ಕೊರೋನಾ ನಂತರ ಮತ್ತೊಂದು ಸೋಂಕು, ಇದೀಗ MPOX ಸರದಿ! ಯಾವುದು ಈ ವೈರಸ್, ಲಕ್ಷಣಗಳೇನು?
ಕೆಲವು ಸಮಯದ ಹಿಂದೆ ಕೊರೋನಾ ಎಂಬ ಮಹಾ ಮಾರಿ ಸೋಂಕು ಇಡೀ ಪ್ರಪಂಚವನ್ನೇ ಅವರಿಕೊಂಡಿತ್ತು. ಈ ಒಂದು ಕೊರೋನಾ (Corona )ಎಂಬ ವೈರಸ್ ನಿಂದ ಬಹಳಷ್ಟು ಕಷ್ಟ ನೋವುವನ್ನು ಎದುರಿಸಿದ್ದು ಆಯಿತು. ಅಷ್ಟೇ ಅಲ್ಲದೆ ಸಾವಿರ ಸಾವಿರ ಜನರು ತಮ್ಮ ಪ್ರಾಣವನ್ನು ಕಳೆದುಕೊಂಡರು. ಹಾಗೆಯೇ ದೇಶದ ಮೇಲೆ ದೊಡ್ಡ ಪ್ರಮಾಣದ ಹೊಡೆತ ಬಿದ್ದು ಹಲವಾರು ತೊಂದರೆಗಳು ಎದುರಾಗಿವೆ. ಈಗಷ್ಟೇ ಕೊರೋನಾ ಎಂಬ ಮಹಾ ಮಾರಿ ಇಂದ ಎಚ್ಚೆತ್ತುಕೊಂಡು ಮತ್ತೆ ಇದೀಗ ಹೊಸದೊಂದು ವೈರಸ್ ಬೆನ್ನು ಹತ್ತಿದೆ. ಅದು ಯಾವ ವೈರಸ್ ಅದರ ಲಕ್ಷಣಗಳೇನು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
Mpox ವೈರಸ್ ಅಥವಾ ಮಂಕಿಪಾಕ್ಸ್ :
ಕೋರೊನಾ ವೈರಸ್ ನಂತರ ಇಡೀ ಪ್ರಪಂಚವನ್ನ ಆತಂಕಕ್ಕೆ ದೂಡಿರುವ ಮತ್ತೊಂದು ವೈರಸ್ ಇದೀಗ ನಮ್ಮನ್ನು ಆವರಿಸಿಕೊಂಡಿದ್ದು, ಇದನ್ನು Mpox ವೈರಸ್ ಅಥವಾ ಮಂಕಿಪಾಕ್ಸ್ (monkeypox) ಎಂದು ಗುರುತಿಸಲಾಗಿದೆ. ಇದು ಕೂಡ ವೈರಲ್ ಸೋಂಕು ಎಂದು ತಿಳಿದು ಬಂದಿದೆ. ಇದೊಂದು ಸಾಂಕ್ರಾಮಿಕ ಕಾಯಿಲೆಯಾಗಿದ್ದು, ಮೊದಲಿಗೆ ಕಂಡಬಂದಿದ್ದು ಆಫ್ರಿಕನ್ ಪ್ರದೇಶಗಳಲ್ಲಿ ಎಂದು ತಿಳಿದು ಬಂದಿದೆ.
ವೇಗವಾಗಿ ಹರಡುವ ಸೋಂಕು ಇದಾಗಿದೆ :
WHO ಹೇಳಿರುವ ಪ್ರಕಾರ, ಸೋಂಕಿತ ವ್ಯಕ್ತಿಯೊಂದಿಗೆ ನಿಕಟ ಸಂಪರ್ಕ ಹೊಂದಿದವರಿಗೆ ಈ ವೈರಸ್ ಹರಡಬಹುದು. ಸೋಂಕಿತರ ಚರ್ಮದಿಂದ, ಸೀನು ಮತ್ತು ಕೆಮ್ಮಿನಿಂದ ಅಥವಾ ಜನನಾಂಗಗಳ ನೇರ ಸಂಪರ್ಕವಿದ್ದರೆ ಅದು ವ್ಯಕ್ತಿಯಿಂದ ವ್ಯಕ್ತಿಗೆ ವೇಗವಾಗಿ ಹರಡುತ್ತದೆ. ಇದು ಪ್ರಾಣಿಗಳಿಂದ ಮನುಷ್ಯರಿಗೂ ಕೂಡ ಹರಡಬಹುದು. ಒಟ್ಟಾರೆ ಕೊರೋನಾ ಎಂಬ ಸೋಂಕಿನಂತೆ ವೇಗವಾಗಿ ಹರಡುವ ವೈರಸ್ ಇದಾಗಿದೆ.
ಹಲವಾರು ದೇಶಗಳಲ್ಲಿ ಈ ಸೋಂಕು ಪತ್ತೆ, ಹೆಲ್ತ್ ಎಮರ್ಜೆನ್ಸಿ (Health Emergency) ಘೋಷಣೆ :
ಆದರೆ ಇದೀಗ, ಕೇವಲ ಆಫ್ರಿಕಾ ಮಾತ್ರವಲ್ಲದೆ ಸ್ವೀಡನ್, ಪಾಕಿಸ್ತಾನ ದೇಶಗಳಲ್ಲೂ ಈ ವೈರಸ್ ಪತ್ತೆಯಾಗಿದ್ದು, ವಿಶ್ವ ಆರೋಗ್ಯ ಸಂಸ್ಥೆ ಈಗಾಗಲೇ ಹೆಲ್ತ್ ಎಮರ್ಜೆನ್ಸಿ ಘೋಷಣೆ ಮಾಡಿದೆ.
mpox ವೈರಸ್ ಸೋಂಕಿನ ರೋಗ ಲಕ್ಷಣಗಳು :
ಈ ಸೋಂಕಿಗೆ ಒಳಗಾದ ನಂತರ, ಸೋಂಕಿತರಲ್ಲಿ ರೋಗಲಕ್ಷಣಗಳು ಕಂಡುಬರಲು ಕೆಲವು ದಿನಗಳು ಅಥವಾ ವಾರಗಳು ತೆಗೆದುಕೊಳ್ಳಬಹುದು. mpox ವೈರಸ್ ಸೋಂಕಿನ ರೋಗ ಲಕ್ಷಣಗಳು ಹೀಗಿವೆ :
ಮೈಯಲ್ಲಿ ದದ್ದುಗಳು ಕಾಣಿಸಿಕೊಳ್ಳುವುದು
ಜ್ವರ ಬರುವುದು
ವಿನಾಕಾರಣ ಆಯಾಸ ಎನಿಸುವುದು
ಸ್ನಾಯು ನೋವು
ಇವುಗಳು ಈ ಸೋಂಕಿನ ಪ್ರಮುಖ ರೋಗ ಲಕ್ಷಣಗಳಾಗಿದೆ. ಈ ರೋಗಲಕ್ಷಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು, ಕೆಲವರಿಗೆ ಕೇವಲ ಕೆಂಪು ದದ್ದುಗಳು ಉಂಟಾಗಬಹುದು, ಕೆಲವರಲ್ಲಿ ಕೇವಲ ಜ್ವರ ಕಾಣಿಸಿಕೊಳ್ಳಬಹುದು
ಸದ್ಯ ಇದಕ್ಕೆ ನಿರ್ದಿಷ್ಟವಾದ ವ್ಯಾಕ್ಸಿನ್ (vaccin) ಇಲ್ಲದಿದ್ದರೂ,ಈ ವೈರಸ್ ಪತ್ತೆಯಾದವರಿಗೆ ಆಂಟಿವೈರಲ್‌ಗಳನ್ನು (antiviral) ನೀಡಲಾಗುತ್ತಿದೆ. ಹಾಗಾಗಿ ಸದ್ಯ ಸೋಂಕಿತರಿಂದ ಅಂತರ ಕಾಯ್ದುಕೊಳ್ಳುವುದು, ವೈರಸ್ ಹರಡದ ಹಾಗೆ ತಡೆಗಟ್ಟುವುದೇ ಸದ್ಯ ಇರುವ ಏಕೈಕ ಮಾರ್ಗೋಪಾಯ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group




