ಭಾರತದ ಅತಿದೊಡ್ಡ ಉದ್ಯೋಗದಾತಗಳಲ್ಲಿ ಒಂದಾದ ಭಾರತೀಯ ರೈಲ್ವೆ ಇಲಾಖೆ (Indian Railway Department) ಇದೀಗ 2025ನೇ ಸಾಲಿಗೆ ಭಾರೀ ಪ್ರಮಾಣದ ನೇಮಕಾತಿ ಅಭಿಯಾನಕ್ಕೆ ಚಾಲನೆ ನೀಡಿದೆ. ರೈಲ್ವೆ ನೇಮಕಾತಿ ಮಂಡಳಿ (RRB) ತನ್ನ ಅಧಿಕೃತ ವೆಬ್‌ಸೈಟ್ ಮೂಲಕ 6,180 ತಂತ್ರಜ್ಞ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಇದು ಬಹುತೇಕ ನಿರೀಕ್ಷಿಸುತ್ತಿದ್ದ ಅವಕಾಶವಾಗಿದೆ. ಭಾರತದ ನಾನಾ ಭಾಗಗಳಲ್ಲಿ ರೈಲ್ವೆಯ ತಾಂತ್ರಿಕ ವಿಭಾಗವನ್ನು (Railway Technical Department) ಬಲಪಡಿಸುವ ಉದ್ದೇಶದಿಂದ ಈ ನೇಮಕಾತಿ ನಡೆಯುತ್ತಿದೆ. ಮುಂಚಿನ ನೇಮಕಾತಿ ಚಕ್ರಗಳಲ್ಲಿ ವಿವಿಧ ಕಾರಣಗಳಿಂದ ಅರ್ಜಿ ಹಾಕಲಾಗದ ಅಭ್ಯರ್ಥಿಗಳಿಗಿದು ಮತ್ತೊಮ್ಮೆ ಅವಕಾಶ. ಹಾಗಿದ್ದರೆ ಈ ಉದ್ಯೋಗಕ್ಕೆ ಅರ್ಜಿ ಸಲ್ಲಿಸುವುದು ಹೇಗೆ? ಯಾವೆಲ್ಲ ದಾಖಲೆಗಳು (Documents) ಬೇಕು ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹೌದು, ಭಾರತದ ಉದ್ಯೋಗಾಕಾಂಕ್ಷಿಗಳಿಗೆ ಮತ್ತೊಂದು ಮಹತ್ತ್ವದ ಅವಕಾಶ ಒದಗಿದ್ದುದು ಭಾರತೀಯ ರೈಲ್ವೆ ಇಲಾಖೆಯಿಂದ. ಆಧುನಿಕತೆಯತ್ತ ಹೆಜ್ಜೆಹಾಕುತ್ತಿರುವ ಭಾರತೀಯ ರೈಲ್ವೆ ತನ್ನ ತಾಂತ್ರಿಕ ಕಾರ್ಯಪಡೆ ಬಲಪಡಿಸುವ ಉದ್ದೇಶದಿಂದ 2025-26 ನೇ ಸಾಲಿಗೆ ತಂತ್ರಜ್ಞ ಹುದ್ದೆಗಳ (Technical Job) ಭರ್ತಿಗೆ ದೊಡ್ಡ ಮಟ್ಟದ ನೇಮಕಾತಿ ಅಭಿಯಾನವನ್ನು ಘೋಷಿಸಿದೆ. ಈ ನೇಮಕಾತಿ ವಿಶೇಷವಾಗಿ ಹಿಂದಿನ ನೇಮಕಾತಿಗಳಿಂದ ಮಿಸ್ ಆಗಿರುವ ಅಭ್ಯರ್ಥಿಗಳಿಗೆ, ಮರು ಅವಕಾಶ ಒದಗಿಸುವ ಮೂಲಕ ಉದ್ಯೋಗಾಭಿಲಾಷಿಗಳಿಗೆ ಹೊಸ ದಿಕ್ಕು ತೋರಿಸುತ್ತಿದೆ. ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಜೂನ್ 28ರಿಂದ ಜುಲೈ 28ರ ರಾತ್ರಿ 11:59ರೊಳಗೆ ಸಲ್ಲಿಸಬೇಕಾಗಿದ್ದು, ಈ ಅವಧಿಯ ನಂತರ ಅರ್ಜಿ (Apllication) ಸಲ್ಲಿಸಲು ಅವಕಾಶ ಇರುವುದಿಲ್ಲ.
ಪ್ರಮುಖ ಹುದ್ದೆಗಳ ವಿವರ ಹೀಗಿದೆ:
ಒಟ್ಟು ಹುದ್ದೆಗಳು: 6,180
ತಂತ್ರಜ್ಞ ಗ್ರೇಡ್-1 (ಸಿಗ್ನಲ್): 180 ಹುದ್ದೆಗಳು
ತಂತ್ರಜ್ಞ ಗ್ರೇಡ್-3: 6,000 ಹುದ್ದೆಗಳು
ಆಯ್ಕೆ ಪ್ರಕ್ರಿಯೆ ಹೇಗೆ ಇರುತ್ತದೆ?:
ಇದರಲ್ಲಿ ಅಭ್ಯರ್ಥಿಗಳ ಆಯ್ಕೆ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ಮೂಲಕ ನಡೆಯಲಿದ್ದು, ತದನಂತರ ದಾಖಲೆ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆ (Medical Fitness) ನಡೆಯಲಿದೆ.
ಅರ್ಜಿ ಸಲ್ಲಿಸಲು ಇರುವ ಅರ್ಹತಾ ಮಾನದಂಡಗಳು ಏನು?:
ತಂತ್ರಜ್ಞ ಗ್ರೇಡ್ 1 (Signal):
ಭೌತಶಾಸ್ತ್ರ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್, ಐಟಿ ಅಥವಾ ಇನ್ಫೋರ್ಮೆಟಿಕ್ಸ್‌ನಲ್ಲಿ B.Sc ಪದವಿ
ಅಥವಾ
ಸಂಬಂಧಿತ ಇಂಜಿನಿಯರಿಂಗ್ ವಿಭಾಗದಲ್ಲಿ ಡಿಪ್ಲೊಮಾ ಅಥವಾ ಪದವಿ (Diploma or Degree in Engenearing).
ತಂತ್ರಜ್ಞ ಗ್ರೇಡ್ 3:
ಕನಿಷ್ಠ 10ನೇ ತರಗತಿ (SSLC/ಮೆಟ್ರಿಕ್) ಉತ್ತೀರ್ಣತೆ.
ಜೊತೆಗೆ ಐಟಿಐ ಅಥವಾ ಅಪ್ರೆಂಟಿಸ್‌ಶಿಪ್ ಇರುವಿರಬೇಕು (Foundryman, Moulder, Pattern Maker, Forger, Heat Treater ಇತ್ಯಾದಿ ಟ್ರೇಡ್‌ಗಳಲ್ಲಿ).
ವಯೋಮಿತಿ (ಜುಲೈ 1, 2025ರಂತೆ):
ಗ್ರೇಡ್ 1 ಸಿಗ್ನಲ್: 18 ರಿಂದ 33 ವರ್ಷ.
ಗ್ರೇಡ್ 3: 18 ರಿಂದ 30 ವರ್ಷ.
ಮೀಸಲಾತಿಗೆ ಹೊಂದುವ ಅಭ್ಯರ್ಥಿಗಳಿಗೆ ಸರಕಾರದ ನಿಯಮಾನುಸಾರ ವಯೋವಿಕೋಪದಲ್ಲಿ ಸಡಿಲಿಕೆ ಅನ್ವಯಿಸುತ್ತದೆ.
ಅರ್ಜಿ ಶುಲ್ಕ (Application fee):
₹250 – SC/ST, ಅಂಗವಿಕಲರು, ಮಹಿಳೆಯರು, ಟ್ರಾನ್ಸ್‌ಜೆಂಡರ್, ಅಲ್ಪಸಂಖ್ಯಾತರು, ಇಕನಾಮಿಕಲಿ ವೀಕರ್ ಸೆಕ್ಷನ್ (EWS).
CBT ಪರೀಕ್ಷೆಗೆ ಹಾಜರಾದರೆ ಸಂಪೂರ್ಣ ಹಣ ಮರುಪಾವತಿ.
₹500 – ಇತರ ಎಲ್ಲಾ ಅಭ್ಯರ್ಥಿಗಳು
CBTಗೆ ಹಾಜರಾದರೆ ₹400 ಮರುಪಾವತಿ
ವೇತನದ ವಿವರ (Salary Information) :
ಗ್ರೇಡ್ 1 ಸಿಗ್ನಲ್: ವೇತನ ಹಂತ 5, ₹29,200 ಪ್ರಾರಂಭಿಕ ವೇತನ.
ಗ್ರೇಡ್ 3: ವೇತನ ಹಂತ 2, ₹19,900 ಪ್ರಾರಂಭಿಕ ವೇತನ
ಅರ್ಜಿ ಸಲ್ಲಿಸುವ ವಿಧಾನ (How to Apply Application) :
ಅಭ್ಯರ್ಥಿಗಳು rrbcdg.gov.in ಅಥವಾ ತಮ್ಮ ವಲಯದ RRB ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ವಿಸ್ತೃತ ಅಧಿಸೂಚನೆಯು: ವಲಯವಾರು ಹುದ್ದೆಗಳ ವಿವರ, ಅರ್ಜಿ ಭರ್ತಿ ಮಾಡಲು ಹಂತಬದ್ಧ ಮಾರ್ಗಸೂಚಿ, ಮತ್ತು CBT ಪರೀಕ್ಷೆಗಾಗಿ ಪಠ್ಯಕ್ರಮವನ್ನು ಒಳಗೊಂಡಿರುತ್ತದೆ.
ಒಟ್ಟಾರೆಯಾಗಿ, ಇದು ತಾಂತ್ರಿಕ ಕ್ಷೇತ್ರದಲ್ಲಿ (Technical Field) ರೈಲ್ವೆ ಸೇವೆಗಳಲ್ಲಿ ಕಾರ್ಯನಿರ್ವಹಿಸಲು ಬಯಸುವ ಅಭ್ಯರ್ಥಿಗಳಿಗೆ ಉತ್ತಮ ಅವಕಾಶವಾಗಿದೆ. ನಿರ್ದಿಷ್ಟ ಶಿಕ್ಷಣಾರ್ಹತೆಗಳನ್ನು ಹೊಂದಿರುವವರು ಈ ನೇಮಕಾತಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಿ ಮತ್ತು ತಮ್ಮ ಭವಿಷ್ಯವನ್ನು ಭಾರತೀಯ ರೈಲ್ವೆಯ ಬಲಿಷ್ಠ ಭಾಗವಾಗಿ ರೂಪಿಸಿಕೊಳ್ಳಿ.
ಗಮನಿಸಿ (Notice) :
ಅರ್ಜಿ ಸಲ್ಲಿಸಲು ಭೇಟಿ ನೀಡಿ: https://rrbcdg.gov.in
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

Sagari leads the ‘Government Schemes’ vertical at NeedsOfPublic.in, where she decodes the latest Central and State government policies for the common citizen. She has over 3 years of experience tracking welfare programs like PM Kisan, Ayushman Bharat, and State Ration updates. Her goal is to ensure every reader understands their eligibility and benefits without confusion. Sagari strictly verifies all updates from official government portals before publishing. Outside of work, she is an advocate for digital literacy in rural India.”
Connect with Sagari:


WhatsApp Group




