ಎಲ್ ಪಿಜಿ ಸಿಲೆಂಡರ್(LPG cylinder) ಬಳಕೆದಾರರಿಗೆ ಬಿಗ್ ಶಾಕ್.! ನಂವೆಂಬರ್(November) ತಿಂಗಳ ಮೊದಲ ದಿನವೇ ಜನರ ಜೇಬಿಗೆ ಬಿತ್ತು ಕತ್ತರಿ.
ಇಂದು ಎಲ್ಲರೂ ಮನೆಗಳಲ್ಲಿ, ಗೃಹ ಬಳಕೆ(Domestic use) ಹಾಗೂ ವಾಣಿಜ್ಯ ಕೆಲಸಗಳಿಗೆ (commercial purposes) ಎಲ್‌ಪಿಜಿ ಸಿಲಿಂಡರ್ ಗಳನ್ನು(LPG cylinder) ಬಳಸುತ್ತಾರೆ. ಇಂದಿನ ಕಾಲಘಟ್ಟದಲ್ಲಿ ಸಿಲಿಂಡರ್ ಬಹಳ ಅವಶ್ಯಕವಾಗಿದೆ. ಎಲ್ ಪಿಜಿ ಸಿಲೆಂಡರ್ ಇಲ್ಲದೆ ಯಾರ ಮನೆಗಳಲ್ಲೂ ಅಡುಗೆ ಕೆಲಸಗಳು ಆಗುವುದಿಲ್ಲ. ಹಾಗೂ ಕಡಿಮೆ ಸಮಯದಲ್ಲಿ ಅಡುಗೆ ಕೆಸಗಳನ್ನು ಮಾಡಿ ಮುಗಿಸಬಹುದು. ಆದ್ದರಿಂದ ಇಂದು ಎಲ್ಲರ ಮನೆಯಲ್ಲೂ ಕೂಡ ಸಿಲೆಂಡರ್ ಗಳನ್ನು ಬಳಸುತ್ತಿದ್ದಾರೆ.ಅದರೆ ಇದೀಗ ಜನರ ಜೇಬಿಗೆ ಕತ್ತರಿ ಬಿದ್ದಂತಾಗಿದೆ. ವಾಣಿಜ್ಯ ವ್ಯಾಪಾರಸ್ಥರು ಎಲ್‌ಪಿಜಿ ಸಿಲಿಂಡರ್ ಅನ್ನು ಕೊಂಡು ಕೊಳ್ಳಲು ಬಹಳ ಕಷ್ಟಕರವಾದ ಪರಿಸ್ಥಿತಿ ಎದುರಾಗಿದೆ. ಅದರಲ್ಲೂ ಕನ್ನಡರಾಜ್ಯೋತ್ಸವ(Kannada Rajyotsava) ದೀಪಾವಳಿಯಂತಹ(Diwali) ಹಬ್ಬಗಳ ಸಂದರ್ಭಗಳಲ್ಲಿ ಬೆಲೆ ಏರಿಕೆಯಾಗಿದೆ. ಜನರು ಸಿಲೆಂಡರ್ ಕೊಂಡಕೊಳ್ಳಲು ಹಿಂದೆ ಮುಂದೆ ಯೋಚಿಸುವ ಪರಿಸ್ಥಿತಿ ಎದರಾಗಿದೆ. ಬೆಲೆ ಎಷ್ಟು ಏರಿಕೆಯಾಗಿದೆ (Rate Increased), ಯಾವಾಗಿನಿಂದ ಏರಿಕೆಯಾಗಿದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆಯಿಂದ (price hike) ಜನರ ಜೇಬಿಗೆ ಕತ್ತರಿ :
ಹೌದು, ಎಲ್‌ಪಿಜಿ ಸಿಲಿಂಡರ್ ಅನ್ನು ಎಲ್ಲರೂ ಬಳಸುತ್ತಿದ್ದು, ಎಲ್ಲರ ಕೈಗೆಟಕುವ ಬೆಲೆಯಲ್ಲಿ ದೊರೆಯಬೇಕು. ಆದರೆ ಇದೀಗ ತಿಂಗಳ ಮೊದಲ ದಿನವೇ ಜನರಿಗೆ ಬೆಲೆ ಏರಿಕೆಯ ಬಿಸಿ ತಾಗಿದ್ದು, ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಏರಿಕೆಯಾಗಿದೆ. ಇಂದಿನಿಂದಲೇ ಹೊಸ ದರಗಳು (new rates) ಅನ್ವಯವಾಗಲಿದೆ. 1ನೇ ನವೆಂಬರ್ 2024ರಿಂದಲೇ ಇಂಧನ ಕಂಪನಿಗಳು ಬೆಲೆಯನ್ನು ಹೆಚ್ಚಳ ಮಾಡಿಕೊಂಡಿವೆ.
ವಾಣಿಜ್ಯ ಬಳಕೆಯ ಸಿಲಿಂಡರ್ (Commercial use cylinder) ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದೆ :
ಜುಲೈ-2024 ನಂತರ 19 ಕೆಜಿ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದೆ. ಜುಲೈನಲ್ಲಿ ಆಯಿಲ್ ಮಾರ್ಕೆಟಿಂಗ್ ಕಂಪನಿಗಳು (Oil market companies) ಬೆಲೆಗಳನ್ನು ಕೊಂಚ ಇಳಿಕೆ ಮಾಡಿಕೊಂಡಿದ್ದವು. ದೇಶದ ರಾಜಧಾನಿ(capital) ದೆಹಲಿಯಲ್ಲಿ 30 ರೂಪಾಯಿವರೆಗೂ ಇಳಿಕೆಯಾಗಿತ್ತು. ಆದರೆ ಆಗಸ್ಟ್‌ನಲ್ಲಿ 8.50 ರೂಪಾಯಿ ಏರಿಕೆಯಾಗಿತ್ತು. ನಂತರ ಸೆಪ್ಟೆಂಬರ್ ನಲ್ಲಿ ಮೂರು ತಿಂಗಳು ಸೇರಿ ಒಟ್ಟು 39 ರೂಪಾಯಿ ಬೆಲೆ ಏರಿಕೆಯಾಗಿತ್ತು. ಇದೀಗ ತಿಂಗಳ ಮೊದಲ ದಿನದಿಂದಲೇ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ದರವನ್ನು 62 ರೂ.ಗಳಿಗೆ ಹೆಚ್ಚಿಸಲಾಗಿದೆ. ಇದೀಗ ಸಿಲೆಂಡರ್ ಬೆಲೆ 1740 ರೂ.ನಿಂದ 1802 ರೂ. ಆಗಿದೆ.
ದೆಹಲಿಯಿಂದ(Delhi) ಮುಂಬೈನವರೆಗೂ ಎಲ್‌ಪಿಜಿ ಸಿಲಿಂಡರ್ ನ ಬೆಲೆಗಳು ಭಿನ್ನವಾಗಿವೆ :
ನಾಲ್ಕನೇ ಬಾರಿಗೆ ಸಿಲಿಂಡರ್ ಬೆಲೆ ಏರಿಕೆಯಾಗಿದ್ದು, 19-ಕೆಜಿ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ದೆಹಲಿ ಸೇರಿದಂತೆ ಮುಂಬೈ, ಕೋಲ್ಕತ್ತಾ, ಚೆನ್ನೈನಲ್ಲಿಯೂ ಕೂಡ ಏರಿಕೆಯಾಗಿದೆ. ಸದ್ಯ ಮುಬೈನಲ್ಲಿ ರೂ. 1,754,50 ರೂಗಳಿದ್ದು, ಚೆನೈನಲ್ಲಿ 1,964.50 ರೂ ಹಾಗೂ ಕೊಲ್ಕತ್ತಾದಲ್ಲಿ 1,911.50 ರೂ. ಇದೆ. ಇನ್ನು ಬೆಂಗಳೂರಿನಲ್ಲಿ ಕಳೆದ ಬಾರಿಗೆ ಹೋಲಿಸದರೆ ಎಲ್ ಪಿ ಜಿ ಸಿಲೆಂಡರ್ ನಲ್ಲಿ ಯಾವುದೇ ರೀತಿಯ ಬದಲಾವಣೆಯಾಗಿಲ್ಲ. ಸದ್ಯ ಬೆಂಗಳೂರಿನಲ್ಲಿ ಗೃಹ ಬಳಕೆ ಎಲ್‌ಪಿಜಿ (14.2 ಕೆಜಿ) ಬೆಲೆ 805.50 ರೂ. ಇದೆ.
ಈ ಬೆಲೆ ಪರಿಷ್ಕರಣೆಯು ಪ್ರತಿನಿತ್ಯ ಸಿಲಿಂಡರ್ ಬಳಸುವ ರೆಸ್ಟೋರೆಂಟ್, ಹೋಟೆಲ್ ಮತ್ತು ಇತರ ವಾಣಿಜ್ಯ ಸಂಸ್ಥೆಗಳ ಮೇಲೆ ನೇರವಾಗಿ ಪರಿಣಾಮ ಬೀರಲಿದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group




