Picsart 25 09 28 23 39 24 212 scaled

ಅಕ್ಟೋಬರ್ 1ರಿಂದ ಹೊಸ ನಿಯಮಗಳು: ಪಿಂಚಣಿ, ರೈಲು, ಯುಪಿಐ, ಗೇಮಿಂಗ್ ಮತ್ತು LPG ಬೆಲೆಯಲ್ಲಿ ಬದಲಾವಣೆ

Categories:
WhatsApp Group Telegram Group

ಸೆಪ್ಟೆಂಬರ್ ತಿಂಗಳು ಮುಗಿಯುವ ಹಂತಕ್ಕೆ ಬಂದಿದೆ. ಪ್ರತೀ ಹೊಸ ತಿಂಗಳು ಶುರುವಾದಾಗ ಸರ್ಕಾರ ಹಾಗೂ ವಿವಿಧ ಇಲಾಖೆಗಳಿಂದ (government and other departments) ಕೆಲ ಹೊಸ ನಿಯಮಗಳು ಜಾರಿಗೆ ಬರುತ್ತವೆ. ಇವು ಸಾಮಾನ್ಯ ಜನರ ಜೀವನ, ಆರ್ಥಿಕತೆ ಹಾಗೂ ದೈನಂದಿನ ವ್ಯವಹಾರಗಳ ಮೇಲೆ ನೇರ ಪರಿಣಾಮ ಬೀರುತ್ತವೆ. ಇದೇ ರೀತಿ, ಅಕ್ಟೋಬರ್ 1, 2025 ರಿಂದ ಅನೇಕ ಪ್ರಮುಖ ನಿಯಮ ಬದಲಾವಣೆಗಳು ಜಾರಿಗೆ ಬರಲಿವೆ. ಪಿಂಚಣಿ ಯೋಜನೆಗಳಿಂದ(Pension Schemes) ಹಿಡಿದು ರೈಲ್ವೆ ಟಿಕೆಟ್ ಬುಕ್ಕಿಂಗ್, ಆನ್‌ಲೈನ್ ಗೇಮಿಂಗ್, ಯುಪಿಐ ವಹಿವಾಟು ಮತ್ತು ಅಡುಗೆ ಅನಿಲದ ಬೆಲೆಗಳವರೆಗೆ ಹಲವು ಬದಲಾವಣೆಗಳು ಜನಸಾಮಾನ್ಯರ ಮೇಲೆ ಪರಿಣಾಮ ಬೀರುವಂತಿವೆ. ಈ ನಿಯಮಗಳು ತಿಳಿದುಕೊಂಡರೆ ನಿಮ್ಮ ಹಣಕಾಸು ನಿರ್ಧಾರಗಳಲ್ಲಿ (In Financial decisions) ಜಾಗರೂಕತೆ ವಹಿಸಲು ಹಾಗೂ ಅನಗತ್ಯ ನಷ್ಟ ತಪ್ಪಿಸಲು ಸಹಾಯಕವಾಗುತ್ತದೆ. ಹಾಗಿದ್ದರೆ ಅಕ್ಟೋಬರ್ 1ರಿಂದ ಯಾವ ಯಾವ ನಿಯಮ ಬದಲಾಗುತ್ತಿವೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ..

ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ಬದಲಾವಣೆ:

ಸರ್ಕಾರೇತರ ವಲಯದ ಚಂದಾದಾರರಿಗೆ ಈಕ್ವಿಟಿ ಹೂಡಿಕೆ ಮಿತಿ 75% ರಿಂದ 100% ವರೆಗೆ ಹೆಚ್ಚಿಸಲಾಗುತ್ತಿದೆ.
PRAN (Permanent Retirement Account Number) ಕಾರ್ಡ್ ಪಡೆಯಲು ಖಾಸಗಿ ವಲಯದ ಉದ್ಯೋಗಿಗಳಿಗೆ e-PRAN ಕಿಟ್‌ಗೆ ₹18 ಮತ್ತು ಭೌತಿಕ ಕಾರ್ಡ್‌ಗೆ ₹40 ಶುಲ್ಕ ವಿಧಿಸಲಾಗುತ್ತದೆ.
ಪ್ರತಿ ಖಾತೆಗೆ ವಾರ್ಷಿಕ ನಿರ್ವಹಣಾ ಶುಲ್ಕ ₹100 ಆಗಿರಲಿದೆ.
ಅಟಲ್ ಪಿಂಚಣಿ ಯೋಜನೆ (APY) ಮತ್ತು NPS ಲೈಟ್ ಚಂದಾದಾರರಿಗೆ ಶುಲ್ಕ ₹15 ಮಾತ್ರ.

ರೈಲ್ವೆ ಟಿಕೆಟ್ ಬುಕ್ಕಿಂಗ್ ಹೊಸ ನಿಯಮ:

ಆನ್‌ಲೈನ್ IRCTC ಮೂಲಕ ಟಿಕೆಟ್ ಬುಕ್ (Ticket book) ಮಾಡಲು ಪ್ರಯತ್ನಿಸುವ ಪ್ರಯಾಣಿಕರು ಆಧಾರ್ ವೆರಿಫಿಕೇಶನ್ ಮಾಡಿಸಿದವರಾಗಿರಬೇಕು.
ಟಿಕೆಟ್ ಬುಕ್ಕಿಂಗ್ ಪ್ರಾರಂಭವಾಗುವ ಮೊದಲ 15 ನಿಮಿಷಗಳಲ್ಲಿ ಕೇವಲ ಆಧಾರ್ ದೃಢೀಕರಿಸಿದ ಪ್ರಯಾಣಿಕರೇ ಟಿಕೆಟ್ ಬುಕ್ ಮಾಡಬಹುದು.
ರೈಲ್ವೆ ಅಧಿಕೃತ ಏಜೆಂಟರಿಗೆ ಮೊದಲ 10 ನಿಮಿಷ ಟಿಕೆಟ್ ಬುಕ್ ಮಾಡಲು ಅವಕಾಶ ಇರದು.
ಆದರೆ, PRS ಕೌಂಟರ್ ಮೂಲಕ ಟಿಕೆಟ್ ಖರೀದಿಸುವವರಿಗೆ ಯಾವುದೇ ಬದಲಾವಣೆ ಇರುವುದಿಲ್ಲ.

ಆನ್‌ಲೈನ್ ಗೇಮಿಂಗ್ ನಿಯಮ (Online Gaming Bill 2025):

ಸರ್ಕಾರ ಅನುಮೋದಿಸಿದ ಆನ್‌ಲೈನ್ ಗೇಮಿಂಗ್ ಮಸೂದೆ (Online gaming act) 2025 ಅಕ್ಟೋಬರ್ 1ರಿಂದ ಜಾರಿಗೆ ಬರುತ್ತಿದೆ.
ಹಣದ ವ್ಯಸನ ಮತ್ತು ಆರ್ಥಿಕ ನಷ್ಟ ತಡೆಯುವುದು ಮುಖ್ಯ ಉದ್ದೇಶ.
ನಿಯಮ ಉಲ್ಲಂಘಿಸಿದರೆ ಗಂಭೀರ ಶಿಕ್ಷೆ,
3 ವರ್ಷಗಳ ಜೈಲು ಶಿಕ್ಷೆ.
₹1 ಕೋಟಿ ದಂಡ ವಿಧಿಸಲಾಗುತ್ತದೆ.

ಯುಪಿಐ (UPI) ವಹಿವಾಟು ಬದಲಾವಣೆ:

ಎನ್‌ಪಿಸಿಐ (NPCI) ಜಾರಿಗೊಳಿಸುತ್ತಿರುವ ಹೊಸ ನಿಯಮ ಪ್ರಕಾರ, ಅಕ್ಟೋಬರ್ 1ರಿಂದ Peer-to-Peer (P2P) ವಹಿವಾಟು ತೆಗೆದುಹಾಕಲಾಗುತ್ತಿದೆ.
ಇದರಿಂದ Google Pay, PhonePe, Paytm ಮುಂತಾದ ಪ್ಲಾಟ್‌ಫಾರ್ಮ್ ಬಳಕೆದಾರರ ಮೇಲೆ ನೇರ ಪರಿಣಾಮ ಬೀರುತ್ತದೆ.
ಬದಲಾವಣೆ ಮಾಡುವ ಉದ್ದೇಶ,
ಬಳಕೆದಾರರ ಸೇಫ್ಟಿ ಹೆಚ್ಚಿಸುವುದು.
ಆರ್ಥಿಕ ವಂಚನೆಗಳನ್ನು ಕಡಿಮೆ ಮಾಡುವುದು.

ಅಡುಗೆ ಅನಿಲ (LPG) ಬೆಲೆ ಬದಲಾವಣೆ:

ಪ್ರತೀ ತಿಂಗಳಂತೆ ಅಕ್ಟೋಬರ್ 1ರಂದು ಕೂಡ ಅಡುಗೆ ಅನಿಲದ ಬೆಲೆ ಪರಿಷ್ಕರಣೆ ಮಾಡಲಾಗುತ್ತದೆ.
ಬೆಲೆ ಏರಿಕೆ (Increased price) ಅಥವಾ ಇಳಿಕೆ ಬಗ್ಗೆ ಸರ್ಕಾರ ಅಧಿಕೃತವಾಗಿ ಘೋಷಣೆ ಮಾಡುತ್ತದೆ.
ಇದು ನೇರವಾಗಿ ಸಾಮಾನ್ಯ ಜನರ ದಿನನಿತ್ಯದ ಜೀವನಕ್ಕೆ ಪರಿಣಾಮ ಬೀರುವಂತದ್ದು.

ಒಟ್ಟಾರೆಯಾಗಿ, ಅಕ್ಟೋಬರ್ 1ರಿಂದ ಜಾರಿಗೆ ಬರುವ ಈ ಎಲ್ಲಾ ಬದಲಾವಣೆಗಳು ಪ್ರತಿಯೊಬ್ಬರ ಜೀವನಕ್ಕೆ ಒಂದಲ್ಲೊಂದು ರೀತಿಯಲ್ಲಿ ಸಂಬಂಧಿಸುತ್ತವೆ. ವಿಶೇಷವಾಗಿ ಹಣಕಾಸು ನಿರ್ವಹಣೆ, ಪಿಂಚಣಿ ಯೋಜನೆ, ರೈಲ್ವೆ ಪ್ರಯಾಣ, ಡಿಜಿಟಲ್ ಪಾವತಿ (Digital payment) ಹಾಗೂ ಅಡುಗೆ ವೆಚ್ಚಗಳಲ್ಲಿ ಎಚ್ಚರಿಕೆಯಿಂದ ಇರುವುದು ಅಗತ್ಯ. ಮುಂಚಿತವಾಗಿ ಈ ಬದಲಾವಣೆಗಳ ಬಗ್ಗೆ ಅರಿವು ಹೊಂದಿದರೆ ಅನಗತ್ಯ ಆರ್ಥಿಕ ನಷ್ಟ ತಪ್ಪಿಸಿ, ಸರಿಯಾದ ಯೋಜನೆ ರೂಪಿಸಬಹುದು.

WhatsApp Image 2025 09 05 at 11.51.16 AM 12

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories