ಇದೀಗ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ತಿಳಿದು ಬಂದಿದೆ. ಈಗಾಗಲೇ 2024 ರಲ್ಲಿ ಎಲ್‌ಐಸಿ ಗೋಲ್ಡನ್ ಜುಬಿಲಿ ಸ್ಕಾಲರ್‌ಶಿಪ್ (LIC Golden Jubilee Scholarship ) ಅರ್ಜಿಯನ್ನು ಆಹ್ವಾನಿಸಿದ್ದು, ಲೈಫ್ ಇನ್ಶುರೆನ್ಸ್ ಕಾರ್ಪೊರೇಶನ್ ಆಫ್ ಇಂಡಿಯಾ ಲಿಮಿಟೆಡ್‌ನಿಂದ ( Life Insurrence Corporation Of India Limited ) ಎಲ್ಲಾ 12 ನೇ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ. ನೀವು ಈ ವಿದ್ಯಾರ್ಥಿವೇತನವನ್ನು ಪಡೆಯಲು ಬಯಸಿದರೆ ಮತ್ತು ಅರ್ಹ ವಿದ್ಯಾಥಿಗಳಿಗೆ ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಎಲ್ ಐ ಸಿ ವತಿಯಿಂದ ಸ್ಕಾಲರ್ಶಿಪ್ ಯೋಜನೆ :
ಈಗಾಗಲೇ ಎಲ್‌ಐಸಿಯು ( LIC ) ಜಾರಿಗಳಿಸಿದ ಎಲ್ಐಸಿ ಗೋಲ್ಡನ್ ಸ್ಕಾಲರ್‌ಶಿಪ್ ಯೋಜನೆಗೆ ಆನ್‌ಲೈನ್ ನಲ್ಲಿ ಅರ್ಜಿಗಳು ಪ್ರಾರಂಭವಾಗಿದ್ದು, ಈ ಯೋಜನೆಗೆ ಅರ್ಜಿ ನಮೂನೆಗಳನ್ನು ಜನವರಿ 14 ರವರೆಗೆ ಭರ್ತಿ ಮಾಡಲು ಅವಕಾಶವಿರುತ್ತದೆ. ಆಸಕ್ತ ಮತ್ತು ಅರ್ಹರು ಇದಕ್ಕೆ ಅರ್ಜಿ ಸಲ್ಲಿಸಬಹುದು.
ಎಲ್‌ಐಸಿ ಗೋಲ್ಡನ್ ಸ್ಕಾಲರ್ಶಿಪ್ ಯೋಜನೆಯಡಿ ರೂ. 40,000 ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಮೂರು ಕಂತುಗಳಲ್ಲಿ ಹಣವನ್ನು ನೀಡಲಾಗುತ್ತದೆ.
ಎಲ್ಐಸಿ ಗೋಲ್ಡನ್ ಜುಬಿಲಿ ವಿದ್ಯಾರ್ಥಿವೇತನ ಯೋಜನೆಗೆ ಇರಬೇಕಾದ ಅರ್ಹತೆಗಳ ( Qualifications ) ವಿವರ :
2022-23ನೇ ಶೈಕ್ಷಣಿಕ ವರ್ಷದಲ್ಲಿ ಕನಿಷ್ಠ 60% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.
ಹಾಗೆಯೇ ಉತ್ತೀರ್ಣರಾದ ಎಲ್ಲಾ ಅಭ್ಯರ್ಥಿಗಳು ಮತ್ತು ಅವರ ಪೋಷಕರು/ಪಾಲಕರ ವಾರ್ಷಿಕ ಆದಾಯ ರೂ. 2,50,000 ಮೀರಿರಬಾರದು.
ವೈದ್ಯಕೀಯ, ಇಂಜಿನಿಯರಿಂಗ್, ಯಾವುದೇ ವಿಭಾಗದಲ್ಲಿ ಪದವಿಪೂರ್ವ, ಇಂಟಿಗ್ರೇಟೆಡ್ ಕೋರ್ಸ್‌ಗಳು, ಯಾವುದೇ ಕ್ಷೇತ್ರದಲ್ಲಿ ಡಿಪ್ಲೊಮಾ ಕೋರ್ಸ್‌ಗಳು ಅಥವಾ ಇತರ ಸಮಾನ ಕೋರ್ಸ್‌ಗಳು, ಸರ್ಕಾರಿ ಮಾನ್ಯತೆ ಪಡೆದ ಕಾಲೇಜು ಸಂಸ್ಥೆಗಳು ಅಥವಾ ಕೈಗಾರಿಕಾ ತರಬೇತಿ ಸಂಸ್ಥೆಗಳ (ಐಟಿಐ) ( ITI ) ಮೂಲಕ ವೃತ್ತಿಪರ ಕೋರ್ಸ್‌ಗಳನ್ನು ಅನುಸರಿಸುವ ವಿದ್ಯಾರ್ಥಿಗಳಿಗೆ ಅನುದಾನವನ್ನು ನೀಡಲಾಗುತ್ತದೆ.

ಜನರಲ್ ಸ್ಕಾಲರ್‌ಶಿಪ್ ( General Scholarship ) :
12ನೇ ತರಗತಿ ( Second PUC ) ಅಥವಾ ತತ್ಸಮಾನ ಕೋರ್ಸ್ ಮುಗಿಸಿ ಮೆಡಿಕಲ್, ಎಂಜಿನಿಯರಿಂಗ್, ಪದವಿ ಅಥವಾ ಯಾವುದೇ ವೃತ್ತಿಪರ ಕೋರ್ಸ್‌ಗಳಲ್ಲಿ ಶಿಕ್ಷಣ ಮುಂದುವರಿಸುತ್ತಿರುವವರು ಅರ್ಜಿ ಸಲ್ಲಿಸಬಹುದು. ಇನ್ನು 10ನೇ ತರಗತಿ ನಂತರದ ಸಾಮಾನ್ಯ ವಿಭಾಗದ ಸ್ಕಾಲರ್‌ಶಿಪ್ ಪಡೆಯಲು ಬೇಕಾದ ಅರ್ಹತೆ: ಹತ್ತನೇ ತರಗತಿ ತೇರ್ಗಡೆಯಾಗಿ ವೃತ್ತಿಪರ / ಡಿಪ್ಲೋಮಾ ಕೋರ್ಸ್‌ಗಳಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿರುವವರು ಅರ್ಜಿ ಸಲ್ಲಿಸಬಹುದು.
ಹೆಣ್ಣು ಮಕ್ಕಳ ವಿಶೇಷ ಸ್ಕಾಲರ್‌ಶಿಪ್ ( Ladies or Special Scholarship ) :
ಹತ್ತನೇ ತರಗತಿಯಲ್ಲಿ ತೇರ್ಗಡೆಯಾಗಿ ದ್ವಿತೀಯ ಪಿಯುಸಿ / ಪಿಯುಸಿ / ವೃತ್ತಿಪರ ಅಥವಾ ಡಿಪ್ಲೋಮಾ ಕೋರ್ಸ್ ಓದುತ್ತಿರುವ ವಿದ್ಯಾರ್ಥಿನಿಯರು ಈ ವಿಭಾಗದಲ್ಲಿ ಅರ್ಜಿ ಸಲ್ಲಿಸಬಹುದು.
ಸ್ಕಾಲರ್‌ಶಿಪ್ ಮೊತ್ತದ ವಿವರ ಹೀಗಿದೆ ( Scholarship Price ) :
ಜನರಲ್ ಸ್ಕಾಲರ್ಶಿಪ್ :
ಮೆಡಿಸಿನ್ ಕೋರ್ಸ್‌ಗೆ ( Medicine Coures ) : ಪ್ರತಿ ವರ್ಷ 3 ಕಂತುಗಳಲ್ಲಿ 40,000 ರೂ.
ಎಂಜಿನಿಯರಿಂಗ್ ಕೋರ್ಸ್ ( Engineering Course ) : 3 ಕಂತುಗಳಲ್ಲಿ 30,000 ರೂ.
ಯಾವುದೇ ರೀತಿಯ ಪದವಿ, ಡಿಪ್ಲೋಮಾ ಮತ್ತು ಇದೇ ಮಾದರಿಯ ವೃತ್ತಿಪರ ಕೋರ್ಸ್‌ಗಳಿಗೆ: 3 ಕಂತುಗಳಲ್ಲಿ 20,000 ರೂ.
ಹೆಣ್ಣು ಮಕ್ಕಳ ವಿಶೇಷ ಸ್ಕಾಲರ್‌ಶಿಪ್: 3 ಕಂತುಗಳಲ್ಲಿ 15,000 ರೂ.
ದಾಖಲೆಗಳು:
ವಾರ್ಷಿಕ ಆದಾಯ ಪ್ರಮಾಣಪತ್ರ
ಜಾತಿ ಪ್ರಮಾಣಪತ್ರ (ಅನ್ವಯಿಸಿದರೆ)
ಜನನ ಪ್ರಮಾಣಪತ್ರ
ಬ್ಯಾಂಕ್ ಖಾತೆ ವಿವರಗಳು
10,12 ನೇ ತರಗತಿಯ ಮಾರ್ಕ್‌ಶೀಟ್/ಪ್ರಮಾಣಪತ್ರಗಳು
ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ :
ಜನವರಿ 14, 2014
ಅರ್ಜಿಯನ್ನು ಸಲ್ಲಿಸುವ ವಿಧಾನ:
https://www.buddy4study.com/scholarship/lic-golden-jubilee-scholarship
ಹಂತ 1: ಕೆಳಗಿನ ‘APPLY NOW’ ಬಟನ್ ಕ್ಲಿಕ್ ಮಾಡಿ.
ಹಂತ 2: ಡ್ಯಾಶ್‌ಬೋರ್ಡ್‌ನ ಬಲಭಾಗದಲ್ಲಿರುವ ‘ರಿಜಿಸ್ಟರ್’ ಬಟನ್ ಅನ್ನು ಕ್ಲಿಕ್ ಮಾಡಿ ಮತ್ತು ‘ರಿಜಿಸ್ಟರ್’ ಮಾಡಲು ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ.
(ಗಮನಿಸಿ – ಈಗಾಗಲೇ ನೋಂದಾಯಿಸಿದ್ದರೆ, ನೋಂದಾಯಿತ ಇಮೇಲ್ ಐಡಿ ಬಳಸಿ ಲಾಗ್ ಇನ್ ಮಾಡಿ.)
ಹಂತ 3: ಡ್ಯಾಶ್‌ಬೋರ್ಡ್‌ನ ಮೇಲ್ಭಾಗದಲ್ಲಿ ನೀಡಿರುವ ‘ಅಧಿಕೃತ ಲಾಗಿನ್’ ಆಯ್ಕೆಯ ಅಡಿಯಲ್ಲಿ ‘ಸ್ಕೂಲ್ ಅಥಾರಿಟಿ’ ಆಯ್ಕೆಗೆ ನ್ಯಾವಿಗೇಟ್ ಮಾಡಿ.
ಹಂತ 4: ಈಗ, ‘ಹೊಸ ನೋಂದಣಿಗಾಗಿ – ಇಲ್ಲಿ ಕ್ಲಿಕ್ ಮಾಡಿ’ ಆಯ್ಕೆಗೆ ನ್ಯಾವಿಗೇಟ್ ಮಾಡಿ ಮತ್ತು ಅದನ್ನು ಕ್ಲಿಕ್ ಮಾಡಿ.
(ಗಮನಿಸಿ – ಈಗಾಗಲೇ ನೋಂದಾಯಿಸಿರುವ ಶಾಲೆಗಳು, ಮಾನ್ಯ ರುಜುವಾತುಗಳನ್ನು ಬಳಸಿ ಲಾಗಿನ್ ಮಾಡಿ.)
ಹಂತ 5: ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಅಗತ್ಯವಿರುವ ಎಲ್ಲಾ ವಿವರಗಳನ್ನು ಭರ್ತಿ ಮಾಡಿ.
ಹಂತ 6: ಯಶಸ್ವಿ ನೋಂದಣಿಯ ನಂತರ, ”Student Nomination’ ಆಯ್ಕೆಮಾಡಿ.
ಹಂತ 7: ವಿದ್ಯಾರ್ಥಿಯ ವಿವರಗಳನ್ನು ಭರ್ತಿ ಮಾಡಿ, ಛಾಯಾಚಿತ್ರವನ್ನು ಅಪ್‌ಲೋಡ್ ಮಾಡಿ ಮತ್ತು ಸ್ವೀಕೃತಿಯನ್ನು ಪಡೆಯಲು ಅರ್ಜಿಯನ್ನು ಸಬ್ಮಿಟ್ ಮಾಡಿ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
- ಪಿಯುಸಿ ಪಾಸಾದವರಿಗೆ ರೂ.2.5 ಲಕ್ಷವರೆಗೆ ಉಚಿತ ವಿದ್ಯಾರ್ಥಿವೇತನ.
- NSP scholarship 2023, Apply @https://scholarships.gov.in/
- ಪಿಯುಸಿ ಮುಗಿಸಿದವರಿಗೆ ₹1.5 ಲಕ್ಷ ಉಚಿತ ವಿದ್ಯಾರ್ಥಿವೇತನ
- 10,470/- ರೂ. ಸ್ಕಾಲರ್ಶಿಪ್ ಈಗ ಬಂತು, ಈ ವರ್ಷದ SSP ಸ್ಕಾಲರ್ಶಿಪ್ ಗೆ ಅರ್ಜಿ ಆಹ್ವಾನ
- ಎಲ್ಲಾ ವಿದ್ಯಾರ್ಥಿಗಳಿಗೆ 10,000/- ರೂ. ನೇರವಾಗಿ ಬ್ಯಾಂಕ್ ಖಾತೆಗೆ ಬರುವ SBI ಸ್ಕಾಲರ್ಶಿಪ್
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group





