Picsart 25 11 19 23 14 36 316 scaled

ಎತ್ತರಕ್ಕೆ ತಕ್ಕ ಸರಿಯಾದ ತೂಕ: ಪುರುಷ–ಮಹಿಳೆಯರ ಆರೋಗ್ಯಕರ ತೂಕದ ಪೂರ್ಣ ಪಟ್ಟಿ

Categories: ,
WhatsApp Group Telegram Group

ಮಾನವನ ಆರೋಗ್ಯದಲ್ಲಿ ದೇಹದ ತೂಕ ಒಂದು ಪ್ರಮುಖ ಅಂಶ. ವ್ಯಕ್ತಿಯ ತೂಕ ಸರಿಯಾಗಿದ್ದರೆ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿರುತ್ತದೆ, ಹಾರ್ಮೋನ್ ಸಮತೋಲನ ಕಾಪಾಡುತ್ತದೆ ಮತ್ತು ಮಧುಮೇಹ, ರಕ್ತದೊತ್ತಡ, ಹೃದಯ ಸಮಸ್ಯೆಗಳು ಸೇರಿದಂತೆ ಅನೇಕ ಕಾಯಿಲೆಗಳ ಅಪಾಯ ಕಡಿಮೆ ಆಗುತ್ತದೆ. ಸಾಮಾನ್ಯವಾಗಿ ವೈದ್ಯರು ತೂಕವನ್ನು ಎತ್ತರಕ್ಕೆ ಅನುಗುಣವಾಗಿ ಅಳೆಯುತ್ತಾರೆ. ಇದಕ್ಕಾಗಿ ಬಾಡಿ ಮಾಸ್ ಇಂಡೆಕ್ಸ್ (BMI) ಎಂಬ ಸೂತ್ರವನ್ನು ಬಳಸಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

BMI ಜೊತೆಗೆ ವಯಸ್ಸು ಮತ್ತು ಎತ್ತರ ಎರಡನ್ನೂ ಪರಿಗಣಿಸಿದರೆ ತೂಕದ ನಿಖರ ಅಂದಾಜು ಮಾಡಬಹುದು. ಆರೋಗ್ಯ ತಜ್ಞರ ಪ್ರಕಾರ, ಪುರುಷರು ಮತ್ತು ಮಹಿಳೆಯರಿಗೆ ಎತ್ತರದ ಮೇಲೆ ಅವಲಂಭಿತವಾದ ತೂಕದ ಶ್ರೇಣಿಗಳು ಇವೆ. ಈ ಶ್ರೇಣಿಗಳು ದೇಹದ ತೂಕ ಸಾಧಾರಣ ಮಿತಿಯಲ್ಲಿ ಇದೆಯೇ ಅಥವಾ ಕಡಿಮೆ/ಹೆಚ್ಚೆ ಎಂಬುದನ್ನು ತಿಳಿಸಲು ಸಹಾಯಕವಾಗುತ್ತವೆ.

ಎತ್ತರಕ್ಕೆ ಅನುಗುಣವಾಗಿ ಪುರುಷರ ತೂಕ (Normal Weight Range):

ಎತ್ತರ- 4, 6 : ಸಾಮಾನ್ಯ ತೂಕ (ಕೆಜಿ), 29–34 ಕೆಜಿ
ಎತ್ತರ-4, 8 : ಸಾಮಾನ್ಯ ತೂಕ (ಕೆಜಿ), 34–40 ಕೆಜಿ
ಎತ್ತರ- 4, 10: ಸಾಮಾನ್ಯ ತೂಕ (ಕೆಜಿ), 38–45 ಕೆಜಿ
ಎತ್ತರ- 5, 0:ಸಾಮಾನ್ಯ ತೂಕ (ಕೆಜಿ), 43–53 ಕೆಜಿ
ಎತ್ತರ- 5, 2 :ಸಾಮಾನ್ಯ ತೂಕ (ಕೆಜಿ), 48–58 ಕೆಜಿ
ಎತ್ತರ- 5, 4 : ಸಾಮಾನ್ಯ ತೂಕ (ಕೆಜಿ),53–64 ಕೆಜಿ
ಎತ್ತರ- 5, 6: ಸಾಮಾನ್ಯ ತೂಕ (ಕೆಜಿ), 58–70 ಕೆಜಿ
ಎತ್ತರ- 5, 8: ಸಾಮಾನ್ಯ ತೂಕ (ಕೆಜಿ), 63–76 ಕೆಜಿ
ಎತ್ತರ- 6, 0 : ಸಾಮಾನ್ಯ ತೂಕ (ಕೆಜಿ), 72–88 ಕೆಜಿ

ಎತ್ತರಕ್ಕೆ ಅನುಗುಣವಾಗಿ ಮಹಿಳೆಯರ ತೂಕ (Normal Weight Range)

ಎತ್ತರಸಾಮಾನ್ಯ ತೂಕ (ಕೆಜಿ)

ಎತ್ತರ- 4, 6 : ಸಾಮಾನ್ಯ ತೂಕ (ಕೆಜಿ), 28–34 ಕೆಜಿ
ಎತ್ತರ- 4, 8: ಸಾಮಾನ್ಯ ತೂಕ (ಕೆಜಿ), 32–39 ಕೆಜಿ
ಎತ್ತರ- 4 10 : ಸಾಮಾನ್ಯ ತೂಕ (ಕೆಜಿ), 36–44 ಕೆಜಿ
ಎತ್ತರ- 5, 0: ಸಾಮಾನ್ಯ ತೂಕ (ಕೆಜಿ), 40–49 ಕೆಜಿ
ಎತ್ತರ-  5, 2 : ಸಾಮಾನ್ಯ ತೂಕ (ಕೆಜಿ), 44–54 ಕೆಜಿ
ಎತ್ತರ- 5, 4 : ಸಾಮಾನ್ಯ ತೂಕ (ಕೆಜಿ),49–59 ಕೆಜಿ
ಎತ್ತರ- 5, 6 : ಸಾಮಾನ್ಯ ತೂಕ (ಕೆಜಿ), 53–64 ಕೆಜಿ
ಎತ್ತರ- 5, 8 : ಸಾಮಾನ್ಯ ತೂಕ (ಕೆಜಿ), 57–69 ಕೆಜಿ
ಎತ್ತರ- 6 0 : ಸಾಮಾನ್ಯ ತೂಕ (ಕೆಜಿ), 65–79 ಕೆಜಿ

ತೂಕ ನಿಯಂತ್ರಣ ಏಕೆ ಮುಖ್ಯ?:

ತಜ್ಞರ ಪ್ರಕಾರ, ಸಾಮಾನ್ಯ ಮಿತಿಗಿಂತ ಹೆಚ್ಚು ತೂಕ ಹೆಚ್ಚುವುದು ಕೆಳಗಿನ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ,
ಮಧುಮೇಹ (Diabetes)
ರಕ್ತದೊತ್ತಡ (BP)
ಹೃದಯ ಸಂಬಂಧಿತ ಸಮಸ್ಯೆಗಳು
ಜಂಟೆಗಳ ನೋವು
ನಿದ್ರಾಹೀನತೆ
ಕೊಲೆಸ್ಟ್ರಾಲ್ ಹೆಚ್ಚಳ
ಹೀಗಾಗಿ ತೂಕವನ್ನು ನಿಯಂತ್ರಣದಲ್ಲಿಡುವುದು ಅತ್ಯಂತ ಅವಶ್ಯಕ. ಆರೋಗ್ಯಕರ ಆಹಾರ, ನಿಯಮಿತ ವ್ಯಾಯಾಮ, ಜಾಗೃತ ಜೀವನಶೈಲಿ ಇವೆಲ್ಲವು ತೂಕ ಸಮತೋಲನಕ್ಕೆ ಮುಖ್ಯ ಕಾರಣ.

ಒಟ್ಟಾರೆಯಾಗಿ, ಎತ್ತರಕ್ಕೆ ತಕ್ಕ ತೂಕವನ್ನು ಕಾಪಾಡಿಕೊಳ್ಳುವುದು ಆರೋಗ್ಯಕರ ಬದುಕಿನ ಮೂಲ. ನಿಮ್ಮ ತೂಕ ಈ ಪಟ್ಟಿಯ ಮಿತಿಯೊಳಗೆ ಇದೆಯೇ ಎಂದು ಪರಿಶೀಲಿಸಿ, ಹೆಚ್ಚಿನದಾಗಿದ್ದರೆ ತಕ್ಷಣ ಜೀವನಶೈಲಿಯಲ್ಲಿ ಬದಲಾವಣೆ ತರಲು ಪ್ರಯತ್ನಿಸಿ. ಆರೋಗ್ಯ ತಜ್ಞರ ಸಲಹೆಯನ್ನು ಪಡೆಯುವುದು ಯಾವಾಗಲೂ ಉತ್ತಮ.

WhatsApp Image 2025 09 05 at 11.51.16 AM 12

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories