ಬಾಲ್ಯದಲ್ಲೇ ಕಂಪನಿ ಆರಂಭಿಸಿ ಯಶಸ್ಸು ಕಂಡ ಎಂಟು ಯುವ ಉದ್ಯಮಿಗಳು ಪಟ್ಟಿ!.

Picsart 25 08 06 23 22 00 830

WhatsApp Group Telegram Group

ಭಾರತದಲ್ಲಿ ಅನೇಕರು ತಮ್ಮ ಇಪ್ಪತ್ತರ ವಯಸ್ಸಿನಲ್ಲಿ ಕಾಲೇಜು ಪದವಿ ಪಡೆದು ಉದ್ಯೋಗ ಹುಡುಕಲು ಆರಂಭಿಸುತ್ತಾರೆ. ಸರ್ಕಾರಿ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗಳತ್ತ ಹೆಚ್ಚಿನವರು ಗಮನ ಹರಿಸುತ್ತಾರೆ. ಆದರೆ, ಈ ಮಧ್ಯೆ ಕೆಲವರು ತಮ್ಮ ಕಲ್ಪನೆ, ಪರಿಶ್ರಮ ಮತ್ತು ತಂತ್ರಜ್ಞಾನ ಜ್ಞಾನದಿಂದ ಬಹುತೇಕರು ಕನಸಲ್ಲೂ ಯೋಚಿಸದ ಮಟ್ಟಿಗೆ ಯಶಸ್ಸು ಸಾಧಿಸುತ್ತಾರೆ. ಇಂದು ನಾವು ಇಪ್ಪತ್ತರ ವಯಸ್ಸಿಗೂ ಮುನ್ನವೇ CEOಗಳಾಗಿ ಕೋಟ್ಯಧಿಪತಿಗಳಾಗಿರುವ ಭಾರತದ ಯುವ ಉದ್ಯಮಿಗಳು ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಟೆಕ್ನಾಲಜಿ, ಔಷಧಿ, ಲಾಜಿಸ್ಟಿಕ್ಸ್, ಡಿಜಿಟಲ್ ಮಾರ್ಕೆಟಿಂಗ್ ಮುಂತಾದ ವಿಭಿನ್ನ ವಲಯಗಳಲ್ಲಿ ಇವರು ತಮ್ಮದೇ ಆದ ಹೆಜ್ಜೆ ಗುರುತು ಮೂಡಿಸಿದ್ದಾರೆ. ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ಉದ್ಯಮ ಜಗತ್ತಿನಲ್ಲಿ ದೊಡ್ಡ ಸಾಧನೆ ಮಾಡಿ, ಇಂದಿನ ಪೀಳಿಗೆಗೆ ಪ್ರೇರಣೆಯಾದ ಎಂಟು ಯುವಕರ ಸಾಧನೆಗಳ ಕುರಿತು ನೋಡೋಣ.

1. ತಿಲಕ್ ಮೆಹ್ರಾ – Papers N Parcels (ವಯಸ್ಸು: 13):
ಮುಂಬೈ ಮೂಲದ ತಿಲಕ್ ಮೆಹ್ರಾ 13ನೇ ವಯಸ್ಸಿನಲ್ಲಿಯೇ Papers N Parcels ಹೆಸರಿನ ಡಿಜಿಟಲ್ ಕೊರಿಯರ್ ಸ್ಟಾರ್ಟ್‌ಅಪ್ ಆರಂಭಿಸಿದರು. ಮುಂಬೈನ ಪ್ರಸಿದ್ಧ ಡಬ್ಬಾವಾಲಾ ನೆಟ್‌ವರ್ಕ್ ಮೂಲಕ ಈ ಸೇವೆ ಆರಂಭವಾದ ಕೆಲವೇ ದಿನಗಳಲ್ಲಿ ನಗರದಾದ್ಯಂತ ಲಾಜಿಸ್ಟಿಕ್ಸ್ ಸೊಲ್ಯೂಷನ್ ಆಗಿ ಬೆಳೆದಿತು. ಇಂದಿಗೆ ಈ ಕಂಪನಿಯ ಮೌಲ್ಯ 100 ಕೋಟಿ ರೂಪಾಯಿಗಿಂತ ಹೆಚ್ಚು.

2. ಶ್ರವಣ್ ಕುಮಾರನ್ ಮತ್ತು ಸಂಜಯ್ ಕುಮಾರನ್ – GoDimension (ವಯಸ್ಸು: 10 ಮತ್ತು 12):
ಚೆನ್ನೈ ಮೂಲದ ಈ ಇಬ್ಬರು ಸಹೋದರರು ಬಾಲ್ಯದಲ್ಲಿಯೇ ತಂತ್ರಜ್ಞಾನಕ್ಕೆ ಆಕರ್ಷಿತರಾದರು. 10 ಮತ್ತು 12ನೇ ವಯಸ್ಸಿನಲ್ಲಿ GoDimension ಹೆಸರಿನ ಮೊಬೈಲ್ ಅಪ್ಲಿಕೇಶನ್ ಕಂಪನಿಯನ್ನು ಸ್ಥಾಪಿಸಿದರು. ಇಂದಿಗೆ ಇವರು 10ಕ್ಕೂ ಹೆಚ್ಚು ಆಪ್ಸ್ ಅಭಿವೃದ್ಧಿಪಡಿಸಿದ್ದು, ದೇಶದ ಕಿರಿಯ ಉದ್ಯಮಿಗಳಲ್ಲಿ ತಮ್ಮ ಹೆಸರು ದಾಖಲಿಸಿದ್ದಾರೆ.

3. ಹರ್ಷವರ್ಧನಸಿಂಹ ಝಾಲಾ – Aerobotics7 (ವಯಸ್ಸು: 14):
ಗುಜರಾತ್‌ನ ಹರ್ಷವರ್ಧನ ಝಾಲಾ 14ನೇ ವಯಸ್ಸಿನಲ್ಲಿಯೇ Aerobotics7 ಸ್ಥಾಪಿಸಿದರು. ನೆಲಬಾಂಬ್‌ಗಳನ್ನು ಪತ್ತೆಹಚ್ಚಿ ನಿಷ್ಕ್ರಿಯಗೊಳಿಸುವ ಡ್ರೋನ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವಲ್ಲಿ ತೊಡಗಿರುವ ಈ ಕಂಪನಿಗೆ ಗುಜರಾತ್ ಸರ್ಕಾರದೊಂದಿಗೆ ₹5 ಕೋಟಿ ರೂ. ಮೌಲ್ಯದ ಒಪ್ಪಂದವಾಗಿದೆ.

4. ಅತ್ ಠಾಕೂರ್ – Apex Infosys India (ವಯಸ್ಸು: 12):
12ನೇ ವಯಸ್ಸಿನಲ್ಲಿಯೇ ಪ್ರಮಾಣೀಕೃತ Google Developer ಆಗಿ ಗುರುತಿಸಿಕೊಂಡ ಅತ್ ಠಾಕೂರ್, Apex Infosys India ಎಂಬ ಕಂಪನಿಯನ್ನು ಸ್ಥಾಪಿಸಿದರು. AI ಆಧಾರಿತ ವೆಬ್ ಸರ್ವಿಸ್, ಡಿಜಿಟಲ್ ಮಾರ್ಕೆಟಿಂಗ್ ಮತ್ತು ಆಟೊಮೇಷನ್ ಸೊಲ್ಯೂಷನ್‌ಗಳನ್ನು ಒದಗಿಸುತ್ತಿರುವ ಈ ಕಂಪನಿಯ ಮೌಲ್ಯ 1 ಮಿಲಿಯನ್ ಡಾಲರ್ ತಲುಪಿದೆ.

5. ಶ್ರೀಲಕ್ಷ್ಮೀ ಸುರೇಶ್ – E-Design & TinyLogo (ವಯಸ್ಸು: 6):
6ನೇ ವಯಸ್ಸಿನಲ್ಲಿಯೇ ವೆಬ್‌ಸೈಟ್‌ ಡಿಸೈನ್ ಮಾಡಲಾರಂಭಿಸಿದ ಶ್ರೀಲಕ್ಷ್ಮೀ, 10ನೇ ವಯಸ್ಸಿನಲ್ಲಿ E-Design ಕಂಪನಿಯನ್ನು ಪ್ರಾರಂಭಿಸಿದರು. ಬಳಿಕ ಡಿಜಿಟಲ್ ಬ್ರಾಂಡಿಂಗ್ ಸೇವೆ ನೀಡುವ TinyLogo ಸಂಸ್ಥೆಯನ್ನು ಸ್ಥಾಪಿಸಿದರು. ಶಾಲೆಗಳು ಹಾಗೂ ಕಾರ್ಪೋರೇಟ್ ಕಂಪನಿಗಳು ಇವರ ಪ್ರಮುಖ ಗ್ರಾಹಕರು. ಇಂದು ಇವರ ಕಂಪನಿಯ ಮೌಲ್ಯ ನೂರಾರು ಕೋಟಿಗಳಷ್ಟಿದೆ.

6. ಅಖಿಲೇಂದ್ರ ಸಾಹು – ASTNT Technologies (ವಯಸ್ಸು: 16):
ಮಧ್ಯಪ್ರದೇಶದ ಅಖಿಲೇಂದ್ರ ಸಾಹು 16ನೇ ವಯಸ್ಸಿನಲ್ಲಿ ASTNT Technologies ಸ್ಥಾಪಿಸಿದರು. ವೆಬ್ ಹೋಸ್ಟಿಂಗ್, ಡಿಜಿಟಲ್ ಮಾರ್ಕೆಟಿಂಗ್ ಮತ್ತು ನ್ಯೂಸ್ ಸೇವೆಗಳನ್ನು ಒದಗಿಸುತ್ತಿರುವ ಈ ಕಂಪನಿಯ ಮೂಲಕ ಸಾಹು ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ. ಫ್ರೀಲ್ಯಾನ್ಸಿಂಗ್ ಮತ್ತು ಯೂಟ್ಯೂಬ್ ಟ್ಯುಟೋರಿಯಲ್‌ಗಳಿಂದ ಆರಂಭವಾದ ಇವರ ಪ್ರಯಾಣ ಕೋಟ್ಯಧಿಪತಿಯಾಗಿ ಮುಗಿದಿದೆ.

7. ರಿತೇಶ್ ಅಗರ್ವಾಲ್ – OYO Rooms (ವಯಸ್ಸು: 17):
ಭಾರತದ ಅತ್ಯಂತ ಜನಪ್ರಿಯ ಸ್ಟಾರ್ಟ್‌ಅಪ್‌ಗಳಲ್ಲಿ ಒಂದಾದ OYO Rooms ಸಂಸ್ಥಾಪಕ ರಿತೇಶ್ ಅಗರ್ವಾಲ್ 17ನೇ ವಯಸ್ಸಿನಲ್ಲಿಯೇ CEO ಆಗಿದರು. ಇಂದಿಗೆ OYO ಮೌಲ್ಯ $9 ಶತಕೋಟಿಗಿಂತ ಹೆಚ್ಚು, ಹಾಗೂ ಅನೇಕ ದೇಶಗಳಲ್ಲಿ ವಿಸ್ತರಣೆಗೊಂಡಿದೆ.

8. ಅರ್ಜುನ್ ದೇಶಪಾಂಡೆ – Generic Aadhaar (ವಯಸ್ಸು: 18):
2002ರಲ್ಲಿ ಜನಿಸಿದ ಅರ್ಜುನ್ ದೇಶಪಾಂಡೆ, ಕಡಿಮೆ ಬೆಲೆಯ ಜೆನರಿಕ್ ಔಷಧಿಗಳನ್ನು ಒದಗಿಸುವ Generic Aadhaar ಕಂಪನಿಯನ್ನು ಪ್ರಾರಂಭಿಸಿದರು. ಟಾಟಾ ಟ್ರಸ್ಟ್ ಬೆಂಬಲ ಪಡೆದಿರುವ ಈ ಕಂಪನಿಗೆ ಸುಮಾರು 2,000 ಚಿಲ್ಲರೆ ಮಳಿಗೆಗಳು ಹಾಗೂ 10,000 ಉದ್ಯೋಗಿಗಳಿದ್ದಾರೆ. ಕಂಪನಿಯ ಮೌಲ್ಯ ಈಗ 500 ಕೋಟಿ ರೂಪಾಯಿ.

ಒಟ್ಟಾರೆಯಾಗಿ, ಇವರೆಲ್ಲರೂ ತೋರಿಸಿರುವುದು ಒಂದೇ ಸಂದೇಶ, ಅದುವೇ ವಯಸ್ಸು ಯಶಸ್ಸಿಗೆ ಅಡ್ಡಿಯಲ್ಲ. ಉತ್ಸಾಹ, ಕಲ್ಪನೆ ಮತ್ತು ಪರಿಶ್ರಮ ಇದ್ದರೆ, ಭಾರತದಲ್ಲಿಯೇ ಕೋಟ್ಯಧಿಪತಿಯಾಗಿ, ಜಗತ್ತಿನ ಗಮನ ಸೆಳೆಯುವ CEO ಆಗಬಹುದು. ಇವರ ಸಾಧನೆಗಳು ಇಂದಿನ ಯುವಜನರಿಗೆ ಮಾದರಿಯಾಗಿದೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

 

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!