಮೆಕ್ಯಾನಿಕ್ ಆಗಿರಬೇಕು. ಮೆಕ್ಯಾನಿಕ್ ಟ್ರೇಡ್ ಗಳಲ್ಲಿ ಮೆಂಟೇನೆನ್ಸ್ ಮೆಕ್ಯಾನಿಕ್, NCVT / PGDM NCVT ಮೆಟ್ರಿಕ್ಯುಲೇಷನ್ / ಡಿಪ್ಲೊಮಾ. SSLC & ITI ಸರ್ಟಿಫಿಕೇಟ್ ಹೊಂದಿರಬೇಕು.

ಅರ್ಜಿ ಸಲ್ಲಿಸುವ ವಿಧಾನ

ಅರ್ಜಿ ಸಲ್ಲಿಸುವ ಮುನ್ನ ಅಧಿಕೃತ ಅಧಿಸೂಚನೆಯನ್ನು ಒಮ್ಮೆ ಓದಿಕೊಳ್ಳಿ, ಅಧಿಸೂಚನೆ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಎಲ್ಲಾ ಅರ್ಹ ಅಭ್ಯರ್ಥಿಗಳು ಈ ಕೆಳಗಿನಂತೆ ಭಾರತೀಯ ರೈಲ್ವೆ ಇಲಾಖೆ (Indian Railway Department) ನೇಮಕಾತಿ – ಜನವರಿ 2024 ಕ್ಕೆ ಅರ್ಜಿ ಸಲ್ಲಿಸಬಹುದು https://www.recruitmentrrb.in/#/auth/landing

1. ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸುವ ಮೊದಲು, ಸರಿಯಾದ ಮೊಬೈಲ್ ಸಂಖ್ಯೆ ಈ- ಮೇಲ್ ಐಡಿ, ಐಡೆಂಟಿಟಿ ಪೂಫ್, ಅಭ್ಯರ್ಥಿಯ ಅಂಕಪಟ್ಟಿ, ಶೈಕ್ಷಣಿಕ ಅರ್ಹತೆಯ ಮಾಹಿತಿ, ಬಯೋಡೇಟಾ , ಯಾವುದೇ ಅನುಭವವಿದ್ದರೆ ಅದರ ಮಾಹಿತಿ, ಇತ್ಯಾದಿ ದಾಖಲೆಗಳನು ಸ್ನಾನ್ ಮಾಡಿ ಇಟ್ಟುಕೊಳ್ಳಿ.

2. ಈ ಕೆಳಗೆ ನೀಡಲಾಗಿರುವ ಭಾರತೀಯ ರೈಲ್ವೆ ಇಲಾಖೆ (Indian Railway Department) ಇಲಾಖೆಯ ಅಸಿಸ್ಟೆಂಟ್ ಲೋಕೋ ಪೈಲಟ್ ಹುದ್ದೆಗಳ ಅಧಿಕೃತ  ವೆಬ್ ಸೈಟ್ ಗೆ ಭೇಟಿ ನೀಡಿ.

3. ಭಾರತೀಯ ರೈಲ್ವೆ ಇಲಾಖೆಯ (Indian Railway Department ಅಸಿಸ್ಟೆಂಟ್ ಲೋಕೋ ಪೈಲಟ್‌ ಆನ್‌’ಲೈನ್‌ ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ಎಲ್ಲಾ ವಿವರಗಳನ್ನು ತುಂಬಿರಿ. ನಿಮ್ಮ ಇತ್ತೀಚಿನ ಭಾವಚಿತ್ರದೊಂದಿಗೆ ಅಗತ್ಯವಿರುವ ಪ್ರಮಾಣಪತ್ರಗಳು / ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್‌’ಲೋಡ್ ಮಾಡಿ.

4. ನಿಮ್ಮ ವರ್ಗಕ್ಕೆ ( Caste ) ಅನುಗುಣವಾಗಿ ಅರ್ಜಿ ಶುಲ್ಕವನ್ನು ಪಾವತಿಸಿ. ( ಅನ್ವಯವಾದರೆ ಮಾತ್ರ )

5. ಅಂತಿಮವಾಗಿ, ಭಾರತೀಯ ರೈಲ್ವೆ ಇಲಾಖೆ (Indian Railway Department) ನೇಮಕಾತಿ 2024 ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಬ್ಬಿಟ್ ಬಟನ್ ಅನ್ನು ಕ್ಲಿಕ್ ಮಾಡಿ. ಮುಖ್ಯವಾಗಿ ಅರ್ಜಿ ಸಲ್ಲಿಸಿದ ನಂತರ ಅಪ್ಲಿಕೇಶನ್ ಸಂಖ್ಯೆ ಅಥವಾ ಸ್ವೀಕೃತಿ ಸಂಖ್ಯೆಯನ್ನು ನೋಟ್ ಮಾಡಿಕೊಳ್ಳಿ / ಪ್ರಿಂಟ್ ತೆಗೆದುಕೊಳ್ಳಿ.

tel share transformed

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

    ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

whatss

WhatsApp Group Join Now
Telegram Group Join Now

Related Posts

One thought on “Job Alert : ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ 7 ಸಾವಿರಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ ಅಹ್ವಾನ!

Leave a Reply

Your email address will not be published. Required fields are marked *

error: Content is protected !!