ಆಸ್ತಿ ಖರೀದಿ ಮಾಡಬೇಕೆಂಬ ಆಸೆ ಇದೆಯಾ! ಹಾಗಿದ್ದರೆ ಆಸ್ತಿ ಮಾರಾಟಗಾರರ ಬಳಿ ಇರುವ ಈ 6 ದಾಖಲೆಗಳನ್ನು ಪರಿಶೀಲಿಸಿ.
ಸ್ವಂತಕ್ಕೊಂದು ಮನೆ ಅಥವಾ ಜಮೀನು ಖರೀದಿಸಬೇಕೆಂಬ ಆಸೆಯನ್ನು ಇಟ್ಟುಕೊಂಡು ಎಷ್ಟೋ ಜನರು ಇದಕ್ಕಾಗಿ ಹಣವನ್ನು ಕೂಡಿಡುತ್ತಾ ಬಂದಿರುತ್ತಾರೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ರಿಯಲ್ ಎಸ್ಟೇಟ್ (Real estate) ಕ್ಷೇತ್ರವು ವೇಗವಾಗಿ ಬೆಳೆಯುತ್ತಿದೆ. ಭೂಮಿಯ ಬೆಲೆ ಹೇಗೆ ಹೆಚ್ಚಾಗುತ್ತಿದೆಯೋ ಹಾಗೆ ಅದರ ಸುತ್ತಲಿನ ವಿವಾದಗಳು ಕೂಡ ಹೆಚ್ಚಾಗುತ್ತಿವೆ. ನೋಂದಣಿ ಸಮಯದಲ್ಲಿ ಸಾಕಷ್ಟು ವಂಚನೆಗಳಾಗುವ ಸಂಭವಗಳಿವೆ. ಆದ್ದರಿಂದ ಗ್ರಾಹಕರು ಆಸ್ತಿ ಖರೀದಿಸುವ ಸಮಯದಲ್ಲಿ ತುಂಬಾ ಎಚ್ಚರಿಕೆವಹಿಸುವುದು ಅತ್ಯಗತ್ಯವಾಗಿದೆ. ಸ್ವಲ್ಪ ಯಾಮಾರಿದರೂ ಕೂಡ ಜೀವನಪೂರ್ತಿ ಕಷ್ಟ ಪಡಬೇಕಾಗುತ್ತದೆ. ಹಾಗಾಗಿ ಯಾವುದೇ ಆಸ್ತಿ ಅಥವಾ ಜಮೀನನ್ನು (property or land) ಖರೀದಿಸುವಾಗ ಕೆಲವು ದಾಖಲೆಗಳನ್ನು ಕಡ್ಡಾಯವಾಗಿ ಪರಿಶೀಲಿಸಿಕೊಂಡರೆ ಒಳಿತಾಗುತ್ತದೆ ಎಂದು ಕಾನೂನು ತಜ್ಞರು ಸಲಹೆ ನೀಡುತ್ತಾರೆ. ಹಾಗಿದ್ದಲ್ಲಿ ಆಸ್ತಿ ಖರೀದಿ ಅಥವಾ ಮಾರಾಟದ ಸಮಯದಲ್ಲಿ ಯಾವ ಯಾವ ದಾಖಲೆಗಳನ್ನು ಕಡ್ಡಾಯವಾಗಿ ಪರಿಶೀಲಿಸಬೇಕು ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹೌದು, ನೀವು ಯಾವುದೇ ನಗರದಲ್ಲಿ ಭೂಮಿ ಖರೀದಿಸಲು ತಯಾರಿ ನಡೆಸುತ್ತಿದ್ದರೆ, ನೀವು ಕಾನೂನು ನಿಯಮಗಳು (Legal regulations) ಮತ್ತು ಮುನ್ನೆಚ್ಚರಿಕೆಗಳನ್ನು ತಿಳಿದಿರಬೇಕು. ಯಾವುದೇ ಆಸ್ತಿಯನ್ನು ಖರೀದಿ ಅಥವಾ ಮಾರಾಟವನ್ನು ಮಾಡುವ ಮೊದಲು ಭೂ ಮಾಲೀಕನು ಐದು ದಾಖಲೆಗಳನ್ನು ಹೊಂದಿರಬೇಕು. ಈ ದಾಖಲೆಗಳನ್ನು ಹೊಂದಿಲ್ಲದ ಭೂಮಿಯನ್ನು ಖರೀದಿಸಿದರೆ ನೀವು ತೊಂದರೆಗೆ ಸಿಲಿಕಬಹುದು ಮತ್ತು ಆರ್ಥಿಕ ನಷ್ಟವನ್ನು ಸಹ ಅನುಭವಿಸಬಹುದು. ಈ ದಾಖಲೆಗಳು (Documents) ನಿಮ್ಮ ಬಳಿ ಇದ್ದರೆ ಭೂಮಿ ನಿಮ್ಮದು ಎಂದು ನೀವು ಸಾಬೀತುಪಡಿಸಬಹುದು. ಆದ್ದರಿಂದ ಈ ದಾಖಲೆಗಳು ಕಡ್ಡಾಯವಾಗಿ ಇರಬೇಕು.
ಆಸ್ತಿ ಖರೀದಿಗೆ ಯಾವೆಲ್ಲ ದಾಖಲೆಗಳು (Documents) ಕಡ್ಡಾಯ:
ಈ ಕೆಳಗಿನ ಆರು ದಾಖಲೆಗಳು ಆಸ್ತಿ ಖರೀದಿ ಅಥವಾ ಜಮೀನು ಖರೀದಿಯ ಸಂದರ್ಭದಲ್ಲಿ ಬಹಳ ಮುಖ್ಯವಾಗಿ ಬೇಕಾಗಿರುವಂತಹ ದಾಖಲೆಗಳು.
ಪಹಣಿ
ರಿಜಿಸ್ಟ್ರಿ
ರಸೀದಿ
ಎನ್ಒಸಿ(NOC)
ಪವರ್ ಆಫ್ ಅಟಾರ್ನಿ
ಜಮಾಬಂದಿ
ಪಹಣಿ (cadastre) :
ಆಸ್ತಿಯನ್ನು ಖರೀದಿ ಮಾಡುವ ಸಂದರ್ಭದಲ್ಲಿ ಪಹಣಿಯ ಬಗ್ಗೆ ಕೂಲಂಕುಶವಾಗಿ ನೋಡಬೇಕು. ಯಾಕೆಂದರೆ ಪಹಣಿ ಭೂಮಿಗೆ ಸಂಬಂಧಿಸಿದ ಬಹಳ ಮುಖ್ಯವಾದ ದಾಖಲೆ. ಪಹಣಿಯಲ್ಲಿ ನಾವು ಫ್ಲಾಟ್ ಗೆ ಸಂಬಂಧಿಸಿದಂತಹ ಖಾತೆ ಸಂಖ್ಯೆ, ಆಸ್ತಿಯ ವಿಸ್ತೀರ್ಣ, ಪ್ಲಾಟ್ ಮಾಲೀಕರ ಹೆಸರು ಮತ್ತು ಇತರ ಅನೇಕ ವಿವರಗಳನ್ನು ಒಳಗೊಂಡಿರುವ ಕಾರಣ ಈ ದಾಖಲೆಯನ್ನು ಆಸ್ತಿ ಖರೀದಿಯ ಸಂದರ್ಭದಲ್ಲಿ ಪರಿಶೀಲಿಸಬೇಕು.
ರಸೀದಿ (Receipt) :
ಭೂಮಿಯನ್ನು ಖರೀದಿಸುವ ಮುಂಚೆ ಭೂ ಮಾಲೀಕನು ಭೂಮಿಯ ಮೇಲೆ ಇರುವಂತಹ ಎಲ್ಲಾ ತೆರಿಗೆಗಳನ್ನು ಕಟ್ಟಿದ್ದಾನೆಯೇ ಎಂದು ಸಾಬೀತುಪಡಿಸಲು ಈ ರಶೀದಿ ಸಹಾಯಕ್ಕೆ ಬರುತ್ತದೆ. ಹಾಗೂ ನಾವು ಖರೀದಿಸುತ್ತಿರುವಂತಹ ಭೂಮಿಯ ಮೇಲೆ ಯಾವುದಾದರೂ ಸಾಲ ಇದೆಯೋ ಇಲ್ಲವೋ ಎಂದು ಖಚಿತಪಡಿಸಿಕೊಳ್ಳಲು ಬಹಳ ಮುಖ್ಯವಾಗಿ ಬೇಕಾಗಿರುವಂತಹ ದಾಖಲೆ ರಶೀದಿ.
ರಿಜಿಸ್ಟ್ರಿ (Registry) :
ಆಸ್ತಿ ಅಥವಾ ಭೂಮಿ ವಾಸ್ತವವಾಗಿ ನಿಮ್ಮ ಹೆಸರಿನಲ್ಲಿದೆ ಎಂದು ಆಸ್ತಿಯ ಮಾರಾಟ ಮತ್ತು ಮಾಲೀಕತ್ವ / ಮಾಲೀಕತ್ವವನ್ನು ಈ ಪತ್ರವು ತೋರಿಸುತ್ತದೆ. ಈ ದಾಖಲೆಯನ್ನು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ (Sub registrar office) ನೋಂದಾಯಿಸಬೇಕು. ಮಾಲೀಕತ್ವವನ್ನು ಸಾಬೀತುಪಡಿಸಲು ರಿಜಿಸ್ಟ್ರಿ ಬಹಳ ಮುಖ್ಯವಾದ ದಾಖಲೆಯಾಗಿದೆ.
ಎನ್ಒಸಿ (NOC):
ನೋ ಆಬ್ಜೆಕ್ಷನ್ ಸರ್ಟಿಫಿಕೇಟ್ (No objection certificate) ಭೂಮಿ ಅಥವಾ ಮನೆ ಖರೀದಿಸುವಾಗ ಪ್ರಮುಖವಾಗಿ ನೋಡಬೇಕಾಗಿರುವ ದಾಖಲೆ. ಆಸ್ತಿಯ ಮಾರಾಟಗಾರರಿಂದ ಎನ್ಒಸಿ ನೀಡಬೇಕು. ನೀವು ಖರೀದಿಸುತ್ತಿರುವ ಆಸ್ತಿ ವಿವಾದವಲ್ಲ ಎಂದು ಇದು ತೋರಿಸುತ್ತದೆ. ಯಾರಿಗಾದರೂ ಆಸ್ತಿಯ ಬಗ್ಗೆ ಆಕ್ಷೇಪಣೆ ಇದ್ದರೆ, ಅವರು ಖರೀದಿಯ ಸಮಯದಲ್ಲಿ ಮಾತ್ರ ಅದರ ಬಗ್ಗೆ ಮಾತನಾಡಬಹುದು. ಎನ್ಒಸಿ ಇಲ್ಲದೆ ಆಸ್ತಿಯನ್ನು ಖರೀದಿಸಬೇಡಿ.
ಜಮಾಬಂದಿ (jamabandi) :
ಇದು ಮುನ್ಸಿಪಲ್ ಕಾರ್ಪೊರೇಷನ್ ಅಥವಾ ಬ್ಲಾಕ್ ಮತ್ತು ಗ್ರಾಮ ಪಂಚಾಯಿತಿಯಿಂದ ಪಡೆದ ಭೂಮಿಯ ದಾಖಲೆಯಾಗಿದೆ. ಜಮಾಬಂದಿಯಲ್ಲಿ, ಭೂಮಿಯ ಅಕ್ರಮ ಮತ್ತು ಸ್ಥಿತಿಯ ಬಗ್ಗೆ ಮಾಹಿತಿಯನ್ನು ಪಡೆಯಲಾಗುತ್ತದೆ.ಇದು ಭೂಮಿಯ ಮಾಲೀಕ, ಭೂಮಿಯ ಪ್ರಕಾರ, ಕೃಷಿ ಮತ್ತು ಅದಕ್ಕೆ ಸಂಬಂಧಿಸಿದ ವಿವಿಧ ಹಕ್ಕುಗಳನ್ನು ಒಳಗೊಂಡಿದೆ.
ಪವರ್ ಆಫ್ ಅಟಾರ್ನಿ (Power of Attorney) :
ಒಂದು ವೇಳೆ ಜಮೀನು ಮಾರಾಟ ಮಾಡುತ್ತಿರುವವರು ಭೂಮಿಯ ಮಾಲೀಕರಾಗಿಲ್ಲದಿದ್ದರೆ ಅವರು ಪವರ್ ಆಫ್ ಅಟಾರ್ನಿ ಹೊಂದಿರಬೇಕು. ಹಾಗೂ ಅದರಲ್ಲಿ ಸಂಪೂರ್ಣವಾಗಿ ಅವರಿಗೆ ಆಸ್ತಿಯನ್ನು ಮಾರಾಟ ಮಾಡುವ ಅಧಿಕಾರವನ್ನು ನೀಡಿರಬೇಕು. ನೀವು ಒಂದು ವೇಳೆ ಆಸ್ತಿ ಅಥವಾ ಜಮೀನನ್ನು ಖರೀದಿ ಮಾಡುತ್ತಿದ್ದರೆ ಪವರ್ ಆಫ್ ಅಟಾರ್ನಿಯನ್ನು ಪರಿಶೀಲಿಸಬೇಕಾಗುತ್ತದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group




