Picsart 25 11 20 22 10 07 847 scaled

ರಾಜ್ಯದ ಈ ಸರ್ಕಾರಿ ನೌಕರರಿಗೆ NPS ಸೌಲಭ್ಯ ಅನ್ವಯವಿಲ್ಲ: ಸರ್ಕಾರದ ಅಧಿಕೃತ ಆದೇಶ

Categories:
WhatsApp Group Telegram Group

ರಾಜ್ಯ ಸರ್ಕಾರದಲ್ಲಿ ರಾಷ್ಟ್ರೀಯ ಪಿಂಚಣಿ ಯೋಜನೆ (NPS) ಜಾರಿಗೆ ಬಂದ ನಂತರ, ಸರ್ಕಾರಿ ನೌಕರರಿಗೆ ನಿವೃತ್ತಿ ನಂತರದ ಭದ್ರತೆ, ಮರಣದ ನಂತರದ ಕುಟುಂಬದ ಆರ್ಥಿಕ ಸುರಕ್ಷತೆ  ಸಂಬಂಧಿಸಿದ ಹಲವು ಗೊಂದಲಗಳು ಕಂಡುಬಂದಿದ್ದವು. ವಿಶೇಷವಾಗಿ, 2006ರ ಏಪ್ರಿಲ್ 1ರಿಂದ NPS ಗೆ ಒಳಪಟ್ಟ ನೌಕರರಿಗೆ ಪರಂಪರಾಗತ ಪಿಂಚಣಿ ಮತ್ತು ಮರಣ ಉಪದಾನಗಳ ಸೌಲಭ್ಯ ಅನ್ವಯವಾಗುತ್ತದೆಯೇ ಎಂಬ ಪ್ರಶ್ನೆ ನಿರಂತರವಾಗಿ ಕಾಡುತಿತ್ತು.
ಈ ಹಿನ್ನೆಲೆಯಲ್ಲಿ, ಸರ್ಕಾರವು ವಿವಿಧ ಅಧಿಸೂಚನೆಗಳ ಮೂಲಕ ಯಾರು ಈ ಸೌಲಭ್ಯಗಳಿಗೆ ಅರ್ಹರು? ಹಾಗೂ ಯಾರಿಗೆ ಅನ್ವಯವಿಲ್ಲ? ಎಂಬುದನ್ನು ಸ್ಪಷ್ಟಪಡಿಸಿದೆ. ಆದರೆ, ಈ ಆದೇಶಗಳು ಎಲ್ಲ ನೌಕರರಿಗೂ ಸಮಾನವಾಗಿ ಅನ್ವಯವಾಗುವುದಿಲ್ಲ. ನಿಗಮ–ಮಂಡಳಿ, ಸ್ವಾಯತ್ತ ಸಂಸ್ಥೆಗಳು ಮತ್ತು ಸ್ಥಳೀಯ ಸಂಸ್ಥೆಗಳ ನೌಕರರು ಇದರಲ್ಲಿ ಪ್ರಮುಖವಾಗಿ ಹೊರತಾಗಿದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಸರ್ಕಾರದ ಆದೇಶ ಸಂಖ್ಯೆ ಅಇ 34 ಪಿಇಎನ್ 2018 (23.06.2018) ಮತ್ತು ಆಇ 149 ಪಿಇಎನ್ 2022 (19.10.2022)ರ ಪ್ರಕಾರ,
01.04.2006 ರಿಂದ ರಾಷ್ಟ್ರೀಯ ಪಿಂಚಣಿ ಯೋಜನೆಗೆ ಒಳಪಡುವ ಸರ್ಕಾರಿ ನೌಕರರಿಗೆ
ನಿವೃತ್ತಿ ಉಪದಾನ (Retirement Gratuity)
ಮರಣ ಉಪದಾನ (Death Gratuity)
ಕುಟುಂಬ ಪಿಂಚಣಿ (Family Pension)
ಇವೆಲ್ಲವನ್ನು ವಿಸ್ತರಿಸಿ ಅನ್ವಯಿಸಲಾಗಿದೆ.

ಆದರೆ, ಈ ಸೌಲಭ್ಯಗಳು ಕೇವಲ ರಾಜ್ಯ ಸರ್ಕಾರದ ಕೇಂದ್ರ ಸೇವೆಯ ನೌಕರರಿಗೆ ಮಾತ್ರ ಅನ್ವಯವಾಗುತ್ತವೆ. ಸರ್ಕಾರದಿಂದ ಸ್ಪಷ್ಟವಾಗಿ ತಿಳಿಸಿದಂತೆ, ಕೆಳಗಿನ ನೌಕರರಿಗೆ ಈ ಸೌಲಭ್ಯಗಳು ಅನ್ವಯಿಸುವುದಿಲ್ಲ.

ರಾಜ್ಯ ಸರ್ಕಾರದ ಸ್ವಾಯತ್ತತೆ ಹೊಂದಿದ ಸಂಸ್ಥೆಗಳು
ನಿಗಮ–ಮಂಡಳಿಗಳ ನೌಕರರು
ಸ್ಥಳೀಯ ಸಂಸ್ಥೆ (ಪಂಚಾಯತ್, ಪುರಸಭೆ, ಮಹಾನಗರಪಾಲಿಕೆ) ನೌಕರರು
ವಿಶ್ವವಿದ್ಯಾಲಯಗಳ ಸಿಬ್ಬಂದಿ
ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರು
ಅನುಕಂಪ ಆಧಾರದ ಮೇಲೆ ನೇಮಕಗೊಂಡ ನೌಕರರು
ಆಡಳಿತ ಇಲಾಖೆಗೆ ಸರ್ಕಾರ ಈ ಕುರಿತು ಸ್ಪಷ್ಟ ಸೂಚನೆಯನ್ನು ಕಳುಹಿಸಿದೆ.

n6896416871763656660765e9d92681b1f996716f458d4bf00fe444de79bdca5b9450dc33ce72463713e14d

ಒಟ್ಟಾರೆಯಾಗಿ, NPS ವ್ಯಾಪ್ತಿಗೆ ಬರುವ ಸರ್ಕಾರಿ ಕಚೇರಿ ನೌಕರರು ಈ ಸೌಲಭ್ಯಗಳಿಂದ ಲಾಭ ಪಡೆಯಲಿದ್ದಾರೆ. ಆದರೆ ನಿಗಮ, ಮಂಡಳಿ, ಸ್ಥಳೀಯ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುವವರೆಗೂ ಈ ಸೌಲಭ್ಯಗಳನ್ನು ನೀಡಲಾಗುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

WhatsApp Image 2025 09 05 at 10.22.29 AM 15

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories