ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ಏಪ್ರಿಲ್ 28 ರಂದು ದಾವಣಗೆರೆ ಆಗಮಿಸಿ ಹೈಸ್ಕೂಲ್ ಮೈದಾನದಲ್ಲಿ ಆಯೋಜಿಸಿರುವ ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸುತ್ತಿರುವ ಹಿನ್ನೆಲೆಯಲ್ಲಿ ಸುಗಮ ಸಂಚಾರ, ಕಾನೂನು ಸುವ್ಯವಸ್ಥೆ ಕಾಪಾಡಲು ಏಪ್ರಿಲ್ 27, 28 ರಂದು ನಗರದ ವಾಹನ ಸಂಚಾರ ಮಾರ್ಗಗಳಲ್ಲಿ ಭಾರಿ ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ.ವೆಂಕಟೇಶ್ ಎಂ.ವಿ ಆದೇಶಿಸಿದ್ದಾರೆ.
ಹೈಸ್ಕೂಲ್ ಮೈದಾನದಲ್ಲಿ ದ್ದ ಕೆಎಸ್‌ಆರ್ ಟಿಸಿ ಬಸ್ ನಿಲ್ದಾಣ ಹೊಸ ಕೆಎಸ್‌ಆರ್ ಟಿಸಿ ಬಸ್ ನಿಲ್ದಾಣಕ್ಕೆ ಸ್ಥಳಾಂತರಿಸಲಾಗಿದೆ. ಮತ್ತು ಖಾಸಗಿ ಬಸ್ ನಿಲ್ದಾಣಕ್ಕೆ ಬರುವ ಬಸ್ ಗಳನ್ನು ಸಂಪೂರ್ಣ ನಿಷೇಧಿಸಲಾಗಿದೆ. ಜಗಳೂರು ಕಡೆಯಿಂದ ಬರುವ ಬಸ್ ಗಳು ಜಗಳೂರು ಬಸ್ ನಿಲ್ದಾಣ, ಹದಡಿ ರಸ್ತೆಯಿಂದ ಬರುವ ಖಾಸಗಿ ಬಸ್ ಮಾಗನೂರು ಬಸಪ್ಪ ಮೈದಾನ, ಚಿತ್ರದುರ್ಗದ ಕಡೆಯಿಂದ ಬರುವ ಬಸ್ ಗಳು ಎಪಿಎಂಸಿ ದನದ ಮಾರುಕಟ್ಟೆಯಲ್ಲಿ ನಿಲುಗಡೆ ಮಾಡಿ ಅಲ್ಲಿಂದಲೇ ನಿಲುಗಡೆ ಮಾಡಬೇಕು.
ವಾಹನ ಸಂಚಾರ ಮಾರ್ಗಗಳ ಬದಲಾವಣೆ. ಹರಿಹರ ಕಡೆಯಿಂದ ಬರುವ ಎಲ್ಲಾ ಕೆಎಸ್ ಆರ್ ಟಿಸಿ ಬಸ್ ಗಳು ಹೆದ್ದಾರಿ ಬೈಪಾಸ್ ಮೂಲಕ ಬಾಡಾ ಕ್ರಾಸ್ ಮೂಲಕ ಹೊಸ ಬಸ್ ನಿಲ್ದಾಣಕ್ಕೆ ಬರುವುದು ಮತ್ತು ಇದೇ ಮಾರ್ಗದಲ್ಲಿ ವಾಪಸ್ ಸಂಚರೀಸಬೇಕು. ಚಿತ್ರದುರ್ಗದಿಂದ ಬರುವ ಬಸ್ ಗಳು ಬಾಡಾ ಕ್ರಾಸ್ ಮೂಲಕ ಹೊಸ ಬಸ್ ನಿಲ್ದಾಣಕ್ಕೆ ಬಂದು ಅದೇ ಮಾರ್ಗವಾಗಿ ಬಾಡಾ ಕ್ರಾಸ್ ನಿಂದ ಮಾರ್ಗ ಬದಲಿಸಬೇಕು. ಹರಪನಹಳ್ಳಿ, ಬೆಂಡಿಕೆರೆ, ಜಗಳೂರಿನಿಂದ ಬರುವ ಬಸ್ ಗಳು ಬೇತೂರು ರಸ್ತೆ ಹೊಸ ಬಸ್ ನಿಲ್ದಾಣಕ್ಕೆ ಬಂದು ಅಲ್ಲಿಂದ ವಾಪಸ್ ಹೋಗುವುದು.
ಕೊಂಡಜ್ಜಿ ಮಾರ್ಗವಾಗಿ ದಾವಣಗೆರೆ ಬರುವ ಬಸ್ ಗಳು ಹರಿಹರ ಮಾರ್ಗವಾಗಿ ಹೆದ್ದಾರಿ ಮೂಲಕ ಬಾಡಾ ಕ್ರಾಸ್ ಮೂಲಕ ಹೊಸ ಬಸ್ ಸ್ಟ್ಯಾಂಡ್ ಗೆ ಬರಬೇಕು. ಆದರೆ ಕೊಂಡಜ್ಜಿ ರಸ್ತೆ, ಶಿಬಾರ ರಸ್ತೆಯಲ್ಲಿ ಓಡಾಡುವ ವಾಹನಗಳು ಆರ್.ಟಿ.ಓ ಸರ್ಕಲ್ ನಿಂದ ಫ್ಲೈಓವರ್ ಮೂಲಕ ಸಂಗೊಳ್ಳಿ ರಾಯಣ್ಣ ಸರ್ಕಲ್ ಗೆ ಬರುವುದನ್ನು ನಿಷೇಧಿಸಲಾಗಿದೆ. ಶಾಮನೂರು ಕ್ರಾಸ್ ನಿಂದ ಶಾರದಾಂಭ ಸರ್ಕಲ್ ವರೆಗೆ ವಾಹನಗಳು ಬರುವುದು, ನಂತರ ಸಂಗೊಳ್ಳಿ ರಾಯಣ್ಣ ಸರ್ಕಲ್ ಗೆ ಬಸ್ ಮತ್ತು ಲಾರಿ ಓಡಾಟ ನಿಷೇಧಿಸಲಾಗಿದೆ. ಹದಡಿ ರಸ್ತೆ ಮಾರ್ಗವಾಗಿ ಬರುವ ವಾಹನಗಳು ಸ್ಟೇಡಿಯಂ ಎಆರ್ ಜಿ ಕಾಲೇಜ್ ಕ್ರಾಸ್ ವರೆಗೆ ಬಂದು ವಾಪಸ್ ಹೋಗುವುದು. ಹಳೇ ಕೋರ್ಟ್ ರಸ್ತೆಯಲ್ಲಿರುವ ಆಟೋ ನಿಲ್ದಾಣವನ್ನು ಈ ಎರಡು ದಿನ ಬೇರೆ ಕಡೆ ಸ್ಥಳಾಂತರಿಸಿ ಕೊಳ್ಳಬೇಕು. ಇಲ್ಲಿ ಆಟೋ ನಿಲುಗಡೆ ಸ್ಥಗಿತಗೊಳಿಸಿದೆ.
ಈ ಮಾರ್ಗಗಳಲ್ಲಿ ಆಟೋ ಸಂಚಾರ ಸಂಪೂರ್ಣ ಸ್ಥಗಿತ. ಹಳೆ ಪಿಬಿ ರಸ್ತೆಯಲ್ಲಿ ಬಾತಿ ಕೆರೆಯಿಂದ ಎಪಿಎಂಸಿ ಫ್ಲೈ ಓವರ್, ಎವಿಕೆ ರಸ್ತೆ ಪಿ.ಜೆ.ಕ್ರಾಸ್ ನಿಂದ ವಿಜಯಾ ಹೋಟೆಲ್ ಆಟೋ ಸ್ಟ್ಯಾಂಡ್, ಹಳೇ ಕೋರ್ಟ್ ರಸ್ತೆಯ ಎಸಿ ಸರ್ಕಲ್ ನಿಂದ ಅಂಬೇಡ್ಕರ್ ಸರ್ಕಲ್,ವಿದ್ಯಾರ್ಥಿ ಭವನದ ವರೆಗೆ, ಹಳೆ ಐಬಿ ರಸ್ತೆಯ ಅರಸು ಸರ್ಕಲ್ ನಿಂದ ಜಯದೇವ ವೃತ್ತದವರೆಗೆ, ಅಶೋಕ್ ರಸ್ತೆಯಲ್ಲಿ ಗಾಂಧಿ ಸರ್ಕಲ್ ನಿಂದ ಜಯದೇವ ಸರ್ಕಲ್ ವರೆಗೆ, ಅರುಣಾ ಸರ್ಕಲ್ ನಿಂದ ರಾಂ ಅಂಡ್ ಕೋ ಸರ್ಕಲ್-ಸಿಜೆ ಆಸ್ಪತ್ರೆ ರಸ್ತೆ ಸ್ಪಂದನಾ ಜ್ಯೂಸ್ ಸ್ಟಾಲ್-ಸಿಜಿ ಆಸ್ಪತ್ರೆ ರಸ್ತೆ ಬ್ಲಡ್ ಬ್ಯಾಂಕ್ ರಸ್ತೆ ಈ ಮಾರ್ಗಗಳಲ್ಲಿ ಆಟೋ ಸಂಚಾರ ಸಂಪೂರ್ಣ ಸ್ಥಗಿತಗೊಳಿಸಿದೆ. ಈ ಮಾರ್ಗಗಳಲ್ಲಿ ಪರ್ಯಾಯ ಬದಲಿಸಿ. ಬಾತಿ ಕಡೆಯಿಂದ ಗಾಂಧಿ ವೃತ್ತ, ಶಾಮನೂರು, ಲಕ್ಷ್ಮೀ ಫೆÇ್ಲೀರ್ ಮಿಲ್, ಗುಂಡಿ ಸರ್ಕಲ್,ವಿದ್ಯಾರ್ಥಿಭವನ, ಅಂಬೇಡ್ಕರ್ ಸರ್ಕಲ್,ಜಯದೇವ ಸರ್ಕಲ್, ಗಾಂಧಿ ಸರ್ಕಲ್,ಹಳೆ ಪಿಬಿ ರಸ್ತೆ, ಹಳೆ ಕೋರ್ಟ್ ರಸ್ತೆ, ಎವಿಕೆ ರಸ್ತೆ ಮಾರ್ಗವಾಗಿ ಬಾರದೆ ಇತರೆ ಮಾರ್ಗ ಅನುಸರಿಸಿ. ಹಾವೇರಿ, ಹರಿಹರ ಕಡೆಯಿಂದ ಬರುವ ಲಾರಿ ಮತ್ತು ಇತರೆ ವಾಹನಗಳು ಬಾತಿಯಿಂದ ಹೆದ್ದಾರಿಗೆ ಮಾರ್ಗವಾಗಿ ಮುಂದೆ ಹೋಗಬೇಕು.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group




