ನಮ್ಮ ದೈನಂದಿನ ಜೀವನದಲ್ಲಿ ಕೆಲವೊಮ್ಮೆ ಅಕಾಲಿಕ ಯಶಸ್ಸು, ಅಸಾಧಾರಣ ಅವಕಾಶಗಳು, ಅಥವಾ ದಿಕ್ಕು ತಪ್ಪಿದ ಅವಕಾಶಗಳ ಬಂದೊದಗಬಹುದು. ಅದೃಷ್ಟ ಅಥವಾ ಭಾಗ್ಯ ಎಂಬುದು ಬಹುಶಃ ಅದೆಂತಹ ಒಂದು ಅಜ್ಞಾತ ಶಕ್ತಿಯಾಗಿರಬಹುದು. ಜ್ಯೋತಿಷ್ಯ ಶಾಸ್ತ್ರ ಮತ್ತು ಸಂಖ್ಯಾಶಾಸ್ತ್ರ (Numerology) ಎಂಬ ಪ್ರಾಚೀನ ವಿದ್ಯೆಗಳು ಈ ರೀತಿಯ ಅಜ್ಞಾತ ಶಕ್ತಿಗಳ ತತ್ವವನ್ನು ವಿಶ್ಲೇಷಿಸುವ ಗಂಭೀರ ಪ್ರಯತ್ನಗಳಾಗಿವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಸಂಖ್ಯಾ ಶಾಸ್ತ್ರದ ಪ್ರಕಾರ, ಪ್ರತಿಯೊಬ್ಬ ವ್ಯಕ್ತಿಗೂ ತಮ್ಮ ರಾಶಿಯ ಪ್ರಕಾರ ಅಥವಾ ಜನ್ಮ ದಿನಾಂಕದ (Birth date) ಪ್ರಕಾರ ಕೆಲವು ವಿಶೇಷ ಸಂಖ್ಯೆಗಳು ಅದೃಷ್ಟವನ್ನು ತಂದುಕೊಡುತ್ತವೆ. ಇವುಗಳನ್ನು “ಲಕ್ಕಿ ನಂಬರ್”(Lucky Number) ಎಂದು ಕರೆಯಲಾಗುತ್ತದೆ. ಕೆಲವರು ಈ ಲಕ್ಕಿ ನಂಬರ್‌ಗಳನ್ನು ತಮ್ಮ ದೈನಂದಿನ ನಿರ್ಣಯಗಳಲ್ಲಿ ಬಳಸುವುದರ ಮೂಲಕ ಯಶಸ್ಸು, ಶಾಂತಿ ಮತ್ತು ಪ್ರಗತಿಯನ್ನು ಅನುಭವಿಸುತ್ತಿದ್ದಾರೆ ಎಂದು ನಂಬುತ್ತಾರೆ. ಅದೃಷ್ಟದ ನಂಬರ್ ಎಂದರೆ ಇದು ಕೇವಲ ನಂಬಿಕೆ ಮಾತ್ರವಲ್ಲ, ಬದಲಾಗಿ ಅದು ವ್ಯಕ್ತಿಯ ಚೈತನ್ಯ(spirit) ಶಕ್ತಿಗೆ ಪೂರಕವಾಗಿ ಕೆಲಸಮಾಡುವ ಸಂಕೇತವಾಗಿದೆ ಎಂದು ಕೆಲವರು ಹೇಳುತ್ತಾರೆ. ಹಾಗಿದ್ದರೆ, ನಿಮ್ಮ ರಾಶಿಗೆ ಯಾವ ಸಂಖ್ಯೆ ಅದೃಷ್ಟ ತರುತ್ತೆ? ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
1. ಮೇಷ ರಾಶಿ(Aries) ಅಧಿಪತಿ ಗ್ರಹ: ಮಂಗಳ :
ಅದೃಷ್ಟ ಸಂಖ್ಯೆ: 1
ಇತರೆ ಲಕ್ಕಿ ನಂಬರ್‌ಗಳು: 9, 36, 13, 69, 53, 67
ಮೇಷ ರಾಶಿಯವರು ಪ್ರಭಾವಶಾಲಿ, ಉತ್ಸಾಹಿ ಹಾಗೂ ನಿರ್ಧಾರಾತ್ಮಕ ವ್ಯಕ್ತಿತ್ವ ಹೊಂದಿರುತ್ತಾರೆ. ಸಂಖ್ಯೆ 1 ಅವರ ಶಕ್ತಿ ಮತ್ತು ಸ್ವತಂತ್ರತೆಯ ಸಂಕೇತವಾಗಿದೆ.
2. ವೃಷಭ ರಾಶಿ (Taurus) ಅಧಿಪತಿ ಗ್ರಹ: ಶುಕ್ರ :
ಅದೃಷ್ಟ ಸಂಖ್ಯೆ: 2
ಇತರೆ ಲಕ್ಕಿ ನಂಬರ್‌ಗಳು: 6, 9, 11, 35, 50, 57, 82
ಸ್ಥಿರತೆಯನ್ನು ಮೆಚ್ಚುವ ಈ ರಾಶಿಯವರು ಪ್ರೀತಿ ಮತ್ತು ನಿಷ್ಠೆಗಾಗಿ ಹೆಸರುವಾಸಿಯಾಗಿದ್ದಾರೆ. ಸಂಖ್ಯೆ 2 ಅವರ ಸೂಕ್ಷ್ಮ ಭಾವನೆಗಳಿಗೆ ಸ್ಪಂದಿಸುತ್ತದೆ.
3. ಮಿಥುನ ರಾಶಿ (Gemini) ಅಧಿಪತಿ ಗ್ರಹ: ಬುಧ :
ಅದೃಷ್ಟ ಸಂಖ್ಯೆ: 8
ಇತರೆ ಲಕ್ಕಿ ನಂಬರ್‌ಗಳು: 3, 12, 18, 35, 43, 52, 86
ಬುದ್ಧಿವಂತಿಕೆ ಮತ್ತು ಸಂವಹನ ಶಕ್ತಿಯುಳ್ಳ ಮಿಥುನರಿಗೆ ಸಂಖ್ಯೆ 8 ಸ್ಥಿರತೆ ಮತ್ತು ಸಾಧನೆ ತಂದುಕೊಡುತ್ತದೆ.
4. ಕಟಕ ರಾಶಿ (Capricorn) ಅಧಿಪತಿ ಗ್ರಹ: ಚಂದ್ರ :
ಅದೃಷ್ಟ ಸಂಖ್ಯೆ: 7
ಇತರೆ ಲಕ್ಕಿ ನಂಬರ್‌ಗಳು: 2, 11, 58, 24, 66, 53
ಸ್ನೇಹಭರಿತ ಮತ್ತು ಭಾವನಾತ್ಮಕ ವ್ಯಕ್ತಿತ್ವವಿರುವ ಈ ರಾಶಿಗೆ ಸಂಖ್ಯೆ 7 ಗಂಭೀರತೆ ಮತ್ತು ಒಳನೋಟವನ್ನು ನೀಡುತ್ತದೆ.
5. ಸಿಂಹ ರಾಶಿ (Leo) ಅಧಿಪತಿ ಗ್ರಹ: ಸೂರ್ಯ :
ಅದೃಷ್ಟ ಸಂಖ್ಯೆ: 1
ಇತರೆ ಲಕ್ಕಿ ನಂಬರ್‌ಗಳು: 4, 10, 34, 83, 59
ನಾಯಕತ್ವದ ಗುಣವಿರುವ ಸಿಂಹದವರಿಗೆ ಸಂಖ್ಯೆ 1 ಧೈರ್ಯ ಮತ್ತು ಪ್ರಭಾವವನ್ನೂ ಹೆಚ್ಚಿಸುತ್ತದೆ.
6. ಕನ್ಯಾ ರಾಶಿ (Virgo) ಅಧಿಪತಿ ಗ್ರಹ: ಬುಧ :
ಅದೃಷ್ಟ ಸಂಖ್ಯೆ: 5
ಇತರೆ ಲಕ್ಕಿ ನಂಬರ್‌ಗಳು: 3, 16, 90, 29, 80
ಅತ್ಯಂತ ವಿಶ್ಲೇಷಣಾತ್ಮಕ ಮನಸ್ಸು ಹೊಂದಿರುವ ಕನ್ಯಾ ರಾಶಿಯವರು ಸಂಖ್ಯೆ 5 ಮೂಲಕ ತ್ವರಿತ ನಿರ್ಣಯ ಮತ್ತು ಚುರುಕಾದ ಚಲನೆ ಹೊಂದುತ್ತಾರೆ.
7. ತುಲಾ ರಾಶಿ (Libra) ಅಧಿಪತಿ ಗ್ರಹ: ಶುಕ್ರ :
ಅದೃಷ್ಟ ಸಂಖ್ಯೆ: 4
ಇತರೆ ಲಕ್ಕಿ ನಂಬರ್‌ಗಳು: 6, 7, 20, 55, 35
ಸೌಂದರ್ಯ ಮತ್ತು ಸಮತೋಲನಕ್ಕಾಗಿ ಪ್ರಸಿದ್ಧರಾದ ತುಲಾ ರಾಶಿಯವರಿಗೆ 4 ಶಿಸ್ತು ಮತ್ತು ಸ್ಥಿರತೆಯ ಸಂಕೇತವಾಗಿದೆ.
8. ವೃಶ್ಚಿಕ ರಾಶಿ (Scorpio) ಅಧಿಪತಿ ಗ್ರಹ: ಮಂಗಳ :
ಅದೃಷ್ಟ ಸಂಖ್ಯೆ: 9
ಇತರೆ ಲಕ್ಕಿ ನಂಬರ್‌ಗಳು: 11, 17, 27, 45, 53
ಗಂಭೀರ ಹಾಗೂ ರಹಸ್ಯಮಯ ವ್ಯಕ್ತಿತ್ವವಿರುವ ವೃಶ್ಚಿಕ ರಾಶಿಗೆ 9 ಶಕ್ತಿಯ ಸಂಕೇತವಾಗಿದೆ.
9. ಧನು ರಾಶಿ (Sagittarius) ಅಧಿಪತಿ ಗ್ರಹ: ಗುರು :
ಅದೃಷ್ಟ ಸಂಖ್ಯೆ: 3
ಇತರೆ ಲಕ್ಕಿ ನಂಬರ್‌ಗಳು: 5, 15, 12, 21, 30
ಧರ್ಮ ಮತ್ತು ಜ್ಞಾನವನ್ನು ಪ್ರೀತಿಸುವ ಧನು ರಾಶಿಯವರಿಗೆ 3 ಸೃಜನಾತ್ಮಕತೆ ಮತ್ತು ಆತ್ಮವಿಶ್ವಾಸ ತಂದುಕೊಡುತ್ತದೆ.
10. ಮಕರ ರಾಶಿ (Capricorn) ಅಧಿಪತಿ ಗ್ರಹ: ಶನಿ:
ಅದೃಷ್ಟ ಸಂಖ್ಯೆ: 4
ಇತರೆ ಲಕ್ಕಿ ನಂಬರ್‌ಗಳು: 1, 10, 13, 17, 22, 25
ಶ್ರಮ ಮತ್ತು ಶಿಸ್ತನ್ನು ಮೆಚ್ಚುವ ಮಕರರಿಗೆ 4 ಸೌಂದರ್ಯ, ನಿರ್ಣಾಯಕತೆ ಮತ್ತು ನಿಷ್ಠೆ ತಂದುಕೊಡುತ್ತದೆ.
11. ಕುಂಭ ರಾಶಿ (Aquarius) ಅಧಿಪತಿ ಗ್ರಹ: ಶನಿ :
ಅದೃಷ್ಟ ಸಂಖ್ಯೆ: 8
ಇತರೆ ಲಕ್ಕಿ ನಂಬರ್‌ಗಳು: 4, 13, 17, 40, 61
ವಿಚಿತ್ರ ಆಲೋಚನೆಗಳೊಂದಿಗೆ ಸಮಾಜಮುಖಿ ದೃಷ್ಟಿಕೋನ ಹೊಂದಿರುವ ಕುಂಭದವರಿಗೆ 8 ಶಕ್ತಿ ಮತ್ತು ಸಾಧನೆಯ ಮಾರ್ಗ ತೋರಿಸುತ್ತದೆ.
12. ಮೀನ ರಾಶಿ (Pisces) ಅಧಿಪತಿ ಗ್ರಹ: ಗುರು)
ಅದೃಷ್ಟ ಸಂಖ್ಯೆ: 3
ಇತರೆ ಲಕ್ಕಿ ನಂಬರ್‌ಗಳು: 12, 27, 30, 34, 61
ಕಲಾತ್ಮಕ ಮತ್ತು ಕನಸುಗಳಿಂದ ತುಂಬಿರುವ ಈ ರಾಶಿಗೆ 3 ಸೃಜನಾತ್ಮಕತೆ ಮತ್ತು ಧ್ಯೇಯ ಸಾಧನೆ ತಂದುಕೊಡುತ್ತದೆ.
ಈ ವಿವರಗಳು ಸಂಖ್ಯಾಶಾಸ್ತ್ರದ (Numerology) ಆಧಾರದ ಮೇಲೆ ನೀಡಲಾಗಿದೆ. ಇದು ವೈಜ್ಞಾನಿಕವಾಗಿ ಸಾಬೀತಾದ ಮಾಹಿತಿ ಅಲ್ಲವಾದರೂ, ವಿಶ್ವಾಸ ಮತ್ತು ಆತ್ಮಸ್ಥೈರ್ಯವನ್ನು(Confidence and self-confidence) ಹೆಚ್ಚಿಸಬಲ್ಲದು. ನಂಬಿಕೆಯಿಂದ ಮುನ್ನಡೆಯುವುದು ಜೀವನದಲ್ಲಿ ಆಧ್ಯಾತ್ಮಿಕ ಶಕ್ತಿಯೊಂದಿಗಿನ ಪ್ರಯಾಣವನ್ನೇ ಆರಂಭಿಸುವಂತಾಗುತ್ತದೆ.
ಹಕ್ಕು ನಿರಾಕರಣೆ: ಈ ಮಾಹಿತಿ ಜ್ಯೋತಿಷ್ಯ ಮತ್ತು ನಂಬಿಕೆಗಳನ್ನು ಆಧರಿಸಿದೆ. ಇದು ನೀಡ್ಸ್ ಆಫ್ ಪಬ್ಲಿಕ್ ಅಧಿಕೃತ ಅಭಿಪ್ರಾಯವಲ್ಲ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.