Picsart 23 07 05 13 19 10 574 scaled

Post office scheme : ಪೋಸ್ಟ್ ಆಫೀಸ್ ಸ್ಕೀಮ್ ಗಳ ಬಗ್ಗೆ ಕಂಪ್ಲೀಟ್ ಮಾಹಿತಿ – ತಪ್ಪದೇ ಓದಿ

WhatsApp Group Telegram Group

ನಮಸ್ಕಾರ ಓದುಗರಿಗೆ, ಇವತ್ತಿನ ನಮ್ಮ ಲೇಖನದಲ್ಲಿ ಪೋಸ್ಟ್ ಆಫೀಸ್ ನ ಹೂಡಿಕೆ ಯೋಜನೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡಲಾಗುತ್ತದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ನಮ್ಮ ಲೇಖನವನ್ನೂ ಸಂಪೂರ್ಣವಾಗಿ ಓದಿ ತಿಳಿಯಿರಿ. ಇದೇ ರೀತಿಯ ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಪೋಸ್ಟ್ ಆಫೀಸ್ ಉಳಿತಾಯ ಯೋಜನೆಗಳು(post office saving schemes):

ಪೋಸ್ಟ್ ಆಫೀಸ್ ಉಳಿತಾಯ ಯೋಜನೆಗಳು ಹಲವಾರು ವಿಶ್ವಾಸಾರ್ಹ ಉತ್ಪನ್ನಗಳನ್ನು ಒಳಗೊಂಡಿವೆ ಮತ್ತು ಅಪಾಯ-ಮುಕ್ತ ಹೂಡಿಕೆ ಆದಾಯವನ್ನು ನೀಡುತ್ತವೆ. ದೇಶದಾದ್ಯಂತ ಹರಡಿರುವ ಸುಮಾರು 1.54 ಲಕ್ಷ ಅಂಚೆ ಕಚೇರಿಗಳು ಈ ಯೋಜನೆಗಳನ್ನು ನಿರ್ವಹಿಸುತ್ತಿವೆ. ಈ ಹೂಡಿಕೆಗಳು ಸರ್ಕಾರ-ಬೆಂಬಲಿತವಾಗಿರುತ್ತವೆ ಮತ್ತು ಹೀಗಾಗಿ ಖಾತರಿಯ ಆದಾಯವನ್ನು ಒದಗಿಸುತ್ತವೆ.

ಹಣ ಹೂಡಿಕೆಗೆ ಹಾಗೂ ಉಳಿತಾಯಕ್ಕೆ ಹಲವು ಅತ್ಯುತ್ತಮ ಯೋಜನೆಗಳನ್ನು ಅಂಚೆ ಇಲಾಖೆ ಹೊಂದಿದೆ. ಗ್ಯಾರಂಟಿ ರಿಟರ್ನ್ಸ್ ಜೊತೆ ಇಲ್ಲಿ ಹೂಡಿಕೆ ಮಾಡುವ ಹಣಕ್ಕೆ ರಿಸ್ಕ್‌ ಕೂಡ ಕಡಿಮೆ ಇರುತ್ತದೆ. ಕೆಲವು ಅಂಚೆ ಕಚೇರಿ ಯೋಜನೆಗಳಲ್ಲಿ ಬ್ಯಾಂಕ್‌ನ ನಿಶ್ಚಿತ ಠೇವಣಿ ಯೋಜನೆಗಳಿಗಿಂತ ಹೆಚ್ಚಿನ ಬಡ್ಡಿ ಲಭ್ಯವನ್ನು ಒದಗಿಸಿಕೊಡುತ್ತದೆ. ಕೇಂದ್ರ ಸರ್ಕಾರವೇ ಗ್ಯಾರೆಂಟಿ ಆಗಿರುವುದರಿಂದ ಕಷ್ಟಪಟ್ಟು ಸಂಪಾದಿಸಿದ ಹಣಕ್ಕೆ ಸುರಕ್ಷತೆ ಕೂಡ ನೀಡುತ್ತದೆ. ಆದರಿಂದ ನಾವು ಯಾವುದೇ ರೀತಿ ನಷ್ಟದ ಭಯವಿಲ್ಲದೆ ಯೋಚನೆ ಮಾಡದೆ ಅಂಚೆ ಕಚೇರಿ ಅಡಿಯಲ್ಲಿ ಬರುವ ಯೋಜನೆಯಲ್ಲಿ ನಮ್ಮ ಹಣವನ್ನು ಹೂಡಿಕೆ ಮಾಡಬಹುದಾಗಿದೆ.

Untitled 1 scaled

ವಿವಿಧ ಕೆಲವು ಉತ್ತಮ ಉಳಿತಾಯ ಯೋಜನೆಗಳ ಬಡ್ಡಿ ದರಗಳ ಹೋಲಿಕೆ ಈ ಕೆಳಗಿನಂತೆ ಇವೆ:

ಸುಕನ್ಯಾ ಸಮೃದ್ಧಿ ಯೋಜನೆ:

ಈ ಯೋಜನೆಯು ಹೆಣ್ಣುಮಕ್ಕಳಿಗೆ ಮಾತ್ರ ಲಭ್ಯವಿರುತ್ತದೆ. 10 ವರ್ಷದೊಳಗಿನ ಹೆಣ್ಣುಮಕ್ಕಳ ಹೆಸರಿನಲ್ಲಿ ಈ ಯೋಜನೆಯಡಿ ಖಾತೆ ತೆರೆಯಬೇಕು. ಇಲ್ಲಿ ಬಡ್ಡಿ ದರ ಶೇ.7.6ರಷ್ಟಿರುತ್ತದೆ. ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಹಣ ಹೂಡಿಕೆ ಮಾಡಿದರೆ 9.47 ವರ್ಷಗಳಲ್ಲಿ  ಕೊಟ್ಟ ಬಡ್ಡಿ ದರದಲ್ಲಿ ನಿಮ್ಮ ಹಣ ದ್ವಿಗುಣವಾಗುತ್ತದೆ.

ಕಿಸಾನ್ ವಿಕಾಸ್ ಪತ್ರ:

ಕಿಸಾನ್ ವಿಕಾಸ್ ಪತ್ರವು ವಾರ್ಷಿಕ ಸಂಯುಕ್ತ ಬಡ್ಡಿ ದರದಲ್ಲಿ ಹೂಡಿಕೆದಾರರಿಗೆ ಆದಾಯ ನೀಡುವ ಯೋಜನೆಯಾಗಿದೆ. ವಾರ್ಷಿಕ ಶೇ.6.9ರಷ್ಟು ಬಡ್ಡಿಯನ್ನು ಇಲ್ಲಿ ಪಡೆಯಬಹುದಾಗಿದೆ. ಈ ಯೋಜನೆಯಲ್ಲಿ ನೀವು ಹೂಡಿಕೆ ಮಾಡಿದ ಹಣ 124 ತಿಂಗಳುಗಳಲ್ಲಿ ಅಂದರೆ 10 ವರ್ಷ 4 ತಿಂಗಳಲ್ಲಿ ದ್ವಿಗುಣಗೊಳ್ಳುತ್ತದೆ.

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿapp download

ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ:

ಗ್ರಾಹಕರ ಇಲ್ಲಿ ಠೇವಣಿ ಹಣಕ್ಕೆ ಶೇ.6.7ರ ದರದಲ್ಲಿ ಬಡ್ಡಿ ಲಭ್ಯವಿದೆ. ಇದರಲ್ಲಿ ಠೇವಣಿ ಮಾಡಿದ ಹಣ ಸುಮಾರು 10 ವರ್ಷ 9 ತಿಂಗಳಲ್ಲಿ ದ್ವಿಗುಣಗೊಳ್ಳುತ್ತದೆ.

ಅಂಚೆ ಕಚೇರಿ PPF :

ಪಿಪಿಎಫ್ (PPF)ಅತ್ಯುತ್ತಮ ಹೂಡಿಕೆ ಆಯ್ಕೆಯಾಗಿದೆ. ಶೇ.7.1ರ ದರದಲ್ಲಿ ಬಡ್ಡಿ ಲಭ್ಯವಿದ್ದು, ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ನಿಮ್ಮ ಠೇವಣಿ ಹಣ 10.14 ವರ್ಷಗಳಲ್ಲಿ ದ್ವಿಗುಣಗೊಳ್ಳುತ್ತದೆ.

telee

ಉಳಿತಾಯ ಪ್ರಮಾಣ ಪತ್ರ:

ಈ ಯೋಜನೆಯಲ್ಲಿ ಶೇ.6.8ರಷ್ಟು ಬಡ್ಡಿ ಸಿಗಲಿದ್ದು, 5 ವರ್ಷಗಳ ಈ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡುವುದರಿಂದ ಸುಮಾರು 10.59 ವರ್ಷಗಳಲ್ಲಿ ನಿಮ್ಮ ಠೇವಣಿ ಹಣ ದ್ವಿಗುಣಗೊಳ್ಳುತ್ತದೆ.

ಆರ್‌ಡಿ(RD):

ಅಂಚೆ ಕಚೇರಿ ಆರ್‌ಡಿ (RD)ಯಲ್ಲಿ ಹೂಡಿಕೆ ಮಾಡಿದರೆ, ನಿಮ್ಮ ಠೇವಣಿ ಹಣ 12 ವರ್ಷ 4 ತಿಂಗಳಲ್ಲಿ ಹೆಚ್ಚಿನ ಮೊತ್ತದಲ್ಲಿ ದ್ವಿಗುಣವಾಗುತ್ತದೆ. ಇಲ್ಲಿ ನಿಮ್ಮ ಠೇವಣಿಗೆ ಶೇ.5.8ರಷ್ಟು ಬಡ್ಡಿ ದೊರೆಯಲಿದೆ.

ಇಂತಹ ಉತ್ತಮವಾದ, ಪ್ರತಿಯೊಬ್ಬ ಜನ ಸಾಮಾನ್ಯರಿಗೆ ಉಪಯೋಗ ಆಗುವಂತಹ ಮಾಹಿತಿಯನ್ನು ಹೊಂದಿದ ಈ ಲೇಖನವನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

ಇದನ್ನೂ ಓದಿ: 5 ನಿಮಿಷದಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿ : How to link Aadhaar with Pan card

ಪ್ರಮುಖ ಲಿಂಕುಗಳು 
ನೀಡ್ಸ್ ಪಬ್ಲಿಕ್ ಅಪ್ಲಿಕೇಶನ್
Download App
ಟೆಲಿಗ್ರಾಂ ಚಾನೆಲ್ ಲಿಂಕ್ ಇಲ್ಲಿ ಕ್ಲಿಕ್ ಮಾಡಿ 
ವಾಟ್ಸಪ್ ಗ್ರೂಪ್ ಲಿಂಕ್ ಇಲ್ಲಿ ಕ್ಲಿಕ್ ಮಾಡಿ 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube 

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

app download

WhatsApp Group Join Now
Telegram Group Join Now

Popular Categories