ಬೆಂಗಳೂರು: ರಾಜ್ಯ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಹೊಸ ಪಡಿತರ ಚೀಟಿ (ರೇಷನ್ ಕಾರ್ಡ್) ಅರ್ಜಿಗಳನ್ನು ಮತ್ತೆ ಸ್ವೀಕರಿಸಲು ಅನುಮತಿ ನೀಡಿದೆ. BPL (Below Poverty Line) ಮತ್ತು APL (Above Poverty Line) ಕಾರ್ಡ್ಗಳಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಸೌಲಭ್ಯವನ್ನು ಈಗ 01 ಮೇ 2025 ರಿಂದ 05 ಮೇ 2025 ರವರೆಗೆ ಮಾತ್ರ ನೀಡಲಾಗಿದೆ. ಅರ್ಹತೆ, ಅಗತ್ಯ ದಾಖಲೆಗಳು ಮತ್ತು ಅರ್ಜಿ ಸಲ್ಲಿಸುವ ಹಂತ-ಹಂತದ ಮಾರ್ಗದರ್ಶನ ಕೆಳಗೆ ನೀಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸುವ ಸಮಯ:
- ಆನ್ಲೈನ್ ಅರ್ಜಿ ಸಲ್ಲಿಸುವ ಅವಧಿ: 01-05-2025 ರಿಂದ 05-05-2025 (ಮಧ್ಯಾಹ್ನ 1:00 ರಿಂದ 3:00 ವರೆಗೆ ಮಾತ್ರ).
- ಯಾರು ಅರ್ಜಿ ಸಲ್ಲಿಸಬಹುದು?
- ಕರ್ನಾಟಕದ ಖಾಯಂ ನಿವಾಸಿಗಳು.
- ಹೊಸದಾಗಿ ಮದುವೆಯಾದ ದಂಪತಿಗಳು.
- ಪಡಿತರ ಚೀಟಿ ಇಲ್ಲದವರು.
- ಅರ್ಜಿ ಸಲ್ಲಿಸುವ ವಿಧಾನ: ahara.kar.nic.in ಮೂಲಕ ಆನ್ಲೈನ್ ಅರ್ಜಿ.
ಈ ಅವಕಾಶವನ್ನು ಬಳಸಿಕೊಂಡು, ಅರ್ಹರು ತಮ್ಮ ರೇಷನ್ ಕಾರ್ಡ್ ಅರ್ಜಿಯನ್ನು ಸಲ್ಲಿಸಿ, ಸರ್ಕಾರದಿಂದ ಸಬ್ಸಿಡಿ ಆಹಾರ ಪದಾರ್ಥಗಳು, ಕಿರಸನ್ ತೈಲ, ಮತ್ತು ಇತರ ಲಾಭಗಳನ್ನು ಪಡೆಯಬಹುದು.
ಹೊಸ BPL/APL ಕಾರ್ಡ್ ಅರ್ಹತೆ:
- ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿರಾಗಿರಬೇಕು.
- ಈಗಾಗಲೇ ಪಡಿತರ ಚೀಟಿ ಇಲ್ಲದ ವ್ಯಕ್ತಿಗಳು ಮಾತ್ರ ಅರ್ಜಿ ಸಲ್ಲಿಸಬಹುದು.
- ಹೊಸದಾಗಿ ಮದುವೆಯಾದ ದಂಪತಿಗಳು ಹೊಸ ಪಡಿತರ ಚೀಟಿಗೆ ಅರ್ಜಿ ಹಾಕಬಹುದು.
- ಕುಟುಂಬದ ಆದಾಯದ ಆಧಾರದ ಮೇಲೆ BPL ಅಥವಾ APL ಪಡಿತರ ನಿರ್ಧಾರವಾಗುತ್ತದೆ.
ಅಗತ್ಯ ದಾಖಲೆಗಳು:
- ಮತದಾರ ಐಡಿ (Voter ID)
- ಆಧಾರ್ ಕಾರ್ಡ್
- ವಯಸ್ಸಿನ ಪ್ರಮಾಣಪತ್ರ
- ಡ್ರೈವಿಂಗ್ ಲೈಸೆನ್ಸ್ (ಇದ್ದರೆ)
- ಇತ್ತೀಚಿನ ಪಾಸ್ಪೋರ್ಟ್ ಗಾತ್ರದ ಫೋಟೋ
- ಮೊಬೈಲ್ ನಂಬರ್
- ಸ್ವ-ಘೋಷಣಾ ಪ್ರಮಾಣಪತ್ರ
ಆನ್ಲೈನ್ ಅರ್ಜಿ ಸಲ್ಲಿಸುವ ವಿಧಾನ:
- ahara.kar.nic.in ಗೆ ಭೇಟಿ ನೀಡಿ.
- “ಇ-ಸೇವೆಗಳು” (E-Services) ವಿಭಾಗದಲ್ಲಿ ಕ್ಲಿಕ್ ಮಾಡಿ.
- “ಹೊಸ ಪಡಿತರ ಚೀಟಿ ಅರ್ಜಿ” ಲಿಂಕ್ ಆಯ್ಕೆಮಾಡಿ.
- ಬೇಕಾದ ಭಾಷೆ (ಕನ್ನಡ/ಇಂಗ್ಲಿಷ್) ಆರಿಸಿ, ಎಲ್ಲಾ ವಿವರಗಳನ್ನು ನಮೂದಿಸಿ.
- BPL ಅಥವಾ APL ಕಾರ್ಡ್ ಪ್ರಕಾರವನ್ನು ಆಯ್ಕೆಮಾಡಿ.
- ಅಗತ್ಯ ದಾಖಲೆಗಳ ಸ್ಕ್ಯಾನ್ ಕಾಪಿಗಳನ್ನು ಅಪ್ಲೋಡ್ ಮಾಡಿ.
- ಅಂತಿಮವಾಗಿ “ಸಬ್ಮಿಟ್” ಬಟನ್ ಒತ್ತಿ ಅರ್ಜಿ ಸಲ್ಲಿಸಿ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.