Picsart 25 10 29 22 37 39 662 scaled

ನವೆಂಬರ್ 1ರಿಂದ ಹೊಸ ನಿಯಮಗಳು: ಆಧಾರ್, ಬ್ಯಾಂಕಿಂಗ್, ಹೂಡಿಕೆ ಮತ್ತು ಪಡಿತರದಲ್ಲಿ ಮಹತ್ವದ ಬದಲಾವಣೆ. 

Categories:
WhatsApp Group Telegram Group

ಭಾರತದ ಜನಸಾಮಾನ್ಯರ ದಿನನಿತ್ಯದ ಜೀವನಕ್ಕೆ ನೇರವಾಗಿ ಸಂಬಂಧಿಸಿದ ಹಲವು ಪ್ರಮುಖ ನಿಯಮಗಳಲ್ಲಿ ನವೆಂಬರ್ 1, 2025ರಿಂದ ಮಹತ್ವದ ಬದಲಾವಣೆಗಳು ಜಾರಿಯಾಗಲಿವೆ. ಬ್ಯಾಂಕಿಂಗ್, ಆಧಾರ್ ನವೀಕರಣ, ಹೂಡಿಕೆ ನಿಯಂತ್ರಣ ಮತ್ತು ಪಡಿತರ ವ್ಯವಸ್ಥೆ  ಇವುಗಳೆಲ್ಲವೂ ಹೊಸ ರೂಪ ಪಡೆಯಲಿವೆ. ಯುಐಡಿಎಐ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), ಸೆಬಿ ಹಾಗೂ ಕೇಂದ್ರ ಸರ್ಕಾರ ಹೊರಡಿಸಿರುವ ಹೊಸ ಮಾರ್ಗಸೂಚಿಗಳು ಕೋಟ್ಯಂತರ ಜನರ ಜೀವನಕ್ಕೆ ನೇರ ಪ್ರಭಾವ ಬೀರುವ ಸಾಧ್ಯತೆಯಿದೆ. ಈ ಬದಲಾವಣೆಗಳ ಉದ್ದೇಶ ವ್ಯವಸ್ಥೆಯಲ್ಲಿ ಪಾರದರ್ಶಕತೆ, ಸುರಕ್ಷತೆ ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು. ಹಾಗಿದ್ದರೆ ನವೆಂಬರ್ 1 ರಿಂದ ಜಾರಿಗೆ ಬರಲಿರುವ ಪ್ರಮುಖ ಬದಲಾವಣೆಗಳು ಯಾವುವು ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಆಧಾರ್ ನವೀಕರಣದಲ್ಲಿ ಹೊಸ ವ್ಯವಸ್ಥೆ:

ಯುಐಡಿಎಐ (UIDAI) ಆಧಾರ್ ನವೀಕರಣ ಪ್ರಕ್ರಿಯೆಯನ್ನು ಮತ್ತಷ್ಟು ಸುಲಭಗೊಳಿಸಿದೆ. ಈಗ ಯಾವುದೇ ನಾಗರಿಕರು ತಮ್ಮ ಹೆಸರು, ವಿಳಾಸ, ಜನ್ಮ ದಿನಾಂಕ ಮತ್ತು ಮೊಬೈಲ್ ಸಂಖ್ಯೆಯಂತಹ ಮಾಹಿತಿಯನ್ನು ಆನ್‌ಲೈನ್‌ನಲ್ಲೇ ನವೀಕರಿಸಬಹುದು, ಆಧಾರ್ ಕೇಂದ್ರಕ್ಕೆ ತೆರಳುವ ಅಗತ್ಯವಿಲ್ಲ.
ಬಯೋಮೆಟ್ರಿಕ್ ಮಾಹಿತಿ (ಫಿಂಗರ್‌ಪ್ರಿಂಟ್ ಅಥವಾ ಐರಿಸ್ ಸ್ಕ್ಯಾನ್) ಬದಲಾಯಿಸಲು ಮಾತ್ರ ಕೇಂದ್ರಕ್ಕೆ ಭೇಟಿ ಅಗತ್ಯ.
ಹೊಸ ವ್ಯವಸ್ಥೆಯಲ್ಲಿ, ಪ್ಯಾನ್, ಪಾಸ್ಪೋರ್ಟ್, ರೇಷನ್ ಕಾರ್ಡ್, ಎಂಎನ್‌ಆರ್‌ಇಜಿಎ ಮತ್ತು ಶಾಲಾ ದಾಖಲೆಗಳಂತಹ ಸರ್ಕಾರಿ ಡೇಟಾಬೇಸ್‌ಗಳೊಂದಿಗೆ UIDAI ಮಾಹಿತಿ ಸ್ವಯಂಚಾಲಿತವಾಗಿ ಪರಿಶೀಲಿಸುತ್ತದೆ. ಇದರೊಂದಿಗೆ ದಾಖಲೆ ಅಪ್‌ಲೋಡ್ ಪ್ರಕ್ರಿಯೆ ಸಂಪೂರ್ಣವಾಗಿ ಮುಗಿಯಲಿದೆ ಜೊತೆಯಲ್ಲಿ ನಾಗರೀಕರಿಗೆ ಉತ್ತಮ ಅನುಭವ ಸಿಗಲಿದೆ.

ಬ್ಯಾಂಕಿಂಗ್ ನಿಯಮಗಳಲ್ಲಿ ಬದಲಾವಣೆ:

ಬ್ಯಾಂಕಿಂಗ್ ವಲಯದಲ್ಲಿಯೂ ಮಹತ್ವದ ಸುಧಾರಣೆಗಳು ಆಗಲಿವೆ.
ನವೆಂಬರ್ 1 ರಿಂದ ಗ್ರಾಹಕರು ತಮ್ಮ ಖಾತೆಗಳಿಗೆ, ಲಾಕರ್‌ಗಳಿಗೆ ಹಾಗೂ ಸುರಕ್ಷಿತ ಕಸ್ಟಡಿಗೆ ನಾಲ್ಕು ನಾಮಿನಿಗಳನ್ನು ನೇಮಿಸಿಕೊಳ್ಳಬಹುದು.
“ಬ್ಯಾಂಕಿಂಗ್ ಕಾನೂನು (ಪರಿಷ್ಕರಣೆ) ಕಾಯ್ದೆ 2025” ಅಡಿಯಲ್ಲಿ ಗ್ರಾಹಕರು ಪ್ರತಿ ನಾಮಿನಿಗೆ ಶೇಕಡಾವಾರು ಪಾಲನ್ನು ನಿಗದಿಪಡಿಸಬಹುದು.
ಒಬ್ಬ ನಾಮಿನಿ ನಿಧನರಾದಲ್ಲಿ, ಅವರ ಪಾಲು ಸ್ವಯಂಚಾಲಿತವಾಗಿ ಮುಂದಿನ ನಾಮಿನಿಗೆ ವರ್ಗಾಯಿಸಲಾಗುತ್ತದೆ.
ಇದರ ಮೂಲಕ ಆಸ್ತಿ ಹಕ್ಕು ಸಂಬಂಧಿತ ವಿವಾದಗಳು ಕಡಿಮೆಯಾಗಲಿದ್ದು, ಬ್ಯಾಂಕ್ ಖಾತೆದಾರರಿಗೆ ಹೆಚ್ಚಿನ ಭದ್ರತೆ ದೊರೆಯಲಿದೆ.

SBI ಕ್ರೆಡಿಟ್ ಕಾರ್ಡ್ ಬಳಕೆದಾರರಿಗಾಗಿ ಹೊಸ ನಿಯಮಗಳು:

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಕ್ರೆಡಿಟ್ ಕಾರ್ಡ್ ನಿಯಮಗಳಲ್ಲಿ ಬದಲಾವಣೆ ತಂದಿದೆ,
ಅಸುರಕ್ಷಿತ ಕ್ರೆಡಿಟ್ ಕಾರ್ಡ್‌ಗಳಿಗೆ 3.75% ಶುಲ್ಕ ವಿಧಿಸಲಾಗುತ್ತದೆ.
D CRED, CheQ, Mobikwik ಮುಂತಾದ ಅಪ್ಲಿಕೇಶನ್‌ಗಳ ಮೂಲಕ ಶಾಲೆ ಅಥವಾ ಕಾಲೇಜು ಶುಲ್ಕ ಪಾವತಿಸಿದರೆ 1% ಹೆಚ್ಚುವರಿ ಶುಲ್ಕ ಅನ್ವಯವಾಗುತ್ತದೆ.
ಶಾಲೆಯ ಅಧಿಕೃತ ವೆಬ್‌ಸೈಟ್ ಅಥವಾ POS ಯಂತ್ರದ ಮೂಲಕ ಪಾವತಿ ಮಾಡಿದರೆ ಯಾವುದೇ ಹೆಚ್ಚುವರಿ ಶುಲ್ಕ ಇರುವುದಿಲ್ಲ.
₹1,000 ಕ್ಕಿಂತ ಹೆಚ್ಚು ಹಣವನ್ನು ವ್ಯಾಲೆಟ್‌ಗೆ ಲೋಡ್ ಮಾಡಿದರೆ 1% ಶುಲ್ಕ ಅನ್ವಯವಾಗುತ್ತದೆ.
ಕಾರ್ಡ್‌ನಿಂದ ಚೆಕ್ ಪಾವತಿಗಳಿಗೆ ₹200 ಶುಲ್ಕ ವಿಧಿಸಲಾಗುತ್ತದೆ.
ಈ ಬದಲಾವಣೆಗಳು SBI ಗ್ರಾಹಕರಿಗೆ ವೆಚ್ಚ ನಿರ್ವಹಣೆಯಲ್ಲಿ ಸ್ಪಷ್ಟತೆ ಮತ್ತು ನಿಯಮಿತತೆ ತರಲಿವೆ.

ಸೆಬಿ (SEBI) ಹೊಸ ಮಾರ್ಗಸೂಚಿಗಳು ಹೀಗಿವೆ:

ಹೂಡಿಕೆದಾರರ ಹಿತಕ್ಕಾಗಿ ಸೆಬಿ (Securities and Exchange Board of India) ನವೆಂಬರ್ 1ರಿಂದ ಹೊಸ ಪಾರದರ್ಶಕ ನಿಯಮಗಳನ್ನು ಜಾರಿಗೆ ತರುತ್ತಿದೆ.
ಈಗ ಮ್ಯೂಚುವಲ್ ಫಂಡ್ ಕಂಪನಿಗಳ ಅಧಿಕಾರಿಗಳು, ಉದ್ಯೋಗಿಗಳು ಅಥವಾ ಅವರ ಕುಟುಂಬ ಸದಸ್ಯರು ₹15 ಲಕ್ಷಕ್ಕಿಂತ ಹೆಚ್ಚಿನ ಹೂಡಿಕೆ ವಹಿವಾಟು ನಡೆಸಿದರೆ, ಅದು ಕಂಪನಿಯ ಅನುಸರಣಾ ಅಧಿಕಾರಿಗೆ (Compliance Officer) ಕಡ್ಡಾಯವಾಗಿ ವರದಿ ಮಾಡಬೇಕು.
ಇದರಿಂದ ಹೂಡಿಕೆದಾರರ ಹಿತಾಸಕ್ತಿ ಕಾಯ್ದುಕೊಳ್ಳಲು, ಒಳಸಂಚು ಮತ್ತು ಅಕ್ರಮ ವಹಿವಾಟುಗಳನ್ನು ತಡೆಹಿಡಿಯಲು ಸಹಕಾರಿಯಾಗಲಿದೆ.

ಪಡಿತರ (ರೇಷನ್) ನಿಯಮಗಳಲ್ಲಿ ದೊಡ್ಡ ಬದಲಾವಣೆ:

ಕೇಂದ್ರ ಸರ್ಕಾರವು ಉಚಿತ ಪಡಿತರ ಯೋಜನೆಗೆ ಸಂಬಂಧಿಸಿದಂತೆ ಹೊಸ ಅರ್ಹತಾ ನಿಯಮಗಳನ್ನು ಜಾರಿಗೆ ತರುತ್ತಿದೆ.
ನವಂಬರ್ 1ರಿಂದ ಪ್ರತಿ ಪಡಿತರ ಚೀಟಿದಾರರಿಗೂ ಹೊಸ ಪರಿಶೀಲನೆ ನಡೆಯಲಿದೆ.
ಸರ್ಕಾರವು ಒನ್ ನೇಷನ್, ಒನ್ ರೇಷನ್ ಕಾರ್ಡ್ ಯೋಜನೆಯ ಅಡಿಯಲ್ಲಿ ದೇಶದಾದ್ಯಂತ ಪಡಿತರದ ಪಾರದರ್ಶಕ ವಿತರಣೆಗೆ ಕ್ರಮ ಕೈಗೊಳ್ಳಲಿದೆ.

ಯಾರು ತಮ್ಮ ಪಡಿತರ ಚೀಟಿಗಳನ್ನು (BPL) ಕಳೆದುಕೊಳ್ಳುತ್ತಾರೆ?:

ನಿಗದಿತ ಆದಾಯ ಮಿತಿಗಿಂತ ಹೆಚ್ಚು ಆದಾಯ ಹೊಂದಿರುವವರು.
ಸರ್ಕಾರಿ ನೌಕರರು ಅಥವಾ ಪಿಂಚಣಿ ಪಡೆಯುವವರು.
ದೊಡ್ಡ ವಸತಿ ಯೋಜನೆ ಅಥವಾ ಸರ್ಕಾರಿ ಸೌಲಭ್ಯ ಪಡೆದವರು.
ನಾಲ್ಕು ಚಕ್ರದ ವಾಹನ ಅಥವಾ ವ್ಯಾಪಾರ ಹೊಂದಿರುವವರು.
ಸುಳ್ಳು ಮಾಹಿತಿ ನೀಡಿದ ಅಥವಾ ನಕಲಿ ಕಾರ್ಡ್ ಬಳಸಿದವರು.
ಸರಿಯಾದ ಅರ್ಹತೆ ಇಲ್ಲದವರು ಪಡಿತರ ಪ್ರಯೋಜನ ಕಳೆದುಕೊಳ್ಳುವ ಸಾಧ್ಯತೆ ಇದೆ. ಸರ್ಕಾರವು ಈ ಬಾರಿ ಡಿಜಿಟಲ್ ಪರಿಶೀಲನೆ ಮೂಲಕ ಅರ್ಹ ಫಲಾನುಭವಿಗಳನ್ನೇ ಗುರುತಿಸುವತ್ತ ಮುಂದಾಗಿದೆ.

ಒಟ್ಟಾರೆಯಾಗಿ, ಈ ಬದಲಾವಣೆಗಳು ಸಾಮಾನ್ಯ ನಾಗರಿಕರ ಬದುಕಿನಲ್ಲಿ ನೇರ ಪ್ರಭಾವ ಬೀರುವಂತಿವೆ. ಆಧಾರ್ ನವೀಕರಣದಿಂದ ಬ್ಯಾಂಕಿಂಗ್ ಭದ್ರತೆ, ಹೂಡಿಕೆ ನಿಯಂತ್ರಣದಿಂದ ಪಡಿತರ ಪಾರದರ್ಶಕತೆ ಎಲ್ಲವೂ ಡಿಜಿಟಲ್ ಭಾರತ ಕನಸಿನತ್ತ ಒಂದು ಹೆಜ್ಜೆಯಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಖಾತೆ, ಆಧಾರ್ ಹಾಗೂ ಪಡಿತರ ವಿವರಗಳನ್ನು ನವೀಕರಿಸಿಕೊಳ್ಳುವುದು ಅತ್ಯಂತ ಅಗತ್ಯ.

WhatsApp Image 2025 09 05 at 11.51.16 AM 12

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories