ಪ್ರಮುಖ ಮುಖ್ಯಾಂಶಗಳು:
- ಎಲ್ಲರಿಗೂ ಗ್ಯಾಸ್ e-KYC ಕಡ್ಡಾಯವಲ್ಲ, ವದಂತಿ ನಂಬಬೇಡಿ.
- ಉಜ್ವಲ ಯೋಜನೆಯವರಿಗೆ ಮಾತ್ರ ವರ್ಷಕ್ಕೊಮ್ಮೆ ಕೆವೈಸಿ ಕಡ್ಡಾಯ.
- e-KYC ಮಾಡದಿದ್ದರೂ ನಿಮ್ಮ ಗ್ಯಾಸ್ ಸಿಲಿಂಡರ್ ಪೂರೈಕೆ ನಿಲ್ಲುವುದಿಲ್ಲ.
ಮಾರ್ಚ್ 31ರೊಳಗೆ ಗ್ಯಾಸ್ e-KYC ಮಾಡಿಸದಿದ್ದರೆ ಕನೆಕ್ಷನ್ ಕಟ್ ಆಗುತ್ತಂತೆ, ಸಬ್ಸಿಡಿ ನಿಂತುಹೋಗುತ್ತಂತೆ ಎಂಬ ಸುದ್ದಿ ಕೇಳಿ ಗಾಬರಿಯಿಂದ ಗ್ಯಾಸ್ ಏಜೆನ್ಸಿಗಳ ಮುಂದೆ ಕ್ಯೂ ನಿಂತಿದ್ದೀರಾ? ಮೊಬೈಲ್‌ನಲ್ಲಿ ಆಪ್ ಇನ್‌ಸ್ಟಾಲ್ ಮಾಡಿ ಫೇಸ್ ಸ್ಕ್ಯಾನ್ ಆಗದೆ ಸುಸ್ತಾಗಿದ್ದೀರಾ? ಹಾಗಾದರೆ ದಯವಿಟ್ಟು ರಿಲ್ಯಾಕ್ಸ್ ಆಗಿ!
ಕಳೆದ ಕೆಲವು ದಿನಗಳಿಂದ ಎಲ್‌ಪಿಜಿ ಗ್ಯಾಸ್ (LPG Gas) ಸಿಲಿಂಡರ್ ಗ್ರಾಹಕರಿಗೆಲ್ಲಾ e-KYC ಕಡ್ಡಾಯ ಎಂಬ ವದಂತಿ ವ್ಯಾಪಕವಾಗಿ ಹರಿದಾಡುತ್ತಿತ್ತು. ಈ ಗೊಂದಲಕ್ಕೆ ಇದೀಗ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವೇ ಅಧಿಕೃತವಾಗಿ ತೆರೆ ಎಳೆದಿದ್ದು, ಗ್ರಾಹಕರಿಗೆ ಭರ್ಜರಿ ರಿಲೀಫ್ ನೀಡಿದೆ. ಸರ್ಕಾರದ ಹೊಸ ಸ್ಪಷ್ಟನೆಯ ಪ್ರಕಾರ ಯಾರಿಗೆ ಕೆವೈಸಿ ಕಡ್ಡಾಯ? ಸಿಲಿಂಡರ್ ನಿಲ್ಲಿಸುತ್ತಾರಾ? ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ಸಾಮಾನ್ಯ ಗ್ರಾಹಕರಿಗೆ ಕೆವೈಸಿ ಕಡ್ಡಾಯವಿಲ್ಲ!
ನೀವು ಪ್ರಧಾನ ಮಂತ್ರಿ ಉಜ್ವಲ ಯೋಜನೆ (PM Ujjwala Yojana) ಹೊರತುಪಡಿಸಿ, ಸಾಮಾನ್ಯ ಗ್ಯಾಸ್ ಕನೆಕ್ಷನ್ ಹೊಂದಿದ್ದರೆ ಮತ್ತು ಈ ಹಿಂದೆ ಒಮ್ಮೆಯಾದರೂ ನಿಮ್ಮ ಏಜೆನ್ಸಿಯಲ್ಲಿ ಅಥವಾ ಆನ್‌ಲೈನ್‌ನಲ್ಲಿ ಇ-ಕೆವೈಸಿ ಮಾಡಿಸಿದ್ದರೆ, ನೀವು ಮತ್ತೆ ಮತ್ತೆ ಕೆವೈಸಿ ಮಾಡಿಸುವ ಅಗತ್ಯವೇ ಇಲ್ಲ. ಈ ನಿಯಮ ಎಲ್ಲರಿಗೂ ಅನ್ವಯಿಸುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಉಜ್ವಲ ಯೋಜನೆಯವರಿಗೆ ಮಾತ್ರ ವರ್ಷಕ್ಕೊಮ್ಮೆ ಕಡ್ಡಾಯ
ಸರ್ಕಾರದ ಉಚಿತ ಗ್ಯಾಸ್ ಕನೆಕ್ಷನ್ ಪಡೆದ ‘ಉಜ್ವಲ ಯೋಜನೆ’ಯ ಫಲಾನುಭವಿಗಳು ಮಾತ್ರ ಪ್ರತಿ ಹಣಕಾಸು ವರ್ಷದಲ್ಲಿ ಒಮ್ಮೆ ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಲೇಬೇಕು. ಅದೂ ಕೂಡ ಒಂದು ವರ್ಷದಲ್ಲಿ 7ನೇ ಸಿಲಿಂಡರ್ ಪಡೆದ ಬಳಿಕ (ಅಂದರೆ 8ನೇ ಮತ್ತು 9ನೇ ಸಿಲಿಂಡರ್ ಪಡೆಯುವಾಗ) ಸಬ್ಸಿಡಿ ಹಣ ಪಡೆಯುವ ಉದ್ದೇಶಕ್ಕಾಗಿ ಇದನ್ನು ಮಾಡಿಸಬೇಕು.
ಸಿಲಿಂಡರ್ ಕಟ್ ಆಗುತ್ತಾ?
ಖಂಡಿತಾ ಇಲ್ಲ! ಒಂದು ವೇಳೆ ನೀವು ಇ-ಕೆವೈಸಿ ಮಾಡಿಸಿಲ್ಲ ಎಂದ ಮಾತ್ರಕ್ಕೆ, ನಿಮ್ಮ ಮನೆಗೆ ಬರುವ ಗ್ಯಾಸ್ ಸಿಲಿಂಡರ್ ಸರಬರಾಜನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಅಥವಾ ವಿಳಂಬ ಮಾಡುವುದಿಲ್ಲ ಎಂದು ಕೇಂದ್ರ ಸರ್ಕಾರ ಕಡ್ಡಿ ಮುರಿದಂತೆ ಹೇಳಿದೆ.
ಗ್ಯಾಸ್ e-KYC: ಸರ್ಕಾರದ ಸ್ಪಷ್ಟನೆ
| ಗ್ರಾಹಕರ ಪ್ರಕಾರ | e-KYC ನಿಯಮ | ಸಿಲಿಂಡರ್ ಪೂರೈಕೆ |
|---|---|---|
| ಸಾಮಾನ್ಯ ಗ್ರಾಹಕರು | ಈ ಹಿಂದೆ ಒಮ್ಮೆ ಮಾಡಿಸಿದ್ದರೆ ಸಾಕು, ಮತ್ತೆ ಕಡ್ಡಾಯವಿಲ್ಲ. | ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ |
| ಉಜ್ವಲ ಯೋಜನೆ ಫಲಾನುಭವಿಗಳು | ಪ್ರತಿ ವರ್ಷಕ್ಕೊಮ್ಮೆ (7ನೇ ರೀಫಿಲ್ ನಂತರ) ಕಡ್ಡಾಯ. | ನಿಲ್ಲುವುದಿಲ್ಲ (ಸಬ್ಸಿಡಿಗೆ ಮಾತ್ರ ತೊಂದರೆ ಆಗಬಹುದು) |
| ಹೊಸ ಗ್ರಾಹಕರು | ಕನೆಕ್ಷನ್ ಪಡೆಯುವಾಗಲೇ ಮಾಡಲಾಗುತ್ತದೆ. | ಯಾವುದೇ ಅಡ್ಡಿಯಿಲ್ಲ |
ಮುಖ್ಯ ಸೂಚನೆ: ನಕಲಿ ಗ್ರಾಹಕರನ್ನು ಪತ್ತೆಹಚ್ಚಲು ಮತ್ತು ಸಬ್ಸಿಡಿ ಹಣ ನೇರವಾಗಿ ಅರ್ಹರ ಖಾತೆಗೆ ಹೋಗಲಿ ಎಂಬ ಉದ್ದೇಶದಿಂದ ಸರ್ಕಾರ ಈ ಪ್ರಕ್ರಿಯೆ ತಂದಿದೆಯೇ ಹೊರತು, ಸಾಮಾನ್ಯ ಜನರ ಗ್ಯಾಸ್ ಕಟ್ ಮಾಡಲು ಅಲ್ಲ. ಹೀಗಾಗಿ ವಾಟ್ಸಾಪ್ ವದಂತಿಗಳಿಗೆ ಕಿವಿಗೊಡಬೇಡಿ.
ನಮ್ಮ ಸಲಹೆ: “ಗ್ಯಾಸ್ e-KYC ಮಾಡಿಕೊಡುತ್ತೇವೆ ಎಂದು ಯಾರಾದರೂ ನಿಮ್ಮ ಮನೆ ಬಾಗಿಲಿಗೆ ಬಂದು ಹಣ ಕೇಳಿದರೆ ಅಥವಾ ಓಟಿಪಿ (OTP) ಕೇಳಿದರೆ ಯಾವುದೇ ಕಾರಣಕ್ಕೂ ಕೊಡಬೇಡಿ. ಇದು ಸಂಪೂರ್ಣ ಉಚಿತ ಪ್ರಕ್ರಿಯೆ. ಗ್ಯಾಸ್ ಏಜೆನ್ಸಿಯವರೇ ನಿಮ್ಮ ಮೇಲೆ ಅನಗತ್ಯ ಒತ್ತಡ ಹೇರಿದರೆ, ತಕ್ಷಣವೇ ಸರ್ಕಾರದ ಟೋಲ್ ಫ್ರೀ ಸಹಾಯವಾಣಿ: 18002333555 ಗೆ ಕರೆ ಮಾಡಿ ದೂರು ನೀಡಿ.”
ಸಾಮಾನ್ಯ ಪ್ರಶ್ನೆಗಳು (FAQs)
❓ ನಾನು ಸಾಮಾನ್ಯ ಕನೆಕ್ಷನ್ ಹೊಂದಿದ್ದೇನೆ, ಡೆಡ್‌ಲೈನ್ ಒಳಗೆ e-KYC ಮಾಡದಿದ್ದರೆ ಗ್ಯಾಸ್ ಸಿಗಲ್ವಾ?
❓ ನನ್ನದು ಉಜ್ವಲ ಕನೆಕ್ಷನ್, ನಾನು ಹೇಗೆ e-KYC ಮಾಡುವುದು?
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

“Lingaraj is the Editor-in-Chief at NeedsOfPublic.in, where he leads the editorial strategy and content integrity team. With a unique academic background combining Technology (BCA, MCA) and Media (MA in Journalism), Lingaraj brings a data-driven approach to news reporting. Over his 7-year career in digital media, he has specialized in bridging the gap between complex government digital infrastructures and public understanding.
As Editor-in-Chief, Lingaraj oversees all fact-checking processes to ensure that every article meets high journalistic standards. He is passionate about using his technical expertise to combat misinformation in the digital space.”
Connect with Lingaraj:


WhatsApp Group




