Picsart 25 11 01 22 37 40 143 scaled

ಮಿನಿ-ಸ್ಟೋಕ್ ಬಂದವರೇ ಎಚ್ಚರ.! 30–40 ವರ್ಷದವರಿಗೂ ಸ್ಟೋಕ್ ಅಪಾಯ ಏಕೆ ಹೆಚ್ಚುತ್ತಿದೆ?

WhatsApp Group Telegram Group

ಇತ್ತೀಚಿನ ದಿನಗಳಲ್ಲಿ ಒಂದು ಆತಂಕಕಾರಿ ವಿಷಯ ಆರೋಗ್ಯ ವಲಯದಲ್ಲಿ ಗಂಭೀರ ಚರ್ಚೆಗೆ ಗ್ರಾಸವಾಗಿದೆ. ಅದು ಏನೆಂದರೆ ಯುವಜನರಲ್ಲಿ ಪಾರ್ಶ್ವವಾಯು (Stroke) ಪ್ರಕರಣಗಳ ಏರಿಕೆ. ಸಾಮಾನ್ಯವಾಗಿ ವಯೋವೃದ್ಧರಲ್ಲಿ ಕಂಡುಬರುವ ಈ ಸಮಸ್ಯೆ, ಈಗ 30–40 ವರ್ಷದವರಲ್ಲೂ ಹೆಚ್ಚಾಗಿ ಕಾಣಿಸುತ್ತಿರುವುದು ವೈದ್ಯರನ್ನು ಬೆಚ್ಚಿಬೀಳಿಸಿದೆ. ಅನಾರೋಗ್ಯಕರ ಜೀವನಶೈಲಿ, ಒತ್ತಡ, ಆಹಾರ ಪದ್ಧತಿ, ತೂಕ ಹೆಚ್ಚಳ, ಡಿಜಿಟಲ್ ಅವಲಂಬನೆ ಈ ಎಲ್ಲವುದರಿಂದ ಯುವ ಪೀಳಿಗೆಯಲ್ಲೂ ಮೆದುಳಿಗೆ ಸಂಬಂಧಿಸಿದ ಗಂಭೀರ ಸಮಸ್ಯೆಗಳು ಬೆಳೆಯುತ್ತಿವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ವೈದ್ಯರ ಪ್ರಕಾರ, ಪಾರ್ಶ್ವವಾಯು ಸಂಭವಿಸಿದ ನಂತರದ ಮೊದಲ ಒಂದು ಗಂಟೆ ಗೋಲ್ಡನ್ ಹವರ್ ಅತ್ಯಂತ ಪ್ರಮುಖ. ಈ ಅವಧಿಯಲ್ಲಿ ಸರಿಯಾದ ಚಿಕಿತ್ಸೆ ದೊರೆತರೆ ಜೀವ ಉಳಿಯುವುದು ಮಾತ್ರವಲ್ಲ, ದೀರ್ಘಕಾಲದ ಅಂಗವೈಕಲ್ಯವೂ ತಪ್ಪಿಸಬಹುದು. ಆದ್ದರಿಂದ, ಪಾರ್ಶ್ವವಾಯುವಿನ ಮುನ್ನೆಚ್ಚರಿಕಾ ಲಕ್ಷಣಗಳನ್ನು ತಿಳಿದುಕೊಳ್ಳುವುದು ಪ್ರತಿಯೊಬ್ಬರಿಗೂ ಅತ್ಯಂತ ಅಗತ್ಯ.

ಭಾರತದಲ್ಲಿ ಪಾರ್ಶ್ವವಾಯುವಿನ ಅಂಕಿ–ಅಂಶ ಹೀಗಿದೆ:

ಪ್ರತಿ 20 ಸೆಕೆಂಡಿಗೆ ಒಂದು ಪಾರ್ಶ್ವವಾಯು ಪ್ರಕರಣ ದಾಖಲಾಗುತ್ತಿದೆ.
ಪ್ರತಿ ವರ್ಷ 18 ಲಕ್ಷಕ್ಕೂ ಹೆಚ್ಚು ಹೊಸ ಪ್ರಕರಣಗಳ ದಾಖಲೆ.
ಕಳೆದ 5 ವರ್ಷಗಳಲ್ಲಿ ಯುವಕರಲ್ಲಿ 15–20% ಏರಿಕೆ.
30–40 ವರ್ಷದ ಯುವಕರು ಹೆಚ್ಚು ಆಸ್ಪತ್ರೆಗೆ ದಾಖಲಾಗುತ್ತಿರುವುದು.
ಈ ಅಂಕಿ ಅಂಶಗಳು ಪಾರ್ಶ್ವವಾಯು ಈಗ ವಯಸ್ಕರ ಮಾತ್ರವಲ್ಲ, ಯುವಜನರಿಗೂ ದೊಡ್ಡ ಅಪಾಯವಾಗುತ್ತಿದೆ ಎಂಬುದನ್ನು ಸ್ಪಷ್ಟಪಡಿಸುತ್ತವೆ.

ಮಿನಿ-ಸ್ಟೋಕ್ (TIA) ಪಾರ್ಶ್ವವಾಯುವಿನ ಮುನ್ನೆಚ್ಚರಿಕಾ ಗಂಟೆ:
ಅನೇಕರಿಗೆ ಪಾರ್ಶ್ವವಾಯು ಬರುವ ಮೊದಲು ಮಿನಿ-ಸ್ಟೋಕ್ ಕಂಡುಬರುತ್ತದೆ. ಇದನ್ನು TIA – Transient Ischemic Attack ಎಂದೂ ಕರೆಯಲಾಗುತ್ತದೆ.

ಮಿನಿ-ಸ್ಟೋಕ್ ಎಂದರೇನು?:

ಮೆದುಳಿಗೆ ರಕ್ತ ಪೂರೈಕೆ ಕೆಲ ಕ್ಷಣಗಳ ಕಾಲ ಅಡಚಣೆಯಾಗುತ್ತದೆ ಆದರೆ ಇದು ಕೇವಲ ಕೆಲ ನಿಮಿಷ ಮಾತ್ರ ಶಾಶ್ವತಹಾನಿ ಇಲ್ಲ. ಇದು ಮುಖ್ಯ ಪಾರ್ಶ್ವವಾಯುವಿನ ಮುನ್ನೆಚ್ಚರಿಕೆ ಘಂಟೆ ಎನ್ನಬಹುದು. ಅಧ್ಯಯನ ಪ್ರಕಾರ, 43% ಸ್ಟೋಕ್ ರೋಗಿಗಳಿಗೆ ಒಂದು ವಾರ ಮೊದಲು ಮಿನಿ-ಸ್ಟೋಕ್ ಲಕ್ಷಣಗಳು ಕಂಡುಬಂದಿವೆ.

ಮಿನಿ-ಸ್ಟೋಕ್/ಸ್ಟೋಕ್‌ನ ತಕ್ಷಣ ಕಾಣಿಸಿಕೊಳ್ಳುವ ಲಕ್ಷಣಗಳು ಹೀಗಿವೆ:

NHS ಹಾಗೂ ಆರೋಗ್ಯ ಸಂಸ್ಥೆಗಳ ಪ್ರಕಾರ, ಮಿನಿ-ಸ್ಟೋಕ್‌ಗೂ ಸ್ಟೋಕ್‌ಗೂ ಲಕ್ಷಣಗಳು ಒಂದೇ.
ದೇಹದ ಒಂದು ಬದಿಯಲ್ಲಿ ಜಡತೆ/ಮರಗಟ್ಟುವಿಕೆ:
ಮುಖ, ಕೈ, ಕಾಲು—ಒಂದು ಬದಿಯಲ್ಲಿ ಹಠಾತ್‌ ಶಕ್ತಿ ಕಳೆದುಹೋಗುವುದು.
ಸ್ಪಷ್ಟವಾಗಿ ಮಾತನಾಡಲು ತೊಂದರೆ:
ಮಾತು ತುಸು ಅಸ್ಪಷ್ಟವಾಗುವುದು ಅಥವಾ ಮಾತನಾಡಲು ಸಾಧ್ಯವಾಗದೆ ಹೋಗುವುದು.
ದೃಷ್ಟಿ ಸಮಸ್ಯೆ:
ಒಂದೇ ವಸ್ತು ಎರಡೆರೆಡಾಗಿ ಕಾಣಲು ಶುರುವಾಗುತ್ತದೆ.
ಒಂದು ಅಥವಾ ಎರಡೂ ಕಣ್ಣುಗಳಲ್ಲಿ ದೃಷ್ಟಿ ಮಂದವಾಗುವುದು.
ಕುರುಡುತನದ ಅನುಭವ.
ಸಮತೋಲನ ಕಳೆದುಕೊಳ್ಳುವುದು:
ಹಠಾತ್ ನಿಲ್ಲಲು, ನಡೆಯಲು ತೊಂದರೆ.
ತಲೆಸುತ್ತು / ಗಾಬರಿ
ಒಂದು ಕಿವಿಯಲ್ಲಿ ಮಾತ್ರ ಶಬ್ದ ಮಂಕಾಗಿ ಕೇಳಿಸುವುದು:
ಈ ಲಕ್ಷಣಗಳು ಇದ್ದರೆ ತಕ್ಷಣ ಆಸ್ಪತ್ರೆಗೆ ಹೋಗುವುದು ಅತ್ಯವಶ್ಯಕ.

ಪಾರ್ಶ್ವವಾಯು ಸಂಭವಿಸುವ ಪ್ರಮುಖ ಅಪಾಯಕಾರಿ ಅಂಶಗಳು ಹೀಗಿವೆ:

ಕುಟುಂಬದಲ್ಲಿ ಯಾರಿಗಾದರೂ ಸ್ಟೋಕ್ ಇದ್ದರೆ ಈಗಿನವರಿಗೂ ಬರಬಹುದು.
55+ ವಯಸ್ಸು (ಇದೀಗ ಯುವಕರಲ್ಲೂ ಹೆಚ್ಚುತ್ತಿದೆ).
ಹೆಚ್ಚಿದ ರಕ್ತದ ಒತ್ತಡ.
ಮಧುಮೇಹ.
ಹೃದ್ರೋಗ.
ಧೂಮಪಾನ.
ಅತಿ ಜಡತ್ವ / ತೂಕ ಹೆಚ್ಚಳ.
ದೈಹಿಕ ಚಟುವಟಿಕೆಯ ಕೊರತೆ.

ಸ್ಟೋಕ್ ತಪ್ಪಿಸಲು ಏನು ಮಾಡಬೇಕು?:

ನಿಮ್ಮ ಆರೋಗ್ಯವನ್ನು ಕಾಪಾಡಲು ಈ ಕ್ರಮಗಳು ಬಹಳ ಪರಿಣಾಮಕಾರಿ,
ಧೂಮಪಾನ ಸಂಪೂರ್ಣ ನಿಲ್ಲಿಸಿ.
ಪ್ರತಿದಿನ ಕನಿಷ್ಠ 30 ನಿಮಿಷ ವ್ಯಾಯಾಮ.
ಹಸಿರು ತರಕಾರಿಗಳು, ಹಣ್ಣುಗಳಿಂದ ಸಮತೋಲಿತ ಆಹಾರ.
ತೂಕ ಮತ್ತು ರಕ್ತದ ಒತ್ತಡ ನಿಯಂತ್ರಣದಲ್ಲಿ ಇಡಿ.
ಮಧುಮೇಹ ಹಾಗೂ ಕೊಲೆಸ್ಟ್ರಾಲ್ ಪರೀಕ್ಷೆ ನಿಯಮಿತವಾಗಿ ಮಾಡಿಸಿ.
ಒತ್ತಡ ನಿಯಂತ್ರಣಕ್ಕಾಗಿ ಯೋಗ/ಧ್ಯಾನ ಮಾಡಿ.

ಒಟ್ಟಾರೆಯಾಗಿ, ಪಾರ್ಶ್ವವಾಯು ಈಗ ವಯೋವೃದ್ಧರ ಸಮಸ್ಯೆ ಎಂಬ ಮಾತು ತಪ್ಪಾಗಿದೆ. ಯುವಜನರ  ಜೀವನಶೈಲಿ, ಒತ್ತಡ, ಅಕ್ರಮವಾದ ನಿದ್ರೆ ಆಹಾರದ ಕಾರಣದಿಂದ ಅಪಾಯಕ್ಕೆ ಒಳಗಾಗುತ್ತಿದ್ದಾರೆ. ಲಕ್ಷಣಗಳನ್ನು ಗುರುತಿಸುವುದು ಮತ್ತು ಮುಂಜಾಗ್ರತೆ ವಹಿಸುವುದರಿಂದ ಜೀವ ಉಳಿಸಿಕೊಳ್ಳಬಹುದು.

WhatsApp Image 2025 09 05 at 11.51.16 AM 12

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories