WhatsApp Image 2025 08 24 at 2.13.22 PM

BIG NEWS : ಗೌರಿ-ಗಣೇಶ ಹಬ್ಬ ಆಚರಣೆಗೆ `ಪೊಲೀಸ್ ಇಲಾಖೆ’ಯಿಂದ ಮಾರ್ಗಸೂಚಿ ಪ್ರಕಟ : ಈ ರೂಲ್ಸ್ ಕಡ್ಡಾಯ.!

WhatsApp Group Telegram Group

ಬೆಂಗಳೂರು ನಗರದಾದ್ಯಂತ ಗೌರಿ-ಗಣೇಶೋತ್ಸವವನ್ನು ಶಾಂತಿಯುತವಾಗಿ ಮತ್ತು ಸುವ್ಯವಸ್ಥಿತವಾಗಿ ಆಚರಿಸುವ ಸಲುವಾಗಿ ಕರ್ನಾಟಕ ಪೊಲೀಸ್ ಇಲಾಖೆಯು ಸಮಗ್ರ ಮಾರ್ಗಸೂಚಿಗಳನ್ನು ಹೊರಡಿಸಿದೆ. ಈ ನಿಯಮ ಆಚರಣೆಗಳನ್ನು ನಡೆಸಿಕೊಂಡು ಹೋಗುವ ಸಂಘ-ಸಂಸ್ಥೆಗಳು ಮತ್ತು ನಾಗರಿಕರು ಕಟ್ಟುನಿಟ್ಟಾಗಿ ಪಾಲಿಸಬೇಕು ಮತ್ತು ಇದರ ಪಾಲನೆ ಕಡ್ಡಾಯವಾಗಿದೆ.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಪೂರ್ವಾನುಮತಿ ಮತ್ತು ಪರವಾನಗಿ:

ಪೊಲೀಸ್ ಇಲಾಖೆಯು ಗಣೇಶೋತ್ಸವದ ಆಚರಣೆಗೆ ಸಂಬಂಧಿಸಿದಂತೆ ಕೆಲವು ಮುಖ್ಯ ನಿರ್ದೇಶನಗಳನ್ನು ನೀಡಿದೆ. ನಗರದ ಎಲ್ಲಾ ಪೊಲೀಸ್ ಠಾಣೆಗಳು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಗಣೇಶ ವಿಗ್ರಹಗಳನ್ನು ಪ್ರತಿಷ್ಠಾಪಿಸಲು ಬಯಸುವ ಸಂಘಟನೆಗಳಿಂದ ಅನುಮತಿ ಅರ್ಜಿಗಳನ್ನು ಸ್ವೀಕರಿಸಬೇಕು. ಹಿಂದಿನ ಎರಡು ವರ್ಷಗಳ (2023 ಮತ್ತು 2024 ರಲ್ಲಿ ವಿಗ್ರಹಗಳನ್ನು ಪ್ರತಿಷ್ಠಾಪಿಸಿದ ಸ್ಥಳಗಳ ಆಧಾರದ ಮೇಲೆ ಈ ವರ್ಷ ಅನುಮತಿ ನೀಡಬೇಕಾದ ಸ್ಥಳಗಳನ್ನು ಗುರುತಿಸಬೇಕು. ‘ಸಿಂಗಲ್ ವಿಂಡೋ ಸಿಸ್ಟಮ್’ ಮೂಲಕ ಮುಂಚಿತವಾಗಿ ಪರವಾನಗಿ ಪಡೆಯುವಂತೆ ಸಂಘಟನೆಗಳಿಗೆ ಸೂಚಿಸಬೇಕು.

ಸಾರ್ವಜನಿಕ ಸೌಲಭ್ಯ ಮತ್ತು ಸುರಕ್ಷತೆ:

ಸಾರ್ವಜನಿಕ ರಸ್ತೆಗಳು ಮತ್ತು ನಡೆಮಾರ್ಗಗಳಲ್ಲಿ ವಾಹನಗಳ ಮತ್ತು ಪಾದಚಾರಿಗಳ ಚಲನೆಗೆ ಅಡಚಣೆ ಉಂಟುಮಾಡುವ ರೀತಿಯಲ್ಲಿ ಪೆಂಡಾಲ್ ಅಥವಾ ಚಪ್ಪರ ಹಾಕುವುದನ್ನು ತಡೆಯಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಚಪ್ಪರ ಹಾಕಲು ಬಯಸುವ ಆಯೋಜಕರು, ಬಿ.ಬಿ.ಎಂ.ಪಿ, ಬೆಸ್ಕಾಂ, ಅಗ್ನಿಶಾಮಕ ದಳ ಮತ್ತು ಇತರ ಸಂಬಂಧಿತ ಇಲಾಖೆಗಳಿಂದ ‘ನೋ ಆಬ್ಜೆಕ್ಷನ್ ಸರ್ಟಿಫಿಕೇಟ್’ (NOC) ಪಡೆದು, ಸಿಂಗಲ್ ವಿಂಡೋ ವ್ಯವಸ್ಥೆಯಿಂದ ಪರವಾನಗಿ ಪಡೆಯುವುದು ಕಡ್ಡಾಯವಾಗಿದೆ.

ಧ್ವನಿ ಮಾಲಿನ್ಯ ನಿಯಂತ್ರಣ:

ಧ್ವನಿವರ್ಧಕಗಳ ಬಳಕೆಗೆ ಸಂಬಂಧಿಸಿದಂತೆ ಉಚ್ಚ ನ್ಯಾಯಾಲಯ ಮತ್ತು ರಾಜ್ಯ ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಬೆಳಗಿನ 6 ಗಂಟೆ ಮತ್ತು ರಾತ್ರಿ 10 ಗಂಟೆಗಳ ನಡುವೆ ಮಾತ್ರ ಧ್ವನಿವರ್ಧಕಗಳನ್ನು ಬಳಸಲು ಅನುಮತಿ ಇದೆ. ರಾತ್ರಿ 10 ಗಂಟೆಯ ನಂತರ ಯಾವುದೇ ಸಂದರ್ಭದಲ್ಲಿ ಧ್ವನಿವರ್ಧಕಗಳನ್ನು ಬಳಸಬಾರದು. ಧ್ವನಿವರ್ಧಕಗಳನ್ನು ಬಳಸುವಾಗ, ಆಸುಪಾಸಿನ ನಿವಾಸಿಗಳು, ವೃದ್ಧರು, ವಿದ್ಯಾರ್ಥಿಗಳು, ಆಸ್ಪತ್ರೆಗಳ ರೋಗಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಧ್ವನಿಯನ್ನು ಮಿತವಾಗಿ ನಿಯಂತ್ರಿಸಬೇಕು. ರಾತ್ರಿ 10 ಗಂಟೆಯ ನಂತರ ಪಟಾಕಿ ಸಿಡಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಅನಧಿಕೃತ ಹಣ ಸಂಗ್ರಹಣೆ ಮತ್ತು ಸುರಕ್ಷತೆ:

ಕೆಲವು ಅಪರಿಚಿತ ವ್ಯಕ್ತಿಗಳು ಅಥವಾ ಸಂಸ್ಥೆಗಳು ಗಣೇಶೋತ್ಸವದ ಹೆಸರಿನಲ್ಲಿ ಸಾರ್ವಜನಿಕರು ಮತ್ತು ವ್ಯಾಪಾರಸ್ಥರಿಂದ ಬಲವಂತವಾಗಿ ಹಣ ವಸೂಲಿ ಮಾಡುವ ಸಂಭವವಿದೆ. ಅಂತಹ ಘಟನೆಗಳನ್ನು ಎದುರಿಸಿದ ನಾಗರಿಕರು ಅದೇ ಠಾಣೆಗೆ ತಕ್ಷಣ ದೂರು ನೀಡಬೇಕು ಮತ್ತು ಪೊಲೀಸರು ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು. ದುಷ್ಕರ್ಮಿಗಳು ಗಣೇಶೋತ್ಸವದ ಹೆಸರಿನಲ್ಲಿ ಮನೆಗಳಿಗೆ ಪ್ರವೇಶಿಸಿ ದರೋಡೆ, ಸುಲಿಗೆ ನಡೆಸಬಹುದು ಎಂಬ ಅಂಶವನ್ನು ಪೊಲೀಸರು ಸಾರ್ವಜನಿಕರಿಗೆ ಮುನ್ಸೂಚನೆ ನೀಡಬೇಕು.

ಸಮುದಾಯ ಸೌಹಾರ್ದತೆ ಮತ್ತು ಸಹಕಾರ:

ಉತ್ಸವಕ್ಕೂ ಮುಂಚೆಯೇ ನಾಗರಿಕ ಸಮಿತಿ, ಮಹಲ್ಲಾ ಸಮಿತಿ ಮತ್ತು ವಿವಿಧ ಸಂಘಟನೆಗಳ ನೇತೃತ್ವದೊಂದಿಗೆ ಶಾಂತಿ ಸಭೆಗಳನ್ನು ನಡೆಸಿ, ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಬಗ್ಗೆ ಚರ್ಚಿಸಬೇಕು. ಗಣೇಶ ವಿಗ್ರಹ ಪ್ರತಿಷ್ಠಾಪನೆ ಮಾಡುವ ಸ್ಥಳಗಳಲ್ಲಿ ಮುಂಚಿತವಾಗಿ ಭದ್ರತಾ ವ್ಯವಸ್ಥೆ ಮಾಡಬೇಕು. ಪ್ರತಿ ಚಪ್ಪರ ಮತ್ತು ವಿಗ್ರಹದ ಸ್ಥಳದಲ್ಲಿ ರಾತ್ರಿ ಹೊತ್ತು ರಕ್ಷಣೆಗಾಗಿ ಸ್ವಯಂಸೇವಕರನ್ನು ನೇಮಿಸಿಕೊಳ್ಳುವಂತೆ ಆಯೋಜಕರಿಗೆ ಸೂಚಿಸಬೇಕು.

ಅಗ್ನಿ ಮತ್ತು ರಚನಾತ್ಮಕ ಸುರಕ್ಷತೆ:

ಪೆಂಡಾಲ್/ಚಪ್ಪರಗಳಲ್ಲಿ ಅಗ್ನಿಶಾಮಕ ಸಾಧನಗಳು (Fire Extinguishers) ಕಡ್ಡಾಯವಾಗಿ ಇರುವಂತೆ ನೋಡಿಕೊಳ್ಳಬೇಕು. ವೇದಿಕೆಗಳು (Stage) ಸುರಕ್ಷಿತವಾಗಿವೆ ಎಂದು ದೃಢಪಡಿಸಿಕೊಂಡು ಅದರ ದಾಖಲೆಗಳನ್ನು ಸಿದ್ಧವಿರಿಸಬೇಕು. ಸುರಕ್ಷತೆಯ ದೃಷ್ಟಿಯಿಂದ ಪ್ರತಿಷ್ಠಾಪನಾ ಸ್ಥಳಗಳಲ್ಲಿ ಕನಿಷ್ಠ 5 ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸುವುದು ಅನಿವಾರ್ಯವಾಗಿದೆ.

ವಿಸರ್ಜನಾ ಮೆರವಣಿಗೆ ಮತ್ತು ಭದ್ರತಾ ವ್ಯವಸ್ಥೆ:

ವಿಗ್ರಹಗಳ ವಿಸರ್ಜನೆಯ ಸಮಯ, ಮಾರ್ಗ ಮತ್ತು ಭಾಗವಹಿಸುವವರ ಸಂಖ್ಯೆಯನ್ನು ಮುಂಚಿತವಾಗಿ ತಿಳಿದುಕೊಂಡು ಸೂಕ್ತ ಭದ್ರತಾ ವ್ಯವಸ್ಥೆ ಮಾಡಬೇಕು. ಯಾವುದೇ ವಿಸರ್ಜನಾ ಮೆರವಣಿಗೆಗಳು ರಾತ್ರಿ 10 ಗಂಟೆಗೆ ಮುಗಿಯುವಂತೆ ನೋಡಿಕೊಳ್ಳಬೇಕು. ಮುಖ್ಯ ಉತ್ಸವ ಸ್ಥಳಗಳಲ್ಲಿ ಹಿರಿಯ ಅಧಿಕಾರಿಗಳು ಸ್ವತಃ ಹಾಜರಿದ್ದು ಪೊಲೀಸ್ ಬಂದೋಬಸ್ತು ಮತ್ತು ಸಂಚಾರ ನಿಯಂತ್ರಣವನ್ನು ನೋಡಿಕೊಳ್ಳಬೇಕು. ವಿಸರ್ಜನಾ ಸ್ಥಳಗಳಲ್ಲಿ ಕ್ರೇನ್ ಗಳು, ಮುಳುಗು ತಜ್ಞರು, ಸರಿಯಾದ ಬೆಳಕು ಮತ್ತು ಧ್ವನಿ ವ್ಯವಸ್ಥೆ ಇರುವಂತೆ ಖಚಿತಪಡಿಸಿಕೊಳ್ಳಬೇಕು. ವಿಸರ್ಜನಾ ಮೆರವಣಿಗೆ ಇತರ ಧಾರ್ಮಿಕ ಸ್ಥಳಗಳ ಬಳಿ ಹಾದುಹೋಗುವಾಗ, ಆಯಾ ಧಾರ್ಮಿಕ ಸಮುದಾಯದ ನೇತೃತ್ವದೊಂದಿಗೆ ಮುಂಚಿತ ಚರ್ಚೆ ನಡೆಸಿ ಸಹಕಾರವನ್ನು ಪಡೆಯಬೇಕು. ಮೆರವಣಿಗೆ ಮಾರ್ಗದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಗುಪ್ತಚರರು (ಸೈ-ಸೆಂಟ್ರ್ಸ್) ನೇಮಿಸಿ, ಯಾವುದೇ ಅಹಿತಕರ ಘಟನೆಗಳ ಮುನ್ಸೂಚನೆ ಪಡೆಯುವ ವ್ಯವಸ್ಥೆ ಮಾಡಬೇಕು.

ಈ ಎಲ್ಲಾ ಕ್ರಮಗಳ ಮೂಲಕ ಶಾಂತಿ, ಸುವ್ಯವಸ್ಥೆ ಮತ್ತು ಸಹಿಷ್ಣುತೆಯ ವಾತಾವರಣದಲ್ಲಿ ಗಣೇಶೋತ್ಸವವನ್ನು ಆಚರಿಸುವಲ್ಲಿ ಪೊಲೀಸ್ ಇಲಾಖೆಯು ಸಹಕರಿಸುವುದಾಗಿ ತಿಳಿಸಿದೆ.

WhatsApp Image 2025 08 24 at 1.52.42 PM
WhatsApp Image 2025 08 24 at 1.52.42 PM 1
WhatsApp Image 2025 08 24 at 1.52.43 PM
WhatsApp Image 2025 08 24 at 1.52.43 PM 1
WhatsApp Image 2025 08 24 at 1.52.44 PM

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories