Picsart 25 09 15 23 58 08 3621 scaled

ಹೊಸ ಮಾರುತಿ ಕಾರು ಬಿಡುಗಡೆ..ಖರೀದಿಗೆ ಮುಗಿಬಿದ್ದ ಗ್ರಾಹಕರು, ಬೆಲೆ ಎಷ್ಟು ಗೊತ್ತಾ..? 

Categories:
WhatsApp Group Telegram Group

ಭಾರತೀಯ ಕಾರು ಮಾರುಕಟ್ಟೆಯಲ್ಲೇ ಹೆಚ್ಚು ನಿರೀಕ್ಷೆ ಹುಟ್ಟುಹಾಕಿರುವ ಕಾರುಗಳಲ್ಲಿ ಒಂದು ಎಂದರೆ ಮಾರುತಿ ಸುಜುಕಿ ವಿಕ್ಟೋರಿಸ್ (Maruti Suzuki Victoris). ಸೆಪ್ಟೆಂಬರ್ 15 ರಂದು ಇದರ ಬೆಲೆ ಘೋಷಣೆ ಹಾಗೂ ಅದ್ದೂರಿ ಬಿಡುಗಡೆ ನಡೆಯಲಿದ್ದು, ಈಗಾಗಲೇ ಡೀಲರ್‌ಶಿಪ್‌ಗಳ ಮುಂದೆ ಗ್ರಾಹಕರ ಹಂಗಾಮಿಯೇ ಕಾಣಿಸುತ್ತಿದೆ.

ಬೆಲೆ & ಬುಕ್ಕಿಂಗ್ ಹಾವಳಿ

ಕಂಪನಿಯು ವಿಕ್ಟೋರಿಸ್‌ಗಾಗಿ ರೂ. 11,000 ಮುಂಗಡ ಹಣ ಪಾವತಿಸಿ ಬುಕ್ಕಿಂಗ್ ಆರಂಭಿಸಿದ್ದು, ಪ್ರತಿದಿನ ಸರಾಸರಿ 1,000ಕ್ಕೂ ಹೆಚ್ಚು ಬುಕ್ಕಿಂಗ್‌ಗಳು ದಾಖಲಾಗುತ್ತಿವೆ. ಅಧಿಕೃತ ಮಾಹಿತಿಯ ಪ್ರಕಾರ, ಈ ಕಾರು ರೂ. 9.70 ಲಕ್ಷದಿಂದ 15 ಲಕ್ಷ (ಎಕ್ಸ್-ಶೋರೂಂ) ದರದ ಒಳಗೆ ಬಿಡುಗಡೆಯಾಗುವ ಸಾಧ್ಯತೆಯಿದೆ. ಕೈಗೆಟುಕುವ ದರದಲ್ಲೇ ಪ್ರೀಮಿಯಂ ವೈಶಿಷ್ಟ್ಯಗಳನ್ನು ಹೊಂದಿರುವುದೇ ಈ ಕಾರಿನ ದೊಡ್ಡ ಆಕರ್ಷಣೆ.

ವಿನ್ಯಾಸ ಮತ್ತು ಬಾಹ್ಯ ರೂಪ(Design and appearance):

ವಿಕ್ಟೋರಿಸ್ ತನ್ನ ವಿನ್ಯಾಸ ಮತ್ತು ಬಾಹ್ಯ ರೂಪದ ಮೂಲಕಲೇ ಗಮನ ಸೆಳೆಯುತ್ತದೆ. ಸಂಪೂರ್ಣ ಆಕರ್ಷಕ ಎಸ್‌ಯುವಿ ಶೈಲಿಯಲ್ಲಿ ರೂಪುಗೊಂಡಿರುವ ಈ ಕಾರು, ಆಧುನಿಕ ಲುಕ್ ನೀಡುವ LED ಹೆಡ್‌ಲ್ಯಾಂಪ್‌ಗಳು ಹಾಗೂ ಡಿಆರ್‌ಎಲ್‌ಗಳೊಂದಿಗೆ ಬರುತ್ತದೆ. ಶಾರ್ಕ್ ಫಿನ್ ಆಂಟೆನಾ(Shark fin antenna) ಅದರ ಸ್ಪೋರ್ಟಿ ಲುಕ್ ಹೆಚ್ಚಿಸಿದರೆ, 18 ಇಂಚಿನ ಅಲಾಯ್ ವೀಲ್‌ಗಳು ರಸ್ತೆಯಲ್ಲಿ ಅದಕ್ಕೆ ವಿಶಿಷ್ಟ ಹಾಜರಾತಿ ನೀಡುತ್ತವೆ. ಬಣ್ಣಗಳ ವಿಚಾರಕ್ಕೆ ಬಂದಾಗ, ಆರ್ಕ್ಟಿಕ್ ವೈಟ್(Arctic White), ಸಿಜ್ಲಿಂಗ್ ರೆಡ್(Sizzling Red), ಮ್ಯಾಗ್ಮಾ ಗ್ರೇ(Magma Grey) ಹಾಗೂ ಮಿಸ್ಟಿಕ್ ಗ್ರೀನ್(Mystic Green) ಎಂಬ ಆಕರ್ಷಕ ಶೇಡ್‌ಗಳ ಆಯ್ಕೆ ಗ್ರಾಹಕರಿಗೆ ಲಭ್ಯ. ಈ ವೈಶಿಷ್ಟ್ಯಗಳು ಅದನ್ನು ಯುವ ಜನತೆಗೆ ಇನ್ನಷ್ಟು ಆಕರ್ಷಕವಾಗಿಸುತ್ತವೆ.

ಎಂಜಿನ್ & ಪವರ್‌ಟ್ರೇನ್ ಆಯ್ಕೆಗಳು(Engine & Powertrain Options):

ವಿಕ್ಟೋರಿಸ್ ಎಂಜಿನ್ ಮತ್ತು ಪವರ್‌ಟ್ರೇನ್ ವಿಭಾಗದಲ್ಲಿ ಗ್ರಾಹಕರಿಗೆ ಮೂರು ವಿಭಿನ್ನ ಆಯ್ಕೆಗಳನ್ನು ಒದಗಿಸುತ್ತದೆ. ಇದರಲ್ಲಿ 1.5 ಲೀಟರ್ ಮೈಲ್ಡ್ ಹೈಬ್ರಿಡ್ ಪೆಟ್ರೋಲ್ ಎಂಜಿನ್, ಉತ್ತಮ ದಕ್ಷತೆಯನ್ನು ನೀಡುವ 1.5 ಲೀಟರ್ ಸ್ಟ್ರಾಂಗ್ ಹೈಬ್ರಿಡ್ (ಪೆಟ್ರೋಲ್ ಮತ್ತು ಎಲೆಕ್ಟ್ರಿಕ್) ತಂತ್ರಜ್ಞಾನ ಹಾಗೂ ಆರ್ಥಿಕವಾಗಿ ಪ್ರಯೋಜನಕಾರಿ 1.5 ಲೀಟರ್ CNG ಆಯ್ಕೆಗಳು ಲಭ್ಯವಿವೆ. ಈ ಮೂರು ಪವರ್‌ಟ್ರೇನ್ ಆವೃತ್ತಿಗಳು ಗ್ರಾಹಕರ ಅಗತ್ಯ ಮತ್ತು ಬಳಸುವ ಶೈಲಿಗೆ ತಕ್ಕಂತೆ ಸೂಕ್ತವಾದ ಪ್ರದರ್ಶನ ಹಾಗೂ ಮೈಲೇಜ್ ನೀಡಲು ವಿನ್ಯಾಸಗೊಳಿಸಲ್ಪಟ್ಟಿವೆ.

ಗೇರ್‌ಬಾಕ್ಸ್‌ಗಳಲ್ಲೂ ವೈವಿಧ್ಯತೆ ಹಾಗೂ ಮೈಲೇಜ್:

ವಿಕ್ಟೋರಿಸ್ ಕಾರಿನಲ್ಲಿ ಗೇರ್‌ಬಾಕ್ಸ್‌ಗಳ ವೈವಿಧ್ಯತೆಯನ್ನು ನೀಡಲಾಗಿದೆ. ಇದರಲ್ಲಿ 5-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಆಟೋಮೆಟಿಕ್ ಮತ್ತು e-CVT ಗೇರ್‌ಬಾಕ್ಸ್ ಆಯ್ಕೆಗಳು ಲಭ್ಯ. ಮೈಲೇಜ್ ದೃಷ್ಟಿಯಿಂದ ಇದು 19 ಕಿ.ಮೀ/ಲೀಟರ್ ರಿಂದ 28.65 ಕಿ.ಮೀ/ಲೀಟರ್ ವರೆಗೆ ಇಂಧನ ದಕ್ಷತೆಯನ್ನು ನೀಡುತ್ತದೆ. 45 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್ ಹೊಂದಿರುವ ಈ ಕಾರು, ಕಾರ್ಯಕ್ಷಮತೆಯಲ್ಲೂ ಗಮನಸೆಳೆಯುತ್ತದೆ. 0 ರಿಂದ 100 ಕಿ.ಮೀ/ಗಂ ವೇಗವನ್ನು ಕೇವಲ 12.9 ಸೆಕೆಂಡ್‌ಗಳಲ್ಲಿ ತಲುಪುತ್ತದೆ ಮತ್ತು ಗರಿಷ್ಠ 135 ಕಿ.ಮೀ/ಗಂ ವೇಗ ಸಾಧಿಸಬಲ್ಲದು.

ಒಳಾಂಗಣ & ತಂತ್ರಜ್ಞಾನ(Interior & Technology):

ಒಳಾಂಗಣ ಹಾಗೂ ತಂತ್ರಜ್ಞಾನ ವೈಶಿಷ್ಟ್ಯಗಳಲ್ಲೂ ವಿಕ್ಟೋರಿಸ್ ಅಗ್ರಗಣ್ಯವಾಗಿದೆ. 10.1 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ಪನೋರಮಿಕ್ ಸನ್‌ರೂಫ್, 64 ಕಲರ್ ಆಂಬಿಯೆಂಟ್ ಲೈಟಿಂಗ್ ಮತ್ತು ವೈರ್‌ಲೆಸ್ ಫೋನ್ ಚಾರ್ಜರ್ ಮುಂತಾದ ಸೌಲಭ್ಯಗಳು ಪ್ರಯಾಣಿಕರ ಅನುಭವವನ್ನು ಮತ್ತಷ್ಟು ಆರಾಮದಾಯಕ ಮತ್ತು ಆಧುನಿಕವಾಗಿಸುತ್ತದೆ.

ಸುರಕ್ಷಿತೆ(Safety):

ಮಾರುತಿ ಸುಜುಕಿ ವಿಕ್ಟೋರಿಸ್‌ ಸುರಕ್ಷತೆಯಲ್ಲಿ ಅತಿ ಉನ್ನತ ಮಾನದಂಡಗಳನ್ನು ಪಾಲಿಸಿಕೊಂಡು ಭಾರತ್ NCAP ನಿಂದ 5-ಸ್ಟಾರ್ ರೇಟಿಂಗ್ ಪಡೆಯಲಾಗಿದೆ.
ಈ ಕಾರಿನಲ್ಲಿ ಪ್ರಯಾಣಿಕರ ರಕ್ಷಣೆಗೆ 6 ಏರ್‌ಬ್ಯಾಗ್‌ಗಳನ್ನು ನೀಡಲಾಗಿದ್ದು, ತುರ್ತು ಪರಿಸ್ಥಿತಿಗಳಲ್ಲಿ ಚಾಲನೆಯನ್ನು ಸ್ಥಿರಗೊಳಿಸಲು Electronic Stability Control (ESC) ಸೌಲಭ್ಯವಿದೆ.

ಇದೇ ರೀತಿ, ಟೈರ್‌ಗಳ ಸ್ಥಿತಿ ಮತ್ತು ಗಾಳಿಯ ಒತ್ತಡವನ್ನು ಗಮನಿಸಲು Tyre Pressure Monitoring System (TPMS) ಅಳವಡಿಸಲಾಗಿದೆ. ತೀವ್ರ ಬ್ರೇಕ್ ಹೊಡೆಯುವ ಸಂದರ್ಭಗಳಲ್ಲಿ ABS + EBD ವ್ಯವಸ್ಥೆ ಕಾರ್ಯನಿರ್ವಹಿಸಿ ವಾಹನದ ನಿಯಂತ್ರಣ ಕಾಪಾಡುತ್ತದೆ.

ಇದಕ್ಕೆ ಜೊತೆಗೆ, ಸ್ಮಾರ್ಟ್ ಡ್ರೈವಿಂಗ್ ಅನುಭವಕ್ಕಾಗಿ Advanced Driver Assistance Systems (ADAS) ಹಾಗೂ ಸುತ್ತಮುತ್ತಲಿನ ದೃಶ್ಯಾವಳಿಯನ್ನು ಸ್ಪಷ್ಟವಾಗಿ ತೋರಿಸುವ 360 ಡಿಗ್ರಿ ಕ್ಯಾಮೆರಾ ಕೂಡ ಲಭ್ಯ. ಸುರಕ್ಷತೆ ಮತ್ತು ತಂತ್ರಜ್ಞಾನವನ್ನು ಸಮತೋಲನಗೊಳಿಸಿರುವ ಈ SUV ನಿಜಕ್ಕೂ ಕುಟುಂಬ ಮತ್ತು ದೀರ್ಘ ಪ್ರಯಾಣಕ್ಕೆ ಸೂಕ್ತವಾಗಿದೆ.

ಗ್ರಾಹಕರ ನಿರೀಕ್ಷೆ & ಮಾರುಕಟ್ಟೆ ಪರಿಣಾಮ

ಇದೀಗಲೇ ಶೋರೂಮ್‌ಗಳ ಮುಂದೆ ಗ್ರಾಹಕರು ಸಾಲು ಕಟ್ಟಿ ನಿಂತಿರುವುದು, ವಿಕ್ಟೋರಿಸ್ ಎಷ್ಟು ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟುಹಾಕಿದೆ ಎಂಬುದಕ್ಕೆ ಸಾಕ್ಷಿ. ಮಾರುತಿ ಸುಜುಕಿ ಈಗಾಗಲೇ “ವಿಶ್ವಾಸಾರ್ಹತೆ ಮತ್ತು ಕಡಿಮೆ ನಿರ್ವಹಣಾ ವೆಚ್ಚ” ಎಂಬ ಹೆಸರು ಹೊಂದಿದೆ. ಅದಕ್ಕೆ ಜೊತೆ ಹೊಸ ತಲೆಮಾರದ ವಿನ್ಯಾಸ, ಹೈಬ್ರಿಡ್ ತಂತ್ರಜ್ಞಾನ ಹಾಗೂ ಆಕರ್ಷಕ ಬೆಲೆ ಸೇರಿಕೊಂಡಿರುವುದರಿಂದ ವಿಕ್ಟೋರಿಸ್ ಕಿಯಾ ಸೆಲ್ಟೋಸ್, ಹ್ಯೂಂಡೈ ಕ್ರೆಟಾ, ಟಾಟಾ ಹ್ಯಾರಿಯರ್ ಮುಂತಾದ ಮಾದರಿಗಳಿಗೆ ಬಲವಾದ ಸ್ಪರ್ಧೆ ನೀಡಬಹುದು.

ಒಟ್ಟಾರೆ, ಮಾರುತಿ ಸುಜುಕಿ ವಿಕ್ಟೋರಿಸ್ ಕೇವಲ ಹೊಸ ಕಾರಲ್ಲ, ಇದು ಕೈಗೆಟುಕುವ ಪ್ರೀಮಿಯಂ ಎಸ್‌ಯುವಿ ಸೆಗ್ಮೆಂಟ್‌ನಲ್ಲಿ ಕ್ರಾಂತಿ ತರಬಹುದಾದ ಮಾದರಿ. ಬೆಲೆ ಘೋಷಣೆಯ ಬಳಿಕ ಇದರ ಮಾರಾಟದಲ್ಲಿ ಭಾರೀ ಏರಿಕೆಯಾಗುವುದು ಖಚಿತ.

WhatsApp Image 2025 09 05 at 11.51.16 AM 12

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories