ಆಸ್ತಿ ನೋಂದಣಿಯಲ್ಲಿ ದೊಡ್ಡ ಬದಲಾವಣೆ: ಮೇ 26ರಿಂದ ಸಂಪೂರ್ಣ ಡಿಜಿಟಲ್ ವ್ಯವಸ್ಥೆ ಜಾರಿಗೆ
ಕರ್ನಾಟಕದಲ್ಲಿ ಆಸ್ತಿ ಮತ್ತು ಇತರ ದಾಖಲೆಗಳ ನೋಂದಣಿಯ ಪ್ರಕ್ರಿಯೆಯಲ್ಲಿ (In the process of registration of property and other documents) ಮಹತ್ವಪೂರ್ಣ ಬದಲಾವಣೆಯೊಂದು ಜಾರಿಗೆ ಬರಲಿದೆ. ರಾಜ್ಯ ಸರ್ಕಾರವು ತಾಂತ್ರಿಕ ಪ್ರಗತಿಯನ್ನು ಆಧಾರವಾಗಿ ಮಾಡಿ, ಕಡತಗಳ ಡಿಜಿಟಲೀಕರಣ ಮತ್ತು ದಾಖಲೆಗಳ ಸುರಕ್ಷತೆ (Digitalization and Documents safety) ಹಾಗೂ ಪಾರದರ್ಶಕತೆ ಗುರಿಯಾಗಿಸಿಕೊಂಡು, ಮೇ 26ರಿಂದ ಡಿಜಿಟಲ್ ನೋಂದಣಿಯನ್ನು ಕಡ್ಡಾಯಗೊಳಿಸಿದೆ. ಈ ಕ್ರಮದಿಂದ ನಕಲಿ ದಾಖಲೆಗಳು, ಭ್ರಷ್ಟಾಚಾರ, ಮತ್ತು ದೌರ್ಜನ್ಯ ತಪ್ಪಿಸಲು ನಿರೀಕ್ಷಿಸಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಈ ಕುರಿತು ಕಂದಾಯ ಇಲಾಖೆ (Department of Revenue) ತ್ವರಿತ ಕ್ರಮ ಕೈಗೊಂಡಿದ್ದು, ಕರ್ನಾಟಕ ಸ್ಟಾಂಪ್ (ತಿದ್ದುಪಡಿ) ಮಸೂದೆ-2025 ಅನ್ನು ಅಧಿಕೃತವಾಗಿ ಜಾರಿಗೆ ತರುವುದಾಗಿ ಆದೇಶ ಹೊರಡಿಸಿದೆ. ಇದರ ಪ್ರಕಾರ, ರಾಜ್ಯದ ಎಲ್ಲ ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ಡಿಜಿಟಲ್ ಸಹಿ ಮತ್ತು ಡಿಜಿಟಲ್ ಇ-ಸ್ಟಾಂಪ್ (Digital signature and digital e-stamp) ಬಳಕೆ ಅನಿವಾರ್ಯವಾಗಲಿದೆ. ಈಗಿರುವಂತೆ ಹಳೆಯ ಮಾದರಿಯ ಅಂಟಿಸುವ ಅಥವಾ ಮುದ್ರೆ ಹಾಕುವ ಸ್ಟಾಂಪ್‌ಗಳ ಬಳಕೆ ಸಂಪೂರ್ಣವಾಗಿ ನಿಲ್ಲಿಸಲಾಗುತ್ತದೆ.
ಪ್ರಮುಖ ಬದಲಾವಣೆಗಳು ಹೀಗಿವೆ:
ಇನ್ನು ಮುಂದೆ ಎಲ್ಲಾ ಆಸ್ತಿ ನೋಂದಣಿಗಳಿಗೆ ಡಿಜಿಟಲ್ ಸಹಿ ಕಡ್ಡಾಯವಾಗುತ್ತದೆ.
ಇ-ಸ್ಟಾಂಪ್‌ಗಳ ಮೊತ್ತವನ್ನು ಕೇವಲ ವಿದ್ಯುನ್ಮಾನ ಪಾವತಿ (online payment) ಮುಖಾಂತರವೇ ಮಾಡಬೇಕಾಗುತ್ತದೆ.
ಮ್ಯಾನ್ಯುವಲ್ ಸ್ಟಾಂಪ್ ವಿತರಣೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ, ಇದರಿಂದ ದಂಧೆ ತಡೆಗಟ್ಟಬಹುದು.
ಡಿಜಿಟಲ್ ಸಹಿಗೆ (Digital signature) ಹೆಚ್ಚಿನ ಭದ್ರತೆ ಒದಗಿಸಲು ಜಿಲ್ಲಾಧಿಕಾರಿ ಅಥವಾ ಪ್ರಾಧಿಕೃತ ಅಧಿಕಾರಿಯ ಸಹಿಯನ್ನು ಆಧಾರ್‌ಗೆ ಜೋಡಣೆ ಮಾಡಲಾಗುತ್ತದೆ. ಸಹಿ ದೃಢೀಕರಣೆ ಬಳಿಕ ಮಾತ್ರ ಡಿಜಿಟಲ್ ಸಹಿ ಕಾರ್ಯಗತವಾಗಲಿದೆ.
ಈ ಪ್ರಕ್ರಿಯೆಯಲ್ಲಿ ಬಯೊಮೆಟ್ರಿಕ್ (Biometric) ದೃಢೀಕರಣ ಕೂಡ ಅಂಶವಾಗಿದ್ದು, ಯಾವುದೇ ರೀತಿಯ ದುರ್ವಿನಿಯೋಗವನ್ನು ತಡೆಗಟ್ಟಲು ಸಹಾಯಕವಾಗುತ್ತದೆ.
ಈ ಹೊಸ ವ್ಯವಸ್ಥೆಯಿಂದ ಪಾರದರ್ಶಕತೆ, ದಕ್ಷತೆ ಮತ್ತು ಸುರಕ್ಷತೆ ಹೆಚ್ಚುವರಿಯಾಗಿ, ಸಾರ್ವಜನಿಕರಿಗೆ ತೊಂದರೆ ಇಲ್ಲದಂತೆ ನೇರ ಮತ್ತು ದಕ್ಷ ಸೇವೆ (Direct and efficient service) ಸಿಗಲಿದೆ ಎಂಬ ನಿರೀಕ್ಷೆಯಿದೆ. ಡಿಜಿಟಲ್ ಯುಗದತ್ತ ದಿಟ್ಟ ಹೆಜ್ಜೆಯನ್ನಿಟ್ಟಿರುವ ಈ ಕ್ರಮದಿಂದ ಸುತ್ತಮುತ್ತಲಿರುವ ದಾಖಲೆ ವ್ಯವಸ್ಥೆ ಹೊಸ ಆಯಾಮ ಪಡೆಯಲಿದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.