Picsart 25 11 04 23 28 19 174 scaled

ಉತ್ತರ ಕರ್ನಾಟಕದ ಸೂಪರ್‌ಫುಡ್ ಅಳವಿ ಪಾಯಸ: ಜಂಟಿನ ನೋವು, ಉರಿಯೂತ, ನಿದ್ರೆ ಸಮಸ್ಯೆಗೆ ನೈಸರ್ಗಿಕ ಪರಿಹಾರ

WhatsApp Group Telegram Group

ಇಂದಿನ ವೇಗದ ಜೀವನದಲ್ಲಿ ದೇಹದ ನೋವುಗಳು ಸಾಮಾನ್ಯವಾಗಿವೆ. ದಿನಪೂರ್ತಿ ಕುಳಿತು ಕೆಲಸ ಮಾಡುವವರಿಗೂ, ಹೆಚ್ಚು ನಿಂತೇ ಕೆಲಸ ಮಾಡುವವರಿಗೂ ಕೈ-ಕಾಲು ನೋವು, ಸೊಂಟ ನೋವು, ಮತ್ತು ಮಲಗಿದರೂ ನಿದ್ರೆ ಬರದ ಸಮಸ್ಯೆ ಸಾಮಾನ್ಯವಾಗಿ ಕಂಡುಬರುತ್ತಿದೆ. ಫಿಸಿಯೊಥೆರಪಿ, ಪೇನ್-ಕಿಲರ್ಸ್ ಎಲ್ಲ ಪ್ರಯತ್ನಿಸಿದರೂ ಕೆಲವು ಬಾರಿ ನೋವು ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಆದರೆ ನಮ್ಮ ಮನೆಯ ಅಡುಗೆ ಮತ್ತು ಸಂಪ್ರದಾಯಗಳಲ್ಲಿ ಹಲವು ಆರೋಗ್ಯ ರಹಸ್ಯಗಳು ಅಡಗಿವೆ. ಉತ್ತರ ಕರ್ನಾಟಕದ ಮನೆಗಳಲ್ಲಿ ಹಲವು ವರ್ಷಗಳಿಂದಲೂ ಅಳವಿ ಬೀಜದ ಪಾಯಸ (Flaxseed Payasa) ಬಳಸುತ್ತಾರೆ. ಏಕೆಂದರೆ ಅಳವಿ ಬೀಜದಲ್ಲಿ ಪೌಷ್ಟಿಕಾಂಶಗಳು ಇರುವ ಕಾರಣ. ಇದು ನೋವಿಗೆ ಮಾತ್ರವಲ್ಲ, ನಿದ್ರೆಗೆ, ಜೀರ್ಣಕ್ರಿಯೆಗೆ, ಮತ್ತು ದೇಹದ ಸಾಮಾನ್ಯ ಆರೋಗ್ಯಕ್ಕೆ ಕೂಡಾ ಒಳ್ಳೆಯದು ಎಂದು ಪರಂಪರೆಯಿಂದಲೂ ಹೇಳಲಾಗುತ್ತಿದೆ. ಹಾಗಿದ್ದರೆ ಅಳವಿ ಬೀಜದಲ್ಲಿ ಏನಿದೆ? ಅಳವಿ ಬೀಜದ ಪಾಯಸ ಮಾಡುವುದು ಹೇಗೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಅಳವಿ ಬೀಜದಲ್ಲಿ ಏನಿದೆ?:

ಅಳವಿ ಬೀಜವು ಸೂಪರ್‌ಫುಡ್ ಎಂದು ಕರೆಯುವಂತ ಪೌಷ್ಟಿಕಾಂಶಗಳನ್ನು ಹೊಂದಿದೆ. ಇದರಲ್ಲಿ ಕಬ್ಬಿಣದ ಅಂಶ, ಹೆಚ್ಚಿನ ಫೈಬರ್, ಒಮೆಗಾ-3 ಫ್ಯಾಟಿ ಆಸಿಡ್, ಫೋಲೇಟ್, ವಿಟಮಿನ್ A, C, E, ಉತ್ತಮ ಗುಣಮಟ್ಟದ ಪ್ರೋಟೀನ್ ಅಂಶಗಳು ಇವೆ.  ಈ ಅಳವಿ ಬೀಜವು ವಿಶೇಷವಾಗಿ ಮೂಳೆಗಳ ಬಲ ಹೆಚ್ಚಿಸುತ್ತದೆ, ದೇಹದ ಉರಿಯೂತ ಕಡಿಮೆ ಮಾಡುವುದು, ಜೀರ್ಣಕ್ರಿಯೆ ಸುಧಾರಣೆ ಇತ್ಯಾದಿ ಆರೋಗ್ಯ ಪ್ರಯೋಜನಗಳಿಗಾಗಿ ಪ್ರಸಿದ್ಧವಾಗಿದೆ. ಹೀಗಾಗಿ ಉತ್ತರ ಕರ್ನಾಟಕದ ಜನರ ಜೀವನದಲ್ಲಿ ಅಳವಿ ಬೀಜದ ಪಾಯಸ ಒಂದು ಪಾರಂಪರಿಕ, ವಿಶ್ವಾಸಾರ್ಹ ಪೋಷಕಾಹಾರವಾಗಿದೆ.

ಅಳವಿ ಬೀಜದ ಪಾಯಸ ಮಾಡುವುದು ಹೇಗೆ ಹಾಗೂ ಪಾಯಸ ಮಾಡುವುದಕ್ಕೆ ಬೇಕಾಗುವ ಸಾಮಗ್ರಿಗಳು ಯಾವುವು?:

ಪಾಯಸ ಮಾಡುವುದಕ್ಕೆ ಬೇಕಾಗುವ ಸಾಮಗ್ರಿಗಳು,
ಅಳವಿ ಬೀಜ – 2–3 ಟೇಬಲ್ ಸ್ಪೂನ್.
ನೀರು – 2 ಕಪ್.
ಬೆಲ್ಲದ ಪುಡಿ – ಅರ್ಧ ಕಪ್.
ತುಪ್ಪ – 1 ಟೀ ಸ್ಪೂನ್.
ಹಾಲು – 1 ಕಪ್.
ಏಲಕ್ಕಿ ಪುಡಿ – ಸ್ವಲ್ಪ .
ದ್ರಾಕ್ಷಿ, ಗೋಡಂಬಿ – (ತುಪ್ಪದಲ್ಲಿ ಕರಿಯಲು).

ಅಳವಿ ಪಾಯಸ ಮಾಡುವ ವಿಧಾನ ಹೀಗಿದೆ:

ಅಳವಿ ಬೀಜ ನೆನೆಸುವುದು:
ಒಂದು ಬೌಲ್‌ನಲ್ಲಿ ಅಳವಿ ಬೀಜ ಹಾಕಿ, ಸ್ವಲ್ಪ ನೀರು ಸೇರಿಸಿ 10 ನಿಮಿಷ ನೆನೆಸಲು ಬಿಡಿ. ಅಳವಿ ಬೀಜ ನೆನೆಯುವುದರಿಂದ ಪಾಯಸ ಗಟ್ಟಿಯಾಗಿ, ರುಚಿಯಾಗಿಾಗುತ್ತದೆ.

ನೀರಲ್ಲಿ ಕುದಿಸುವುದು:
ಒಂದು ಪಾತ್ರೆಗೆ 2 ಕಪ್ ನೀರು ಹಾಕಿ ಕುದಿಯಲು ಬಿಡಿ.
ಕುದಿಯುತ್ತಿರುವ ನೀರಿಗೆ ನೆನೆಸಿದ ಬೀಜವನ್ನು ಸೇರಿಸಿ ಚೆನ್ನಾಗಿ ಬೆರೆಸಿ.

ಬೆಲ್ಲ ಸೇರಿಸುವುದು:
ಅರ್ಧ ಕಪ್ ಬೆಲ್ಲದ ಪುಡಿ ಹಾಕಿ ಮಿಶ್ರಣ ಮಾಡಿ.
ಬೆಲ್ಲದಲ್ಲಿ ಇರುವ ಐರನ್ ಹಾಗೂ ಖನಿಜಗಳು ಪಾಯಸಕ್ಕೆ ಹೆಚ್ಚುವರಿ ಆರೋಗ್ಯ ಲಾಭ ಕೊಡುತ್ತವೆ.

ತುಪ್ಪ ಸೇರಿಸಿ ಕುದಿಸುವುದು:
ಒಂದು ಟೀ ಸ್ಪೂನ್ ತುಪ್ಪ ಹಾಕಿ 2–3 ನಿಮಿಷ ಕುದಿಸಿ. ತುಪ್ಪದಿಂದ ಉರಿಯೂತ ಕಡಿಮೆಯಾಗಲು ಸಹಾಯ.

ಹಾಲು ಸೇರಿಸುವುದು:
ಪಾತ್ರೆಯನ್ನು ಆಫ್ ಮಾಡಿ ಸ್ವಲ್ಪ ತಣ್ಣಗಾಗಲು ಬಿಡಿ.
ಇದಕ್ಕೆ ಕಾಯಿಸಿದ ಹಾಲನ್ನು ನಿಧಾನವಾಗಿ ಹಾಕುತ್ತಾ ನಿರಂತರವಾಗಿ ಮಿಕ್ಸ್ ಮಾಡಿ.

ಕೊನೆಯದಾಗಿ, ಏಲಕ್ಕಿ ಪುಡಿ, ತುಪ್ಪದಲ್ಲಿ ಕರಿದ ದ್ರಾಕ್ಷಿ-ಗೋಡಂಬಿ ಸೇರಿಸಿ. ನಿಮ್ಮ ಆರೋಗ್ಯಕಾರಿ, ರುಚಿಕರ ಅಳವಿ ಪಾಯಸ ಸಿದ್ಧವಾಗುತ್ತದೆ.

ಅಳವಿ ಪಾಯಸದಿಂದ ಸಿಗುವ ಆರೋಗ್ಯ ಪ್ರಯೋಜನಗಳು ಹೀಗಿವೆ:

ಕೈ-ಕಾಲು ನೋವು, ಜಂಟಿನ ನೋವಿಗೆ ಸಹಾಯಕ.
ಒಮೆಗಾ-3 ಮಲಗಿದ ತಕ್ಷಣ ನಿದ್ರೆ ಬರುವಂತೆ ಮಾಡುತ್ತದೆ.
ಫೈಬರ್ ಜೀರ್ಣಕ್ರಿಯೆ ಸುಧಾರಿಸುತ್ತದೆ.
ಮೂಳೆಗಳ ಬಲ ಹೆಚ್ಚಿಸುತ್ತದೆ.
ಸೊಂಟ ನೋವಿನಲ್ಲಿಯೂ ಈ ಪಾಯಸ ಮನೆಮದ್ದು.
ದೇಹದ ಉರಿಯೂತ ಕಡಿಮೆ ಮಾಡುತ್ತದೆ.
ಮಹಿಳೆಯರು, ಹಿರಿಯರು, ಹೆಚ್ಚು ಕೆಲಸ ಮಾಡುವವರು ಎಲ್ಲರಿಗೂ ಈ ಪಾಯಸ ಉತ್ತಮ ಪೋಷಕಾಹಾರ.

ಒಟ್ಟಾರೆಯಾಗಿ, ನೀವು ನೋವಿನಿಂದ ಬಳಲುತ್ತಿದ್ದರೆ, ಅಥವಾ ರಾತ್ರಿ ಮಲಗಿದ ತಕ್ಷಣ ನಿದ್ರೆ ಬರಬೇಕು ಎಂದರೆ, ಈ ಅಳವಿ ಬೀಜದ ಪಾಯಸವನ್ನು ವಾರದಲ್ಲಿ 2–3 ಬಾರಿ ಮಾಡಿ ಕುಡಿಯಿರಿ.

WhatsApp Image 2025 09 05 at 11.51.16 AM 12

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories