ಮಾರುತಿ ಸುಜುಕಿ ಡಿಜೈರ್ ಸೆಡಾನ್: ವಿಶ್ವಾಸಾರ್ಹತೆ, ಆಕರ್ಷಕ ವಿನ್ಯಾಸ ಮತ್ತು ಉತ್ತಮ ಮೈಲೇಜ್ – ಭಾರಿ ಸಂಖ್ಯೆಯಲ್ಲಿ ಮಾರಾಟ!
ಭಾರತೀಯ ಕಾರು ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಡಿಜೈರ್ (Maruti Suzuki Dzire) ಸೆಡಾನ್ ತನ್ನ ಅಪ್ರತಿಮ ಖ್ಯಾತಿಗಾಗಿ ವಿಶೇಷ ಸ್ಥಾನ ಪಡೆದಿದೆ. ಪ್ರತಿ ವರ್ಷದಂತೆ ಈ ವರ್ಷವೂ ಗ್ರಾಹಕರ ವಿಶ್ವಾಸವನ್ನು ತೃಪ್ತಿಪಡಿಸುತ್ತಾ, ಡಿಜೈರ್ (Dzire) ಭಾರಿ ಸಂಖ್ಯೆಯಲ್ಲಿ ಮಾರಾಟದ ದಾಖಲೆ ಬರೆದಿದೆ. ಇದು ಕೇವಲ ಆಕರ್ಷಕ ವಿನ್ಯಾಸವಲ್ಲ, ಪ್ರಾಯೋಗಿಕ ವೈಶಿಷ್ಟ್ಯಗಳು ಮತ್ತು ಬಜೆಟ್ ಸ್ನೇಹಿ ದರವನ್ನು ಹೊಂದಿರುವುದರಿಂದ, ಮಾರುತಿ ಸುಜುಕಿ ಡಿಜೈರ್ ಭಾರತದ ಮಧ್ಯಮ ವರ್ಗದ ಕುಟುಂಬಗಳು ಹಾಗೂ ವ್ಯವಹಾರಿಕ ಪ್ರಯಾಣಿಕರಿಗೆ ಪ್ರಥಮ ಆಯ್ಕೆಯಾಗಿಯೇ ಉಳಿದಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
2025ರ ಆಗಸ್ಟ್ ತಿಂಗಳಲ್ಲಿ ಭಾರೀ ಮಾರಾಟ:
ಈ ಆಗಸ್ಟ್ ತಿಂಗಳಿನಲ್ಲಿ, ಮಾರುತಿ ಸುಜುಕಿ ಡಿಜೈರ್ (Suzuki Dzire) ಒಟ್ಟು 16,509 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. ಇದರಿಂದ ಮುಂಚಿನ ವರ್ಷದ ಇದೇ ಅವಧಿಯ 10,627 ಯುನಿಟ್‌ಗಳ ಮಾರಾಟದ ಹೋಲಿಕೆಯಲ್ಲಿ ಶೇಕಡ 55.35% ಪ್ರಗತಿ ಕಂಡುಬಂದಿದೆ. ಈ ಭಾರೀ ಮಾರಾಟದ ಹಿಂದೆ ಹಬ್ಬದ ಸೀಸನ್, ಗ್ರಾಹಕರಿಗೆ ಒದಗಿಸುವ ಆಕರ್ಷಕ ಆಫರ್‌ಗಳು ಮತ್ತು ಹೊಸ ಸುರಕ್ಷತಾ ಪ್ರಮಾಣಗಳು ಪ್ರಮುಖ ಕಾರಣಗಳಾಗಿವೆ.
ಅತ್ಯಂತ ಭದ್ರ ಮತ್ತು ವಿಶ್ವಾಸಾರ್ಹ ಸೆಡಾನ್:
ನೂತನ ಮಾರುತಿ ಡಿಜೈರ್ ಗ್ಲೋಬಲ್ ಎನ್‌ಸಿಎಪಿ (Global NCAP) ಮತ್ತು ಭಾರತ್ ಎನ್‌ಸಿಎಪಿ (Bharat NCAP) ಪರೀಕ್ಷೆಯಲ್ಲಿ 5-ಸ್ಟಾರ್ ರೇಟಿಂಗ್ ಅನ್ನು ಪಡೆದಿರುವುದು, ಪ್ರಯಾಣಿಕರಿಗೆ ಗರಿಷ್ಠ ಭದ್ರತೆಗೆ ಪೂರಕವಾಗಿದೆ. ಇದರಿಂದಲೇ ಗ್ರಾಹಕರ ವಿಶ್ವಾಸವನ್ನು ಹೆಚ್ಚಿಸುವುದರ ಜೊತೆಗೆ, ಮಾರಾಟದಲ್ಲಿ ನಿರಂತರ ಪ್ರಗತಿಗೆ ಕಾರಣವಾಗಿದೆ.

ಎಂಜಿನ್ ಮತ್ತು ಮೈಲೇಜ್ ವೈಶಿಷ್ಟ್ಯತೆಗಳು (Engine and Milage Feature’s) ಕೆಳಗಿನಂತಿವೆ:
ಮಾರುತಿ ಡಿಜೈರ್ ಎರಡು ಶಕ್ತಿಶಾಲಿ ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ,
1.2-ಲೀಟರ್ ಪೆಟ್ರೋಲ್ ಎಂಜಿನ್
1.2-ಲೀಟರ್ ಸಿಎನ್‌ಜಿ ಎಂಜಿನ್
ಇವು 5-ಸ್ಪೀಡ್ ಮ್ಯಾನುಯಲ್ ಅಥವಾ ಆಟೋಮೆಟಿಕ್ ಗೇರ್‌ಬಾಕ್ಸ್ (5 Speed Manual or Automatic Gearbox) ಆಯ್ಕೆಗಳೊಂದಿಗೆ ಸಿಗುತ್ತದೆ. ಮೈಲೇಜ್ ದೃಷ್ಠಿಯಿಂದ ಇದು 24 ಕಿ.ಮೀ/ಲೀಟರ್ ರಿಂದ 33 ಕಿ.ಮೀ/ಲೀಟರ್ ನಡುವೆ ಮೈಲೇಜ್ ನೀಡುತ್ತವೆ. 37 ಲೀಟರ್ ಇಂಧನ ಟ್ಯಾಂಕ್ ಹೋಲ್ಡಿಂಗ್ ಸಾಮರ್ಥ್ಯವೂ ಇದ್ದು, ದೀರ್ಘ ದೂದರಾತ್ರಿ ಪ್ರಯಾಣಕ್ಕೂ ಯೋಗ್ಯವಾಗಿದೆ.
ವಿನ್ಯಾಸ ಮತ್ತು ಒಳಾಂಗಣ ವೈಶಿಷ್ಟ್ಯತೆಗಳು (Style and Inner Feature’s) ಹೀಗಿವೆ:
ಡಿಜೈರ್ ಸೆಡಾನ್ 3,995 ಎಂಎಂ ಉದ್ದ, 1,735 ಎಂಎಂ ಅಗಲ, 1,515 ಎಂಎಂ ಎತ್ತರ ಹೊಂದಿದ್ದು, 163 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು 2,450 ಎಂಎಂ ವೀಲ್‌ಬೇಸ್ ನಿಂದ ಸುಗಮ ಚಲನೆ ಒದಗಿಸುತ್ತದೆ.
ಯಾವ ಯಾವ ಬಣ್ಣಗಳಲ್ಲಿ ಕಾರು ಲಭ್ಯವಿದೆ:
ಸ್ಪೆಂಡಿಡ್ ಸಿಲ್ವರ್
ಆರ್ಕ್ಟಿಕ್ ವೈಟ್
ಮ್ಯಾನ್ಮಾ ಗ್ರೇ
ಗ್ಯಾಲಂಟ್ ರೆಡ್
ಅಲ್ಲುರಿಂಗ್ ಬ್ಲೂ
ಪ್ರಮುಖ ಇನ್‌ಫೋಟೈನ್‌ಮೆಂಟ್ (Infotinement) ಮತ್ತು ಫೀಚರ್‌ಗಳು:
9 ಇಂಚಿನ ಟಚ್‌ಸ್ಮಿನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್.
ಆಟೋಮೆಟಿಕ್ ಕ್ಲೀಮೇಟ್ ಕಂಟ್ರೋಲ್.
ಎಂಜಿನ್ ಸ್ಟಾರ್ಟ್/ಸ್ಟಾಪ್ ಬಟನ್.
ವೈರ್‌ಲೆಸ್ ಫೋನ್ ಚಾರ್ಜರ್.
ಕ್ರೂಸ್ ಕಂಟ್ರೋಲ್.
ಸನ್‌ರೂಫ್.
ಆಟೋ ಎಸಿ.
382 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್ (Boot space) ಪ್ರಯಾಣಿಕರಿಗೆ ಹೆಚ್ಚಿನ ಲಗೇಜ್ ಸಾಗಿಸಲು ಸಹಾಯವಾಗುತ್ತದೆ. ಜೊತೆಗೆ, ಕಾರಿನಲ್ಲಿ 5 ಆಸನ ವ್ಯವಸ್ಥೆ ಇರುವುದರಿಂದ ಮಧ್ಯಮ ಕುಟುಂಬಗಳಿಗೆ ಹಾಗೂ ಆಫೀಸ್–ಹೋಂ ಪ್ರಯಾಣಿಕರಿಗೆ ಹೆಚ್ಚು ಅನುಕೂಲಕರವಾಗಿದೆ.
ಸುರಕ್ಷತಾ ವ್ಯವಸ್ಥೆ ಯಾವ ರೀತಿಯಿದೆ?:
6 ಏರ್‌ಬ್ಯಾಗ್‌ಗಳು.
ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್).
ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್).
ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್).
360 ಡಿಗ್ರಿ ಕ್ಯಾಮೆರಾ.
ದರ ಮತ್ತು ಲಭ್ಯತೆ(Price and Availability) :
ಹೊಸ ಮಾರುತಿ ಡಿಜೈರ್ ಸೆಡಾನ್ ಆರಂಭಿಕ ದರ ರೂ.6.84 ಲಕ್ಷ (ಎಕ್ಸ್ ಶೋರೂಂ) ರಿಂದ ಪ್ರಾರಂಭವಾಗಿದ್ದು, ಗರಿಷ್ಠ ದರ ರೂ.10.19 ಲಕ್ಷ (ಎಕ್ಸ್ ಶೋರೂಂ). ಸೆಪ್ಟೆಂಬರ್ 22ರಿಂದ, ಕೇಂದ್ರ ಸರ್ಕಾರದ (Central Government) ತೀರ್ಮಾನವಾಗಿ ಪೆಟ್ರೋಲ್, ಸಿಎನ್‌ಜಿ ಹಾಗೂ ಡೀಸೆಲ್ ಎಂಜಿನ್ ಕಾರುಗಳ ಮೇಲೆ ಜಿಎಸ್‌ಟಿ ಪ್ರಮಾಣವು 28% ರಿಂದ 18%ಗೆ ಇಳಿಕೆಗೊಳ್ಳಲಿದೆ. ಇದರಿಂದ ಮುಂದಿನ ದಿನಗಳಲ್ಲಿ ಡಿಜೈರ್ ಖರೀದಿ ಇನ್ನಷ್ಟು ಆಕರ್ಷಕವಾಗಲಿದೆ.
ಒಟ್ಟಾರೆಯಾಗಿ, ಮಾರುತಿ ಸುಜುಕಿ ಡಿಜೈರ್ ತನ್ನ ವಿಶ್ವಾಸಾರ್ಹತೆ, ಆಕರ್ಷಕ ವಿನ್ಯಾಸ, ಉತ್ತಮ ಮೈಲೇಜ್ ಹಾಗೂ ಭದ್ರತಾ (Well Mileage and Safety) ಪ್ರಮಾಣಗಳ ಮೂಲಕ ಮಾರುಕಟ್ಟೆಯಲ್ಲಿ ಭಾರಿ ಮಾರಾಟ ದಾಖಲೆ ಬರೆದಿದೆ. ಇವು ಮಧ್ಯಮ ವರ್ಗದ ಕುಟುಂಬಗಳು ಹಾಗೂ ವ್ಯವಹಾರಿಕ ಪ್ರಯಾಣಿಕರಿಗೆ ಅತ್ಯುತ್ತಮ ಆಯ್ಕೆಯಾಗಿದ್ದು, ಮುಂದಿನ ದಿನಗಳಲ್ಲೂ ಹೆಚ್ಚು ಜನರ ಪ್ರಥಮ ಆಯ್ಕೆ ಆಗಿಯೇ ಉಳಿಯಲಿದೆ.

ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.