ATM, ರೈಲು ಟಿಕೆಟ್, ಇ-ಖಾತಾ, MNP, ಮದ್ಯದ ದರ: ಜುಲೈ 1, 2025ರಿಂದ ಬದಲಾಗುತ್ತಿರುವ 9 ಪ್ರಮುಖ ನಿಯಮಗಳ ಸಂಪೂರ್ಣ ವಿವರ
ಇದೀಗ ಜುಲೈ 1, 2025ರಿಂದ ದೇಶದ ಜನಸಾಮಾನ್ಯರ ದಿನಚರಿಯಲ್ಲಿ ಬದಲಾವಣೆ ತರಲಿರುವ ಹಲವು ಮಹತ್ವದ ಹೊಸ ನಿಯಮಗಳು (New rules) ಜಾರಿಗೆ ಬರಲಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಣಕಾಸು, ರೈಲ್ವೆ, ಟೆಲಿಕಾಂ, ಆಸ್ತಿ ನಿರ್ವಹಣೆ, ಹಾಗೂ ಸಾರ್ವಜನಿಕ ಸೇವೆಗಳಿಗೆ (Public services) ಸಂಬಂಧಿಸಿದಂತೆ ನವೀನ ನಿಯಮಾವಳಿಗಳನ್ನು ಜಾರಿಗೆ ತರಲು ನಿರ್ಧರಿಸಿವೆ. ಈ ನಿಯಮಗಳ ಉದ್ದೇಶ ಜನಸಾಧಾರಣೆಗೆ ಉತ್ತಮ ಸೇವೆ, ಪಾರದರ್ಶಕತೆ, ಡಿಜಿಟಲೀಕರಣ, ಮತ್ತು ಪ್ರಕ್ರಿಯೆಗಳನ್ನು ಸರಳಗೊಳಿಸುವುದಾಗಿದೆ. ಹಾಗಿದ್ದರೆ ಜುಲೈ 1, 2025ರಿಂದ ಯಾವೆಲ್ಲ ಬದಲಾವಣೆಗಳು ಆಗಲಿವೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹೌದು, ಜುಲೈ 1, 2025ರಿಂದ ದೇಶದಾದ್ಯಂತ ವಿವಿಧ ಕ್ಷೇತ್ರಗಳಲ್ಲಿ ಕೆಲವು ಮಹತ್ವದ ಹೊಸ ನಿಯಮಗಳು ಜಾರಿಗೆ ಬರುವುದಾಗಿದೆ. ಕೇಂದ್ರ ಸರ್ಕಾರ (Central government) ಮತ್ತು ಸಂಬಂಧಿತ ಇಲಾಖೆಗಳ ಈ ಹೊಸ ಕ್ರಮಗಳು ಸಾಮಾನ್ಯ ಪ್ರಜೆಗಳ ದಿನನಿತ್ಯದ ಜೀವನಕ್ಕೆ ನೇರವಾಗಿ ಸಂಬಂಧಿಸುತ್ತವೆ. ಈ ಹೊಸ ರೂಲ್ಸ್‌ಗಳು ಬ್ಯಾಂಕಿಂಗ್, ಎಟಿಎಂ ಬಳಕೆ, ಮಕ್ಕಳ ಬ್ಯಾಂಕ್ ಖಾತೆ, ರೈಲ್ವೆ ಪ್ರಯಾಣ, ಲಗೇಜ್ ನಿಯಮಗಳು, AI ಆಧಾರಿತ ಸೀಟ್ ಹಂಚಿಕೆ, ಮದ್ಯದ ಬೆಲೆ, ಕಟ್ಟಡ ಯೋಜನೆ ಅನುಮೋದನೆ, ಮೊಬೈಲ್ ನಂಬರ್ ಪೋರ್ಟಿಂಗ್, ಪ್ಯಾನ್ ಕಾರ್ಡ್ ಅರ್ಜಿ, ಹಾಗೂ ನ್ಯಾಯಾಂಗ ಸಂಬಂಧಿತ ರಜೆಗಳ ಮೇಲೆ ನೇರ ಪರಿಣಾಮ ಬೀರಲಿವೆ.
ಜುಲೈ 1, 2025ರಿಂದ ಜಾರಿಗೆ ಬರುವ ಪ್ರಮುಖ ಹೊಸ ನಿಯಮಗಳು (Important new rules) ಯಾವುವು?:
1. ಬ್ಯಾಂಕಿಂಗ್ ಮತ್ತು ಎಟಿಎಂ ನಿಯಮಗಳು:
ಮೆಟ್ರೋ ನಗರಗಳು: ತಿಂಗಳಿಗೆ ಕೇವಲ 3 ಉಚಿತ ಎಟಿಎಂ ವಹಿವಾಟುಗಳು (ATM transactions) ಮಾತ್ರ ಲಭ್ಯವಿರುತ್ತವೆ (ಹಣ ತೆಗೆಯುವಿಕೆ ಅಥವಾ ಬ್ಯಾಲೆನ್ಸ್ ಪರಿಶೀಲನೆ ಸೇರಿ).
ಮೆಟ್ರೋ ಅಲ್ಲದ ನಗರಗಳು: ತಿಂಗಳಿಗೆ 5 ಉಚಿತ ವಹಿವಾಟುಗಳಿಗೆ ಅವಕಾಶ.
ಈ ಉಚಿತ ವಹಿವಾಟುಗಳ (Free transaction) ನಂತರ ಪ್ರತಿ ವಹಿವಾಟಿಗೆ ₹23 + GST ಶುಲ್ಕ ವಿಧಿಸಲಾಗುತ್ತದೆ.
2. ಮಕ್ಕಳಿಗೆ ಬ್ಯಾಂಕ್ ಖಾತೆ ಮತ್ತು ಡೆಬಿಟ್ ಕಾರ್ಡ್(Debit card) :
10 ವರ್ಷ ಮೇಲ್ಪಟ್ಟ ಮಕ್ಕಳು ತಮ್ಮ ಹೆಸರಲ್ಲಿ ಬ್ಯಾಂಕ್ ಖಾತೆ ತೆರೆದು ಡೆಬಿಟ್ ಕಾರ್ಡ್ ಪಡೆಯಬಹುದು.
3. ಕೆವೈಸಿ (KYC) ನವೀಕರಣ:
KYC ನವೀಕರಣದ ಪ್ರಕ್ರಿಯೆಯನ್ನು ಸುಗಮಗೊಳಿಸಲು ಹೊಸ ವ್ಯವಸ್ಥೆ (New system) ಜಾರಿಗೆ ಬರಲಿದೆ. ಹೆಚ್ಚಿನ ವಿವರಗಳು ಶೀಘ್ರದಲ್ಲಿ ಪ್ರಕಟವಾಗುವ ನಿರೀಕ್ಷೆಯಿದೆ.
4. ರೈಲ್ವೆ ನಿಯಮಗಳು (Railway rules) :
ಲಗೇಜ್ ನಿಯಮಗಳು: ಅಧಿಕ ತೂಕದ ಲಗೇಜ್‌ಗಾಗಿ ಹೆಚ್ಚುವರಿ ಶುಲ್ಕ ವಿಧಿಸುವ ಪ್ರಕ್ರಿಯೆಯಲ್ಲಿ ಬದಲಾವಣೆ.
ಟಿಕೆಟ್ ರದ್ದತಿ ಮತ್ತು ತತ್ಕಾಲ ಟಿಕೆಟ್ ಮರುಪಾವತಿ: ಟಿಕೆಟ್ ರದ್ದತಿ ಸಮಯ ಮತ್ತು ಮರುಪಾವತಿ ಪ್ರಕ್ರಿಯೆಯಲ್ಲಿ ನವೀನ ಮಾರ್ಗಸೂಚಿಗಳು.
AI ಆಧಾರಿತ ಸೀಟ್ ಹಂಚಿಕೆ: ಸ್ಮಾರ್ಟ್ ಅಲ್ಗೊರಿದಮ್ (Smart Algorithm) ಆಧಾರಿತ ಆಸನ ಹಂಚಿಕೆ ಆರಂಭ. ಪ್ರಯಾಣಿಕನ ಪ್ರತ್ಯೇಕ ಅಗತ್ಯಗಳ ಪ್ರಕಾರ ಆಸನ ನಿಯೋಜನೆ.
5. ಮದ್ಯದ ಬೆಲೆ ಇಳಿಕೆ (ಕರ್ಣಾಟಕ):
ರಾಜ್ಯ ಸರ್ಕಾರದ ಹೊಸ ನೀತಿಯಂತೆ, ಪ್ರೀಮಿಯಂ ಬ್ರಾಂಡ್ಗಳ (Premium brands) ಮದ್ಯದ ಬೆಲೆಗಳಲ್ಲಿ ₹100 ರಿಂದ ₹2,000 ವರೆಗೆ ಕಡಿತ.
ವಿಸ್ಕಿ, ಬ್ರಾಂಡಿ, ಜಿನ್, ರಮ್ ಮುಂತಾದವುಗಳಿಗೆ ಈ ಕಡಿತ ಅನ್ವಯಿಸಲಿದೆ.
6. ಬೆಂಗಳೂರಿನಲ್ಲಿ ಕಟ್ಟಡ ಯೋಜನೆ ಅನುಮೋದನೆ :
ಜುಲೈ 1ರಿಂದ ಬೆಂಗಳೂರು ನಗರದಲ್ಲಿ ಕಟ್ಟಡ ಯೋಜನೆ ಅನುಮೋದನೆಗೆ ಇ-ಖಾತಾ (E – Khata) ಅಥವಾ ಇಪಿಐಡಿ ಸಂಖ್ಯೆ (EPID Number) ಕಡ್ಡಾಯವಾಗುತ್ತದೆ.
ಇಪಿಐಡಿ ಸಂಖ್ಯೆ ಇಲ್ಲದೆ ಕಟ್ಟಡ ಯೋಜನೆಗಾಗಿ ಆನ್‌ಲೈನ್ ಅರ್ಜಿ (Online Application) ಸಲ್ಲಿಸುವುದಕ್ಕೆ ಅನುಮೋದನೆ ಸಿಗದು.
ಹಸ್ತಚಾಲಿತ ದಾಖಲೆ ಸಲ್ಲಿಕೆ ವ್ಯವಸ್ಥೆಗೆ ಬ್ರೇಕ್, ಸಂಪೂರ್ಣ ಡಿಜಿಟಲ್ ಪ್ಲಾಟ್‌ಫಾರ್ಮ್.
7. ಮೊಬೈಲ್ ನಂಬರ್ ಪೋರ್ಟಿಂಗ್ (MNP) ನಿಯಮ:
TRAI ನ ಹೊಸ ಮಾರ್ಗಸೂಚಿಗಳಂತೆ, ಸಿಮ್ ಕಾರ್ಡ್ ಬದಲಾಯಿಸಿದ ನಂತರ 7 ದಿನಗಳವರೆಗೆ MNP ಪ್ರಕ್ರಿಯೆ ಮಾಡಲಾಗದು.
ಈ ನಿಯಮವು ಅಪಾಯಕಾರಿಯಾದ ತ್ವರಿತ ಪೋರ್ಟಿಂಗ್‌ಗಳನ್ನು (Portings) ತಡೆಗಟ್ಟಲು ಉದ್ದೇಶಿತವಾಗಿದೆ.
TRAI ಈ ನಿಯಮವನ್ನು ಜಾರಿಗೆ ತಂದಿದ್ದು ಭದ್ರತೆ ಮತ್ತು ಸೇವಾ ದುರೋಪಯೋಗ ತಡೆಗಟ್ಟುವುದೇ ಇದರ ಉದ್ದೇಶವಾಗಿದೆ.
8. ಪ್ಯಾನ್ ಕಾರ್ಡ್ (Pan card) ಸಂಬಂಧಿತ ಬದಲಾವಣೆ:
ಜುಲೈ 1ರಿಂದ ಹೊಸ ಪ್ಯಾನ್ ಕಾರ್ಡ್ ಅರ್ಜಿಗೆ ಕೆಲ ಹೊಸ ನಿಯಮಗಳು ಕಡ್ಡಾಯ ಆಗುವ ನಿರೀಕ್ಷೆಯಿದೆ.
ಹೊಂದಾಣಿಕೆಯ ದಸ್ತಾವೇಜು ಮತ್ತು ನೊಂದಣಿಯಲ್ಲಿ ಬದಲಾವಣೆಗಳಾಗುವ ಸಾಧ್ಯತೆ ಇದೆ. ಆದರೂ ಸ್ಪಷ್ಟ ನಿಯಮಾವಳಿ ಇನ್ನೂ ಪ್ರಕಟವಾಗಬೇಕಿದೆ.
9. ಸುಪ್ರೀಂ ಕೋರ್ಟ್ (Supreme court) ನೌಕರರ ಶನಿವಾರ ರಜೆ ರದ್ದು:
ಜುಲೈ 14, 2024ರಿಂದಲೇ ಜಾರಿಗೆ ಬಂದ ಈ ನಿಯಮದ ಪ್ರಕಾರ, ಎರಡನೇ ಮತ್ತು ನಾಲ್ಕನೇ ಶನಿವಾರ ರಜೆ ರದ್ದು.
ಶನಿವಾರ ಹಾಗೂ ಭಾನುವಾರದ ದಿನಗಳನ್ನೂ ಕೆಲಸದ ದಿನಗಳ ಪಟ್ಟಿಗೆ ಸೇರಿಸಲಾಗಿದೆ.
ಈ ನಿಯಮ ಕೇವಲ ಸುಪ್ರೀಂ ಕೋರ್ಟ್ ಕಚೇರಿ ಸಿಬ್ಬಂದಿಗೆ ಮಾತ್ರ ಅನ್ವಯಿಸುತ್ತದೆ, ಇತರ ಕೇಂದ್ರ ಸರ್ಕಾರಿ ನೌಕರರಿಗೆ (Central government employees) ಅನ್ವಯಿಸುವುದಿಲ್ಲ.
ಒಟ್ಟಾರೆಯಾಗಿ, ಜುಲೈ 1, 2025ರಿಂದ ಜಾರಿಗೆ ಬರುವ ಈ ಹೊಸ ನಿಯಮಗಳು ಸಾಮಾನ್ಯ ಜನರ ಬ್ಯಾಂಕಿಂಗ್, ಪ್ರಯಾಣ, ಮಾಲೀಕತ್ವದ ದಾಖಲೆ, ಮದ್ಯದ ಖರೀದಿ, ಮೊಬೈಲ್ ಸೇವೆಗಳಂತಹ (Mobile services) ಅನೇಕ ಕ್ಷೇತ್ರಗಳಲ್ಲಿ ನೇರ ಪ್ರಭಾವ ಬೀರುತ್ತವೆ. ಈ ನಿಯಮಗಳನ್ನು ತಿಳಿದುಕೊಂಡು, ಅಗತ್ಯವಾದಲ್ಲಿ ನಿಮ್ಮ ದಾಖಲೆಗಳನ್ನು ನವೀಕರಿಸುವುದು, ಬ್ಯಾಂಕ್ ಮತ್ತು ರೈಲ್ವೆ ಸೇವೆಗಳಲ್ಲಿ (Railway services) ಬದಲಾವಣೆಗಳನ್ನು ಗಮನಿಸುವುದು ಅವಶ್ಯಕ. ಪ್ರಜೆಗಳು ತಮ್ಮ ಹಣಕಾಸು, ಪ್ರಯಾಣ, ದೈನಂದಿನ ಸೇವೆಗಳು ಮತ್ತು ಕಾನೂನು ಸಂಬಂಧಿತ ಕಾರ್ಯಗಳಲ್ಲಿ ಈ ನಿಯಮಗಳಿಗೆ ಅನುಗುಣವಾಗಿ ಸಿದ್ಧತೆ ಮಾಡಿಕೊಳ್ಳುವುದು ಅಗತ್ಯ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.