Picsart 25 11 24 22 35 36 754 scaled

ಆಸ್ತಿ ಖರೀದಿಸುವವರೇ ಎಚ್ಚರ! ಬರೀ ನೋಂದಣಿ ಮಾಡಿದ್ರೆ ಮಾಲೀಕತ್ವ ಸಿಗಲ್ಲ: ಸುಪ್ರೀಂ ಕೋರ್ಟ್‌ನ ಮಹತ್ವದ ತೀರ್ಪು!

Categories:
WhatsApp Group Telegram Group

ಇತ್ತೀಚಿನ ದಿನಗಳಲ್ಲಿ ನಗರೀಕರಣದ ವೇಗ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ, ಆಸ್ತಿ ಖರೀದಿ ಸಾಮಾನ್ಯ ಮನೆಮಂದಿಯ ದೊಡ್ಡ ಕನಸು ಮತ್ತು ಹೂಡಿಕೆಯ ಪ್ರಮುಖ ಆಯ್ಕೆಯಾಗಿದೆ. ಆದರೆ ಆಸ್ತಿ ಸಂಬಂಧಿತ ಕಾನೂನು, ದಾಖಲೆ, ನಿಯಮ ಮತ್ತು ಸ್ವಾಮ್ಯದ ವಿಚಾರಗಳು ಬಹುಮಂದಿಗೆ ಸ್ಪಷ್ಟವಾಗಿರದೆ, ಅನೇಕರು ನೋಂದಣಿ (Registration) ಆದ್ರೆ ಸಾಕು ಎಂದು ಕೊಂಡಿರುತ್ತಾರೆ. ಈ ತಪ್ಪು ಕಲ್ಪನೆಯನ್ನು ಸುಪ್ರೀಂ ಕೋರ್ಟ್ ತನ್ನ ಇತ್ತೀಚಿನ ಮಹತ್ವದ ತೀರ್ಪಿನ ಮೂಲಕ ಸರಿಪಡಿಸಿದೆ. ಈ ಹಿನ್ನೆಲೆ­ಯಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಹೊಸ ತೀರ್ಪು ಆಸ್ತಿ ಖರೀದಿಸುವ ಅಥವಾ ಈಗಾಗಲೇ ಖರೀದಿಸಿರುವ ಲಕ್ಷಾಂತರ ಜನರಿಗೆ ಎಚ್ಚರಿಕೆಯನ್ನು ನೀಡಿದೆ.  ನೋಂದಣಿ ಆಗಿದೆ ಎಂದರೆ ನೀವು ಆಸ್ತಿಯ ಮಾಲೀಕರಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್  ಸ್ಪಷ್ಟ ಸಂದೇಶ ನೀಡಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಪ್ರಕರಣದ ಹಿನ್ನೆಲೆ:

ಭಾವನಾ ಕೋಆಪರೇಟಿವ್ ಹೌಸಿಂಗ್ ಸೊಸೈಟಿಗೆ ಸಂಬಂಧಿಯಾದ ಪ್ರಕರಣದಲ್ಲಿ ಈ ತೀರ್ಪು ಹೊರಬಿದ್ದಿದೆ. 1982 ರಲ್ಲಿ 53 ಎಕರೆ ಭೂಮಿಯನ್ನು ಖರೀದಿಸಿ ಅನೇಕ ಜನರಿಗೆ ಮಾರಾಟ ಮಾಡಲಾಗಿತ್ತು. ಖರೀದಿದಾರರು ತಮ್ಮ ಬಳಿ ನೋಂದಣಿ ದಾಖಲೆಗಳಿವೆ ಆದುದರಿಂದ ಭೂಮಿಯ ಸಂಪೂರ್ಣ ಹಕ್ಕು ನಮಗಿದೆ ಎಂದು ವಾದಿಸಿದ್ದರು. ಆದರೆ ಸುಪ್ರೀಂ ಕೋರ್ಟ್ ಆ ವಾದವನ್ನು ತಳ್ಳಿ ಹಾಕಿ ಮಹತ್ವದ ಸ್ಪಷ್ಟೀಕರಣ ನೀಡಿದೆ.

ಸುಪ್ರೀಂ ಕೋರ್ಟ್‌ನ ಪ್ರಮುಖ ಹೇಳಿಕೆಗಳು ಹೀಗಿವೆ:

ನೋಂದಣಿ ಕೇವಲ ಹಣಕಾಸಿನ ವ್ಯವಹಾರದ ದಾಖಲೆ. ಆದ್ದರಿಂದ Ownership ಪಡೆಯಲು ಶೀರ್ಷಿಕೆ ಪತ್ರ (Title Deed) ಅವಶ್ಯಕ. ನೋಂದಣಿ ಇದ್ದರೂ, ಮೂಲ ದಾಖಲೆಗಳು, ಹಂಚಿಕೆ ಪತ್ರಗಳು, ತೆರಿಗೆ ದಾಖಲೆಗಳು ಇಲ್ಲದಿದ್ದರೆ ಸ್ವಾಮ್ಯ ಹಕ್ಕು ಸಾಬೀತಾಗುವುದಿಲ್ಲ. ಆಸ್ತಿ ವ್ಯವಹಾರಗಳಲ್ಲಿ ಕಾನೂನು ಪರಿಶೀಲನೆ ಮತ್ತು ಸ್ಪಷ್ಟ ದಾಖಲೆಗಳು ಕಡ್ಡಾಯ ಎಂದು ತಿಳಿಸಿದೆ.

ಆಸ್ತಿ ಖರೀದಿಸುವ ಮುನ್ನ ಪರಿಶೀಲಿಸಬೇಕಾದ ಅಂಶಗಳು:

Title Deed
Sale Agreement
Allotment Letter
Tax Receipts
Encumbrance Certificate (EC)

ಆಸ್ತಿ ಖರೀದಿಸುವವರು ಪಾಲಿಸಬೇಕಾದ ಹಂತಗಳು:

ಮೂಲ ದಾಖಲೆಗಳ ಪರಿಶೀಲನೆ
ಮಾರಾಟಗಾರನ ಬಳಿ ಮೂಲ Title Deed ಇದೆಯೇ?
ಭೂಮಿಗೆ ಯಾವುದೇ ಕಾನೂನು ವಿವಾದಗಳಿವೆಯೇ?
ಭೂಮಿ ಮುಟ್ಟುಗೋಲು / ಅಳತೆ / ತೆರಿಗೆ ಬಾಕಿ ಇದೆಯೇ?

ಕಾನೂನು ಪರಿಶೀಲನೆ (Legal Verification):

ಅನುಭವ ಹೊಂದಿದ ವಕೀಲರ ಮೂಲಕ Legal Opinion ಪಡೆಯಿರಿ.
ಬ್ಯಾಂಕ್ ಸಾಲಕ್ಕೆ ಅರ್ಜಿ ಹಾಕಿ Due Diligence Report ಪಡೆದುಕೊಳ್ಳುವುದು ಉತ್ತಮ.

RERA ನೋಂದಣಿ (ನಗರ ಪ್ರದೇಶಗಳಿಗೆ ಅನ್ವಯಿಸು):

RERA ನೋಂದಣಿ ಇರುವ ಯೋಜನೆಗಳೇ ಹೆಚ್ಚು ಸುರಕ್ಷಿತ.
RERA ಇಲ್ಲದೆ ಮಾರಾಟ ಮಾಡುವ ಯೋಜನೆಗಳು ಅಪಾಯದ ಸಾಧ್ಯತೆ ಹೆಚ್ಚಾಗಿರಬಹುದು.

ಸರ್ಕಾರಿ ದಾಖಲೆಗಳ ಹೊಂದಾಣಿಕೆ ಪರಿಶೀಲನೆ:

RTC / Pahani (ಗ್ರಾಮೀಣ ಪ್ರದೇಶ)
7/12 ದಾಖಲೆ
ಮ್ಯೂಟೇಷನ್ / ಖಾತಾ ದಾಖಲೆ

ಈ ತೀರ್ಪಿನ ಮಹತ್ವವೇನು?:

ಈ ತೀರ್ಪು ಈಗಿನ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ನಡೆಯುತ್ತಿರುವ ಮೋಸದ ವಹಿವಾಟು, ನಕಲಿ ದಾಖಲೆಗಳು ಮತ್ತು ಕಾಗದದ ಮಾಲೀಕತ್ವದ ದುರುಪಯೋಗಗಳಿಗೆ ಕಟ್ಟಕಡೆ ಎಚ್ಚರಿಕೆಯಾಗಿದೆ.

ಒಟ್ಟಾರೆಯಾಗಿ, ಆಸ್ತಿ ನೋಂದಣಿ ಮಾಡಿಸಿಕೊಂಡಿರುವುದು ದೊಡ್ಡ ವಿಷಯವಾದರೂ, ಅದೇ ಮಾಲೀಕತ್ವಕ್ಕೆ ಪೂರಕ ದಾಖಲೆ ಆಗುವುದಿಲ್ಲ. ಸುಪ್ರೀಂ ಕೋರ್ಟ್‌ನ ಈ ತೀರ್ಪು ಜನರನ್ನು ಎಚ್ಚರಿಸುವಂತದ್ದು ಸರಿಯಾದ ದಾಖಲೆಗಳು, ಕಾನೂನು ಸಲಹೆ ಮತ್ತು RERA ಪ್ರಮಾಣೀಕರಣ ಇದ್ದಲ್ಲಿ ಮಾತ್ರ ಆಸ್ತಿ ಸುರಕ್ಷಿತ ಮತ್ತು ಕಾನೂನುಬದ್ದ.

WhatsApp Image 2025 09 05 at 11.51.16 AM 12

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories