ಕರ್ಣಾಟಕದಲ್ಲಿ ಶಾಲಾ ಶಿಕ್ಷಕರ ಬ್ಯಾಕ್‌ಲಾಗ್ ಹುದ್ದೆ(School Teacher Backlog Post) ಭರ್ತಿ ಪ್ರಕ್ರಿಯೆ ಆರಂಭ :ದಶಕಗಳ ಹಳೆಯ ಖಾಲಿ ಹುದ್ದೆಗಳಿಗೆ ಸರ್ಕಾರದಿಂದ ಮಹತ್ವದ ಕ್ರಮ
ರಾಜ್ಯದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ವರ್ಷಗಳ ಕಾಲ ಖಾಲಿಯಾಗಿದ್ದ “ಬ್ಯಾಕ್ ಲಾಗ್ ಹುದ್ದೆಗಳನ್ನು” ಭರ್ತಿ ಮಾಡಲು ಕರ್ನಾಟಕ ಸರ್ಕಾರದಿಂದ(Karnataka government) ಮಹತ್ವದ ಆದೇಶ ಹೊರಡಿಸಲಾಗಿದೆ. ಈ ಮೂಲಕ ಸಾವಿರಾರು ಶಿಕ್ಷಕರ ಹುದ್ದೆಗಳಿಗೆ ಭರವಸೆ ಮೂಡಿದ್ದು, ನಿರೀಕ್ಷೆಯಲ್ಲಿದ್ದ ಅರ್ಹ ಅಭ್ಯರ್ಥಿಗಳಿಗೆ ಇದು ಮಹತ್ವದ ಬೆಳವಣಿಗೆಯಾಗಿದೆ. ಇದೇ ವೇಳೆ ಶಿಕ್ಷಣ ಕ್ಷೇತ್ರದಲ್ಲಿ ಗುಣಾತ್ಮಕ ಸುಧಾರಣೆ ಹಾಗೂ ಶಿಕ್ಷಕರ ಕೊರತೆಯನ್ನು ನಿವಾರಿಸುವ ನಿಟ್ಟಿನಲ್ಲಿ ಈ ಹೆಜ್ಜೆ ಮುಖ್ಯ ಎನ್ನಲಾಗುತ್ತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ದಶಕಗಳಿಂದ ಸ್ಥಗಿತಗೊಂಡ ಹುದ್ದೆಗಳ ಭರ್ತಿ:
ರಾಜ್ಯದ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ನೀಡಲಾದ ಈ ಆದೇಶವು, 1978ರಿಂದ 2003ರ ವರೆಗೆ ನೇಮಕಾತಿ ಪ್ರಕ್ರಿಯೆಗೆ ಒಳಪಟ್ಟ ನೇರ ನೇಮಕಾತಿ ಹಾಗೂ ಮುಂಬಡ್ತಿ ಹೊಂದಿದ ಖಾಲಿ ಹುದ್ದೆಗಳ ಮಾಹಿತಿಯನ್ನು ಆಯೋಗಕ್ಕೆ ಸಲ್ಲಿಸುವ ಸಂಬಂಧವಾಗಿದೆ. ಈ ಕುರಿತು ತಕ್ಷಣದ ಕ್ರಮ ಕೈಗೊಳ್ಳಲು, 04 ವಿಭಾಗೀಯ ಕಛೇರಿಗಳ ಸಹ ನಿರ್ದೇಶಕರು ಹಾಗೂ 2003ರ ನಂತರದ 35 ಶೈಕ್ಷಣಿಕ ಜಿಲ್ಲೆಗಳ ಉಪನಿರ್ದೇಶಕರಿಗೆ ಸೂಚನೆ ನೀಡಲಾಗಿದೆ.
ಮಾಹಿತಿ ಸಲ್ಲಿಕೆಯಲ್ಲಿ ವಿಳಂಬ: ಕೆಲ ಜಿಲ್ಲೆಗಳು ಮಾತ್ರ ಸ್ಪಂದನೆ,
ಅದರಂತೆ ಶಿರಸಿ ಮತ್ತು ರಾಮನಗರ ಶೈಕ್ಷಣಿಕ ಜಿಲ್ಲೆಗಳು ಮಾತ್ರ ಇಲ್ಲಿಯವರೆಗೆ ಸಂಪೂರ್ಣ ಮಾಹಿತಿ ಸಲ್ಲಿಸಿದ್ದು, ಉಳಿದ ಎಲ್ಲಾ ವಿಭಾಗೀಯ ಕಛೇರಿಗಳು ಹಾಗೂ ಶೈಕ್ಷಣಿಕ ಜಿಲ್ಲೆಗಳು ಸಹಜತೆಯಂತೆ ವಿಳಂಬ ಮಾಡಿರುವುದು ಗಮನಾರ್ಹ. ಸರ್ಕಾರವು ಈ ಮಾಹಿತಿಯ ಆಧಾರದ ಮೇಲೆ ಆಯೋಗಕ್ಕೆ ಅಂತಿಮ ವರದಿ ಸಲ್ಲಿಸಬೇಕಾಗಿರುವ ಹಿನ್ನೆಲೆಯಲ್ಲಿ ಈಗಾಗಲೇ 7 ತಿಂಗಳು ವಿಳಂಬವಾಗಿದೆ.
ಸರಕಾರದಿಂದ ಹೊಸ ನಿರ್ದೇಶನ: ಸಿಬ್ಬಂದಿ ನಿಯೋಜನೆಗೆ ಸೂಚನೆ,
ಈ ಪ್ರಕ್ರಿಯೆ ವೇಗಗೊಳಿಸಲು ಹಾಗೂ ಉಲ್ಲೇಖ (3)(4) ರ ಆದೇಶದಂತೆ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ನೇರ ನೇಮಕಾತಿ (ಅನುಬಂಧ–1) ಹಾಗೂ ಮುಂಬಡ್ತಿ ವಿವರಗಳನ್ನು (ಅನುಬಂಧ–2) ಸ್ಪಷ್ಟವಾಗಿ ನೀಡುವಂತೆ ಸೂಚಿಸಲಾಗಿದೆ. ಈ ಮಾಹಿತಿಯನ್ನು ಆಯೋಗಕ್ಕೆ ನಿಗದಿತ ರೂಪದಲ್ಲಿ ಸಲ್ಲಿಸಲು ಪ್ರತಿ ಶೈಕ್ಷಣಿಕ ಜಿಲ್ಲೆಯಿಂದ ಅಧಿಕೃತ ಅಧಿಕಾರಿಗಳನ್ನು ಅಥವಾ ಸಿಬ್ಬಂದಿಯನ್ನು ನಿಯೋಜಿಸಲು ಸರ್ಕಾರ ಈಗ ನಿರ್ದೇಶನ ನೀಡಿದೆ.
ಒಟ್ಟಾರೆಯಾಗಿ, ಈ ಕ್ರಮದಿಂದ ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ ಸಾವಿರಾರು ಹುದ್ದೆಗಳನ್ನು ಭರ್ತಿ ಮಾಡುವತ್ತ ಸಕಾರಾತ್ಮಕ ಹೆಜ್ಜೆ ಇಡಲಾಗಿದೆ. ಇದರ ಪರಿಣಾಮವಾಗಿ, ಗ್ರಾಮೀಣ ಹಾಗೂ ಅರೆನಗರ ಪ್ರದೇಶಗಳ ಶಾಲೆಗಳಿಗೆ ಶಿಕ್ಷಕರ ಕೊರತೆಯು ತಗ್ಗುವ ನಿರೀಕ್ಷೆ ವ್ಯಕ್ತವಾಗಿದೆ. ಸರ್ಕಾರದ ಈ ನಿರ್ಧಾರ ಶಿಕ್ಷಣ ವ್ಯವಸ್ಥೆಯಲ್ಲಿ ನೆಲೆಸಿರುವ ಸವಾಲುಗಳನ್ನು ಪರಿಹರಿಸಲು ಅನುಕೂಲಕರವಾಗಿದ್ದು, ಹಳೆಯ ಬ್ಯಾಕ್ ಲಾಗ್ ಹುದ್ದೆಗಳ ಬಗ್ಗೆ ನಿರ್ಲಕ್ಷ್ಯವಾಗಿರುವ ಕ್ರಮದ ವಿರುದ್ಧ ಒಂದು ಸ್ಪಷ್ಟ ಮತ್ತು ಪರಿಣಾಮಕಾರಿಯಾದ ಉತ್ತರವಾಗಿದೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.