ಈ ದಿನ ರೈತರ ಖಾತೆಗೆ ಬರಲಿದೆ ಪಿಎಂ ಕಿಸಾನ್ 16ನೇ ಕಂತಿನ ಹಣ, ಇಲ್ಲಿದೆ ಮಾಹಿತಿ

pm kisan money

ಫೆಬ್ರವರಿ 28 ರಂದು ರೈತರ ಖಾತೆಗೆ 2000 ರೂ. ಜಮೆ! ಪಿಎಂ ಕಿಸಾನ್‌ ನಿಧಿ 16ನೇ ಕಂತಿನ ಬಿಡುಗಡೆ ಖಚಿತ. ಈ ಪ್ರಕಟಣೆಗೆ ಸಂಬಂಧಿಸಿದ ಮಾಹಿತಿಯನ್ನು ತಿಳಿಯಲು ವರದಿಯನ್ನು ತಪ್ಪದೆ ಕೊನೆಯವರೆಗೂ ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಪಿಎಂ ಕಿಸಾನ್‌ ನಿಧಿ 16ನೇ ಕಂತಿನ ಬಿಡುಗಡೆಯ ದಿನಾಂಕ ಖಚಿತ :

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 16ನೇ ಕಂತಿನ ಭವ್ಯ ಉಡುಗೊರೆ ಈ ತಿಂಗಳ ಅಂತ್ಯದಲ್ಲಿ, ಫೆಬ್ರವರಿ 28 ರಂದು ರೈತರ ಖಾತೆಗಳಿಗೆ ಜಮೆಯಾಗಲಿದೆ. ಈ ಯೋಜನೆಯಡಿ, ಕೇಂದ್ರ ಸರ್ಕಾರ ಪ್ರತಿ ನಾಲ್ಕು ತಿಂಗಳಿಗೊಮ್ಮೆ ರೈತರಿಗೆ ₹2,000 ನೀಡುತ್ತದೆ. ಈಗಾಗಲೇ 15 ಕಂತುಗಳನ್ನು ಯಶಸ್ವಿಯಾಗಿ ಬಿಡುಗಡೆ ಮಾಡಿದ್ದು, 16ನೇ ಕಂತಿನ ಮೂಲಕ ರೈತರ ಬೆಳವಣಿಗೆಗೆ ಮತ್ತಷ್ಟು ಸಹಾಯ ಮಾಡಲು ಸಿದ್ಧವಾಗಿದೆ.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ(Pradhan Mantri Kisan Samman Nidhi Yojana):

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-Kisan) ಯೋಜನೆಯು ಭಾರತ ಸರ್ಕಾರದ ಒಂದು ಉಪಕ್ರಮವಾಗಿದ್ದು, ದೇಶದ ರೈತರಿಗೆ ಆರ್ಥಿಕ ನೆರವು ನೀಡುವ ಉದ್ದೇಶವನ್ನು ಹೊಂದಿದೆ. ಈ ಯೋಜನೆಯಡಿ, ಭಾರತದ 2 ಹೆಕ್ಟೇರ್ ಒಳಗಿನ ಭೂಮಿ ಹೊಂದಿರುವ ರೈತರಿಗೆ ವಾರ್ಷಿಕವಾಗಿ ₹6,000/- ನೀಡಲಾಗುತ್ತದೆ. ಈ ಹಣವನ್ನು 3 ಕಂತುಗಳಲ್ಲಿ ನೀಡಲಾಗುತ್ತದೆ,
₹2,000/- ಏಪ್ರಿಲ್-ಜೂನ್
₹2,000/- ಆಗಸ್ಟ್-ನವೆಂಬರ್
₹2,000/- ಡಿಸೆಂಬರ್-ಮಾರ್ಚ್

whatss

ಈ ಹಿಂದೆ 2023, ನವೆಂಬರ್‌ನಲ್ಲಿ ರೈತರ ಖಾತೆಗಳಿಗೆ ಸರ್ಕಾರದಿಂದ 15ನೇ ಕಂತಿನ ಹಣ ಜಮಾ ಮಾಡಲಾಗಿತ್ತು. 2024ರ ಫೆಬ್ರವರಿ 28ರಂದು ದೇಶಾದ್ಯಂತ ಎಲ್ಲಾ ರೈತರಿಗೆ 16ನೇ ಕಂತಿನ ಹಣವನ್ನು ನೀಡಲು ಸರ್ಕಾರ ಯೋಜಿಸಿದೆ. ಈ ಹಣ ರೈತರಿಗೆ ಬೀಜ(Seeds), ಗೊಬ್ಬರ(Fertilizers), ಔಷಧಿಗಳಂತಹ ಕೃಷಿ ಉಪಕರಣಗಳನ್ನು ಖರೀದಿಸಲು ಸಹಾಯ ಮಾಡುತ್ತದೆ. ಈ ಯೋಜನೆಯು ರೈತರ ಆದಾಯವನ್ನು ಹೆಚ್ಚಿಸಲು ಮತ್ತು ಕೃಷಿ ಕ್ಷೇತ್ರವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.

ಭೂಮಿ ಮಾಲೀಕ ರೈತರಾಗಿ, ಈ ಯೋಜನೆಯ ಲಾಭ ಪಡೆಯಲು ಇನ್ನೂ ಸಾಧ್ಯವಾಗದಿದ್ದರೆ, ಚಿಂತಿಸಬೇಡಿ!, ಇ-ಕೆವೈಸಿ(E-KYC) ಮತ್ತು ಭೂಮಿ ಪರಿಶೀಲನೆಯನ್ನು ಪೂರ್ಣಗೊಳಿಸುವ ಮೂಲಕ, ಈ ಯೋಜನೆಯ ಭಾಗವಾಗಿ 2000 ರೂಪಾಯಿಗಳ ಲಾಭ ಪಡೆಯಲು ನಿಮಗೆ ಅರ್ಹತೆ ಗಳಿಸಬಹುದು. ಈ ಯೋಜನೆಯಡಿ ಲಾಭವನ್ನು ಪಡೆಯಲು ಇ-ಕೆವೈಸಿ (E-KYC) ಕಡ್ಡಾಯ. ಇ-ಕೆವೈಸಿ ಮಾಡದ ರೈತರಿಗೆ ಹಣ ಜಮಾ ಆಗುವುದಿಲ್ಲ. E-KYC ಮಾಡುವ ಹಂತಗಳು ಈ ಕೆಳಗಿನಂತಿವೆ,

E-KYC ಮಾಡುವ ವಿಧಾನ :

ಮೊಬೈಲ್‌ನಲ್ಲಿ ಬ್ರೌಸರ್ ತೆರೆದು pmkisan.gov.in ಟೈಪ್ ಮಾಡಿ.

‘ಇ-ಕೆವೈಸಿ’ ಆಯ್ಕೆ ಕ್ಲಿಕ್ ಮಾಡಿ.

ನಿಮ್ಮ ಮೊಬೈಲ್ ಸಂಖ್ಯೆ ನಮೂದಿಸಿ.

ನಿಮ್ಮ ಮೊಬೈಲ್ ಬಂದಿರುವ OTP ಯನ್ನು ಟೈಪ್ ಮಾಡಿ ‘ಸಲ್ಲಿಸು(Submit) ‘ ಕ್ಲಿಕ್ ಮಾಡಿ.

E-KYC ಸ್ಮಾರ್ಟ್ ಫೋನ್ ನಲ್ಲಿ ಮಾಡಲು ಸಾಧ್ಯ. ಹೌದು, ಪಿಎಂ ಕಿಸಾನ್ ಅಪ್ಲಿಕೇಶನ್ ಅನ್ನು ಇನ್‌ಸ್ಟಾಲ್‌ ಮಾಡಿ ಮತ್ತು ಲಾಗ್ ಇನ್(Login) ಆಗಿ. ನಂತರ ಫೇಸ್‌ ಡಿಟೆಕ್ಷನ್‌ (Face Detection) ಅಂದರೆ ಗುರುತು ದೃಢೀಕರಣದ ಮೂಲಕ ಇ-ಕೆವೈಸಿ ಮಾಡಿಬಹುದು. ಆನ್‌ಲೈನ್ ಇ-ಕೆವೈಸಿ ಸಾಧ್ಯವಾಗದಿದ್ದರೆ, ನಿಮ್ಮ ಹತ್ತಿರದ ಕಿಸಾನ್ ಸಿಎಸ್‌ಸಿ ಭೇಟಿ ನೀಡಿ. ಬಯೋಮೆಟ್ರಿಕ್(Bio-metric) ದೃಢೀಕರಣದ ಮೂಲಕ ಇ-ಕೆವೈಸಿ ಮಾಡಬಹುದು.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

tel share transformed

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

 

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!