ಪ್ರತಿಯೊಬ್ಬ ವ್ಯಕ್ತಿಯ ಕನಸು ಏನಾದರೂ ಇರಬಹುದು, ಆದರೆ ಸ್ವಂತ ಮನೆ (Own house) ಹೊಂದುವುದು ಬಹುತೇಕ ಪ್ರತಿಯೊಬ್ಬರ ಆಶಯವಾಗಿರುತ್ತದೆ. ಆದರೆ ಇಂದು ಭೂಮಿಯ ಬೆಲೆಗಳ ಏರಿಕೆಯಿಂದಾಗಿ ಜಾಗ ಖರೀದಿಸುವುದು ತೀರಾ ಕಷ್ಟವಾಗಿದೆ. ಆದರೆ ಬ್ಯಾಂಕುಗಳು ಮತ್ತು ಎನ್‌ಬಿಎಫ್‌ಸಿಗಳು (NBFCs) ಒದಗಿಸುವ ಭೂಮಿ ಖರೀದಿ ಸಾಲದ ಸಹಾಯದಿಂದ ನಿಮ್ಮ ಕನಸನ್ನು ಸಾಕಾರಗೊಳಿಸಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಭೂಮಿ ಖರೀದಿ ಸಾಲ ಎಂಬುದು ಏನು?
ಭೂಮಿ ಅಥವಾ ನಿವೇಶನವನ್ನು ಖರೀದಿಸಲು ನೀಡುವ ಸಾಲವನ್ನು ಭೂಮಿ ಖರೀದಿ ಸಾಲ (Land Purchase Loan) ಎಂದು ಕರೆಯಲಾಗುತ್ತದೆ. ಇದು ಗೃಹ ಸಾಲದಂತೆಯೇ ಸುರಕ್ಷಿತ ಸಾಲವಾಗಿದ್ದು, ಇದನ್ನು ಭವಿಷ್ಯದಲ್ಲಿ ಮನೆ ನಿರ್ಮಿಸಲು ಬಳಸಬಹುದಾಗಿದೆ. ಆದರೆ ಇದು ಗೃಹ ಸಾಲಕ್ಕಿಂತ ಸ್ವಲ್ಪ ಭಿನ್ನವಾಗಿರುತ್ತದೆ, ಏಕೆಂದರೆ ಅದರ ಬಡ್ಡಿದರಗಳು ಸ್ವಲ್ಪ ಹೆಚ್ಚಿರುತ್ತವೆ ಮತ್ತು ಶರತ್ತುಗಳು ಭಿನ್ನವಾಗಿರುತ್ತವೆ.
ಭೂಮಿ ಖರೀದಿ ಸಾಲ ಪಡೆಯಲು ಯಾರು ಅರ್ಹರು?
ಅರ್ಜಿದಾರರು 21 ರಿಂದ 65 ವರ್ಷದ ವಯಸ್ಸಿನವರಾಗಿರಬೇಕು.
ಸ್ಥಿರ ಆದಾಯವಿರುವ ಕೆಲಸಗಾರ ಅಥವಾ ಸ್ವಯಂ ಉದ್ಯೋಗಿಯಾಗಿರಬೇಕು.
ಸಾಲಕ್ಕೆ ಅರ್ಜಿ ಸಲ್ಲಿಸುವವರ ಕ್ರೆಡಿಟ್ ಸ್ಕೋರ್ ಉತ್ತಮವಾಗಿರಬೇಕು (750 ಅಥವಾ ಹೆಚ್ಚಿನದು).
ಬ್ಯಾಂಕ್ ಮತ್ತು NBFCಗಳ ವಿಶೇಷ ಶರತ್ತುಗಳನ್ನು ಪೂರೈಸಬೇಕು.
ಭೂಮಿ ಖರೀದಿ ಸಾಲದ ಬಡ್ಡಿದರಗಳು :
ಭೂಮಿ ಖರೀದಿ ಸಾಲದ ಬಡ್ಡಿದರಗಳು ಸಾಮಾನ್ಯವಾಗಿ ಶೇಕಡಾ 8.6% ರಿಂದ 17% ವರೆಗೆ ಇರಬಹುದು. ಗೃಹ ಸಾಲಕ್ಕಿಂತಲೂ ಹೆಚ್ಚಿನ ಬಡ್ಡಿದರ ಇರುವುದರಿಂದ EMI ಮೊತ್ತ ಸಹ ಹೆಚ್ಚು ಇರುತ್ತದೆ. ಸಾಲದ ಅವಧಿ 5 ರಿಂದ 20 ವರ್ಷಗಳ ನಡುವೆ ಇರಬಹುದು.
ನೀವು ಎಷ್ಟು ಸಾಲ ಪಡೆಯಬಹುದು?
ಸಾಮಾನ್ಯವಾಗಿ, ಬ್ಯಾಂಕುಗಳು ಆಸ್ತಿ ಮೌಲ್ಯದ ಶೇಕಡಾ 60-80% ವರೆಗೆ ಸಾಲ ನೀಡುತ್ತವೆ.
ಸಾಲದ ಮೊತ್ತವು 25 ಲಕ್ಷದಿಂದ 15 ಕೋಟಿ ರೂಪಾಯಿವರೆಗೆ ಇರಬಹುದು.
ಸಾಲದ ಪ್ರಮಾಣ ನಿರ್ಧಾರವಾಗುವ ಪ್ರಮುಖ ಅಂಶಗಳು: ಭೂಮಿಯ ಸ್ಥಳ, ಅರ್ಜಿದಾರದ ಕ್ರೆಡಿಟ್ ಸ್ಕೋರ್, ಹಿಸ್ಟರಿ, ಮತ್ತು ಮರುಪಾವತಿ ಸಾಮರ್ಥ್ಯ.
ಭೂಮಿ ಖರೀದಿ ಸಾಲಕ್ಕೆ ಅಗತ್ಯವಿರುವ ದಾಖಲೆಗಳು :
ಗುರುತಿನ ಪುರಾವೆ: ಆಧಾರ್, ಪಾಸ್‌ಪೋರ್ಟ್, ಮತದಾರರ ಗುರುತಿನ ಚೀಟಿ, ಚಾಲನಾ ಪರವಾನಗಿ, ಪ್ಯಾನ್ ಕಾರ್ಡ್.
ವಿಳಾಸ ಪುರಾವೆ: ಪಡಿತರ ಚೀಟಿ, ವಿದ್ಯುತ್ ಬಿಲ್, ಗುತ್ತಿಗೆ ಒಪ್ಪಂದ, ಪಾಸ್‌ಪೋರ್ಟ್, ವ್ಯಾಪಾರ ಪರವಾನಗಿ.
ಬ್ಯಾಂಕ್ ಸ್ಟೇಟ್‌ಮೆಂಟ್: ಕಳೆದ 6 ತಿಂಗಳ ಬಯಾನಿ.
ಆದಾಯದ ಪುರಾವೆ: ಉದ್ಯೋಗಿಗಳಿಗೆ ವೇತನ ಸ್ಲಿಪ್(Salary slip), ಸ್ವಯಂ ಉದ್ಯೋಗಿಗಳಿಗೆ ಐಟಿ ಮೌಲ್ಯಮಾಪನ.
ಭೂಮಿ ಸಂಬಂಧಿತ ದಾಖಲೆಗಳು: ಭೂ ತೆರಿಗೆ ರಶೀದಿ, ಬ್ಯಾಂಕಿನ ಪ್ಯಾನಲ್ ಅಡ್ವೊಕೇಟ್ ನಿಂದ ಶೀರ್ಷಿಕೆ ಪತ್ರ.
ಹೆಚ್ಚಿನ ದಾಖಲೆಗಳು: ಬ್ಯಾಂಕುಗಳು ಅಗತ್ಯವಿದ್ದರೆ ಬೇಡಬಹುದು.
ಸಾಲ ಪಡೆಯುವ ಮುನ್ನ ಗಮನಿಸಬೇಕಾದ ಅಂಶಗಳು:
ಬಡ್ಡಿದರ ಹೋಲಿಸಿ: ಬಡ್ಡಿದರಗಳು ಬ್ಯಾಂಕುಗಳಿಗೆ ಬದಲಾದರೂ, ಅಗ್ಗದ ಬಡ್ಡಿದರ ಮತ್ತು ಸುಲಭ EMI ಆಯ್ಕೆ ಮಾಡುವದು ಸೂಕ್ತ.
ಆರ್ಥಿಕ ಸ್ಥಿತಿ ಪರಿಶೀಲಿಸಿ: ನೀವು ತಿಂಗಳ EMI ಸುಲಭವಾಗಿ ಪಾವತಿಸಬಹುದೇ ಎಂಬುದನ್ನು ಖಚಿತಪಡಿಸಿಕೊಳ್ಳಿ.
ಭೂಮಿ ಪರಿಶೀಲಿಸಿ: ಸಾಲ ತೆಗೆದುಕೊಳ್ಳುವ ಮೊದಲು, ಆ ಭೂಮಿ ಕಾನೂನಾತ್ಮಕವಾಗಿದೆಯೇ ಎಂಬುದನ್ನು ಪರಿಶೀಲಿಸಿ.
ಶರತ್ತುಗಳನ್ನು ಓದಿ: ಸಾಲದ ಶರತ್ತುಗಳು ನಿಮಗೆ ಅನುಕೂಲಕರವಾಗಿದೆಯೇ ಎಂಬುದನ್ನು ತಿಳಿಯಿರಿ.
ಕೊನೆಯದಾಗಿ ಹೇಳುವುದಾದರೆ,ನಿಮ್ಮ ಕನಸಿನ ಮನೆಗೆ ಒಂದು ಹೆಜ್ಜೆ ಮುಂದೆ ಇಡೀ. ಹೌದು, ಭೂಮಿ ಖರೀದಿ ಸಾಲವನ್ನು (Land Purchase Loan) ಬಳಸಿಕೊಂಡು ನೀವು ನಿಮ್ಮ ಕನಸಿನ ಮನೆ (Dream house) ನಿರ್ಮಾಣಕ್ಕೆ ಭದ್ರವಾದ ಮೊದಲ ಹೆಜ್ಜೆ ಇಡಬಹುದು. ಸರಿಯಾದ ಯೋಜನೆ, ಸಂಪೂರ್ಣ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸುವ ಮೂಲಕ ನೀವು ಸುಲಭವಾಗಿ ಸಾಲವನ್ನು ಪಡೆಯಬಹುದು. ಯಾವ ಬ್ಯಾಂಕ್ ಅಥವಾ NBFC ಆಯ್ಕೆ ಮಾಡಬೇಕೆಂಬುದನ್ನು ಯೋಚಿಸಿ, ನಿಮ್ಮ ಅಗತ್ಯಗಳಿಗೆ ತಕ್ಕಂತೆ ತೀರ್ಮಾನ ಕೈಗೊಳ್ಳಿ.ನಿಮ್ಮ ಸ್ವಂತ ಮನೆ ನಿರ್ಮಾಣದ ಕನಸು ನನಸು ಮಾಡೋಣ.ಮತ್ತು ಇಂತಹ ಉತ್ತಮವಾದ ಮಾಹಿತಿಯನ್ನು ನೀವು ತಿಳಿದಮೇಲೆ ಈ ಮಾಹಿತಿಯನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.