ವಿಶ್ವ ತಂಬಾಕು ರಹಿತ ದಿನ (World NoTobaccoDay) ಸಂಧರ್ಭದಲ್ಲಿ ರಾಜ್ಯ ಸರ್ಕಾರ ತೆಗೆದುಕೊಂಡ ನಿರ್ಧಾರವು ಕೇವಲ ಕಾನೂನು ತಿದ್ದುಪಡಿ ಅಲ್ಲ; ಇದು ಆರೋಗ್ಯದ ದಿಕ್ಕಿನಲ್ಲಿ ಮಾಡಿದ ಪ್ರಬಲ ಹೆಜ್ಜೆಯಾಗಿದೆ. ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ (COTPA – Cigarettes and Other Tobacco Products Act) ಕಾಯ್ದೆಗೆ ಮಾಡಲಾದ ತಿದ್ದುಪಡಿಗಳು ಆರೋಗ್ಯಪೂರ್ಣ ಸಮಾಜದ ಕನಸಿಗೆ ಇನ್ನಷ್ಟು ಹತ್ತಿರ ತರುತ್ತಿವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ತಿದ್ದುಪಡಿಯ ಮುಖ್ಯಾಂಶಗಳು – ಜನತಾ ಬದುಕಿಗೆ ನವ ಸ್ಪಂದನೆ :
ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಸೇವನೆ ನಿಷೇಧ: ಈಗ ತಂಬಾಕು ಸೇವನೆಯಷ್ಟೆ ಅಲ್ಲ, ತಂಬಾಕು ಅಗಿಯುವುದು (chewing) ಹಾಗೂ ಉಗುಳುವುದು (Spitting )ಕೂಡ ನಿಷೇಧವಾಗಿದೆ. ಇದು ರೋಗ ಹರಡುವಿಕೆಯನ್ನು ತಡೆಯುವ ಮಹತ್ವದ ಹೆಜ್ಜೆ.
ವಯೋಮಿತಿಯ ಪರಿಷ್ಕರಣೆ: ಇನ್ನುಮುಂದೆ 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ತಂಬಾಕು ಉತ್ಪನ್ನಗಳ ಮಾರಾಟ ಕಾನೂನುಬಾಹಿರ. ಹೀಗೆ ಹಿನ್ನಲೆಗಳಲ್ಲಿ ತಂಬಾಕು ಸೇವನೆ ಆರಂಭಿಸುವ ಸಾಧ್ಯತೆಯನ್ನು ಕಡಿಮೆ ಮಾಡಲು ಸರ್ಕಾರ ಸಜ್ಜಾಗಿದೆ.
ಹುಕ್ಕಾ ಬಾರ್‌ಗಳಿಗೆ ಸಂಪೂರ್ಣ ನಿಷೇಧ: ಬಾರ್, ಪಬ್, ರೆಸ್ಟೋರೆಂಟ್‌ಗಳಲ್ಲಿ ಹುಕ್ಕಾ ಬಳಕೆ ಸಂಪೂರ್ಣ ನಿಷೇಧ. ಇದು ಯುವಜನತೆಯಲ್ಲಿ ಹುಕ್ಕಾ ಟ್ರೆಂಡ್‌ಗೆ ಕಡಿವಾಣ ಹಾಕುವುದು ನಿಶ್ಚಿತ.
ಉಲ್ಲಂಘನೆಗೆ ಗಂಭೀರ ಶಿಕ್ಷೆಗಳು:
ಹುಕ್ಕಾ ಬಾರ್ ನಡೆಸಿದರೆ: ₹1 ಲಕ್ಷದವರೆಗೆ ದಂಡ ಹಾಗೂ 3 ವರ್ಷಗಳವರೆಗೆ ಜೈಲು ಶಿಕ್ಷೆ.
ಸಾರ್ವಜನಿಕ ಸ್ಥಳದಲ್ಲಿ ತಂಬಾಕು ಸೇವನೆ ಮಾಡಿದರೆ: ₹1,000 ದಂಡ ವಿಧಿಸಲಾಗುತ್ತದೆ.
ಸಾಮಾಜಿಕ ಹಾಗೂ ಆರೋಗ್ಯ ದೃಷ್ಠಿಕೋನದಿಂದ ವಿಶ್ಲೇಷಣೆ:
ಈ ತಿದ್ದುಪಡಿಗಳು ಕೇವಲ ಕಾನೂನು ರೂಪದಲ್ಲಿ ಸೀಮಿತವಾಗದೆ, ಸಮಾಜದ ಆರೋಗ್ಯ ತಾಣವನ್ನು ಬಲಪಡಿಸುವ ಪೂರಕ ಕ್ರಮಗಳಾಗಿವೆ. ತಂಬಾಕು ಸೇವನೆಯಿಂದ ಉಂಟಾಗುವ ಹೃದಯರೋಗ, ಕ್ಯಾನ್ಸರ್ ಮತ್ತು ಶ್ವಾಸಕೋಶ ಸಮಸ್ಯೆಗಳನ್ನು ಕಡಿಮೆ ಮಾಡುವುದು ಇದರ ಲಕ್ಶ್ಯ. ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಸೇವನೆ (Tobacco intake) ತಡೆದರೆ ಶುದ್ಧ ವಾತಾವರಣವನ್ನು ಎಲ್ಲರಿಗೂ ಒದಗಿಸಬಹುದಾಗಿದೆ, ಇದು ಮಕ್ಕಳಿಗೆ ಮತ್ತು ಹಿರಿಯರಿಗೆ ಜೀವಸಂಕಟವನ್ನು ತಪ್ಪಿಸಬಲ್ಲದು.
ಪದವೀಧರರಿಂದ ಕಾರ್ಯರೂಪಕ್ಕೆ
ಆದೇಶ ಹೊರಡುವುದಷ್ಟೇ ಸಾಕಾಗದು. ಇದು ಸಾರ್ವಜನಿಕರ ಜಾಗೃತಿಯೊಂದಿಗೆ ಪರಿಣಾಮಕಾರಿ ಜಾರಿಗೊಳಿಸ ಬೇಕಾದ ವಿಷಯ. ಸಾರ್ವಜನಿಕರು ಇದರ ಕುರಿತು ಅರಿವು ಹೊಂದಬೇಕು ಮತ್ತು ತಾವು ಕೂಡ ಪಾಲಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಧೈರ್ಯವಾಗಿ ಉಲ್ಲಂಘನೆಗಳ ಕುರಿತು ದೂರು ನೀಡುವ ಸಂಸ್ಕೃತಿಯನ್ನು ಬೆಳೆಸಬೇಕಾಗಿದೆ.
ಕೊನೆಯದಾಗಿ ಹೇಳುವುದಾದರೆ, ರಾಜ್ಯ ಸರ್ಕಾರದ ಈ ಆದೇಶವು ತಂಬಾಕು ಮುಕ್ತ ಸಮಾಜ ನಿರ್ಮಾಣದ ದಾರಿಯಲ್ಲಿ ದೊಡ್ಡ ಹೆಜ್ಜೆಯಾಗಿದೆ. ಆರೋಗ್ಯವೇ ಮೂಲಧನವೆಂದರೆ, ಈ ತಿದ್ದುಪಡಿ ಆ ಮೂಲಧನವನ್ನು ರಕ್ಷಿಸುವ ಸೂಕ್ತ ಹೂಡಿಕೆಯಾಗಿದ್ದು, ಸರ್ಕಾರ ಹಾಗೂ ನಾಗರಿಕರಿಂದ ಸಮೂಹ ಸಹಭಾಗಿತ್ವದ ಅಗತ್ಯವಿದೆ.ಮತ್ತು ಇಂತಹ ಉತ್ತಮವಾದ ಮಾಹಿತಿಯನ್ನು ನೀವು ತಿಳಿದಮೇಲೆ ಈ ಮಾಹಿತಿಯನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

Sagari leads the ‘Government Schemes’ vertical at NeedsOfPublic.in, where she decodes the latest Central and State government policies for the common citizen. She has over 3 years of experience tracking welfare programs like PM Kisan, Ayushman Bharat, and State Ration updates. Her goal is to ensure every reader understands their eligibility and benefits without confusion. Sagari strictly verifies all updates from official government portals before publishing. Outside of work, she is an advocate for digital literacy in rural India.”
Connect with Sagari:


WhatsApp Group




