ಕರ್ನಾಟಕ ರಾಜ್ಯ ಸರ್ಕಾರದಿಂದ (From Karnataka State Government) ಪೊಲೀಸ್ ಇಲಾಖೆಗೆ(Police Department) ಸಂಬಂಧಿಸಿದಂತೆ ದೊಡ್ಡ ಘೋಷಣೆ ಮಾಡಲಾಗಿದೆ. 4,115 ಹುದ್ದೆಗಳ ನೇಮಕಾತಿಗೆ(4115 Post Recruitment) ಆರ್ಥಿಕ ಇಲಾಖೆಯ ಅನುಮೋದನೆ ದೊರೆತಿದ್ದು, ಬೃಹತ್ ನೇಮಕಾತಿ ಪ್ರಕ್ರಿಯೆ ಆರಂಭವಾಗುವ ನಿರೀಕ್ಷೆಯಿದೆ. ಈ ಹುದ್ದೆಗಳು 2022-23, 2023-24, ಮತ್ತು 2024-25ನೇ ಸಾಲಿನ ನೇಮಕಾತಿ ಪ್ರಸ್ತಾವನೆಗಳಲ್ಲಿ ಸೇರಿವೆ.
ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹುದ್ದೆಗಳ ವಿಭಾಗ ಮತ್ತು ಸಂಖ್ಯೆ:
ಹೊಸ ಭರ್ತಿಗೆ ಅಡಿಯಲ್ಲಿ ಹಲವು ವಿಭಾಗದ ಹುದ್ದೆಗಳು ಇವೆ. ಪ್ರಮುಖವಾಗಿ:
ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ (CAR/DAR)
2,000 ಹುದ್ದೆಗಳು
2023-24ನೇ ಸಾಲಿನ ಪ್ರಸ್ತಾವನೆ
ವಿಶೇಷ ಮೀಸಲು ಪೊಲೀಸ್ ಕಾನ್ಸ್‌ಟೇಬಲ್ (SRPC) (KSRP)
150 ಹುದ್ದೆಗಳು
2023-24ನೇ ಸಾಲಿನ ಪ್ರಸ್ತಾವನೆ
ಪೋಲಿಸ್ ಸಬ್ ಇನ್ಸ್‌ಪೆಕ್ಟರ್ (PSI)
300 ಹುದ್ದೆಗಳು
2022-23ನೇ ಸಾಲಿನ ಪ್ರಸ್ತಾವನೆ
300 ಹುದ್ದೆಗಳು
2023-24ನೇ ಸಾಲಿನ ಪ್ರಸ್ತಾವನೆ
ಡೆಪ್ಯೂಟಿ ಸಬ್ ಇನ್ಸ್‌ಪೆಕ್ಟರ್ (DSI)
15 ಹುದ್ದೆಗಳು
2024-25ನೇ ಸಾಲಿನ ಪ್ರಸ್ತಾವನೆ
ವಿದ್ಯಾರ್ಹತೆ ಮತ್ತು ಅರ್ಹತೆ:
ಸಶಸ್ತ್ರ/ವಿಶೇಷ ಮೀಸಲು ಪೊಲೀಸ್ ಕಾನ್ಸ್‌ಟೇಬಲ್(CAR/DAR) and (SRPC) (KSRP) : ಎಸ್‌ಎಸ್‌ಎಲ್‌ಸಿ (SSLC) ಪಾಸಾಗಿರಬೇಕು.
ಪೋಲಿಸ್ ಸಬ್ ಇನ್ಸ್‌ಪೆಕ್ಟರ್(PSI): ಯಾವುದೇ ಪದವಿ (Any degree) ಪೂರೈಸಿರಬೇಕು.
ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್(Civil PC): ದ್ವಿತೀಯ ಪಿಯುಸಿ (2nd puc) ಪಾಸಾಗಿರಬೇಕು.
ವಯೋಮಿತಿ:
ಕನಿಷ್ಠ ವಯಸ್ಸು: 18 ವರ್ಷ
ಗರಿಷ್ಠ ವಯಸ್ಸು: ಸಾಮಾನ್ಯ ಅಭ್ಯರ್ಥಿಗಳಿಗೆ: 25 ವರ್ಷ
ಪರಿಶಿಷ್ಟ ಜಾತಿ/ಪಂಗಡ/ಒಬಿಸಿ: 27 ವರ್ಷ
ಬುಡಕಟ್ಟು ಪ್ರದೇಶದ ಅಭ್ಯರ್ಥಿಗಳಿಗೆ: 30 ವರ್ಷ
ನೇಮಕಾತಿ ಪ್ರಕ್ರಿಯೆ :
ಹುದ್ದೆಗಳ ಭರ್ತಿಗೆ ಮುಂದಿನ ಮೂರು ತಿಂಗಳಲ್ಲಿ ಅಧಿಸೂಚನೆ ಹೊರಡುವ ಸಾಧ್ಯತೆ ಇದೆ. ಗೃಹ ಇಲಾಖೆಯಿಂದ ಅಧಿಕೃತ ಆದೇಶ ಹೊರಬಂದ ನಂತರ 40 ದಿನಗಳ ಒಳಗೆ ಅರ್ಜಿ ಪ್ರಕ್ರಿಯೆ ಆರಂಭವಾಗುವ (Within 40Days applications starts) ನಿರೀಕ್ಷೆ ಇದೆ.
ಅಭ್ಯರ್ಥಿಗಳಿಗೆ ಸಂದೇಶ :
ಈ ಬೃಹತ್ ನೇಮಕಾತಿ ಪ್ರಕ್ರಿಯೆ ಯುವಕರಿಗೆ ಸರಕಾರಿ ಉದ್ಯೋಗಕ್ಕೆ ಅವಕಾಶ ಒದಗಿಸುತ್ತಿದ್ದು, ಸರ್ಕಾರಿ ಸೇವೆಗೆ ತೊಡಗಲು ಆಸಕ್ತ ಯುವಕರಿಗೆ ಉತ್ತಮ ಅವಕಾಶವಾಗಿದೆ. ಅರ್ಜಿ ಪ್ರಕ್ರಿಯೆ ಆರಂಭವಾದ ನಂತರ ಅಧಿಕೃತ ವೆಬ್‌ಸೈಟ್‌ನಲ್ಲಿ (https://ksp.karnataka.gov.in) ಎಲ್ಲಾ ವಿವರಗಳು ಲಭ್ಯವಾಗುತ್ತವೆ.
ಕೊನೆಯದಾಗಿ, ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ (Karnataka state Police Department) ಈ ದೊಡ್ಡ ನೇಮಕಾತಿ ಘೋಷಣೆ ರಾಜ್ಯದ ಯುವಜನತೆಗೆ ಉತ್ಸಾಹವನ್ನು ತಂದಿದ್ದು, ಹೊಸ ಭವಿಷ್ಯ ಕಟ್ಟಲು ಉತ್ತಮ ಅವಕಾಶ ನೀಡಲಿದೆ. ಅಭ್ಯರ್ಥಿಗಳು ತಕ್ಷಣವೇ ತಮ್ಮ ಶೈಕ್ಷಣಿಕ ದಾಖಲೆಗಳನ್ನು ಸಿದ್ಧಪಡಿಸಿ, ಅಧಿಸೂಚನೆಗಾಗಿ ಕಾಯುವಂತೆ ಸಲಹೆ ನೀಡಲಾಗಿದೆ. ಮತ್ತು ನೀವೇನಾದರೂ, ಮೇಲಿನ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸಿದರೆ ಈಗಿನಿಂದಲೇ ಅದಕ್ಕಾಗಿ ತಯಾರಿಯನ್ನು ಮಾಡಿಕೊಳ್ಳುವುದು ಅವಶ್ಯಕವಾಗಿದೆ. ಅಷ್ಟೇ ಅಲ್ಲದೆ, ನೇಮಕಾತಿಯ ಅಧಿಸೂಚನೆಗಳಿಗಾಗಿ ಪ್ರತಿದಿನ ಅಧಿಕೃತ ಜಾಲತಾಣಕ್ಕೆ ತೆರಳಿ ಪರಿಶೀಲಿಸಿ. ಹಾಗೆಯೇ ಈ ವರದಿಯನ್ನು ಎಲ್ಲರಿಗೂ ಶೇರ್ ಮಾಡಿ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group




