ಬ್ಯಾಂಕ್ ಗಳಿಗೆ ( banks ) ಹೋಗುವ ಮುನ್ನ ಎಚ್ಚರ : ಮುಂದಿನ ತಿಂಗಳು ಅಂದರೆ ಮೇ ( May ) ತಿಂಗಳು 8 ರಿಂದ 13 ದಿನಗಳು ಬ್ಯಾಂಕ್ ಗಳು ರಜೆಯಲ್ಲಿರುತ್ತವೆ.
ವಾಸ್ತವವಾಗಿ ರಜೆ ಎಂದರೆ ಎಲ್ಲರಿಗೂ ಖುಷಿಕೊಡುವ ಸಂಗತಿ ಆದರೆ ಕೆಲವೊಮ್ಮೆ ಕೆಲವೊಬ್ಬರಿಗೆ ಈ ರಜೆ ಯಾಕೆ ಆದ್ರೂ ಬಂತೋ ಅನ್ನಿಸಿ ಬಿಡುತ್ತದೆ. ಅದರಲ್ಲೂ ಬ್ಯಾಂಕ್ ರಜೆಗಳು. ಯಾಕೆಂದರೆ ಯಾವಾಗ, ಯಾವ ಸಂದರ್ಭದಲ್ಲಿಯಾದರೂ ತುರ್ತು ಸಂದರ್ಭಗಳು ( emergency ) ಎದುರಾಗಬಹುದು. ಆದರೆ ಇಂದು ನಾವು ಟೆಕ್ನಾಲಜಿಯನ್ನು ( Technology ) ಬಳಕೆ ಮಾಡಿಕೊಳ್ಳುತ್ತಿರುವುದರಿಂದ ಬ್ಯಾಂಕ್ ಅವಶ್ಯಕತೆ ಹೆಚ್ಚೇನೂ ಇರುವುದಿಲ್ಲ ಎಂದು ಅನಿಸುವುದುಂಟು. ಆದರೆ ಕೆಲವೊಮ್ಮೆ ಬಹಳ ಮುಖ್ಯವಾದ ಕೆಲಸಗಳಿಗೆ ಬ್ಯಾಂಕ್ ಗಳಿಗೆ ತೆರಳುವ ಸಂದರ್ಭ ಎದುರಾಗಿಯೇ ಎದುರಾಗುತ್ತದೆ. ಈ ನಿಟ್ಟಿನಲ್ಲಿ ನೋಡುವುದಾದರೆ ಮುಂದಿನ ತಿಂಗಳು ಅಂದರೆ ಮೇ ತಿಂಗಳು(may month) ಹೆಚ್ಚು ದಿನಗಳು ಬ್ಯಾಂಕ್ ರಜೆಯಲ್ಲಿರುತ್ತವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಈ ತಿಂಗಳು ಬ್ಯಾಂಕ್ ಗಳಿಗೆ ಹೋಗದೆ ನಿಮ್ಮ ಕಾರ್ಯಗಳನ್ನು ಮುಂದೂಡಿದ್ದೀರಾ? ನಿಮ್ಮ ಕೆಲಸ ಕಾರ್ಯಗಳಿಗೆ ಬ್ಯಾಂಕ್ ಗಳನ್ನು ಅವಲಂಬಿಸಿದ್ದರೆ ಬ್ಯಾಂಕ್ ರಜಾ ದಿನಗಳ ( bank holidays ) ಬಗ್ಗೆ ಎಚ್ಚರವಹಿಸಿ. ಅದರಲ್ಲೂ ಮೇ ತಿಂಗಳು ಬಹಳ ದಿನಗಳ ಕಾಲ ಬ್ಯಾಂಕ್ ರಜೆಗಳು ಬಂದಿರುವುದರಿಂದ ನೀವು ಯಾವ ದಿನ ಬ್ಯಾಂಕ್ ರಜೆ ಇದೆ ಎಂದು ತಿಳಿದುಕೊಂಡು ಬ್ಯಾಂಕ್ ಗಳಿಗೆ ಹೋಗುವುದು ಸೂಕ್ತ.
8 ರಿಂದ 13 ದಿನಗಳು ರಜೆ :
ಮೇ 1 : ಕಾರ್ಮಿಕರ ದಿನ
ಮೇ 5 : ಭಾನುವಾರ
ಮೇ 7 : ಲೋಕಸಭೆ ಚುನಾವಣೆ
ಮೇ 8 : ರವೀಂದ್ರನಾಥ ಟ್ಯಾಗೋರ್ ಜಯಂತಿ
ಮೇ 10 : ಬಸವ ಜಯಂತಿ
ಮೇ 11 : ಎರಡನೆ ಶನಿವಾರ
ಮೇ 12 : ಭಾನುವಾರ
ಮೇ 16 : ರಾಜ್ಯೋತ್ಸವ ದಿನ
ಮೇ 19 : ಭಾನುವಾರ
ಮೇ 20 : ಲೋಕಸಭೆ ಚುನಾವಣೆ
ಮೇ 23 : ಬುದ್ಧ ಪೂರ್ಣಿಮೆ
ಮೇ 25 : ನಾಲ್ಕನೇ ಶನಿವಾರ
ಮೇ 26 : ಭಾನುವಾರ
ಇನ್ನು ನಮಗೆಲ್ಲರಿಗೂ ತಿಳಿದೇ ಇರುವುದೆಂದರೆ ಬ್ಯಾಂಕ್ ಗಳು ಭಾನುವಾರ ತೆರೆದಿರುವುದಿಲ್ಲ ( Sunday close ). ಈ ಎಲ್ಲಾ ಸರಕಾರಿ ಕೆಲಸಗಳಿಗೂ ರಜೆ ( Government holidays ) ಇರುತ್ತದೆ. ಅದೇ ರೀತಿ ಎರಡನೇ ಹಾಗೂ ನಾಲ್ಕನೇ ಶನಿವಾರ ಕೂಡ ಬ್ಯಾಂಕ್ ಗಳು ತೆರೆದಿರುವುದಿಲ್ಲ ಎನ್ನುವ ವಿಷಯ ನಮಗೆ ತಿಳಿದೇ ಇದೆ. ಹಾಗೆ ಮೇ ತಿಂಗಳು 4 ಭಾನುವಾರ (ಮೇ 5, 12, 19, 26 ) ಹಾಗೂ 2 ಎರಡನೇ(ಮೇ 11) ಹಾಗೂ ನಾಲ್ಕನೇ ಶನಿವಾರ(ಮೇ 25) ಬಂದಿವೆ ( 2nd and 4th Saturday ).
ಮೇ 1 : ಕಾರ್ಮಿಕರ ದಿನ ( Labours day )
ಆರಂಭದಲ್ಲೇ ಕಾರ್ಮಿಕ ದಿನಾಚರಣೆ ಇರುವುದರಿಂದ ಮೇ 1 ರಂದು ಬ್ಯಾಂಕ್ ರಜೆ ಇರುತ್ತದೆ. ಈ ಕಾರ್ಮಿಕ ದಿನಾಚರಣೆಯ ಪ್ರಯುಕ್ತ ಮಹಾರಾಷ್ಟ್ರ, ಕೊಚ್ಚಿ, ಚೆನ್ನೈ, ಗುವಾಹಟಿ, ಬೆಂಗಳೂರು, ಬೇಲಾಪುರ್, ಹೈದರಾಬಾದ್, ಆಂಧ್ರಪ್ರದೇಶ, ಮುಂಬೈ, ನಾಗ್ಪುರ, ಪಣಜಿ, ಕೋಲ್ಕತ್ತಾ, ತಿರುವನಂತಪುರಂ ನಲ್ಲಿ ಕಾರ್ಮಿಕರ ದಿನವನ್ನು ಆಚರಿಸುತ್ತಿರುವ ಕಾರಣ ಈ ಎಲ್ಲಾ ಪ್ರದೇಶಗಳಲ್ಲೂ ಬ್ಯಾಂಕ್ ಗಳು ಮುಚ್ಚಲ್ಪಟ್ಟಿರುತ್ತವೆ.
ಮೇ 7 ಹಾಗೂ ಮೇ 20 : ಲೋಕಸಭೆ ಚುನಾವಣೆ ( Lok sabha Election )
ಮೇ 7 ರಂದು ಕರ್ನಾಟಕದ ಹಲವು ಕ್ಷೇತ್ರಗಳಲ್ಲಿ ಚುನಾವಣೆ ನೆಡೆಯುತ್ತಿರುವ ಕಾರಣ ಅಂದು ಕರ್ನಾಟಕದಲ್ಲಿ ಬ್ಯಾಂಕ್ ರಜೆ ಯಲ್ಲಿರುತ್ತವೆ. ಹಾಗೆ ಮೇ 20 ರಂದು ಮಹಾರಾಷ್ಟ್ರದಲ್ಲಿ ಚುನಾವಣೆ ನೆಡೆಯುತ್ತಿರುವ ಹಿನ್ನಲೆ ಅಂದು ಮಹಾರಾಷ್ಟ್ರದಲ್ಲಿ ಬ್ಯಾಂಕ್ ಗಳು ತೆರೆದಿರುವುದಿಲ್ಲ.
ಮೇ 8 : ರವೀಂದ್ರನಾಥ ಟ್ಯಾಗೋರ್ ಜಯಂತಿ ( Ravindranath Tagore Jayanthi )
ಮೇ 8 ರಂದು ರವೀಂದ್ರನಾಥ ಟ್ಯಾಗೋರ್ ಜಯಂತಿ ಇರುವ ಕಾರಣ ಕೊಲ್ಕತ್ತಾದಲ್ಲಿ ಬ್ಯಾಂಕ್ ಗಳು ರಜೆ ಯಲ್ಲಿರುತ್ತವೆ.
ಮೇ 10 : ಬಸವ ಜಯಂತಿ ( Basava Jayanthi )
ಮೇ 10 ರಂದು ಬಸವ ಜಯಂತಿ ಹಾಗೂ ಅಕ್ಷಯ ತೃತೀಯ ಇರುವುದರಿಂದ ಕರ್ನಾಟಕದಲ್ಲಿ ಬ್ಯಾಂಕ್ ಗಳಿಗೆ ರಜೆ ಇರುತ್ತದೆ.
ಮೇ 16 : ರಾಜ್ಯೋತ್ಸವ ದಿನ
ಮೇ 16 ರಂದು ಸಿಕ್ಕಿಂ ನಲ್ಲಿ ರಾಜ್ಯೋತ್ಸವ ಇರುವ ಕಾರಣ ಸಿಕ್ಕಿಂ ನಲ್ಲಿ ಮಾತ್ರ ಬ್ಯಾಂಕ್ ರಜೆ ಇರುತ್ತದೆ.
ಮೇ 23 : ಬುದ್ಧ ಪೂರ್ಣಿಮೆ ( Budda Purnime )
ಇನ್ನು ಮೇ 23 ರಂದು ಬುದ್ಧ ಪೂರ್ಣಿಮೆ ಇರುವುದರಿಂದ ಅಗರ್ತಲಾ, ಐಜ್ವಾಲ್, ಭೂಪಾಲ್, ಬೆಲಾಪುರ್, ಡೆಹ್ರಾಡೂನ್, ಇಟಾನಗರನಗರ, ಚಂಡೀಗಢ, ಜಮ್ಮು, ಕೊಲ್ಕತ್ತಾ, ಲಕ್ನೋ, ಮುಂಬೈ, ನಾಗ್ಪುರ, ನವದೆಹಲಿ, ರಾಯ್ ಪುರ, ರಾಂಚಿ, ಶಿಮ್ಲಾ, ಶ್ರೀನಗರದಲ್ಲಿ ಬ್ಯಾಂಕ್ ಗಳು ರಜೆಯಲ್ಲಿ ಇರುತ್ತವೆ.
ಆದ್ದರಿಂದ ಬ್ಯಾಂಕ್ ಗಳಿಗೆ ಹೋಗಬೇಕು ಎಂದು ಆಲೋಚಿಸಿರುವ ಎಲ್ಲರೂ ಒಮ್ಮೆ ರಜಗಳ ಬಗ್ಗೆ ಅರಿತುಕೊಂಡು ಕೆಲಸಗಳನ್ನು ಮುನ್ನಾದಿನವೇ ಮುಗಿಸಿಕೊಳ್ಳುವುದು ಉತ್ತಮ.
ಗಮನಿಸಿ ( Notice ) :
ಈ ರಜಾ ದಿನಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ. ಈ ಕಾರಣದಿಂದಾಗಿ, ಸ್ಥಳೀಯ ಜನರು ತಮ್ಮ ತಮ್ಮ ಕೆಲಸಗಳನ್ನು ರಾಜ ದಿನದಲ್ಲಿಯೂ ಕೂಡ ಮಾಡಿಕೊಳ್ಳಬಹುದು.
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿ
ಈ ಮಾಹಿತಿಗಳನ್ನು ಓದಿ
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group




