ರಾಜ್ಯ ಸರ್ಕಾರದಿಂದ 20 ವರ್ಗಗಳ ಕಾರ್ಮಿಕರಿಗೆ ಗುಡ್ ನ್ಯೂಸ್. ‘ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ’ ಯೋಜನೆಯಡಿ (Ambedkar Karmika Sahaya Hastha Scheme) ಅರ್ಜಿ ಆಹ್ವಾನ.
ಅಸಂಘಟಿತ ಕಾರ್ಮಿಕರ (Unorganized workers) ಸಮಸ್ಯೆಗಳಿಗೆ ಸರ್ಕಾರ ಸ್ಪಂಧಿಸುತ್ತಿದ್ದು, ಈ ನಡುವೆ ಅಂಬೇಡ್ಕರ್ ಸಹಾಯ ಹಸ್ತ (Ambedkar sahaya hasta) ಯೋಜನೆಯಡಿ ಇಪ್ಪತ್ತು ಅಸಂಘಟಿಯ ಕಾರ್ಮಿಕ ವಲಯಗಳಿಗೆ ಪರಿಹಾರ ನೀಡಲಾಗುತ್ತಿದೆ. ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯ ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯಡಿ ನೊಂದಾಯಿಸಿಕೊಳ್ಳಲು 20 ವರ್ಗಗಳ ಕಾರ್ಮಿಕರಿಗೆ ಆನ್ಲೈನ್ ಅರ್ಜಿ ಆಹ್ವಾನಿಸಿದೆ. ಯಾರೆಲ್ಲಾ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು? ಅರ್ಜಿ ಸಲ್ಲಿಸಲು ಬೇಕಾಗುವ ಅರ್ಹತೆಗಳೇನು ಎಂಬ ಸಂಪೂರ್ಣ ಮಾಹಿತಿಯನ್ನು ತಿಳುದುಕೊಳ್ಳೋಣ ಬನ್ನಿ.
ಯಾರಿಗೆ ಈ ಸೌಲಭ್ಯ ಸಿಗಲಿದೆ?
ಈ ಯೋಜನೆಯಡಿ ಹಮಾಲರು, ಚಿಂದಿ ಆಯುವವರು, ಕುಂಬಾರರು, ಭಟ್ಟಿ ಕಾರ್ಮಿಕರು, ಮನೆಗೆಲಸದವರು, ಮೆಕ್ಯಾನಿಕ್, ಟೈಲರ್, ಅಗಸರು, ಕ್ಷೌರಿಕರು, ಕಮ್ಮಾರರು, ಅಕ್ಕಸಾಲಿಗರು, ಗಿಗ್ ಕಾರ್ಮಿಕರು, ಸಿನಿ ಕಾರ್ಮಿಕರು, ನೇಕಾರರು, ಬೀದಿ ಬದಿ ವ್ಯಾಪಾರಿಗಳು, ಹೋಟೆಲ್ ಕಾರ್ಮಿಕರು, ಫೋಟೋಗ್ರಾಫರ್ಗಳು, ಸ್ವತಂತ್ರ ಲೇಖನ ಬರಹಗಾರರು, ಕಲ್ಯಾಣ ಮಂಟಪ/ಸಭಾ ಭವನ/ ಟೆಂಟ್/ಪೆAಡಾಲ್ ಕೆಲಸ ನಿರ್ವಹಿಸುವ ಎಲ್ಲಾ ಕಾರ್ಮಿಕರು, ಬೀಡಿ ಕಾರ್ಮಿಕರು ಮತ್ತು ಅಸಂಘಟಿತ ವಿಕಲಚೇತನ ಕಾರ್ಮಿಕರು, ಅಲೆಮಾರಿ ಪಂಗಡದ ಅಸಂಘಟಿತ ಕಾರ್ಮಿಕರು ಸೇರಿದ್ದಾರೆ.
ಅರ್ಜಿ ಸಲ್ಲಿಸುವುದು ಹೇಗೆ?:
ಸರ್ಕಾರ ಹೊರಡಿಸಿರುವ ಪ್ರಕಟಣೆಯಲ್ಲಿ ಕಾರ್ಮಿಕ ಅಧಿಕಾರಿಗಳು ತಿಳಿಸಿರುವ ಪ್ರಕಾರ ಅರ್ಜಿದಾರರು ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆ (Ambedkar Karmika Sahaya Hastha Scheme ) ವೆಬ್ ಸೈಟ್ ನಲ್ಲಿ ನೋಂದಾಯಿಸಿಕೊಳ್ಳುವ ಮೂಲಕ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು.
ಕಾರ್ಮಿಕರು https://labour.ambedkarsahayahasta.in/api/account ಪೋರ್ಟಲ್ ನಲ್ಲಿ ನೋಂದಾಯಿಸಿಕೊಳ್ಳುವ ಮೂಲಕ ಯೋಜನೆಯ ಪ್ರಯೋಜನ ಪಡೆದುಕೊಳ್ಳುವಂತೆ ಕಾರ್ಮಿಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಯೋಜನೆಯ ಸೌಲಭ್ಯ ಪಡೆಯಲು ಬೇಕಾಗುವ ಅರ್ಹತೆಗಳು?:
ಮೊದಲಿಗೆ ಅರ್ಜಿದಾರನು ರಾಜ್ಯದ ನಿವಾಸಿಯಾಗಿರಬೇಕು.
18 ರಿಂದ 60 ವಯೋಮಾನದವರಾಗಿರಬೇಕು.
ಆದಾಯ ತೆರಿಗೆ ಪಾವತಿದಾರರು ಹಾಗೂ ಇಎಸ್‌ಐ/ಪಿಎಫ್ ಸೌಲಭ್ಯ ಹೊಂದಿರಬಾರದು.
ಅಪಘಾತದಲ್ಲಿ ಸಾವಿಗೀಡಾದರೂ ಸಹ ಈ ಯೋಜನೆಯಡಿ ಕಾರ್ಮಿಕರಿಗೆ ಸಹಾಯ ಧನ ಸಿಗಲಿದೆ :
ಹೌದು, ಕಾರ್ಮಿಕರು ಏನಾದರೂ ಅಪಘಾತದಲ್ಲಿ ಸಾವಿಗೀಡಾದರೆ ಈ ಯೋಜನೆಯಡಿ ಕುಟುಂಬದವರಿಗೆ 1.00 ಲಕ್ಷ ಪರಿಹಾರ ನೀಡಲಾಗುತ್ತದೆ. ಅಲ್ಲದೆ ಅಪಘಾತದಿಂದುಟಾಗುವ ಸಂಪೂರ್ಣ ಶಾಶ್ವತ ಅಥವಾ ಭಾಗಶಃ ದುರ್ಬಲತೆ ಪರಿಹಾರ ಸಹ ಇದೆ. ಇದಕ್ಕೂ ಸಹ ಒಂದು ಲಕ್ಷದ ವರೆಗೆ ಹಣ ನೀಡಲಾಗುತ್ತದೆ. ಅಲ್ಲದೆ ಆಸ್ಪತ್ರೆ ವೆಚ್ಚ 50,000 ರೂ. ವರೆಗೆ ಮರುಪಾವತಿ ಮಾಡಬಹುದಾದ ಪರಿಹಾರವನ್ನು ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ. ಇದರ ಜೊತೆಯಲ್ಲಿ ಸಹಜ ಮರಣ ಪರಿಹಾರ ಮತ್ತು ಅಂತ್ಯಕ್ರಿಯೆ ವೆಚ್ಚಕ್ಕೂ ಸಹ ಸರ್ಕಾರ ಹಣ ನೀಡಲಿದೆ. ಇದರ ಮೊತ್ತ 10,000 ರೂ.ಗಳಾಗಿದೆ.
ಗಮನಿಸಿ :
ಒಂದುವೇಳೆ ಕಾರ್ಮಿಕರು ಮದ್ಯಪಾನ ಸೇವಿಸಿ ಸಾವಿಗೀಡಾದರೆ ಈ ಹಣವನ್ನು ಅವರಿಗೆ ನೀಡಲಾಗುವುದಿಲ್ಲ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group




