ಜುಲೈ ತಿಂಗಳು ಮುಗಿದು ಆಗಸ್ಟ್ ಬಂದರೂ ಖಾತೆ ಗೆ ಬರದ ಹಣ: ಗೃಹಲಕ್ಷ್ಮಿ ಯೋಜನೆ ವಿರುದ್ಧ ಮಹಿಳೆಯರ ಆಕ್ರೋಶ; ವ್ಯಕ್ತ ಪಡಿಸುತ್ತಿದ್ದಾರೆ ಈ ವಿಳಂಬಕ್ಕೆ ಕಾರಣ ನೀಡಿದ ಅಧಿಕಾರಿಗಳು ಏನು ಹೇಳಿದ್ದಾರೆ ಅಂತಾ ಈ ಲೇಖನದಲ್ಲಿ ತಿಳಿಯೋಣ,
ಸರ್ಕಾರದ ಗೃಹ ಲಕ್ಷ್ಮಿ ಯೋಜನೆ ಮುಖಾಂತರ ಕುಟುಂಬದ ಮಹಿಳಾ ಯಜಮಾನಿಗೆ ಮಾಸಿಕ 2,000 ರೂ. ನೀಡಲಾಗುತ್ತದೆ. ಮೂರು ತಿಂಗಳು ಕಳೆದರೂ ತಾಂತ್ರಿಕ ದೋಷಗಳು ಮಾತ್ರ ಬಗೆಹರಿದಿಲ್ಲ ಕಳೆದ ಜೂನ್ ತಿಂಗಳಲ್ಲಿ 20 ನೇ ಕಂತಿನ ಹಣ ಜಮಾ ಮಾಡಿದ್ದಾರೆ .. ಹಾಗಿದ್ದರೆ 21ನೇ ಕಂತಿನ ಹಣ ಯಾವಾಗ ಜಮಾ ಆಗುತ್ತದೆ ?ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ತಾಲೂಕು ಕಚೇರಿಗೆ ಮಹಿಳೆಯರ ಅಲೆದಾಟ
ಬೆಂಗಳೂರು : ರಾಜ್ಯ ಸರ್ಕಾರ (Karnataka Government) ಮಹತ್ವದ ಯೋಜನೆಗಳಲ್ಲಿ ಒಂದಾದ ಗೃಹ ಲಕ್ಷ್ಮೀ (Gruha Lakshmi) ಯೋಜನೆ ವಿರುದ್ಧ ರಾಜ್ಯದ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಲವಾರು ಮಹಿಳೆಯರು ತಮ್ಮ ತಮ್ಮ ತಾಲೂಕಿನ ಮಹಿಳಾ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಹಣ ಜಮಾ ಆಗುವ ಬಗ್ಗೆ ಕೇಳಲಿಕ್ಕೆ ಅಲೆದಾಡುತ್ತಿದ್ದಾರೆ. ಅಲ್ಲದೆ ನಮಗೆ 20ನೇ ಕಂತಿನ ಹಣ ಕೂಡಾ ಬಂದಿಲ್ಲ. ಹಣದ ಸಂಬಂಧ ನಾವು ಅಲೆದಾಡುತ್ತಿದ್ದೇವೆ. ಯಾವಾಗ ಬಂದರೂ ಅದು ಸರಿಯಿಲ್ಲ ಇದು ಸರಿಯಿಲ್ಲ ಅಂತ ಅಧಿಕಾರಿಗಳು ಹೇಳುತ್ತಿದ್ದಾರೆ. ಹೀಗಾದರೆ ನಮಗೆ ಗೃಹಲಕ್ಷ್ಮೀ ಯೋಜನೆ 20ನೇ ಕಂತಿನ ಹಣ ಬರುವುದು ಯಾವಾಗ? ಅಂತ ಮಹಿಳೆಯರ ಅಳಲು ತೋಡಿಕೊಂಡಿದ್ದಾರೆ.
ಕಂತು | ಸಂಬಂಧಿಸಿದ ತಿಂಗಳು | ಸ್ಥಿತಿ | ಬಿಡುಗಡೆ ದಿನಾಂಕ |
---|---|---|---|
24ನೇ ಕಂತು | ಜುಲೈ 2025 | ಬಾಕಿ ಉಳಿದಿದೆ | ನವೀಕರಿಸಲಾಗುವುದು |
23ನೇ ಕಂತು | ಜೂನ್ 2025 | ಬಾಕಿ ಉಳಿದಿದೆ | ನವೀಕರಿಸಲಾಗುವುದು |
22ನೇ ಕಂತು | ಮೇ 2025 | ಬಾಕಿ ಉಳಿದಿದೆ | ನವೀಕರಿಸಲಾಗುವುದು |
21ನೇ ಕಂತು | ಏಪ್ರಿಲ್ 2025 | ಬಾಕಿ ಉಳಿದಿದೆ | ನವೀಕರಿಸಲಾಗುವುದು |
20ನೇ ಕಂತು | ಮಾರ್ಚ್ 2025 | ಪೂರ್ಣಗೊಂಡಿದೆ | 05-06-2025 |
19ನೇ ಕಂತು | ಫೆಬ್ರವರಿ 2025 | ಪೂರ್ಣಗೊಂಡಿದೆ | 17-05-2025 |
18ನೇ ಕಂತು | ಜನವರಿ 2025 | ಪೂರ್ಣಗೊಂಡಿದೆ | 30-03-2025 |
17ನೇ ಕಂತು | ಡಿಸೆಂಬರ್ 2024 | ಪೂರ್ಣಗೊಂಡಿದೆ | 11-03-2025 |
16ನೇ ಕಂತು | ನವೆಂಬರ್ 2024 | ಪೂರ್ಣಗೊಂಡಿದೆ | 26-02-2025 |
21ನೇ ಕಂತಿನ ಹಣ ಜಮಾವಣೆ ವಿಳಂಬಕ್ಕೆ ಕಾರಣ ನೀಡಿದ ಅಧಿಕಾರಿಗಳು
ಅಧಿಕಾರಿಗಳ ಪ್ರಕಾರ ಸುಮಾರು ಮಹಿಳೆಯರು ಇನ್ನೂ ಯೋಜನೆಯ ಪ್ರಯೋಜನಗಳನ್ನು ಪಡೆದಿಲ್ಲ. ಬ್ಯಾಂಕ್ ಖಾತೆಗಳಿಗೆ ಆಧಾರ್ ಕಾರ್ಡ್‌ಗಳನ್ನು ಲಿಂಕ್ ಮಾಡದಿರುವುದು, ಪಾಸ್ಬುಕ್ನಲ್ಲಿರುವ ಹೆಸರಿಗೂ ಮತ್ತು ಆಧಾರ್ ಕಾರ್ಡ್ನಲ್ಲಿರುವ ಹೆಸರಿಗೂ ಹೊಂದಾಣಿಕೆಯಾಗದಿರುವುದು. ಖಾತೆಗಳನ್ನು ಆರು ತಿಂಗಳಿಗಿಂತ ಹೆಚ್ಚು ಕಾಲ ಬ್ಯಾಂಕ್ ಟ್ರಾಂಜಾಕ್ಷನ್ ಆಗದೇ ಇರುವುದು. ಅಥವಾ KYC ಅನ್ನು ನವೀಕರಣವಾಗದಿರುವುದು. ಮತ್ತು ವಿವಿಧ ಕಾರಣಗಳಿಂದಾಗಿ ಹಣ ವರ್ಗಾವಣೆ ತಡವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಮತ್ತು ಹಣಕಾಸು ಇಲಾಖೆಗಳ ಹಿರಿಯ ಅಧಿಕಾರಿಗಳು ಹೇಳಿದ್ದಾರೆ. ಹಾಗೆಯೇ ಜೂನ್ ತಿಂಗಳಲ್ಲಿ 20 ನೇ ಕಂತಿನ ಹಣ ಜಮಾ ಮಾಡಿದ್ದೇವೆ ತಾಂತ್ರಿಕ ಸಮಸ್ಯೆಯಿಂದಾಗಿ ಮುಂದಿನ ಕಂತುಗಳು ವಿಳಂಬ ಆಗುತ್ತಿವೆ ಆದಷ್ಟು ಬೇಗ 21ನೇ ಕಂತಿನ ಹಣವನ್ನು ಇದೇ ತಿಂಗಳ 2 ಅಥವಾ 3ನೇ ವಾರದಲ್ಲಿ ತಾಂತ್ರಿಕ ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕಿ ಸರಿಪಡಿಸಿ ಮಹಿಳೆಯರ ಖಾತೆಗೆ ಹಣ ಜಮಾ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಪಾವತಿ ಪ್ರಕ್ರಿಯೆಯು ಗೊಂದಲಮಯವಾಗಿದೆ. ಹಣ ಜಮಾವಣೆ ಪ್ರಕ್ರಿಯೆಗೆ 10 ದಿನ ಸಮಯ ತೆಗೆದುಕೊಳ್ಳುತ್ತದೆ. ಇದರಿಂದ ಹಣ ಜಮಾವಣೆಯಾಗುವುದು ವಿಳಂಬವಾಗುತ್ತದೆ ತಾಳ್ಮೆಯಿಂದ ಇದ್ದು ನಮಗೆ ಸಹಕರಿಸಿ ಎಂದು ಅಧಿಕಾರಿಗಳು ಹೇಳಿದರು
.

ಲೋಪದೋಷಗಳನ್ನು ತ್ವರಿತವಾಗಿ ಸರಿಪಡಿಸಿ ಶೇ.100ರಷ್ಟು ತಲುಪುವಂತೆ ನೋಡಿಕೊಳ್ಳುವಂತೆ ಲಕ್ಷ್ಮೀ ಹೆಬ್ಬಾಳ್ಕರ್ ಅಧಿಕಾರಿಗಳಿಗೆ ಸೂಚಿಸಿದರು. ಯೋಜನೆ ಜಾರಿಯಾದಾಗಿನಿಂದ ಇವರದು ಇದೇ ಸಮಸ್ಯೆ ಆಗುತ್ತಿದೆ ಎಂದು ಜನ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ…ಜೂನ್ ನಲ್ಲಿ ಶೇ.88ರಷ್ಟು ಫಲಾನುಭವಿಗಳ ಖಾತೆಗೆ ಹಣ ಜಮಾವಣೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೀಗಾಗಿ ರಾಜ್ಯದ ಮಹಿಳೆಯರು 21ನೇ ಕಂತಿನ ಹಣಕ್ಕಾಗಿ ಕಾಯಲೇಬೇಕಿದೆ ಮುಂದಿನ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ ಫಾಲೋ ಮಾಡಿ.!
ಈ ಲೇಖನವು ಸಾಮಾನ್ಯ ಮಾಹಿತಿಗೆ ಅನುಸರಿಸುತ್ತದೆ ಅಧಿಕ್ರುತ ಮಾಹಿತಿಗಾಗಿ ಸರ್ಕಾರದ ವೆಬ್ಸೈಟ್ ಪರೀಶೀಲಿಸಿ.!
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.