ನೀವು ಬಳಸುತ್ತಿರುವ ಮೊಬೈಲ್ ನಲ್ಲಿ ಈ ಐದು ಸೆಟ್ಟಿಂಗ್ ಗಳು ಬಹಳ ಅಪಾಯಕಾರಿ. ಈ ಸೆಟ್ಟಿಂಗ್ ಗಳನ್ನು ತಕ್ಷಣ ಆಫ್ ಮಾಡಿ!.
ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ಫೋನ್ (smart phone) ಗಳ ಬಳಕೆ ಹೆಚ್ಚಾಗುತ್ತಿದೆ. ಆದ್ದರಿಂದ ಬಹುತೇಕ ಎಲ್ಲರೂ ಕೂಡ ಸ್ಮಾರ್ಟ್ ಫೋನ್ ಗಳನ್ನು ಬಳಸುತ್ತಿದ್ದೇವೆ. ಸ್ಮಾರ್ಟ್ ಫೋನ್ ಗಳ ಬಳಕೆ ಹೆಚ್ಚಾಗುತ್ತಿದ್ದ ಹಾಗೆ ಹ್ಯಾಕ್ (hack) ಮಾಡುವವರ ಸಂಖ್ಯೆಯೂ ಕೂಡ ಹೆಚ್ಚಾಗ ತೊಡಗಿದೆ. ಸ್ಮಾರ್ಟ್ ಫೋನ್ ಗಳಿಂದ ಎಷ್ಟು ಉಪಕಾರವಿದೆಯೋ ಅಷ್ಟೇ ಅಪಾಯವೂ ಕೂಡ ಇದೆ. ಅದರಲ್ಲೂ ಸ್ಮಾರ್ಟ್ ಫೋನ್ ಗಳನ್ನು ಬಳಸುತ್ತಿರುವ ಬಹುತೇಕ ಮಂದಿಗೆ ಹಲವು ಸೆಟ್ಟಿಂಗ್ ಗಳ ಬಗ್ಗೆ ಗೊತ್ತೆ ಇಲ್ಲ. ಪ್ರತಿಯೊಂದು ಸ್ಮಾರ್ಟ್ ಫೋನ್ ಕೂಡ ಹಲವಾರು ಸೆಟ್ಟಿಂಗ್ ಗಳನ್ನು ಹೊಂದಿದೆ. ಇಂತಹ ಪರಿಸ್ಥಿತಿಯನ್ನು ಉಪಯೋಗಿಸಿಕೊಂಡು ಹ್ಯಾಕರ್ಗಳು ಸ್ಮಾರ್ಟ್‌ಫೋನ್ ಹ್ಯಾಕ್ ಮಾಡಿ ಡೇಟಾ ಕದಿಯುತ್ತಿದ್ದಾರೆ. ಅದರಲ್ಲೂ ಸ್ಮಾರ್ಟ್ ಫೋನ್ ಗಳಂತಹ ಮೊಬೈಲ್ ಫೋನ್ ಗಳಲ್ಲಿ ಕೆಲವು ಸೆಟ್ಟಿಂಗ್ ಗಳಿವೆ ಅವುಗಳನ್ನು ನಾವು ಆನ್ಲೈನ್ ನಲ್ಲಿ (Online) ಇದ್ದಾಗ ಆಫ್ ಮಾಡಬೇಕಾಗುತ್ತದೆ. ಒಟ್ಟಾರೆಯಾಗಿ ಐದು ಸೆಟ್ಟಿಂಗ್ ಗಳ ಬಗ್ಗೆ ತಿಳಿದುಕೊಳ್ಳೋಣ ಅವು ಯಾವುವು? ಅವುಗಳನ್ನು ಯಾವಾಗ ಆಫ್ ಮಾಡಬೇಕು? ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
5 ಸೆಟ್ಟಿಂಗ್ (settings) ಗಳು ಯಾವುವು?
ಡೇಟಾ ಉಳಿಸುವ ವೈಶಿಷ್ಟ್ಯ
ಲೊಕೇಶನ್ ಹಿಸ್ಟರಿ ಫೀಚರ್
ಲಾಕ್‌ಸ್ಕ್ರೀನ್ ನೋಟಿಫಿಕೇಶನ್
ನಿಯರ್ ಬೈ ಡಿವೈಸ್ ಫೀಚರ್
ವೈಯಕ್ತಿಕಗೊಳಿಸಿದ ಜಾಹೀರಾತುಗಳು
ಡೇಟಾ ಉಳಿಸುವ ವೈಶಿಷ್ಟ್ಯ (features) :
ಮೊದಲನೆಯದಾಗಿ ನಾವು ಡೇಟಾ ಸೇವಿಂಗ್ ಮಾಡಲು ಯೋಚಿಸುತ್ತಿರುತ್ತೇವೆ.ಡೇಟಾ ಸೇವಿಂಗ್ ವೈಶಿಷ್ಟ್ಯವನ್ನು ಆಫ್ ಮಾಡಬೇಕಾಗಿರುತ್ತದೆ. ಡೇಟಾ ಸೇವಿಂಗ್ (data savings) ವೈಶಿಷ್ಟ್ಯವನ್ನು ಆನ್ ಮಾಡಿರುವುದರಿಂದ ಮೊಬೈಲ್ ಫೋನ್ ಬ್ಯಾಟರಿ ಖಾಲಿಯಾಗುತ್ತಲೇ ಇರುತ್ತದೆ. ಹಾಗೂ ಅಪ್ಲಿಕೇಶನ್ ಗಳಿಗೆ ಇಂಟರ್ನೆಟ್ (internet) ಅನ್ನು ನಮಗೆ ತಿಳಿಯದಿರುವಂತೆ ರವಾನಿಸುತ್ತಿರುತ್ತದೆ. ಆದ್ದರಿಂದ ಅಗತ್ಯವಿರುವ ಸಮಯದಲ್ಲಿ ಡೇಟಾ ಸೇವಿಂಗ್ ವೈಶಿಷ್ಟ್ಯವನ್ನು ಆನ್ ಮಾಡಿಕೊಂಡು, ಉಳಿದ ಸಮಯದಲ್ಲಿ ಆಫ್ ಮಾಡುವುದು ಸೂಕ್ತ.
ಲೊಕೇಶನ್ ಹಿಸ್ಟರಿ (location history) ಫೀಚರ್:
ಇತ್ತೀಚಿನ ದಿನಮಾನಗಳಲ್ಲಿ ಲೊಕೇಶನ್ ಹುಡುಕಲು ನಾವು ಲೊಕೇಶನ್ ಹಿಸ್ಟರಿಯನ್ನು ಆನ್ ಮಾಡಿರುತ್ತೇವೆ. ಆದರೆ ನಮ್ಮ ಸ್ಮಾರ್ಟ್ ಫೋನ್ ಗಳಲ್ಲಿ ಆಗುವಂತಹ ಹಾಗೂ ಹೋಗುಗಳನ್ನು ಗೂಗಲ್ ರೆಕಾರ್ಗನೈಸ್ (Google recognize) ಮಾಡುತ್ತಿರುತ್ತದೆ. ಆದ್ದರಿಂದ ಲೋಕೇಶನ್ ಎಷ್ಟರಿಯನ್ನು ಆನ್ ಮಾಡಿದ್ದರೆ ನಾವು ಎಲ್ಲಿ ಹೋಗುತ್ತೇವೆ ಏನು ಮಾಡುತ್ತೇವೆ ಎಂಬ ವಿಚಾರಗಳು ಗೂಗಲ್ ಗೆ ತಿಳಿಯುತ್ತದೆ. ಜಾಹೀರಾತುಗಳು, ಹೋಟೆಲ್‌ಗಳು, ಕ್ಲಬ್‌ಗಳು ಮತ್ತು ಶಾಪಿಂಗ್ ಮಾಲ್‌ಗಳ ಕುರಿತು ಗೂಗಲ್ ನಿಮಗೆ ಮಾಹಿತಿಯನ್ನು ತೋರಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ಫೋನ್‌ನಲ್ಲಿ ಲೊಕೇಶನ್ ಹಿಸ್ಟರಿ ಆಫ್ ಮಾಡಬೇಕು.
ಲೊಕೇಶನ್ ಹಿಸ್ಟರಿ ಆಫ್ ಮಾಡಲು ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನ ಸೆಟ್ಟಿಂಗ್‌ಗಳಿಗೆ ಹೋಗಿ ನಂತರ ಗೂಗಲ್ ಅಕೌಂಟ್ ಮತ್ತು ಮ್ಯಾನೇಜ್ ಅಕೌಂಟ್ ಆಯ್ಕೆಗೆ ಹೋಗಿ ‘ಡೇಟಾ ಮತ್ತು ಗೌಪ್ಯತೆ’ ವಿಭಾಗಕ್ಕೆ ಹೋದನಂತರ ಇಲ್ಲಿ ಲೊಕೇಶನ್ ಹಿಸ್ಟರಿ ಆನ್ ಆಗಿದ್ದರೆ ಅದನ್ನು ತಕ್ಷಣವೇ ಆಫ್ ಮಾಡಿ.
ಲಾಕ್‌ಸ್ಕ್ರೀನ್ ನೋಟಿಫಿಕೇಶನ್ (Lock screen Notification) :
ಇಮೇಲ್ ನಲ್ಲಿ ಅಥವಾ ವಾಟ್ಸಪ್ ಮುಖಾಂತರ ಬರುವಂತಹ ಸಂದೇಶಗಳನ್ನು ಯಾರು ಓದಬಾರದು ಎಂದು ನೀವು ಬಯಸಿದರೆ ಲಾಕ್ ಸ್ಕ್ರೀನ್ ನಲ್ಲಿ ನೋಟಿಫಿಕೇಶನ್ ಆಫ್ ಮಾಡಬೇಕು. ಇದರರ್ಥ ನೀವು ಸಂದೇಶ ಅಥವಾ ಮೇಲ್ ಎಚ್ಚರಿಕೆಯನ್ನು ಸ್ವೀಕರಿಸಿದಾಗ ಲಾಕ್‌ಸ್ಕ್ರೀನ್‌ನಲ್ಲಿರುವ ವಿಷಯವನ್ನು ಯಾರೂ ನೋಡಲು ಸಾಧ್ಯವಾಗುವುದಿಲ್ಲ.
ನೋಟಿಫಿಕೇಶನ್ ಮರೆಮಾಡಲು ಸೆಟ್ಟಿಂಗ್ ಗೆ ಹೋಗಿ ಅಲ್ಲಿ ನೋಟಿಫಿಕೇಶನ್ ಮತ್ತು ಸ್ಟೇಟಸ್ ಹೋದನಂತರ ಲಾಕ್‌ಸ್ಕ್ರೀನ್ ಕ್ಲಿಕ್ ಮಾಡಿ ಮತ್ತು ನೋಟಿಫಿಕೇಶನ್ ಮರೆಮಾಡಿ ಆಯ್ಕೆಯನ್ನು ಆನ್ ಮಾಡಿ.
ನಿಯರ್ ಬೈ ಡಿವೈಸ್ :
ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳು ನಿಯರ್ ಬೈ ಡಿವೈಸ್ (Nearby Buy Device) ಆಯ್ಕೆಯನ್ನು ಸಹ ಹೊಂದಿವೆ. ಈ ಸೆಟ್ಟಿಂಗ್ ಅನ್ನು ಆಫ್ ಮಾಡಬೇಕು. ನಿಯರ್ ಬೈ ಡಿವೈಸ್ ಅನ್ನು ಆನ್ ಮಾಡಿದ್ದರೆ ಬೇರೆ ಯಾರಾದರೂ ನಿಮ್ಮ ಸ್ಮಾರ್ಟ್ ಫೋನ್ ಅನ್ನು ಸಂಪರ್ಕಿಸಬಹುದು. ಇದರಿಂದ ನಿಮ್ಮ ಮೊಬೈಲ್ ಹ್ಯಾಕ್ ಹಾಗುವ ಸಾಧ್ಯತೆ ಹೆಚ್ಚಾಗಿ ಇರುತ್ತದೆ.
ವೈಯಕ್ತಿಕಗೊಳಿಸಿದ ಜಾಹೀರಾತುಗಳು:
ವೈಯಕ್ತಿಕಗೊಳಿಸಿದ ಜಾಹೀರಾತುಗಳನ್ನು (Advertisements) ಸಹ ಮುಚ್ಚಬೇಕು. ಈ ಸೆಟ್ಟಿಂಗನ್ನು ನೀವು ಆಫ್ ಮಾಡದಿದ್ದರೆ ನೀವು ಇಷ್ಟಪಡುವ ಮತ್ತು ನೀವು ಇಷ್ಟಪಡದ ಎಲ್ಲ ವಿಷಯಗಳನ್ನು ಗೂಗಲ್ (Google) ನಿಮಗೆ ತೋರಿಸುತ್ತದೆ. ನಿಮ್ಮ ಗೂಗಲ್ ಖಾತೆಯಲ್ಲಿನ ‘ಡೇಟಾ ಮತ್ತು ಗೌಪ್ಯತೆ’ ವಿಭಾಗದ ಅಡಿಯಲ್ಲಿ ನೀವು ಈ ಆಯ್ಕೆಯನ್ನು ಕಾಣಬಹುದು. ಈ ಸೆಟ್ಟಿಂಗ್ ಅನ್ನು ಆಫ್ ಮಾಡುವುದು ಸೂಕ್ತ. ನಿಮಗೆ ಬೇಕಾದರೆ ಅಗತ್ಯವಿದ್ದಾಗ ನೀವು ಅದನ್ನು ಆನ್ ಮಾಡಬಹುದು ಆದರೆ ಉಳಿದ ಸಮಯದಲ್ಲಿ ಈ ಮೇಲಿನ ಎಲ್ಲಾ ಸೆಟ್ಟಿಂಗ್ ಗಳನ್ನು ಆಫ್ ಮಾಡಿ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group




