ಇಲಿಗಳ ಕಾಟಕ್ಕೆ ನೈಸರ್ಗಿಕ ಪರಿಹಾರಗಳು: ಸುರಕ್ಷಿತ ಮತ್ತು ಪರಿಣಾಮಕಾರಿ ವಿಧಾನಗಳು

Picsart 25 08 06 23 05 43 067

WhatsApp Group Telegram Group

ಮನೆಯಲ್ಲಿ ಇಲಿಗಳ(mouse) ಕಾಟವು ಅನೇಕ ಕುಟುಂಬಗಳಿಗೆ ದಿನನಿತ್ಯದ ತಲೆನೋವಾಗಿರುತ್ತದೆ. ಇವು ಸಣ್ಣ ಜೀವಿಗಳಾದರೂ, ಉಂಟುಮಾಡುವ ಹಾನಿ ಅಪಾರ. ಅಡುಗೆ ಮನೆಯಲ್ಲಿ ಆಹಾರ ಪದಾರ್ಥಗಳನ್ನು ಕಚ್ಚುವುದು, ಬಟ್ಟೆ ಹಾಗೂ ಪುಸ್ತಕಗಳನ್ನು ಹಾಳು ಮಾಡುವುದು, ಮನೆಮೇಲ್ಚಾವಣಿ ಅಥವಾ ಗೋಡೆಗಳೊಳಗಿನ ವಿದ್ಯುತ್ ತಂತಿಗಳನ್ನು ಕಚ್ಚಿ ಶಾರ್ಟ್ ಸರ್ಕ್ಯೂಟ್ ಹಾಗೂ ಬೆಂಕಿ ಅಪಘಾತಗಳಿಗೆ ಕಾರಣವಾಗುವುದು. ಇವೆಲ್ಲವೂ ಇಲಿಗಳ ಸಾಮಾನ್ಯ ಕೃತ್ಯಗಳು. ಇದಲ್ಲದೆ, ಟೈಫಾಯ್ಡ್, ಲೆಪ್ಟೋಸ್ಪಿರೋಸಿಸ್, ಪ್ಲೇಗ್ ಮುಂತಾದ ಅನೇಕ ರೋಗಗಳನ್ನು ಹರಡುವ ಸಾಮರ್ಥ್ಯವೂ ಇವುಗಳಿಗೆ ಇದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಬಹುತೇಕರು ಈ ಕಾಟದಿಂದ ಮುಕ್ತಿ ಪಡೆಯಲು ಮಾರುಕಟ್ಟೆಯ ರಾಸಾಯನಿಕ ವಿಷಗಳನ್ನು ಬಳಸುತ್ತಾರೆ. ಆದರೆ ಅವು ಮಕ್ಕಳಿಗೆ, ಸಾಕುಪ್ರಾಣಿಗಳಿಗೆ(pets), ಹಾಗೂ ಪರಿಸರಕ್ಕೂ ಅಪಾಯಕಾರಿಗಳು. ಇಂತಹ ಸಂದರ್ಭದಲ್ಲಿ ನೈಸರ್ಗಿಕ ಹಾಗೂ ಸುರಕ್ಷಿತ ವಿಧಾನಗಳು ಉತ್ತಮ ಪರಿಹಾರವಾಗುತ್ತವೆ. ಇಲ್ಲಿವೆ ಮನೆಯಲ್ಲಿ ಇಲಿಗಳನ್ನು ಓಡಿಸಲು ಕೆಲವು ಪರಿಣಾಮಕಾರಿ ನೈಸರ್ಗಿಕ ಮಾರ್ಗಗಳು. ಆ ಮಾರ್ಗಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

1. ಬೆಳ್ಳುಳ್ಳಿಯ(Garlic) ಬಲವಾದ ವಾಸನೆ:

ಬೆಳ್ಳುಳ್ಳಿಯ ತೀವ್ರ ವಾಸನೆಯನ್ನು ಇಲಿಗಳು ಸಹಿಸಲು ಸಾಧ್ಯವಿಲ್ಲ.
ಬೆಳ್ಳುಳ್ಳಿಯ ಎಸಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ, ಇಲಿಗಳು ಓಡಾಡುವ ಹಾದಿಗಳಲ್ಲಿ ಇಡಿ.
ಅಥವಾ, ಬೆಳ್ಳುಳ್ಳಿ ಪೇಸ್ಟ್ ಮತ್ತು ನೀರಿನ ದ್ರಾವಣವನ್ನು ಮನೆಯ ಮೂಲೆಗಳಲ್ಲಿ, ಬಾಗಿಲು-ಕಿಟಕಿಗಳ ಬಳಿ ಸಿಂಪಡಿಸಬಹುದು.
ಇದು ಇಲಿಗಳನ್ನು ಆ ಸ್ಥಳಗಳಿಗೆ ಬರುವುದನ್ನು ತಡೆಯುತ್ತದೆ.

2. ಕರ್ಪೂರ ಮತ್ತು ಲವಂಗದ ಮಿಶ್ರಣ(Camphor and cloves):

ಕರ್ಪೂರ ಮತ್ತು ಲವಂಗದ ಪ್ರಬಲ ವಾಸನೆ ಇಲಿಗಳಿಗೆ ಅಸಹ್ಯಕರ.
ಕೆಲವು ಕರ್ಪೂರದ ತುಂಡುಗಳು ಮತ್ತು ಲವಂಗಗಳನ್ನು ಸಣ್ಣ ಬಟ್ಟೆಯ ಚೀಲಗಳಲ್ಲಿ ಕಟ್ಟಿ ಕಿಟಕಿ, ಬಾಗಿಲು ಹಾಗೂ ಇಲಿಗಳು ಪ್ರವೇಶಿಸುವ ಸ್ಥಳಗಳಲ್ಲಿ ಇಡಿ.
ವಾಸನೆಯಿಂದ ಇಲಿಗಳು ಹತ್ತಿರ ಬರುವುದೇ ಇಲ್ಲ.

3. ಅಡಿಗೆ ಸೋಡಾ ಹಾಗೂ ಡಿಟರ್ಜೆಂಟ್(Baking soda and detergent) ಉಂಡೆಗಳು:

ಅಡಿಗೆ ಸೋಡಾ ತಿಂದ ಬಳಿಕ ಇಲಿಗಳ ಹೊಟ್ಟೆಯಲ್ಲಿ ಅನಿಲ ಉತ್ಪತ್ತಿಯಾಗಿ ಅವುಗಳಿಗೆ ಅಸ್ವಸ್ಥತೆ ಉಂಟಾಗುತ್ತದೆ.
ಹಿಟ್ಟು ಅಥವಾ ಸಕ್ಕರೆಯೊಂದಿಗೆ ಬೆರೆಸಿ ಅಡಿಗೆ ಸೋಡಾದ ಸಣ್ಣ ಉಂಡೆಗಳನ್ನು ಮಾಡಿ, ಇಲಿಗಳು ಓಡಾಡುವ ಸ್ಥಳಗಳಲ್ಲಿ ಇಡಿ.
ಗೋಧಿ ಹಿಟ್ಟು, ಸ್ವಲ್ಪ ಸಕ್ಕರೆ, ತುಪ್ಪ ಹಾಗೂ ಡಿಟರ್ಜೆಂಟ್ ಪುಡಿಯೊಂದಿಗೆ ಸಣ್ಣ ಉಂಡೆಗಳನ್ನು ಮಾಡಬಹುದು.
ಇವುಗಳನ್ನು ತಿಂದ ನಂತರ, ಇಲಿಗಳು ತೊಂದರೆ ಅನುಭವಿಸಿ ಮನೆಯಿಂದ ಓಡಿಹೋಗುತ್ತವೆ.

4. ಕೆಂಪು ಮೆಣಸಿನ ಪುಡಿಯ(red chili powder) ಶಕ್ತಿ :

ಕೆಂಪು ಮೆಣಸಿನ ಪುಡಿಯ ವಾಸನೆ ಮತ್ತು ರುಚಿ ಇಲಿಗಳಿಗೆ ತುಂಬಾ ಅಸಹ್ಯ.
ಇಲಿಗಳು ಓಡಾಡುವ ಹಾದಿಗಳಲ್ಲಿ ನೇರವಾಗಿ ಮೆಣಸಿನ ಪುಡಿಯನ್ನು ಸಿಂಪಡಿಸಬಹುದು.
ಅಥವಾ, ತುಪ್ಪ ಮತ್ತು ಹಿಟ್ಟಿನೊಂದಿಗೆ ಬೆರೆಸಿ ಮೆಣಸಿನ ಪುಡಿಯ ಸಣ್ಣ ಉಂಡೆಗಳನ್ನು ಮಾಡಿ ಇಡಿ.
ಇವುಗಳಿಂದ ಇಲಿಗಳು ಮನೆಯಲ್ಲಿ ಉಳಿಯಲು ಬಯಸುವುದಿಲ್ಲ.

ಒಟ್ಟಾರೆಯಾಗಿ, ಈ ನೈಸರ್ಗಿಕ ವಿಧಾನಗಳನ್ನು ನಿಯಮಿತವಾಗಿ ಅನುಸರಿಸಿದರೆ, ಯಾವುದೇ ವಿಷಕಾರಿ ರಾಸಾಯನಿಕಗಳನ್ನು(Toxic chemicals) ಬಳಸದೆಯೇ ಇಲಿಗಳ ಕಾಟದಿಂದ ಮುಕ್ತಿ ಪಡೆಯಬಹುದು. ಇವು ಸುರಕ್ಷಿತ, ಅಗ್ಗ ಹಾಗೂ ಪರಿಸರ ಸ್ನೇಹಿ ಪರಿಹಾರವಾಗಿವೆ. ಈಗಲೇ ಪ್ರಯತ್ನಿಸಿ  ಇಲಿಗಳು ಜನ್ಮದಲ್ಲಿಯೇ ನಿಮ್ಮ ಮನೆ ಹತ್ತಿರ ಬರುವುದಿಲ್ಲ!

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!