ಹವಾಮಾನದ ಏರುಪೇರು ಮತ್ತು ರೋಗನಿರೋಧಕ ಶಕ್ತಿ ಕಡಿಮೆಯಿರುವುದರಿಂದ, ಮಕ್ಕಳು ಸಾಮಾನ್ಯವಾಗಿ ಜ್ವರ ಮತ್ತು ನೆಗಡಿಯಂತಹ ಆರೋಗ್ಯ ಸಮಸ್ಯೆಗಳಿಗೆ ಒಳಗಾಗುತ್ತಾರೆ. ಈ ಸಮಯದಲ್ಲಿ ಮಕ್ಕಳು ಸರಿಯಾಗಿ ಆಹಾರ ತಿನ್ನುವುದಿಲ್ಲ, ಇದರಿಂದಾಗಿ ಅವರ ಆರೋಗ್ಯ ಇನ್ನೂ ಹೆಚ್ಚು ಕುಸಿಯುವ ಅಪಾಯ ಹೆಚ್ಚು. ಅಂತಹ ಸಂದರ್ಭಗಳಲ್ಲಿ, ಮಕ್ಕಳಿಗೆ ಸರಿಯಾದ ಪೋಷಕಾಂಶದ ಆಹಾರವನ್ನು ನೀಡುವುದು ಅತ್ಯಗತ್ಯ. ಸೂಕ್ತವಾದ ಆಹಾರವು ದೇಹದ ಸೋಂಕಿನಿಂದ ಹೋರಾಡಲು ಮತ್ತು ವೇಗವಾಗಿ ಸುಧಾರಿಸಲು ಸಹಾಯ ಮಾಡುತ್ತದೆ.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಮಕ್ಕಳಿಗೆ ಜ್ವರ ಬಂದಾಗ ನೀಡಬೇಕಾದ ಆಹಾರಗಳು:
ಸೂಪ್ ಮತ್ತು ಪೌಷ್ಟಿಕ ದ್ರವ ಪದಾರ್ಥಗಳು:
ಜ್ವರದ ಸಮಯದಲ್ಲಿ ಮಕ್ಕಳಿಗೆ ಸಬ್ಬಕ್ಕಿ, ರಾಗಿ ಅಥವಾ ತರಕಾರಿಗಳ ಸೂಪ್ ನೀಡುವುದು ಉತ್ತಮ. ಸೂಪ್‌ನಲ್ಲಿ ಅಗತ್ಯ ಜೀವಸತ್ವಗಳು ಮತ್ತು ಖನಿಜಗಳು ಇರುತ್ತವೆ, ಇದು ಪೌಷ್ಟಿಕಾಂಶದಿಂದ ಸಮೃದ್ಧವಾಗಿದೆ ಮತ್ತು ಜೀರ್ಣಿಸಿಕೊಳ್ಳಲು ಸುಲಭ. ವಿಶೇಷವಾಗಿ, ರಾಗಿ ಅಂಬಲಿ ಕುಡಿಸುವುದರಿಂದ ದೇಹಕ್ಕೆ ಶಕ್ತಿ ಸಿಗುತ್ತದೆ ಮತ್ತು ಜ್ವರದಿಂದ ಬೇಗನೆ ಚೇತರಿಸಿಕೊಳ್ಳಲು ಸಹಾಯಕವಾಗಿದೆ.
ದ್ರವಾಹಾರ ಮತ್ತು ನಿರ್ಜಲೀಕರಣ ತಡೆಯುವುದು:
ಜ್ವರ ಬಂದಾಗ ದೇಹದಲ್ಲಿ ನೀರಿನ ಕೊರತೆ ಉಂಟಾಗುವ ಸಾಧ್ಯತೆ. ಆದ್ದರಿಂದ, ಮಕ್ಕಳಿಗೆ ಸಾಕಷ್ಟು ನೀರು, ಎಳನೀರು, ಮೊಸರು ಮತ್ತು ಲೆಮನೇಡ್ ನೀಡಿ. ಮೊಸರಿನಲ್ಲಿ ಪ್ರೋಬಯಾಟಿಕ್‌ಸ್ ಇರುತ್ತದೆ, ಇದು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ನಿರ್ಜಲೀಕರಣ ತೀವ್ರವಾಗಿದ್ದರೆ, ವೈದ್ಯರ ಸಲಹೆಯ ಮೇರೆಗೆ ORS ದ್ರವವನ್ನು ನೀಡಬಹುದು.
ಹಣ್ಣುಗಳು:
ಜ್ವರದಿಂದ ಬಳಲುವ ಮಕ್ಕಳಿಗೆ ಕಾಲೋಚಿತ ಹಣ್ಣುಗಳನ್ನು ನೀಡುವುದರಿಂದ ದೇಹಕ್ಕೆ ಜೀವಸತ್ವಗಳು ಮತ್ತು ಶಕ್ತಿ ಸಿಗುತ್ತದೆ. ಬಾಳೆಹಣ್ಣು, ಸೇಬು, ಪಪ್ಪಾಯಿ, ಕಿತ್ತಳೆ ಮತ್ತು ಕಲ್ಲಂಗಡಿ ಹಣ್ಣುಗಳನ್ನು ನೀಡಬಹುದು. ಬಾಳೆಹಣ್ಣಿನಲ್ಲಿ ಪೊಟ್ಯಾಸಿಯಮ್ ಇದ್ದು, ಅದು ಜೀರ್ಣಿಸಿಕೊಳ್ಳಲು ಸುಲಭ. ಕಲ್ಲಂಗಡಿ ಹಣ್ಣಿನಲ್ಲಿ ನೀರಿನ ಅಂಶ ಹೆಚ್ಚು ಇರುವುದರಿಂದ, ಅದು ದೇಹದ ನೀರಿನ ಕೊರತೆಯನ್ನು ಪೂರೈಸುತ್ತದೆ ಮತ್ತು ಚೇತರಿಕೆಗೆ ಸಹಾಯ ಮಾಡುತ್ತದೆ.
ಜ್ವರದ ಸಮಯದಲ್ಲಿ ತಪ್ಪಿಸಬೇಕಾದ ಆಹಾರಗಳು:
ಜ್ವರ ಬಂದ ಮಕ್ಕಳಿಗೆ ಜೀರ್ಣಿಸಿಕೊಳ್ಳಲು ಕಷ್ಟಕರವಾದ ಆಹಾರಗಳನ್ನು ನೀಡಬಾರದು. ಮಸಾಲೆ ಪದಾರ್ಥಗಳು, ಹೆಚ್ಚು ಎಣ್ಣೆ ಉಪಯೋಗಿಸಿದ ತಿನಿಸುಗಳು, ಚಿಪ್ಸ್, ಚಾಕಲೇಟ್, ಬಿಸ್ಕತ್ತು ಮತ್ತು ಇತರ ಸಿಹಿ ಪದಾರ್ಥಗಳನ್ನು ನೀಡುವುದನ್ನು ತಡೆಯಿರಿ. ಜೊತೆಗೆ, ಶೀತಲ ಪಾನೀಯಗಳು ಮತ್ತು ಐಸ್ ಕ್ರೀಂನಂತಹ ತಂಪು ಆಹಾರಗಳನ್ನು ನೀಡಬಾರದು.
ಮಕ್ಕಳ ಆರೋಗ್ಯವನ್ನು ಕಾಪಾಡಿಕೊಳ್ಳಲು ಸರಿಯಾದ ಪೋಷಕಾಂಶದ ಆಹಾರ ಮತ್ತು ವೈದ್ಯಕೀಯ ಸಲಹೆ ಅತಿ ಮುಖ್ಯ. ಜ್ವರ ತೀವ್ರವಾಗಿದ್ದರೆ ಅಥವಾ ಹೆಚ್ಚು ಕಾಲ ಇದ್ದರೆ, ಖಂಡಿತವಾಗಿ ವೈದ್ಯರನ್ನು ಸಂಪರ್ಕಿಸಿ.
ಹಕ್ಕು ನಿರಾಕರಣೆ: ಈ ಲೇಖನದಲ್ಲಿ ನೀಡಲಾದ ಆರೋಗ್ಯ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ಯಾವುದೇ ವೈದ್ಯಕೀಯ ಸಲಹೆ ಅಥವಾ ಚಿಕಿತ್ಸೆಯ ಪರ್ಯಾಯವಲ್ಲ. ನೀಡ್ಸ್ ಆಫ್ ಪಬ್ಲಿಕ್ ಈ ಮಾಹಿತಿಯನ್ನು ಖಚಿತ ಪಡಿಸುವುದಿಲ್ಲ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.