ದರ್ಶನ್(darshan) ಮಾದರಿಯಲ್ಲಿ ಜಾಮೀನು ಕೋರಿ ನೇಹಾ ಹತ್ಯೆ ಆರೋಪಿ ಫಯಾಜ್ ಮನವಿ, ಜಾಮೀನು ಸಿಕ್ತಾ? ಇಲ್ಲಿದೆ ವಿವರ

IMG 20250804 WA0011

WhatsApp Group Telegram Group

ಹುಬ್ಬಳ್ಳಿಯ(Huballi) ನೇಹಾ ಹತ್ಯೆ ಪ್ರಕರಣ ಮತ್ತೊಮ್ಮೆ ರಾಜ್ಯದ ಗಮನ ಸೆಳೆದಿದೆ. ಕಳೆದ ವರ್ಷ ನಡೆದಿದ್ದ ಈ ಭೀಕರ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಫಯಾಜ್(Accused Fayaz), ಇದೀಗ ಜಾಮೀನಿಗಾಗಿ ಕೋರ್ಟ್ ಬಾಗಿಲು ತಟ್ಟಿದ್ದಾನೆ. ವಿಶೇಷವೆಂದರೆ, ತನ್ನ ಜಾಮೀನು ಅರ್ಜಿಯಲ್ಲಿ ಫಯಾಜ್ ನಟ ದರ್ಶನ್ ಉದಾಹರಣೆ ಕೊಟ್ಟಿದ್ದಾನೆ. ರೇಣುಕಾಸ್ವಾಮಿ ಹತ್ಯೆ(Renukaswamy’s assassination) ಪ್ರಕರಣದಲ್ಲಿ ದರ್ಶನ್‌ಗೆ ನೀಡಿದಂತೆ ನನಗೂ ಜಾಮೀನು ನೀಡಿ ಎಂದು ಮನವಿ ಮಾಡಿದ್ದಾನೆ. ಈ ಬೆಳವಣಿಗೆ ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಫಯಾಜ್‌ನ ಜಾಮೀನು ಅರ್ಜಿ:

ಫಯಾಜ್ ತನ್ನ ಜಾಮೀನು ಅರ್ಜಿಯನ್ನು 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ(to the District and Sessions Court) ಸಲ್ಲಿಸಿದ್ದಾನೆ. ಅರ್ಜಿಯಲ್ಲಿ, ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿ ನಟ ದರ್ಶನ್‌ಗೆ ಹೇಗೆ ಜಾಮೀನು ಕೊಡಲಾಗಿದೆಯಲ್ಲಾ ಅದೇ ಮಾದರಿಯಲ್ಲಿ ನನಗೂ ಜಾಮೀನು ನೀಡಬೇಕು ಎಂದು ಕೇಳಿಕೊಂಡಿದ್ದಾನೆ. ಆದರೆ ನ್ಯಾಯಾಲಯ ಇಂದು ಜಾಮೀನು ಅರ್ಜಿ ತಿರಸ್ಕರಿಸಿದೆ.

ನೇಹಾ ತಂದೆಯ ಅಸಮಾಧಾನ:

ನೇಹಾ ಹತ್ಯೆಯಿಂದ ದುಃಖಿತರಾದ ತಂದೆ ನಿರಂಜನ್‌, ಫಯಾಜ್‌ನ ಮನವಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರು ಹೇಳುವಂತೆ,
“ನಟ ದರ್ಶನ್ ತನ್ನ ನಟನೆ ಮತ್ತು ಒಳ್ಳೆಯ ಕಾರ್ಯಗಳಿಂದ ಜನರಿಗೆ ಮಾದರಿ ಆಗಬೇಕಿತ್ತು. ಆದರೆ ಹತ್ಯೆ ಪ್ರಕರಣದಲ್ಲಿ ಇತರ ಅಪರಾಧಿಗಳಿಗೆ(criminals) ಮಾದರಿಯಾಗಿರುವುದು ನೋವು ತಂದಿದೆ. ನನ್ನ ಮಗಳ ಮೇಲೆ ನಡೆದ ಅನ್ಯಾಯ ಯಾರಿಗೂ ಆಗಬಾರದು. ಆದ್ದರಿಂದ ನನ್ನ ಮಗಳಿಗೆ ನ್ಯಾಯ ದೊರಕಲಿ ಎಂದು ಹೇಳಿದ್ದಾರೆ.

ನೇಹಾ ಹತ್ಯೆ ಪ್ರಕರಣದ ಹಿನ್ನೆಲೆ:

2024ರ ಏಪ್ರಿಲ್ 18ರಂದು ಸಂಜೆ 4:45ರ ಸುಮಾರಿಗೆ ಹುಬ್ಬಳ್ಳಿಯ ಹಿರೇಮಠ ಕಾಲೇಜು(Hiremath College) ವಿದ್ಯಾರ್ಥಿನಿ ನೇಹಾ(Neha) ಕಾಲೇಜಿನಿಂದ ಹೊರಬರುತ್ತಿದ್ದಾಗ, ಫಯಾಜ್ ಆಕೆಯ ಮೇಲೆ ದಾಳಿ ನಡೆಸಿದ್ದ. ಆಕೆಯ ಕುತ್ತಿಗೆ, ಹೊಟ್ಟೆ ಹಾಗೂ ಬೆನ್ನಿಗೆ ಚಾಕುವಿನಿಂದ ನಿರ್ದಯವಾಗಿ ಇರಿದು ಹತ್ಯೆಗೈದಿದ್ದ. ಬಳಿಕ ಆತ ಕಿಮ್ಸ್ ಆಸ್ಪತ್ರೆಯ(Kim’s Hospital) ಹಿಂಭಾಗದಲ್ಲಿ ಅಡಗಿ ಕುಳಿತಿದ್ದಾಗ ಬಂಧಿಸಲಾಗಿತ್ತು.

ಶಕ್ತಿಪೀಠದ ಪ್ರಾರ್ಥನೆಯತ್ತ ದರ್ಶನ್ ಕುಟುಂಬ:

ಇದರ ನಡುವೆಯೇ, ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜಾಮೀನಿನ ಬಳಿಕ ನಟ ದರ್ಶನ್ ಮತ್ತೆ ಸುದ್ದಿಯಲ್ಲಿದ್ದಾರೆ. ಜಾಮೀನು ತೀರ್ಪಿನ ಮುನ್ನ ದರ್ಶನ್, ಪತ್ನಿ ವಿಜಯಲಕ್ಷ್ಮಿಯೊಂದಿಗೆ ಭಾರತದ ಪ್ರಸಿದ್ಧ 51 ಶಕ್ತಿಪೀಠಗಳಲ್ಲಿ ಒಂದಾದ ಕಾಮಾಕ್ಯ ದೇವಿ ದೇಗುಲಕ್ಕೆ(Kamakya Devi Temple) ಭೇಟಿ ನೀಡಿದ್ದರು. ವಿಜಯಲಕ್ಷ್ಮಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಆ ಫೋಟೋ ಹಂಚಿಕೊಂಡು,
“ಹೆಚ್ಚಿನ ಜನರು ನಿಮ್ಮನ್ನು ಕೆಳಗಿಳಿಸಲು ಪ್ರಯತ್ನಿಸಿದರೆ, ದೇವರು ನಿಮ್ಮನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತಾನೆ. ದೇವರು ನಿಮಗೆ ಆಶೀರ್ವದಿಸಲಿ.”ಎಂದು ಬರೆದುಕೊಂಡಿದ್ದರು.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!