WhatsApp Image 2025 11 05 at 5.36.07 PM

ಮಲಬದ್ಧತೆಗೆ ಮ್ಯಾಜಿಕ್ ಕೇವಲ 72 ಗಂಟೆಗಳಲ್ಲಿ ಶಾಶ್ವತ ಪರಿಹಾರ

Categories:
WhatsApp Group Telegram Group

ಮಲಬದ್ಧತೆ ಇಂದು ಅನೇಕರಿಗೆ ಕಿರುಕುಳವಾಗಿದೆ. ಈ ಸಮಸ್ಯೆಯಿಂದ ತ್ವರಿತ ಪರಿಹಾರ ಪಡೆಯಲು ಬಹಳಷ್ಟು ಜನ ವಿರೇಚಕ ಮಾತ್ರೆಗಳನ್ನು ಅವಲಂಬಿಸುತ್ತಾರೆ. ಆದರೆ, ನಿರಂತರವಾಗಿ ಇವನ್ನು ಬಳಸಿದರೆ ದೇಹದ ನೈಸರ್ಗಿಕ ಕಾರ್ಯವಿಧಾನಕ್ಕೆ ಭಂಗ ಬರುವ ಸಾಧ್ಯತೆ ಇದೆ. ಇದರಿಂದ ಕರುಳಿನ ಸಮಸ್ಯೆಗಳು ಹೆಚ್ಚಾಗುವ ಅಪಾಯವೂ ಉಂಟು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ಇಂತಹ ಪರಿಸ್ಥಿತಿಯಲ್ಲಿ, ವಿರೇಚಕಗಳ ಬದಲು ನೈಸರ್ಗಿಕ ಆಹಾರ ಪದ್ಧತಿಯನ್ನು ಅನುಸರಿಸುವುದು ಉತ್ತಮ. ಸರಿಯಾದ ಆಹಾರವನ್ನು ಆರಿಸಿಕೊಂಡರೆ ಮಲಬದ್ಧತೆಯ ಸಮಸ್ಯೆಯನ್ನು ಸುಲಭವಾಗಿ ನಿವಾರಿಸಬಹುದು. ಪೌಷ್ಟಿಕಾಂಶ ತಜ್ಞೆ ಖುಷಿ ಛಾಬ್ರಾ ಅವರು ಇದಕ್ಕಾಗಿ ಒಂದು ಸರಳ ಮತ್ತು ಪರಿಣಾಮಕಾರಿ ನೈಸರ್ಗಿಕ ಪರಿಹಾರವನ್ನು ಸೂಚಿಸಿದ್ದಾರೆ.

ಮಾಡುವ ವಿಧಾನ:

ಒಂದು ಕಿವಿ ಹಣ್ಣನ್ನು ತೆಗೆದುಕೊಂಡು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಬೇಕು. ಇದರೊಂದಿಗೆ ಒಂದು ಚಮಚ ನೀರಿನಲ್ಲಿ ನೆನೆಸಿದ ಚಿಯಾ ಬೀಜ ಮತ್ತು ಒಂದು ಚಿಟಿಕೆ ದಾಲ್ಚಿನ್ನಿ ಪುಡಿಯನ್ನು ಸೇರಿಸಬೇಕು. ಈ ಮಿಶ್ರಣವನ್ನು ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಇದನ್ನು ತಿನ್ನುವುದು ಮೂರು ದಿನಗಳಿಗೆ ಮಾತ್ರ. ಇದರಿಂದ ಮಲಬದ್ಧತೆಯ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.

ಹೇಗೆ ಕೆಲಸ ಮಾಡುತ್ತದೆ?

ಕಿವಿ ಹಣ್ಣು: ಕಿವಿ ಹಣ್ಣಿನಲ್ಲಿ ‘ಆಕ್ಟಿನಿಡಿನ್’ ಎಂಬ ಕಿಣ್ವವಿದೆ. ಇದು ಪ್ರೋಟೀನ್ ಜೀರ್ಣಿಕೆಯಲ್ಲಿ ಸಹಾಯ ಮಾಡುತ್ತದೆ ಮತ್ತು ಕರುಳಿನ ಚಲನೆಯನ್ನು ಸರಿಪಡಿಸುತ್ತದೆ. ಹಣ್ಣಿನ ಸಿಪ್ಪೆಯಲ್ಲಿರುವ ನಾರು ಪದಾರ್ಥ ಮಲವನ್ನು ಮೃದುವಾಗಿಸಿ, ಅದರ ಪ್ರಮಾಣವನ್ನು ಹೆಚ್ಚಿಸಿ ವಿಸರ್ಜನೆ ಸುಲಭಗೊಳಿಸುತ್ತದೆ.

ಚಿಯಾ ಬೀಜ: ಚಿಯಾ ಬೀಜಗಳು ಕರುಳಿನ ಆರೋಗ್ಯದ ಸ್ನೇಹಿತ. ಇವುಗಳಲ್ಲಿರುವ ನಾರು ಕರುಳಿನಲ್ಲಿ ಉತ್ತಮ ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ನೀರಿನಲ್ಲಿ ನೆನೆಸಿದ ಚಿಯಾ ಬೀಜಗಳು ಜೆಲ್ ಆಕಾರ ತಾಳಿ, ಕರುಳಿನ ಒಳಗಿನ ಭಾಗವನ್ನು ನೇರಳಿಸಿ ಮಲ ವಿಸರ್ಜನೆಯನ್ನು ಸುಗಮಗೊಳಿಸುತ್ತವೆ. ಇವು ಒಮೆಗಾ-3 ಫ್ಯಾಟಿ ಆಮ್ಲಗಳಿಂದಲೂ ಸಮೃದ್ಧವಾಗಿವೆ.

ದಾಲ್ಚಿನ್ನಿ: ದಾಲ್ಚಿನ್ನಿಯಲ್ಲಿ ಉರಿಯೂತ ಕಡಿಮೆ ಮಾಡುವ ಗುಣವಿದೆ. ಇದು ಜೀರ್ಣಕ್ರಿಯೆಯನ್ನು ಉತ್ತೇಜಿಸಿ, ಕರುಳಿನ ನಯವಾದ ಚಲನೆಗೆ ಬೆಂಬಲ ನೀಡುತ್ತದೆ. ಇದರಿಂದಾಗಿ ಉದರದ ಉಬ್ಬಲಿಕೆ ಮತ್ತು ಅಸ್ವಸ್ಥತೆಯಂತಹ ಸಮಸ್ಯೆಗಳು ಕಡಿಮೆಯಾಗುತ್ತವೆ.

ಈ ಮೂರು ಪದಾರ್ಥಗಳ ಸಂಯೋಜನೆ ಕರುಳಿಗೆ ನೀರಿನ ಪೂರೈಕೆ ಮಾಡಿ, ಅದರಲ್ಲಿನ ಉಪಯುಕ್ತ ಬ್ಯಾಕ್ಟೀರಿಯಾಗಳನ್ನು ಪೋಷಿಸುತ್ತದೆ. ಇದರಿಂದ ಯಾವುದೇ ರಾಸಾಯನಿಕ ವಿರೇಚಕಗಳ ಸಹಾಯ ಇಲ್ಲದೆ ನೈಸರ್ಗಿಕವಾಗಿ ಮಲಬದ್ಧತೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಗಮನಿಸಬೇಕಾದ ಅಂಶ:

ಈ ಮಿಶ್ರಣವನ್ನು ಸೇವಿಸುವಾಗ, ದಿನವಿಡೀ ಸಾಕಷ್ಟು ನೀರು ಕುಡಿಯುವುದು ಅತಿ ಮುಖ್ಯ. ನೀರಿನ ಕೊರತೆ ಇದ್ದರೆ ಈ ಪದ್ಧತಿಯ ಪರಿಣಾಮ ಕಡಿಮೆ ಆಗಬಹುದು. ಆದ್ದರಿಂದ ದೇಹವನ್ನು ಚನ್ನಾಗಿ ನೀರಾವರಿ ಮಾಡಿಕೊಂಡರೆ ಮಾತ್ರ ಈ ನೈಸರ್ಗಿಕ ಚಿಕಿತ್ಸೆಯ ಪೂರ್ಣ ಲಾಭ ಪಡೆಯಬಹುದು.

WhatsApp Image 2025 09 05 at 11.51.16 AM 12

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories