ನೀವು ಪಿಯುಸಿ(PUC )ಮುಗಿಸಿ, ಕಾಲೇಜಿಗೆ ಕನಸು ಕಾಣುತ್ತಿದ್ದೀರಾ? ನಿಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಲು ಇಲ್ಲಿದೆ ಒಂದು ಅದ್ಭುತ ಅವಕಾಶ! ಕೇಂದ್ರ ಸರ್ಕಾರವು ನಿಮಗೆ ಶೈಕ್ಷಣಿಕ ಸಹಾಯ ಮಾಡಲು ಮುಂದಾಗಿದೆ. ಹೌದು, ಪಿಎಂ ಉಷಾ ವಿದ್ಯಾರ್ಥಿವೇತನ ಯೋಜನೆ ನಿಮಗಾಗಿ!
ನೀವು 12 ನೇ ತರಗತಿಯಲ್ಲಿ 80% ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದರೆ ಮತ್ತು ಯಾವುದೇ ಪದವಿ ಕೋರ್ಸ್‌ಗೆ(degree course) ಸೇರಲು ಬಯಸಿದರೆ, ನೀವು ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದು. ಈ ವಿದ್ಯಾರ್ಥಿವೇತನವು ನಿಮ್ಮ ಶುಲ್ಕ, ಹಾಸ್ಟೆಲ್ ವೆಚ್ಚ ಮತ್ತು ಇತರ ಅಗತ್ಯಗಳನ್ನು ಪೂರೈಸಲು ನಿಮಗೆ ಸಹಾಯ ಮಾಡುತ್ತದೆ.
ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಅರ್ಹತೆಗಳು, ಅರ್ಜಿ ಸಲ್ಲಿಸುವ ಆನ್ಲೈನ್ ಲಿಂಕ್, ಕೊನೆಯ ದಿನಾಂಕ ಯಾವಾಗ ಎಂಬ ಮಾಹಿತಿಯನ್ನು ಈ ವರದಿಯಲ್ಲಿ ನೀಡಲಾಗಿದೆ. ದ್ವಿತೀಯ ಪಿಯುಸಿ ಪಾಸಾದ ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಳ್ಳಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಪಿಎಂ ಉಷಾ ವಿದ್ಯಾರ್ಥಿವೇತನ ಯೋಜನೆ(PM Usha Scholarship Scheme):
ಅರ್ಜಿ ಆಹ್ವಾನ:
ಶೇಕಡಾ 80 ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದುಕೊಂಡಿರುವ ಮತ್ತು 3 ವರ್ಷಗಳ ಸ್ನಾತಕ ಪದವಿ ಅಧ್ಯಯನ ಮಾಡಲಿಚ್ಚಿಸುವ ವಿದ್ಯಾರ್ಥಿಗಳಿಗೆ ಈ ಸ್ಕಾಲರ್‌ಶಿಪ್ ಲಭ್ಯ. ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳು ಪ್ರಸ್ತುತ ದಿನಗಳಲ್ಲಿ ಕೇಂದ್ರ ಸರ್ಕಾರದ ಅಧಿಕೃತ ನ್ಯಾಷನಲ್ ಇ-ಸ್ಕಾಲರ್‌ಶಿಪ್ ಪೋರ್ಟಲ್ (www.scholarship.gov.in) ಮೂಲಕ ನೋಂದಣಿ ಮಾಡಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆಗಸ್ಟ್ 31, 2024.
ಅರ್ಹತಾ ಮಾನದಂಡಗಳು(Eligibility Criteria):
ವಿದ್ಯಾರ್ಥಿಗಳು ದ್ವಿತೀಯ ಪಿಯುಸಿಯಲ್ಲಿ ಶೇಕಡಾ 80 ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿರಬೇಕು.
ಮೂರು ವರ್ಷಗಳ ಪದವಿ ವ್ಯಾಸಂಗಕ್ಕೆ ಪ್ರವೇಶ ಪಡೆದಿರಬೇಕು.
ವಿದ್ಯಾರ್ಥಿವೇತನದ ಮೊತ್ತ(Scholarship Amount):
ಪ್ರಥಮ ಶೈಕ್ಷಣಿಕ ವರ್ಷ: ₹12,000/-
ಎರಡನೇ ಮತ್ತು ಮೂರನೇ ಶೈಕ್ಷಣಿಕ ವರ್ಷ: ₹20,000/-
ಆನ್‌ಲೈನ್ ಅರ್ಜಿ ಸಲ್ಲಿಸುವ ಕ್ರಮ(Procedure to Apply Online):
ವೆಬ್ ವಿಳಾಸ https://scholarships.gov.in/ ಗೆ ಭೇಟಿ ನೀಡಿ.
‘Students’ ಎನುವಲ್ಲಿ ಕ್ಲಿಕ್ ಮಾಡಿ.
‘Apply For Scholarship >> Login’ ನಲ್ಲಿ ಕ್ಲಿಕ್ ಮಾಡಿ.
‘Register’ ನಲ್ಲಿ ಕ್ಲಿಕ್ ಮಾಡಿ ಮತ್ತು ಕೇಳಲಾದ ಮಾಹಿತಿಗಳನ್ನು ಪೂರ್ತಿ ಮಾಡಿ.
ಸೂಚನೆಗಳನ್ನು ಅನುಸರಿಸಿ, ಮಾಹಿತಿಗಳನ್ನು ತುಂಬಿ, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ.
ಅಗತ್ಯ ದಾಖಲೆಗಳು(Required Documents):
ಆಧಾರ್ ಕಾರ್ಡ್(Adhaar card)
ದ್ವಿತೀಯ ಪಿಯುಸಿ ಅಂಕಪಟ್ಟಿ(Second PUC marks card)
ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ(SSLC Marks card)
ಪದವಿ ವ್ಯಾಸಂಗಕ್ಕೆ ಸೇರಿದ ದಾಖಲೆ
ಇಮೇಲ್ ವಿಳಾಸ(E-mail address)
ಮೊಬೈಲ್ ನಂಬರ್
ಭಾವಚಿತ್ರ
ಈ ವಿದ್ಯಾರ್ಥಿವೇತನವು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು ನೀಡಲು ಅತ್ಯುತ್ತಮವಾದ ಅವಕಾಶ. ಅರ್ಜಿ ಸಲ್ಲಿಸಲು ಅರ್ಹತೆಗಳನ್ನು ಹೊಂದಿರುವ ಎಲ್ಲಾ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು. ಈ ವಿದ್ಯಾರ್ಥಿವೇತನವು ವಿದ್ಯಾರ್ಥಿಗಳಿಗೆ ಅವರ ಶಿಕ್ಷಣವನ್ನು ಮುಗಿಸಲು ಮತ್ತು ಅವರ ಭವಿಷ್ಯವನ್ನು ಉಜ್ವಲವಾಗಿಸಲು ಸಹಕಾರಿಯಾಗಲಿದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group




