ರಾಜ್ಯ ಸರ್ಕಾರ ಮಹಿಳೆಯರಿಗೆ ಬರೋಬ್ಬರಿ 3 ಲಕ್ಷ ರೂಪಾಯಿಗಳಿಗೆ ಸಾಲ ಸೌಲಭ್ಯವನ್ನು ಒದಗಿಸುತ್ತಿದೆ. ಈ ಯೋಜನೆಯಡಿ ಯಾವುದೇ ಗ್ಯಾರಂಟಿ ಇಲ್ಲದೆ ಹೆಚ್ಚು ಬಡ್ಡಿ ಪಾವತಿ ಮಾಡದೆ ಸುಲಭವಾಗಿ ಮೂರು ಲಕ್ಷ ರೂಪಾಯಿ ಸಿಗುತ್ತದೆ. ಹೌದು ರಾಜ್ಯದ ಮಹಿಳೆಯರಿಗೆ ಮತ್ತೊಂದು ರಾಜ್ಯ ಸರ್ಕಾರದಿಂದ ಬಂಪರ್ ಗಿಫ್ಟ್ ಬಂದಿದ್ದು, ಸ್ವಂತ ಉದ್ಯಮ ಅಥವಾ ವ್ಯಾಪಾರ ಪ್ರಾರಂಭಿಸಲು ಉದ್ಯೋಗಿನಿ ಯೋಜನೆ ಅಡಿಯಲ್ಲಿ 3 ಲಕ್ಷ ರೂಪಾಯಿಗಳಿಗೆ ಸಾಲ ಸೌಲಭ್ಯವನ್ನು ಒದಗಿಸುತ್ತಿದೆಬಗ್ಗೆ ಸಂಪೂರ್ಣವಾದ ಮಾಹಿತಿ ಈ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲುಇಲ್ಲಿ ಕ್ಲಿಕ್ ಮಾಡಿ
ಉದ್ಯೋಗಿನಿ ಯೋಜನೆ (udyogini Loan scheme) 2024:
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಡಿ ಕಾರ್ಯನಿರ್ವಹಿಸುವ ರಾಜ್ಯದ ಮಹಿಳಾ ಅಭಿವೃದ್ಧಿ ನಿಗಮ 2023-24ನೇ ಸಾಲಿನ ನಿಗಮದ ವಿವಿಧ ಯೋಜನೆಗಳಿಗೆ ಆನ್ಲೈನ್ ಮೂಲಕ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ (KSWDC) ಮಹಿಳೆಯರಿಗೆ ತಮ್ಮ ವ್ಯವಹಾರಗಳಲ್ಲಿ ಸಹಾಯ ಮಾಡುವ ಯೋಜನೆಯನ್ನು ಪ್ರಾರಂಭಿಸಿದೆ. ಇದು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮಗಳಿಂದ ಬ್ಯಾಂಕುಗಳು ಮತ್ತು ಇತರೆ ಹಣಕಾಸು ಸಂಸ್ಥೆಗಳ ಮೂಲಕ ವ್ಯಾಪಾರ ಚಟುವಟಿಕೆಗಳ/ ಸಣ್ಣ ಉದ್ದಿಮೆಗಳನ್ನ ಕೈಗೊಳ್ಳಲು ಸಾಲದ ಮೇಲೆ ಸಹಾಯಧನವನ್ನು ಒದಗಿಸುತ್ತದೆ. Private ಬ್ಯಾಂಕ್ ಗಳು, ಜಿಲ್ಲಾ ಸಹಕಾರಿ ಬ್ಯಾಂಕ್ ಗಳು ಮತ್ತು ಪ್ರದೇಶಿಕ ಗ್ರಾಮೀಣ ಬ್ಯಾಂಕ್ ಗಳು (RRBs) ನಂತಹ ಹಣಕಾಸು ಸಂಸ್ಥೆಯ ಮೂಲಕ ಸಾಲವನ್ನು ತೆಗೆದುಕೊಳ್ಳಬಹುದು.
ಉದ್ಯೋಗಿನಿ ಯೋಜನೆ ವೈಶಿಷ್ಟತೆಗಳು :
ಈ ಯೋಜನೆಯಲ್ಲಿ ಪರಿಶಿಷ್ಟ ಜಾತಿ ( SC ) ಮತ್ತು ಪರಿಶಿಷ್ಟ ಪಂಗಡದ ( ST ) ಫಲಾನುಭವಿಗಳಿಗೆ ಮತ್ತು ಸಾಮಾನ್ಯ ವರ್ಗದವರಿಗೆ ಬೇರೆ ಬೇರೆ ರೀತಿಯ ಸಹಾಯಧನ ಇದೆ. ಅವುಗಳೆಂದರೆ :
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ:
ಆದಾಯ ಮಿತಿ : 2.00 ಲಕ್ಷ ರೂಪಾಯಿಗಳು
ಘಟಕ ವೆಚ್ಚ : ಕನಿಷ್ಟ ರೂ 1.00 ಲಕ್ಷದಿಂದ ಗರಿಷ್ಟ ರೂ. 3.00 ರೂಪಾಯಿಗಳು
ಸಹಾಯಧನ ಶೇ. 50 ರಷ್ಟು
ಸಾಮಾನ್ಯ ವರ್ಗದ ( OBC ) ಫಲಾನುಭವಿಗಳಿಗೆ :
ಆದಾಯ ಮಿತಿ : 1.50 ಲಕ್ಷ ರೂಪಾಯಿಗಳು
ಘಟಕ ವೆಚ್ಚ : ಗರಿಷ್ಟ ರೂ. 3.00 ಲಕ್ಷ ರೂಪಾಯಿಗಳು
ಸಹಾಯಧನ: ಶೇ.30 ರಷ್ಟು
ಉದ್ಯೋಗಿನಿ ಯೋಜನೆಯಡಿ ಸಾಲಗಳಿಗೆ ಅರ್ಹತೆಯ ಮಾನದಂಡ:
ಸಾಮಾನ್ಯ ಮತ್ತು ವಿಶೇಷ ವರ್ಗಕ್ಕೆ ಸೇರಿದ ಮಹಿಳೆಯರಿಗೆ ಕುಟುಂಬದ ಆದಾಯ ರೂ.1,50,000/- ಗಿಂತ ಕಡಿಮೆಯಿರಬೇಕು.
ವಯಸ್ಸಿನ ಮಿತಿ 18 ರಿಂದ 55 ವರ್ಷಗಳ ಮೀರಿರಬಾರದು. ಅರ್ಜಿದಾರರು ಉತ್ತಮ ಕ್ರೆಡಿಟ್ ಸ್ಕೋರ್ ಮತ್ತು ಮರುಪಾವತಿ ಸಾಮರ್ಥ್ಯವನ್ನು ಹೊಂದಿರುವರಾಗಿರ್ಬೇಕು.
ಯಾವ ಉದ್ಯಮಗಳನ್ನು ಆರಂಭಿಸಲು ಸಾಲ ದೊರೆಯುತ್ತದೆ?:
88 ವಿಧದ ಸಣ್ಣ ಉದ್ಯಮಗಳನ್ನು ಮಾಡಲು ಸಾಲ ದೊರೆಯುತ್ತದೆ ಅವುಗಳಲ್ಲಿ ಪ್ರಮುಖವಾದವುಗಳು ಕೆಳಗಿನಂತಿವೆ :
ನರ್ಸರಿ ತೆರೆಯಲು ,
ಮಸಾಲೆ ಮಾಡಲು,
ಬೆಡ್ ಶೀಟ್ ಮತ್ತು ಹೊದಿಕೆಗಳನ್ನು ತಯಾರಿಸಲು,
ಪಡಿತರ ಅಂಗಡಿ ತೆರೆಯಲು,
ಬಳೆಗಳನ್ನು ಮಾಡಲು, ಕಾಫಿ ಅಥವಾ ಚಹಾ ಮಾಡಲು, ಉಡುಗೊರೆ ಅಂಗಡಿಗಾಗಿ,
ಬ್ಯೂಟಿ ಪಾರ್ಲರ್ ತೆರೆಯಲು,
ಫೋಟೋ ಸ್ಟುಡಿಯೋ
ಗಿರವಿ ಅಂಗಡಿ,
ಪುಸ್ತಕ ಬೈಂಡಿಂಗ್,
ಪ್ಲಾಸ್ಟಿಕ್ ವಸ್ತುಗಳ ಅಂಗಡಿ,
ಐಸ್ ಕ್ರೀಮ್ ಅಂಗಡಿ ತೆರೆಯಲು
ಮಡಿಕೆ ಅಂಗಡಿ,
ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ
ಡೈರಿ ಅಥವಾ ಕೋಳಿ ಸಾಕಣೆ,
ಗೃಹೋಪಯೋಗಿ ವಸ್ತುಗಳ ಅಂಗಡಿಗೆ,
ಟೇಲರ್ ಅಂಗಡಿ ,
ಕಬ್ಬಿನ ವ್ಯಾಪಾರಿ,
ಹತ್ತಿ ದಾರವನ್ನು ತಯಾರಿಸಲು,
ಹೂಗಳು ಅಂಗಡಿಗೆ,
ಕೇಟರಿಂಗ್ ಬಿಸಿನೆಸ್ ಮಾಡೋದು,
ಸಾಬೂನು ತಯಾರಿಸುವ ವ್ಯಾಪಾರ,
ಆಹಾರ ಮತ್ತು ಎಣ್ಣೆ ಅಂಗಡಿ ವ್ಯಾಪಾರ,
ಚಹಾ ಟ್ಯಾಪ್ ತೆರೆಯಲು,
ಧೂಪದ್ರವ್ಯವನ್ನು ತಯಾರಿಸಲು,
ಕರಕುಶಲ ವ್ಯಾಪಾರ,
ತೆಂಗಿನಕಾಯಿ ವ್ಯಾಪಾರ,
ಪ್ರಯಾಣ ಸಂಸ್ಥೆ,
ಬೇಕರಿ ತೆರೆಯಲು,
ಸಿಹಿ ಅಂಗಡಿ,
ಪ್ರಯಾಣ ಸಂಸ್ಥೆ,
ನೇಯ್ಗೆ ರೇಷ್ಮೆ,
ಚಪ್ಪಲಿ ಮಾಡುವ ವ್ಯಾಪಾರಕ್ಕಾಗಿ,
STD ಬೂತ್ ತೆರೆಯಲು,
ಮೇಣದ ಬಣ್ಣವನ್ನು ಮಾಡಲು,
ಹಳೆಯ ಪೇಪರ್ ಮಾರ್ಟ್ ಸಂಸ್ಥೆಯನ್ನು ತೆರೆಯಲು,
ವೈದ್ಯಕೀಯ ಪ್ರಯೋಗಾಲಯಕ್ಕಾಗಿ,
ಸ್ಟೇಷನರಿ ಅಂಗಡಿ ತೆರೆಯಲು,
ಪಾಪಡ್ ವ್ಯಾಪಾರ,
ತರಕಾರಿ ಮತ್ತು ಹಣ್ಣಿನ ಅಂಗಡಿ ತೆರೆಯಲು,
ಕಂಪ್ಯೂಟರ್ ಕಲಿಕೆ ಕೇಂದ್ರ,
ಕ್ಯಾಂಟೀನ್ ಅಥವಾ ಧಾಬಾ ತೆರೆಯಲು,
ನ್ಯೂಸ್ ಪೇಪರ್,
ಮ್ಯಾಗಜೀನ್ ಅಂಗಡಿ ತೆರೆಯಲು,
ಪಾನ್ ಮತ್ತು ಸಿಗರೇಟ್,
ಕ್ಲಿನಿಕ್ ತೆರೆಯಲು,
ಹಾಲಿನ ಡೈರಿ ತೆರೆಯಲು,
ಟ್ಯೂಟೋರಿಯಲ್ ವ್ಯವಹಾರ,
ಮಟನ್ ಮತ್ತು ಚಿಕನ್ ಅಂಗಡಿ ತೆರೆಯಲು,
ಹಾಸಿಗೆಗಳ ವ್ಯಾಪಾರ,
ಶಕ್ತಿ ಆಹಾರ ವ್ಯಾಪಾರ,
ಡ್ರೈ ಕ್ಲೀನಿಂಗ್,
ಚಾಪೆ ನೇಯುವ ವ್ಯಾಪಾರ,
ಗ್ರಂಥಾಲಯವನ್ನು ತೆರೆಯಲು ಸಾಲವನ್ನು ನೀಡಲಾಗುತ್ತದೆ.
ಅಗತ್ಯವಾದ ದಾಖಲೆಗಳು :
2 passport size ಫೋಟೋ
ಆಧಾರ್ ಕಾರ್ಡ್(Aadhar Card)
ಜನ್ಮ ಪ್ರಮಾಣ ಪತ್ರ (Birth certificate)
BPL ರೇಷನ್ ಕಾರ್ಡ್ ಪ್ರತಿ
ಆದಾಯ ಪ್ರಮಾಣ ಪತ್ರ
ಜಾತಿ ದೃಢೀಕರಣ ಪ್ರಮಾಣಪತ್ರ
ಬ್ಯಾಂಕ್ ಪಾಸ್ ಬುಕ್ (ಅರ್ಜಿದಾರರು ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್/ಲಿಂಕ್ ಮಾಡಿಸಿರಬೇಕು.)
ಅರ್ಜಿ ಎಲ್ಲಿ ಸಲ್ಲಿಸಬೇಕು?
ಉದ್ಯೋಗಿನಿ ಯೋಜನೆಯ ಅಧಿಕೃತ ಅಧಿಸೂಚನೆ : Download
ಆಸಕ್ತ ಅರ್ಹ ಅರ್ಜಿದಾರರು ಅಗತ್ಯ ದಾಖಲಾತಿಗಳ ಸಮೇತ ನಿಮ್ಮ ಹತ್ತಿರದ ಗ್ರಾಮ ಪಂಚಾಯತಿಯ ಬಾಪೂಜಿ ಸೇವಾ ಕೇಂದ್ರ, ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಅಥವಾ ಕಂಪ್ಯೂಟರ್ ಸೆಂಟರ್ ಭೇಟಿ ಮಾಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಸೂಚನೆ: ಸರ್ಕಾರದ ವಿವೇಚನಾ ಕೋಟಾ ಮತ್ತು ನಿಗಮದ ಕೋಟಾದಡಿ ಸೌಲಭ್ಯ ಪಡೆಯಲು ಇಚ್ಛಿಸುವ ಫಲಾಪೇಕ್ಷಿಗಳು/ ಅರ್ಜಿದಾರರು ಮಾನ್ಯ ಸಚಿವರು/ಮಾನ್ಯ ಶಾಸಕರು, ಕರ್ನಾಟಕ ಸರ್ಕಾರ/ಮಾನ್ಯ ಅಧ್ಯಕ್ಷರು, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಇವರ ಶಿಫಾರಸ್ಸು ಪತ್ರ ಪಡೆದು ಸೇವಾ ಸಿಂಧು ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲೆಯ ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲೆಯ ಅಭಿವೃದ್ಧಿ ನಿರೀಕ್ಷಕರು, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಕಛೇರಿ ಭೇಟಿ ಮಾಡಿ ಮಾಹಿತಿ ಪಡೆಯಬವುದು.
ಮಹಿಳಾ ಅಭಿವೃದ್ಧಿ ನಿಗಮದ ಕಚೇರಿ ವಿಳಾಸ: 6ನೇ ಮಹಡಿ. ಜಯನಗರ ವಾಣಿಜ್ಯ ಸಂಕೀರ್ಣ. 4ನೇ ಬ್ಲಾಕ್, ಜಯನಗರ, ಬೆಂಗಳೂರು-560011
ದೂರವಾಣಿ ಸಂಖ್ಯೆ: 080-26632973/26542307
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
- ಕೇಂದ್ರ ಸರ್ಕಾರದಿಂದ ಯಾವುದೇ ಗ್ಯಾರಂಟಿ ಇಲ್ಲದೇ 10 ಲಕ್ಷ ರೂ.ವರೆಗೆ ಸಾಲ ಸೌಲಭ್ಯ
- ಸಾಲಕ್ಕೆ ಅರ್ಜಿ ಸಲ್ಲಿಸುವಾಗ, ಸಿಬಿಲ್ ಸ್ಕೋರ್ ಹೆಚ್ಚು ಮಾಡುವ ಸೀಕ್ರೆಟ್ ಟ್ರಿಕ್ಸ್ ಇಲ್ಲಿದೆ
- ‘RBI’ ನಿಂದ ‘ಪೇಟಿಎಂ ಬ್ಯಾಂಕ್’ಗೆ ನಿರ್ಬಂಧ, ಫೆ.29 ರಿಂದ ಬಂದ್ ಆಗುತ್ತಾ?
- ಯಾವುದೇ ಗ್ಯಾರಂಟಿ ಇಲ್ಲದೇ ಸಿಗಲಿದೆ 2 ಲಕ್ಷ ರೂ.ವರೆಗೆ ಸಾಲ..! ಮೋದಿ ಸರ್ಕಾರದ ಹೊಸ ಯೋಜನೆ
- ರಾಜ್ಯಾದ್ಯಂತ ರೈತರ ಜಮೀನಿನ ಪಹಣಿಯಲ್ಲಿನ ಲೋಪದೋಷ ಸರಿಪಡಿಸಲು ಕಂದಾಯ ಅದಾಲತ್
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group







