WhatsApp Image 2025 08 21 at 01.31.28 2ed801aa

ಬರೋಬ್ಬರಿ ₹40,000 ಪಿಂಚಣಿ ಬರುವ ಈ LIC ಯೋಜನೆ ಬಗ್ಗೆ ಗೊತ್ತಾ.?

Categories:
WhatsApp Group Telegram Group

ನೀವು ಜೀವಮಾನದ ರಕ್ಷಣೆಯ ಜೊತೆಗೆ ಉತ್ತಮ ಆದಾಯ ನೀಡುವ ಯೋಜನೆ ಹುಡುಕುತ್ತಿದ್ದರೆ, ಎಲ್‌ಐಸಿ (LIC) ಯ ಜೀವನ್ ಉಮಂಗ್ ಪಾಲಿಸಿ ಉತ್ತಮ ಆಯ್ಕೆಯಾಗಿದೆ. ಈ ಯೋಜನೆ 100 ವರ್ಷಗಳವರೆಗೆ ಜೀವ ವಿಮಾ ರಕ್ಷಣೆಯನ್ನು ನೀಡುವುದರ ಜೊತೆಗೆ ವಾರ್ಷಿಕ ಆದಾಯವನ್ನು ಸಹ ಒದಗಿಸುತ್ತದೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ತಿಂಗಳಿಗೆ ಕೇವಲ ರೂ.1302 ಹೂಡಿಕೆ ಮಾಡುವ ಮೂಲಕ ಈ ಯೋಜನೆಯಿಂದ ದೊಡ್ಡ ಪ್ರಯೋಜನ ಪಡೆಯಬಹುದಾಗಿದೆ. ಉದಾಹರಣೆಗೆ, ಒಬ್ಬರು 30ನೇ ವಯಸ್ಸಿನಲ್ಲಿ ಹೂಡಿಕೆ ಪ್ರಾರಂಭಿಸಿ 30 ವರ್ಷಗಳವರೆಗೆ ಪ್ರತಿ ತಿಂಗಳು ರೂ.1302 ಪಾವತಿಸಿದರೆ, ಒಟ್ಟು ರೂ.4.68 ಲಕ್ಷ ಹೂಡಿಕೆ ಮಾಡಲಾಗುತ್ತದೆ. ಪ್ರೀಮಿಯಂ ಅವಧಿ ಪೂರ್ಣಗೊಂಡ ನಂತರ, ಹೂಡಿಕೆದಾರರಿಗೆ ವರ್ಷಕ್ಕೆ ಸುಮಾರು ರೂ.40,000 ಆದಾಯ ಸಿಗುತ್ತದೆ.

ಈ ಆದಾಯವು 100 ವರ್ಷ ವಯಸ್ಸು ತಲುಪುವವರೆಗೆ ಲಭ್ಯವಿರುತ್ತದೆ. ಈ ಅವಧಿಯಲ್ಲಿ ಒಟ್ಟು ರೂ.27.60 ಲಕ್ಷ ಆದಾಯ ಪಡೆಯುವ ಸಾಧ್ಯತೆ ಇದೆ. ಈ ಪಾಲಿಸಿಯ ಪ್ರಮುಖ ವೈಶಿಷ್ಟ್ಯವೆಂದರೆ – ಇದರಲ್ಲಿ ಮಕ್ಕಳಿಂದ ಹಿಡಿದು 55 ವರ್ಷ ವಯಸ್ಸಿನವರೆಗೂ ಯಾರೂ ಹೂಡಿಕೆ ಮಾಡಬಹುದು. ಜೊತೆಗೆ ಬೋನಸ್ ಹಾಗೂ ಉತ್ತಮ ಪ್ರಯೋಜನಗಳು ಲಭ್ಯ.

ಹೂಡಿಕೆದಾರರಿಗೆ ತೆರಿಗೆ ಉಳಿತಾಯವೂ ಸಿಗುತ್ತದೆ. ಸೆಕ್ಷನ್ 80C ಅಡಿಯಲ್ಲಿ ಪ್ರೀಮಿಯಂ ಮೇಲೆ ಮತ್ತು ಸೆಕ್ಷನ್ 10(10D) ಅಡಿಯಲ್ಲಿ ಮೆಚ್ಯೂರಿಟಿ ಮೊತ್ತದ ಮೇಲೆ ತೆರಿಗೆ ವಿನಾಯಿತಿ ಸಿಗುತ್ತದೆ. ಇದರಿಂದ ಹೂಡಿಕೆದಾರರಿಗೆ ದೀರ್ಘಾವಧಿಯ ಹಣಕಾಸು ಭದ್ರತೆ ಜೊತೆಗೆ ಜೀವನಪರ್ಯಂತ ವಿಮಾ ರಕ್ಷಣೆಯೂ ದೊರಕುತ್ತದೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories