ರಾಜ್ಯದ ರೈತರಿಗೆ ಹೊಸ ಭರವಸೆ. ರಾಜ್ಯದಲ್ಲಿ ‘ಪೋಡಿ ಮುಕ್ತ ಗ್ರಾಮ ಯೋಜನೆ’ ಜಾರಿ.!
ಭಾರತದ ಆರ್ಥಿಕ ವ್ಯವಸ್ಥೆಯಲ್ಲಿ(financial system) ಬಹಳ ಮುಖ್ಯ ಪಾತ್ರ ವಹಿಸುತ್ತಿರುವುದು ಕೃಷಿ(agriculture). ರೈತರ ಶ್ರಮ ಮತ್ತು ಪರಿಶ್ರಮ ದೇಶದ ಆಹಾರದ ಅವಶ್ಯಕತೆಯನ್ನು ಪೂರೈಸುತ್ತದೆ. ಆದರೆ, ಕಳೆದ ಹಲವಾರು ದಶಕಗಳಿಂದ ಕೃಷಿಕರಿಗೆ ನೂರಾರು ಸಮಸ್ಯೆಗಳು ಎದುರಾಗುತ್ತಿವೆ. ಇದರಲ್ಲಿ ಪ್ರಮುಖವೆಂದರೆ ಭೂಮಿ ಸಂಬಂಧಿತ ತಾಂತ್ರಿಕ ಅಡಚಣೆಗಳು. ರೈತರಿಗೆ ಭೂಮಿಯ ಹಕ್ಕು ಸಂಬಂಧಿತ ದಾಖಲೆಗಳು ಅಸ್ಪಷ್ಟವಾಗಿರುವ ಕಾರಣ, ಅವರಿಗೆ ಬ್ಯಾಂಕಿನ ಸಾಲ(Bank loan) ಹಾಗೂ ಆಡಳಿತಾತ್ಮಕ ತೊಂದರೆಗಳು ಎದುರಾಗುತ್ತಿವೆ. ಈ ಸಮಸ್ಯೆಯನ್ನು ಪರಿಹರಿಸಲು ಕರ್ನಾಟಕ ಸರ್ಕಾರ (Karnataka Government ) ಹೊಸದಾಗಿ ‘ಪೋಡಿ ಮುಕ್ತ ಯೋಜನೆ’ಯನ್ನು ಜಾರಿಗೆ ತಂದಿದ್ದು, ಇದು ರಾಜ್ಯದ ರೈತರಿಗೆ ಹೊಸ ಭರವಸೆಯ ಬೆಳಕು ನೀಡುತ್ತದೆ. ಈ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಪೋಡಿ ಎಂದರೇನು?:
ಪೋಡಿ ಎಂಬುದು ತಾಂತ್ರಿಕ ಪದವಾಗಿದೆ, ಬಹಳ ಮುಖ್ಯವಾಗಿ ಭೂಮಿ ರೆಕಾರ್ಡ್‌ಗಳಲ್ಲಿ(land records) ಅಸ್ಪಷ್ಟತೆಯನ್ನು ಇದು ಸೂಚಿಸುತ್ತದೆ. ಅಂದರೆ , ಕೆಲವು ಕಾರಣಗಳಿಂದ ಎಕರೆಯ ಪ್ರಮಾಣ ಮತ್ತು ಒಟ್ಟು ನಿವೇಶನದ ಹಕ್ಕುಗಳ ವಿವರ ಸರಿಯಾಗಿ ದಾಖಲಾಗದಿರುವುದರಿಂದ ‘ಪೋಡಿ’ ಪ್ರಕ್ರಿಯೆ ಉಂಟಾಗುತ್ತದೆ. ಈ ಪ್ರಕ್ರಿಯೆ ಭೂಮಿ ಸಂಪತ್ತಿನ ಹಕ್ಕುಗಳನ್ನು ಸ್ಪಷ್ಟಪಡಿಸಲು ಮುಖ್ಯವಾದ ಸಮಸ್ಯೆಗಳನ್ನು ಉಂಟುಮಾಡುತ್ತದೆ.
ಪೋಡಿ ಮುಕ್ತ ಯೋಜನೆಯ ಉದ್ದೇಶ :
ಈ ಯೋಜನೆಯ ಮುಖ್ಯ ಉದ್ದೇಶವೇ ರೈತರಿಗೆ ಭೂಮಿಯ ನಿರ್ವಹಣೆಗೆ ಸ್ಪಷ್ಟತೆ ನೀಡುವುದು. ಒಬ್ಬೊಬ್ಬ ರೈತನ ಭೂಮಿಯನ್ನು ಪ್ರತ್ಯೇಕವಾಗಿ ದಾಖಲು ಮಾಡುವುದು. ಬಹು ಮಾಲಿಕತ್ವದ ಖಾಸಗಿ ಒಡೆತನದ ಪಹಣಿಗಳನ್ನು ಏಕವ್ಯಕ್ತಿ ಪಹಣಿಗಳನ್ನಾಗಿ ಮಾಡುವುದು.
ರಾಜ್ಯದಲ್ಲಿ 16,644 ಪೋಡಿ ಮುಕ್ತ ಗ್ರಾಮ:
ಬುಧವಾರದಂದು ವಿಧಾನ ಪರಿಷತ್ತಿನ ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್(Congress) ಸದಸ್ಯ ರಾಮೋಜಿ ಗೌಡ(Ramoji Gowda) ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ಕೃಷ್ಣ ಬೈರೇಗೌಡ(Krishna Byregowda), ರಾಜ್ಯದಲ್ಲಿ ಈಗಾಗಲೇ 16,644 ಗ್ರಾಮಗಳನ್ನು ಪೋಡಿ ಮುಕ್ತ ಗ್ರಾಮಗಳನ್ನಾಗಿ ಮಾಡಲಾಗಿದ್ದು, ಕಳೆದ 3 ವರ್ಷಗಳಲ್ಲಿ ಭೂ ಮಾಪನ ಇಲಾಖೆಯಲ್ಲಿ 6,62,825 ಪೋಡಿ ಅರ್ಜಿಗಳನ್ನು ಸ್ವೀಕರಿಸಿದ್ದು, ಅದರಲ್ಲಿ 5,33,545 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದ್ದು, ಪ್ರಕರಣಗಳಲ್ಲಿನ ನ್ಯೂನತೆಗಳನ್ನು ಶೀಘ್ರವಾಗಿ ಸರಿಪಡಿಸಿಕೊಂಡು ವಿಳಂಬವಿಲ್ಲದೆ ಪೋಡಿ ದುರಸ್ತಿ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಮುಜರಾಯಿ ಆಸ್ತಿಗಳ(Mujarai properties) ಸಂರಕ್ಷಣೆ ಅಭಿಯಾನ ಮಾದರಿ:
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯದ ಮುಜರಾಯಿ ಆಸ್ತಿಗಳ ಸಂರಕ್ಷಣೆಗೆ ಆದ್ಯತೆ ನೀಡಲಾಗಿದ್ದು, ಮುಜರಾಯಿ ಆಸ್ತಿಗಳ ಸಂರಕ್ಷಣೆ ಅಭಿಯಾನವನ್ನು ರಾಜ್ಯದಲ್ಲಿ ಮಾದರಿಯಲ್ಲಿ ಕೈಗೊಳ್ಳಲಾಗುತ್ತಿದ್ದು, ಒಟ್ಟಾರೆಯಾಗಿ, ಈ ವರ್ಷ ರಾಜ್ಯದಲ್ಲಿ 5,022 ಮುಜರಾಯಿ ಆಸ್ತಿಗಳನ್ನು ಮುಜರಾಯಿ ಇಲಾಖೆಗೆ ಖಾತೆ ಮಾಡಿಕೊಡುವ ಮೂಲಕ ಸಂರಕ್ಷಣೆ ಮಾಡಲಾಗಿದೆ. ಇನ್ನು ಶ್ರೀರಂಗಪಟ್ಟಣದ ಶ್ರೀ ರಂಗನಾಥಸ್ವಾಮಿ ದೇವಾಲಯಕ್ಕೆ ದಾನವಾಗಿ ನೀಡಿರುವ 1198.34 ಎಕರೆ ಜಾಗದಲ್ಲಿ ಒತ್ತುವರಿಯಾಗಿರುವ ಜಾಗದ ವಿಷಯಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಒತ್ತುವರಿ ಜಾಗವನ್ನು ತೆರೆವುಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.
ಈ ಯೋಜನೆಯ ಪ್ರಮುಖ ಲಾಭಗಳು :
ಏಕವ್ಯಕ್ತಿ ಪಹಣಿಯ ಜಾರಿ:
ಸರ್ಕಾರವು ಪ್ರತಿ ರೈತನಿಗೆ ಅವರ ಸ್ವಂತ ಭೂಮಿಯ ಪಹಣಿ ದಾಖಲೆಗಳನ್ನು ನೀಡುವ ಗುರಿ ಹೊಂದಿದೆ.ಈ ದಾಖಲೆಗಳು ರೈತರ ಭೂಮಿಯ ಮಾಲೀಕತ್ವವನ್ನು ಸ್ಪಷ್ಟಪಡಿಸುತ್ತವೆ ಮತ್ತು ಅಸ್ಪಷ್ಟತೆಗಳನ್ನು ತೊಡೆದುಹಾಕುತ್ತವೆ.
ಡಿಜಿಟಲೀಕರಣ(Digitization):
ಭೂಮಿ ಪಹಣಿ ದಾಖಲೆಗಳನ್ನು ಡಿಜಿಟಲ್ ತಂತ್ರಜ್ಞಾನದಲ್ಲಿ ದಾಖಲಿಸುವ ಮೂಲಕ ಪೇಪರ್‌ಲೆಸ್ ವ್ಯವಸ್ಥೆಯನ್ನು ಜಾರಿಗೊಳಿಸಲಾಗುತ್ತದೆ. ಡಿಜಿಟಲೀಕರಣವು ದಾಖಲೆಗಳ ಸುಲಭವಾಗಿ ಸಿಗುತ್ತವೆ.
ಕಾನೂನು ಸ್ಪಷ್ಟತೆ(Legal clarity):
ಪ್ರತಿ ರೈತನ ಭೂಮಿಯ ಹಕ್ಕುಗಳನ್ನು ಕಾನೂನಾತ್ಮಕವಾಗಿ ಅನುಮೋದಿಸಲಾಗುತ್ತದೆ. ಇದರಿಂದ ರೈತರಿಗೆ ಕಾನೂನು ಬಿಕ್ಕಟ್ಟಿನ ಸಮಸ್ಯೆ ಎದುರಾಗುವುದಿಲ್ಲ.
ಸಾಲದ ಲಭ್ಯತೆ:
ಸ್ಪಷ್ಟ ಪಹಣಿ ದಾಖಲೆಗಳ ಮೂಲಕ ರೈತರು ಬ್ಯಾಂಕುಗಳಲ್ಲಿ ಸುಲಭವಾಗಿ ಸಾಲ ಪಡೆಯಬಹುದಾಗಿದೆ.ಈ ಯೋಜನೆಯು ಕೃಷಿಗೆ ಅಗತ್ಯವಿರುವ ಹಣಕಾಸು ಲಭ್ಯತೆಯನ್ನು ಹೆಚ್ಚಿಸುತ್ತದೆ.
ಆಡಳಿತ ಸುಧಾರಣೆ:
ಭೂಮಿಯ ದಾಖಲೆ ವ್ಯವಸ್ಥೆಯಲ್ಲಿ ನಡೆದಿರುವ ಅವ್ಯವಹಾರಗಳನ್ನು ತಡೆಗಟ್ಟಲು ಯೋಜನೆಯು ಪೂರಕವಾಗಲಿದೆ. ಇದು ಭ್ರಷ್ಟಾಚಾರವನ್ನು ತಡೆಯುವ ಮೂಲಕ ಪ್ರಾಮಾಣಿಕ ಆಡಳಿತವನ್ನು ಉತ್ತೇಜಿಸುತ್ತದೆ.
‘ಪೋಡಿ ಮುಕ್ತ ಯೋಜನೆ’ ಕರ್ನಾಟಕದ ರೈತರಿಗೆ ಭೂಮಿ ಆಧಾರಿತ ತಾಂತ್ರಿಕ ತೊಂದರೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಬಹುಮುಖ್ಯವಾದ ಹೆಜ್ಜೆಯಾಗಿದೆ. ಭೂಮಿ ಸಂಬಂಧಿತ ದಾಖಲೆಗಳ ಸ್ಪಷ್ಟತೆ ಮಾತ್ರವಲ್ಲ, ಇದರಿಂದ ರೈತರ ಆರ್ಥಿಕ ಸ್ಥಿರತೆ, ತಾಂತ್ರಿಕ ನೆರವು, ಮತ್ತು ಸರ್ಕಾರದ ಸಹಕಾರ ಹೆಚ್ಚುತ್ತದೆ. ಈ ಯೋಜನೆ ಯಶಸ್ವಿಯಾಗಿ ಜಾರಿಯಾದರೆ, ರಾಜ್ಯದ ಕೃಷಿ ವಲಯದಲ್ಲಿ ಹೊಸದೊಂದು ಪೀಳಿಗೆಗೆ ಮೆಲುಕು ಹಾಕಿದಂತಾಗುತ್ತದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group




