ಬೆಂಗಳೂರು ಮೆಟ್ರೋನಲ್ಲಿ 150 ಮೆಂಟೈನರ್ ಹುದ್ದೆಗಳಿಗೆ ನೇಮಕಾತಿ – ಮಾಜಿ ಸೇನಾ ಸಿಬ್ಬಂದಿಗೆ ಅವಕಾಶ
ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL), ನಗರ ಸಾರಿಗೆಯಲ್ಲಿ ತಾಂತ್ರಿಕವಾಗಿ ಅತ್ಯಂತ ನವೀನತೆ ಹೊಂದಿರುವ ಸಂಸ್ಥೆ, ತನ್ನ ಕಾರ್ಯಾಚರಣೆ ಮತ್ತು ನಿರ್ವಹಣಾ ವಿಭಾಗವನ್ನು ಇನ್ನಷ್ಟು ಬಲಪಡಿಸಲು ಮಹತ್ವದ ಹೊಸ ನೇಮಕಾತಿ (New recruitment) ಅಧಿಸೂಚನೆಯನ್ನು ಪ್ರಕಟಿಸಿದೆ. ಮಾಜಿ ಸೇನಾ ಸಿಬ್ಬಂದಿಯ ಶಿಸ್ತಿನ ಬದುಕು, ತಾಂತ್ರಿಕ ಅನುಭವ ಹಾಗೂ ಉತ್ಸಾಹವನ್ನು ನೆನಪಿನಲ್ಲಿಟ್ಟುಕೊಂಡು BMRCL ಸಂಸ್ಥೆಯು 150 ಮೆಂಟೈನರ್ ಹುದ್ದೆಗಳನ್ನು ಭರ್ತಿಮಾಡಲು ಅರ್ಜಿಗಳನ್ನು (Applications) ಆಹ್ವಾನಿಸಿದೆ. ಈ ಹುದ್ದೆಗಳು 5 ವರ್ಷಗಳ ಗುತ್ತಿಗೆ ಆಧಾರದಲ್ಲಿ ಇರಲಿದ್ದು, ಉದ್ಯೋಗಿಗಳ ಕಾರ್ಯಕ್ಷಮತೆ ಆಧಾರಿತವಾಗಿ ಅವುಗಳನ್ನು ವಿಸ್ತರಿಸಲಾಗುವುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಈ ವಿಶೇಷ ನೇಮಕಾತಿಯು ಮಾಜಿ ರಕ್ಷಣಾ ಸಿಬ್ಬಂದಿಗೆ ಮೀಸಲಾಗಿದ್ದು, ತಾಂತ್ರಿಕ ಜ್ಞಾನ, ಕೌಶಲ್ಯ, ಮತ್ತು ಸಾರ್ವಜನಿಕ ಸೇವೆಯ ಸಾಮರ್ಥ್ಯ ಹೊಂದಿದ ವ್ಯಕ್ತಿಗಳಿಗೆ ಉತ್ತಮ ಅವಕಾಶ ನೀಡುವ ಉದ್ದೇಶ ಹೊಂದಿದೆ. ಹುದ್ದೆಗೆ ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಶಿಕ್ಷಣ ಅರ್ಹತೆ, ವಯೋಮಿತಿ, ವೇತನ ಶ್ರೇಣಿ, ಆಯ್ಕೆ ವಿಧಾನ ಮತ್ತು ಅರ್ಜಿ ಸಲ್ಲಿಕೆ ವಿಧಾನ (Steps of application) ಇತ್ಯಾದಿಗಳ ಬಗ್ಗೆ ಮಾಹಿತಿ ತಿಳಿಯುವುದು ಉತ್ತಮ. ಹಾಗಿದ್ದರೆ ಈ ಹುದ್ದೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಹುದ್ದೆಗಳ ವಿವರ:
ಸಂಸ್ಥೆ ಹೆಸರು: ಬೆಂಗಳೂರು ಮೆಟ್ರೋ ರೈಲು. ಕಾರ್ಪೊರೇಷನ್ ಲಿಮಿಟೆಡ್ (BMRCL).
ಹುದ್ದೆ ಹೆಸರು: ಮೆಂಟೈನರ್ (Maintainer).
ಒಟ್ಟು ಹುದ್ದೆಗಳು: 150 (ಮಾಜಿ ಸೇನಾ ಸಿಬ್ಬಂದಿಗೆ ಮೀಸಲಾಗಿದ್ದು).
ಹುದ್ದೆಯ ಸ್ಥಳ: ಬೆಂಗಳೂರು.
ಉದ್ಯೋಗದ ಕಾಲಾವಧಿ: 5 ವರ್ಷಗಳ ಗುತ್ತಿಗೆ (ಪರ್ಫಾರ್ಮೆನ್ಸ್ ಆಧಾರಿತ ವಿಸ್ತರಣೆ ಸಾಧ್ಯ)
ಅರ್ಹತೆ (Qualifications) ಮತ್ತು ಶೈಕ್ಷಣಿಕ ವಿದ್ಯಾರ್ಹತೆ ಬಗ್ಗೆ ನೋಡುವುದಾದರೆ:
ಅಭ್ಯರ್ಥಿಗಳು ಮೆಟ್ರಿಕ್ (10ನೇ ತರಗತಿ) ಪಾಸಾಗಿದ್ದು, 2 ವರ್ಷಗಳ ಅವಧಿಯ ಐಟಿಐ (ITI) ಕೋರ್ಸ್ ಮುಗಿಸಿರುವವರಾಗಿರಬೇಕು.
ಅರ್ಹ ತಾಂತ್ರಿಕ ವ್ಯಾಪಾರಗಳು ಯಾವುವು?:
ಎಲೆಕ್ಟ್ರೀಷಿಯನ್
ಇನ್‌ಸ್ಟ್ರುಮೆಂಟ್ ಮೆಕ್ಯಾನಿಕ್
ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್
ವೈರ್‌ಮ್ಯಾನ್
ಫಿಟ್ಟರ್
ಮೆಕ್ಯಾನಿಕ್ ಕಂಪ್ಯೂಟರ್ ಹಾರ್ಡ್‌ವೇರ್
ಇಂಡಸ್ಟ್ರಿಯಲ್ ಎಲೆಕ್ಟ್ರಾನಿಕ್ಸ್
ITESM
ಮೆಕ್ಯಾನಿಕ್ ಮೀಕಾಟ್ರೋನಿಕ್ಸ್
ವಯೋಮಿತಿ ಎಷ್ಟು(Age limit) ?
ಗರಿಷ್ಠ ವಯಸ್ಸು: 50 ವರ್ಷ (ಅರ್ಜಿಯ ದಿನಾಂಕದಂತೆ)
ವೇತನ ಶ್ರೇಣಿ ಬಗ್ಗೆ ನೋಡುವುದಾದರೆ:
ನಿಗದಿತ ಮಾಸಿಕ ವೇತನ: ₹25,000/- ರಿಂದ 59,060/- + ವಾರ್ಷಿಕ 3% ಹೆಚ್ಚುವರಿ.
ಆಯ್ಕೆ ಪ್ರಕ್ರಿಯೆ(Selection process) ಯಾವರೀತಿಯಿರುತ್ತದೆ?:
1. ಲಿಖಿತ ಪರೀಕ್ಷೆ (ಒಟ್ಟು 100 ಅಂಕಗಳು):
ಸಾಮಾನ್ಯ ಜ್ಞಾನ – 30 ಅಂಕಗಳು.
ತಾರ್ಕಿಕತೆ ಮತ್ತು ವಿಶ್ಲೇಷಣಾ ಸಾಮರ್ಥ್ಯ – 30 ಅಂಕಗಳು.
ತಾಂತ್ರಿಕ ಜ್ಞಾನ – 40 ಅಂಕಗಳು.
ಅವಧಿ: 120 ನಿಮಿಷಗಳು
ಪ್ರತಿಯೊಂದು ತಪ್ಪು ಉತ್ತರಕ್ಕೆ ¼ ಅಂಕ ಕಡಿತ
2. ವೈದ್ಯಕೀಯ ಪರೀಕ್ಷೆ
3. ಡಾಕ್ಯುಮೆಂಟ್ ಪರಿಶೀಲನೆ
4. ಕನ್ನಡ ಭಾಷೆಯ ಜ್ಞಾನ ಕಡ್ಡಾಯ
ಅರ್ಜಿ ಸಲ್ಲಿಸುವುದು ಹೇಗೆ(How to apply application) ?
ಅಧಿಕೃತ ವೆಬ್‌ಸೈಟ್ www.bmrc.co.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು.
ಅರ್ಜಿಯ ಪ್ರಿಂಟ್ ಔಟ್ (Print out) ತೆಗೆದು, ಪಾಸ್‌ಪೋರ್ಟ್ ಫೋಟೋ ಅಂಟಿಸಿ, ಸಹಿ ಮಾಡಿ, ಅಗತ್ಯ ದಾಖಲೆಗಳ ಪ್ರತಿಗಳೊಂದಿಗೆ ಲಗತ್ತಿಸಿ ಈ ಕೆಳಗಿನ ವಿಳಾಸಕ್ಕೆ ಸ್ಪೀಡ್ ಪೋಸ್ಟ್ ಮೂಲಕ ಕಳುಹಿಸಬೇಕು:
ವಿಳಾಸ(address) :
ಸಾಮಾನ್ಯ ವ್ಯವಸ್ಥಾಪಕರು (ಮಾನವ ಸಂಪನ್ಮೂಲ),
ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್,
ಮೂರನೇ ಮಹಡಿ, ಬಿಎಂಟಿಸಿ ಸಂಕೀರ್ಣ, ಕೆ.ಹೆಚ್.ರೋಡ್, ಶಾಂತಿನಗರ,
ಬೆಂಗಳೂರು – 560027
ಅರ್ಜಿ ಹಾಕಲು ಎಷ್ಟು ಶುಲ್ಕ (Fee) ಕಟ್ಟಬೇಕು?:
ಈ ನೇಮಕಾತಿ ವಿಶೇಷವಾಗಿ ಮಾಜಿ ಸೈನಿಕರಿಗಾಗಿ ಇರುವ ಕಾರಣ, ಯಾವುದೇ ಅರ್ಜಿ ಶುಲ್ಕವಿಲ್ಲ.
ಪ್ರಮುಖ ದಿನಾಂಕಗಳು (Important dates) ಯಾವುವು?:
ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 22 ಮೇ 2025.
ಅರ್ಜಿಯ ಪ್ರಿಂಟ್‌ಔಟ್ ಹಾಗೂ ದಾಖಲೆ (Documents) ಸಲ್ಲಿಸಲು ಕೊನೆಯ ದಿನಾಂಕ: 27 ಮೇ 2025, ಸಂಜೆ 4:00ಕ್ಕೆ
ಪ್ರಮುಖ ಲಿಂಕುಗಳು(Important links) :
ಅಧಿಸೂಚನೆ ಡೌನ್‌ಲೋಡ್ ಲಿಂಕ್: ಇಲ್ಲಿ ಕ್ಲಿಕ್ ಮಾಡಿ
ಅನ್‌ಲೈನ್ ಅರ್ಜಿ ಲಿಂಕ್(Online application link) : ಇಲ್ಲಿ ಕ್ಲಿಕ್ ಮಾಡಿ
ಹೆಚ್ಚಿನ ಮಾಹಿತಿ (For more information) ಅಥವಾ ಸಹಾಯಕ್ಕಾಗಿ ಅಧಿಕೃತ ವೆಬ್‌ಸೈಟ್ ಗೆ ಭೇಟಿನೀಡಿ. ಅರ್ಹ ಅಭ್ಯರ್ಥಿಗಳು ಸಮಯದ ಮಿತಿಯೊಳಗೆ ಅರ್ಜಿ ಸಲ್ಲಿಸಿ, ಬೆಂಗಳೂರು ಮೆಟ್ರೋದಲ್ಲಿ (Bangalore metro) ಸೇವೆ ಸಲ್ಲಿಸುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.