Picsart 25 09 29 22 58 34 098 scaled

ನಕಲಿ ಆ್ಯಪ್‌ಗಳಿಂದ ಎಚ್ಚರಿಕೆ! RBI ಮಾನ್ಯತೆ ಪಡೆದ ಜನಪ್ರಿಯ ಲೋನ್‌ ಆ್ಯಪ್‌ಗಳ ಪಟ್ಟಿ 10 ನಿಮಿಷದಲ್ಲಿ ಸಿಗುತ್ತೆ ಸಾಲ

Categories:
WhatsApp Group Telegram Group

ನಮ್ಮ ದೈನಂದಿನ ಜೀವನದಲ್ಲಿ ಆರ್ಥಿಕ ತುರ್ತು ಪರಿಸ್ಥಿತಿ (Economic Emergency situation) ಯಾವಾಗ ಎದುರಾಗುತ್ತದೆ ಎಂಬುದು ಯಾರಿಗೂ ಮುಂಚಿತವಾಗಿ ತಿಳಿದಿರುವುದಿಲ್ಲ. ಅಕಸ್ಮಾತ್ತಾಗಿ ಆಸ್ಪತ್ರೆಗೆ ಹಣ ಬೇಕಾಗಬಹುದು, ಮನೆಗೆ ಸಂಬಂಧಿಸಿದ ಅಗತ್ಯ ಖರ್ಚುಗಳು ಬರಬಹುದು ಅಥವಾ ಮಕ್ಕಳ ಶಿಕ್ಷಣ ವೆಚ್ಚಕ್ಕೆ ತುರ್ತು ವ್ಯವಸ್ಥೆ ಮಾಡಬೇಕಾಗಬಹುದು. ಇಂತಹ ಸಂದರ್ಭದಲ್ಲಿ ಹೆಚ್ಚಿನವರಿಗೆ ಮೊದಲಿಗೆ ನೆನಪಿಗೆ ಬರುವುದೇ ವೈಯಕ್ತಿಕ ಸಾಲ (Personal Loan). ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಹಿಂದಿನ ದಿನಗಳಲ್ಲಿ ಬ್ಯಾಂಕಿನಿಂದ ಸಾಲ ಪಡೆಯುವುದು ಬಹಳ ಕಷ್ಟಕರ ಮತ್ತು ಸಮಯ ತೆಗೆದುಕೊಳ್ಳುವ ಪ್ರಕ್ರಿಯೆಯಾಗಿತ್ತು. ಹಲವಾರು ದಾಖಲೆಗಳು, ಗ್ಯಾರಂಟಿಗಳು, ಬ್ಯಾಂಕ್‌ಗೆ (Bank) ಹಲವು ಬಾರಿ ಸುತ್ತಾಡುವುದು ಇವು ಎಲ್ಲವೂ ಸಾಮಾನ್ಯವಾಗಿತ್ತು. ಆದರೆ ಇಂದಿನ ಡಿಜಿಟಲ್ ಯುಗದಲ್ಲಿ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿದೆ. ಈಗ ಬ್ಯಾಂಕುಗಳು ಹಾಗೂ ಫಿನ್‌ಟೆಕ್ ಕಂಪನಿಗಳು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳು (Online flatforms) ಮೂಲಕ ಕೇವಲ ಕೆಲವು ನಿಮಿಷಗಳಲ್ಲಿ ವೈಯಕ್ತಿಕ ಸಾಲ ನೀಡಲು ಆರಂಭಿಸಿವೆ.

ಆದರೆ ಇಲ್ಲಿ ಒಂದು ಮುಖ್ಯ ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಲ್ಲಾ ಸಾಲದ ಅಪ್ಲಿಕೇಶನ್‌ಗಳು (Loan Apps) ಸುರಕ್ಷಿತವಲ್ಲ. ಹಲವಾರು ನಕಲಿ ಅಪ್ಲಿಕೇಶನ್‌ಗಳು ಜನರನ್ನು ಮೋಸಗೊಳಿಸುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಇದೇ ಕಾರಣಕ್ಕಾಗಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ಅನುಮೋದನೆ ಪಡೆದ ಸಾಲದ ಅಪ್ಲಿಕೇಶನ್‌ಗಳಿಂದ ಮಾತ್ರ ಹಣವನ್ನು ಎರವಲು ಪಡೆಯುವುದು ಅತ್ಯಂತ ಸುರಕ್ಷಿತ.

ಹೀಗಾಗಿ RBI ಅನುಮೋದಿಸಿದ, ಜನಪ್ರಿಯವಾಗಿರುವ ಮತ್ತು ಸುರಕ್ಷಿತವಾಗಿರುವ 10 ಪ್ರಮುಖ ಸಾಲದ ಅಪ್ಲಿಕೇಶನ್‌ಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

RBI ಅನುಮೋದಿಸಿದ 10 ಜನಪ್ರಿಯ ಸಾಲದ ಅಪ್ಲಿಕೇಶನ್‌ಗಳು ಹೀಗಿವೆ:

1. Fibe:
2 ನಿಮಿಷಗಳಲ್ಲಿ ಸಾಲ ಮಂಜೂರು.
ಗರಿಷ್ಠ ₹5 ಲಕ್ಷವರೆಗೂ ಸಾಲ.
ಯಾವುದೇ ಮುಟ್ಟುಗೋಲು ಇಲ್ಲ.
ಮ್ಯೂಚುಯಲ್ ಫಂಡ್‌ಗಳ (Mutual fund’s) ವಿರುದ್ಧವೂ ಸಾಲ ಸೌಲಭ್ಯ.

2. ZestMoney:
ಯಾವುದೇ ಭೌತಿಕ ದಾಖಲೆ ಅಗತ್ಯವಿಲ್ಲ.
₹2 ಲಕ್ಷವರೆಗಿನ ಕ್ರೆಡಿಟ್.
ಮರುಪಾವತಿ 3, 6, 9 ಅಥವಾ 12 ಕಂತುಗಳಲ್ಲಿ.

3. ಐಡಿಎಫ್‌ಸಿ ಫಸ್ಟ್‌ ಬ್ಯಾಂಕ್(IDFC First bank) :
ಗರಿಷ್ಠ ₹10 ಲಕ್ಷ ಸಾಲ.
ವಾರ್ಷಿಕ 9.99% ಬಡ್ಡಿದರ.
9 ರಿಂದ 60 ತಿಂಗಳ ಮರುಪಾವತಿ ಅವಧಿ.

4. ಆದಿತ್ಯ ಬಿರ್ಲಾ ಕ್ಯಾಪಿಟಲ್(Adithya Birla Capital) :
ತ್ವರಿತ ಸಾಲ ಸೌಲಭ್ಯ.
12 ತಿಂಗಳವರೆಗೂ 19.45% ಬಡ್ಡಿದರ.
12 ತಿಂಗಳಿಗಿಂತ ಹೆಚ್ಚು ಅವಧಿಗೆ 20.45% ಬಡ್ಡಿದರ.
ಕನಿಷ್ಠ 650 ಕ್ರೆಡಿಟ್ ಸ್ಕೋರ್ ಅಗತ್ಯ.

5. ಕ್ರೆಡಿಟ್ ಬೀ (CreditBee):
₹6,000 ರಿಂದ ₹10 ಲಕ್ಷವರೆಗೂ ಸಾಲ.
ಬಡ್ಡಿದರ 12% – 28% ವಾರ್ಷಿಕ.
ಮರುಪಾವತಿ ಅವಧಿ 6 ರಿಂದ 60 ತಿಂಗಳು.

6. CASHe:
₹50,000 ರಿಂದ ₹3 ಲಕ್ಷವರೆಗಿನ ಸಾಲ.
ಮರುಪಾವತಿ ಅವಧಿ 9 ರಿಂದ 18 ತಿಂಗಳು.

7. mPokket:
₹50,000 ವರೆಗಿನ ಸಣ್ಣ ಸಾಲ.
PAN, ಆಧಾರ್ ಮುಂತಾದ KYC ಅಗತ್ಯ.
EMI ಅಥವಾ ಒಮ್ಮೆಗೇ ಪಾವತಿ ಆಯ್ಕೆ.

8. Money View:
ಗರಿಷ್ಠ ₹10 ಲಕ್ಷ ಸಾಲ.
ಮರುಪಾವತಿ ಅವಧಿ 3 ರಿಂದ 60 ತಿಂಗಳು.

9. Stashfin:
₹5 ಲಕ್ಷವರೆಗಿನ ಕ್ರೆಡಿಟ್ ಮಿತಿ.
30 ದಿನಗಳ ಬಡ್ಡಿರಹಿತ ಅವಧಿ.

10. Lazy Pay:
₹3,000 ರಿಂದ ₹5 ಲಕ್ಷವರೆಗಿನ ಸಾಲ.
ಯಾವುದೇ ಭೌತಿಕ ದಾಖಲೆಗಳ ಅಗತ್ಯವಿಲ್ಲ.
KYC ಮತ್ತು ಆಟೋ-ಪೇ ಕಡ್ಡಾಯ.
3 ರಿಂದ 24 ತಿಂಗಳ ಮರುಪಾವತಿ ಅವಧಿ.

ಸಾಲ ಪಡೆಯುವ ಪ್ರಕ್ರಿಯೆ ಹೇಗೆ?:

ಈ ಅಪ್ಲಿಕೇಶನ್‌ಗಳ ಮೂಲಕ ಸಾಲ ಪಡೆಯಲು ಗ್ರಾಹಕರು ಮೊದಲು ಆನ್‌ಲೈನ್ ಅರ್ಜಿ (Online application) ಸಲ್ಲಿಸಬೇಕು. ಬಳಿಕ eKYC ಪ್ರಕ್ರಿಯೆ ನಡೆಯುತ್ತದೆ. ಬ್ಯಾಂಕ್ ಸ್ಟೇಟ್‌ಮೆಂಟ್‌, ಪೇಸ್ಲಿಪ್ ಮತ್ತು ಕ್ರೆಡಿಟ್ ವರದಿ ಪರಿಶೀಲಿಸಿದ ನಂತರ, ಸಾಲ ಮಂಜೂರಾಗುತ್ತದೆ. ಸಂಸ್ಕರಣಾ ಶುಲ್ಕಗಳನ್ನು ಕಡಿತಗೊಳಿಸಿದ ಬಳಿಕ ಉಳಿದ ಮೊತ್ತವನ್ನು ನೇರವಾಗಿ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ.

ಒಟ್ಟಾರೆಯಾಗಿ, RBI ಅನುಮೋದಿಸಿದ ಈ ಅಪ್ಲಿಕೇಶನ್‌ಗಳು ಸುರಕ್ಷಿತವಾದರೂ, ತುರ್ತು ಅವಶ್ಯಕತೆಯ ಹೊರತು ಸಾಲವನ್ನು ತೆಗೆದುಕೊಳ್ಳದಿರುವುದು ಉತ್ತಮ. ಅನಧಿಕೃತ ಅಪ್ಲಿಕೇಶನ್‌ಗಳು ಹಾಗೂ ಮೋಸಗಾರರಿಂದ ಎಚ್ಚರಿಕೆಯಿಂದಿರಬೇಕು. ಸರ್ಕಾರ ಮತ್ತು RBI (Government and RBI) ಜನರಿಗೆ ನಕಲಿ ಆ್ಯಪ್‌ಗಳ ಬಲೆಗೆ ಬಿದ್ದರೆ ದೊಡ್ಡ ಮಟ್ಟದ ಹಣಕಾಸು ನಷ್ಟವಾಗಬಹುದು ಎಂದು ಎಚ್ಚರಿಕೆ ನೀಡಿವೆ.

ಆದ್ದರಿಂದ, ಸಾಲ ಬೇಕಾದರೆ RBI ಮಾನ್ಯತೆ ಪಡೆದ ಫಿನ್‌ಟೆಕ್ ಕಂಪನಿಗಳ ಅಪ್ಲಿಕೇಶನ್‌ಗಳನ್ನು ಮಾತ್ರ ಬಳಸಿರಿ.

WhatsApp Image 2025 09 05 at 11.51.16 AM 12

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories