ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಆವಾಸ್ ಯೋಜನೆ (PMAY) ಅಡಿಯಲ್ಲಿ ಬಡ ಮತ್ತು ಮಧ್ಯಮ ಆದಾಯದ ಕುಟುಂಬಗಳು ಸ್ವಂತ ಮನೆ ನಿರ್ಮಾಣಕ್ಕಾಗಿ ₹2.67 ಲಕ್ಷದವರೆಗೆ ಸಹಾಯಧನ ಪಡೆಯಲು ಅರ್ಹರಾಗಿದ್ದಾರೆ. ಈ ಯೋಜನೆಯಡಿ ನಗರ ಮತ್ತು ಗ್ರಾಮೀಣ ಪ್ರದೇಶಗಳ ನಿವಾಸಿಗಳಿಗೆ ವಿವಿಧ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಯೋಜನೆಯ ಮುಖ್ಯ ಉದ್ದೇಶ
2015ರಲ್ಲಿ ಆರಂಭವಾದ ಈ ಯೋಜನೆಯು “ಎಲ್ಲರಿಗೂ ಮನೆ” (Housing for All) ಎಂಬ ಧ್ಯೇಯವನ್ನು ಹೊಂದಿದೆ. ಇದರ ಮೂಲಕ ದೇಶದ ಬಡ, ಕಡಿಮೆ ಆದಾಯ ಮತ್ತು ಮಧ್ಯಮ ಆದಾಯದ ವರ್ಗದವರಿಗೆ ಅಗ್ಗದ ದರದಲ್ಲಿ ಮನೆಗಳನ್ನು ನಿರ್ಮಿಸಲು ಸಹಾಯ ಮಾಡುತ್ತದೆ. ಈವರೆಗೆ ದೇಶದಾದ್ಯಂತ 92.61 ಲಕ್ಷಕ್ಕೂ ಹೆಚ್ಚು ಮನೆಗಳು ನಿರ್ಮಾಣವಾಗಿವೆ.
ಯೋಜನೆಯ ಎರಡು ವಿಭಾಗಗಳು
PMAY-Urban (ನಗರ ಪ್ರದೇಶ): ನಗರಗಳಲ್ಲಿ ವಾಸಿಸುವ ಬಡ ಮತ್ತು ಮಧ್ಯಮ ಆದಾಯದ ಕುಟುಂಬಗಳಿಗೆ ಲಕ್ಷ್ಯವಿರಿಸಿದೆ.
PMAY-Gramin (ಗ್ರಾಮೀಣ ಪ್ರದೇಶ): ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವವರಿಗೆ ವಿಶೇಷ ಪ್ರಾಶಸ್ತ್ಯ ನೀಡುತ್ತದೆ.
ಯಾರು ಅರ್ಹರು?
ಯೋಜನೆಯ ಅರ್ಹತೆ ಕುಟುಂಬದ ವಾರ್ಷಿಕ ಆದಾಯವನ್ನು ಅವಲಂಬಿಸಿದೆ. ನಾಲ್ಕು ವಿಭಾಗಗಳಲ್ಲಿ ಫಲಾನುಭವಿಗಳನ್ನು ವಿಂಗಡಿಸಲಾಗಿದೆ:
EWS (ಆರ್ಥಿಕವಾಗಿ ಹಿಂದುಳಿದ ವರ್ಗ):
- ವಾರ್ಷಿಕ ಆದಾಯ: ₹6 ಲಕ್ಷದೊಳಗೆ
- ಗರಿಷ್ಠ ಸಾಲ: ₹6 ಲಕ್ಷ
- ಸಹಾಯಧನ: ₹2.67 ಲಕ್ಷ
- ಮನೆ ಗಾತ್ರ: 30 ಚದರ ಮೀಟರ್
- ಷರತ್ತು: ಮನೆಯ ಮಾಲೀಕತ್ವ ಮಹಿಳೆಯ ಹೆಸರಿನಲ್ಲಿರಬೇಕು.
LIG (ಕಡಿಮೆ ಆದಾಯದ ವರ್ಗ):
- ವಾರ್ಷಿಕ ಆದಾಯ: ₹6-12 ಲಕ್ಷ
- ಗರಿಷ್ಠ ಸಾಲ: ₹9 ಲಕ್ಷ
- ಸಹಾಯಧನ: ₹2.35 ಲಕ್ಷ
- ಮನೆ ಗಾತ್ರ: 60 ಚದರ ಮೀಟರ್
- ಷರತ್ತು: ಮಹಿಳೆಯ ಹೆಸರಿನಲ್ಲಿ ಮನೆ ಇರಬೇಕು.
MIG-1 (ಮಧ್ಯಮ ಆದಾಯ ವರ್ಗ – ಫೇಸ್ 1):
- ವಾರ್ಷಿಕ ಆದಾಯ: ₹12-18 ಲಕ್ಷ
- ಗರಿಷ್ಠ ಸಾಲ: ₹12 ಲಕ್ಷ
- ಸಹಾಯಧನ: ₹2.30 ಲಕ್ಷ
- ಮನೆ ಗಾತ್ರ: 160 ಚದರ ಮೀಟರ್
- ಷರತ್ತು: ಮಹಿಳೆಯ ಹೆಸರಿನಲ್ಲಿ ಮನೆ ಇರಬೇಕು.
MIG-2 (ಮಧ್ಯಮ ಆದಾಯ ವರ್ಗ – ಫೇಸ್ 2):
- ವಾರ್ಷಿಕ ಆದಾಯ: ₹18 ಲಕ್ಷದೊಳಗೆ
- ಗರಿಷ್ಠ ಸಾಲ: ₹12 ಲಕ್ಷ
- ಸಹಾಯಧನ: ₹2.30 ಲಕ್ಷ
- ಮನೆ ಗಾತ್ರ: 200 ಚದರ ಮೀಟರ್
- ಷರತ್ತು: ಮಹಿಳೆಯ ಹೆಸರಿನಲ್ಲಿ ಮನೆ ಇರಬೇಕಾದ ಅಗತ್ಯವಿಲ್ಲ.
ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು
ಆಧಾರ್ ಕಾರ್ಡ್ (ಅರ್ಜಿದಾರ ಮತ್ತು ಕುಟುಂಬದ ಸದಸ್ಯರು), ಬ್ಯಾಂಕ್ ಖಾತೆ ವಿವರ (ಆಧಾರ್ ಲಿಂಕ್ ಮಾಡಿರಬೇಕು), ಭೂಮಿ ದಾಖಲೆ (ನಿವೇಶನದ ಪತ್ರ/ಸರ್ವೆ ನಂಬರ್/ಪಟಾ), ವಸತಿ ಪ್ರಮಾಣಪತ್ರ (ನಗರ ಪಾಲಿಕೆ ಅಥವಾ ಗ್ರಾಮ ಪಂಚಾಯತ್ನಿಂದ), ಆದಾಯ ಪ್ರಮಾಣಪತ್ರ (ತಾಲೂಕು ಕಚೇರಿಯಿಂದ), ಪಾಸ್ಪೋರ್ಟ್ ಗಾತ್ರದ ಫೋಟೋ ಮತ್ತು ಸಹಿ, ಮನೆ ಇಲ್ಲದಿರುವುದರ ಬಗ್ಗೆ ನೋಟರಿ ದೃಢೀಕೃತ ಅಫಿಡವಿಟ್
ಸಾಲ ನೀಡುವ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು
- ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)
- ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB)
- HDFC ಬ್ಯಾಂಕ್
- ICICI ಬ್ಯಾಂಕ್
- LIC ಹೌಸಿಂಗ್ ಫೈನಾನ್ಸ್
- ಇಂಡಿಯಾ ಬುಲ್ಸ್ ಹೌಸಿಂಗ್ ಫೈನಾನ್ಸ್
ಅರ್ಜಿ ಸಲ್ಲಿಸುವ ವಿಧಾನ
ಆನ್ಲೈನ್ ಅರ್ಜಿ:
- ನಗರ ಪ್ರದೇಶ: pmaymis.gov.in
- ಗ್ರಾಮೀಣ ಪ್ರದೇಶ: pmayg.nic.in
- “Citizen Assessment” ವಿಭಾಗದಲ್ಲಿ ಅರ್ಜಿ ನಮೂದಿಸಿ.
ಆಫ್ಲೈನ್ ಅರ್ಜಿ:
ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್ ಅಥವಾ CSC (ಕಸ್ಟಮರ್ ಸರ್ವಿಸ್ ಸೆಂಟರ್) ಗೆ ಭೇಟಿ ನೀಡಿ.
ಕೊನೆಯ ದಿನಾಂಕ: ಡಿಸೆಂಬರ್ 31, 2025
ಯೋಜನೆಯ ಪ್ರಯೋಜನಗಳು
- ಕಡಿಮೆ ಬಡ್ಡಿದರದಲ್ಲಿ ಸಾಲ
- ಸರ್ಕಾರದಿಂದ ನೇರ ಸಹಾಯಧನ
- ಮಹಿಳಾ ಸಬಲೀಕರಣಕ್ಕೆ ಪ್ರೋತ್ಸಾಹ
- ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಸತಿ ಸೌಲಭ್ಯ
ಗಮನಿಸಿ: ಸಹಾಯಧನದ ಹಣವನ್ನು ನೇರವಾಗಿ ಫಲಾನುಭವಿಯ ಬ್ಯಾಂಕ್ ಖಾತೆಗೆ DBT (ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್ಫರ್) ಮೂಲಕ ಜಮಾ ಮಾಡಲಾಗುತ್ತದೆ.
ನಿಮ್ಮ ಸ್ವಂತ ಮನೆಯ ಕನಸನ್ನು ನನಸು ಮಾಡಿಕೊಳ್ಳಲು ಇದೇ ಸರಿಯಾದ ಸಮಯ! ಅರ್ಹತೆ ಇದ್ದರೆ, ಇಂದೇ ಅರ್ಜಿ ಸಲ್ಲಿಸಿ.
ಅಧಿಕೃತ ಲಿಂಕ್ ಗಳು:
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.