ಬಿಗ್ ಬಾಸ್ ಗೆ (Bigg Boss) ವಿದಾಯ ಘೋಷಿಸಿದ ಕಿಚ್ಚ ಸುದೀಪ್(Kiccha Sudeep)!. ಸತತ 11 ವರ್ಷದ ಬಿಗ್ ಬಾಸ್ ನಿರೂಪಣೆಯ ಪಯಣಕ್ಕೆ ಅಂತ್ಯ ಹಾಡಿದ ಕಿಚ್ಚ ಸುದೀಪ್.
ಬಿಗ್ ಬಾಸ್ (Bigg Boss) ಶುರುವಾಗುತ್ತಿದೆ ಎಂದರೆ ಆ ಸಮಯದಲ್ಲಿ ಬರುವಂತಹ ಬೇರೆ ಸೀರಿಯಲ್(Serial) ಅಥವಾ ರಿಯಾಲಿಟಿ ಶೋಗಳಿಗೆ(reality shows) ಸ್ವಲ್ಪ ಶಾಕ್ ಆಗುತ್ತದೆ. ಕಾರಣ ಬಿಗ್ ಬಾಸ್ ಹೊಂದಿರುವಂತಹ ಜನಪ್ರಿಯತೆಯಿಂದ ಜನರು ಬೇರೆ ಸೀರಿಯಲ್ ಅಥವಾ ರಿಯಾಲಿಟಿ ಶೋ ನೋಡುವುದನ್ನು ಕಡಿಮೆ ಮಾಡುತ್ತಾರೆ. ಇದರಿಂದ ಅವರ ಟಿಆರ್ ಪಿ ಕಡಿಮೆಯಾಗುತ್ತದೆ ಎಂದು ಅವರು ಯೋಚನೆ ಮಾಡುತ್ತಾರೆ. ಅದರಲ್ಲೂ ಬಿಗ್ ಬಾಸ್ ಅನ್ನು ಹೆಚ್ಚಿನ ಮಂದಿ ನೋಡುವುದಕ್ಕೆ ಕಾರಣ ಕಿಚ್ಚ ಸುದೀಪ್(Kiccha Sudeep). ಬಿಗ್ ಬಾಸ್ ಶುರುವಾದಾಗಿನಿಂದಲೂ ಇಲ್ಲಿಯವರೆಗೆ ಅಂದರೆ ಸತತವಾಗಿ 11 ಸೀಸನ್ ಗಳನ್ನು ಕಿಚ್ಚ ಸುದೀಪ್ ಅವರೇ ನಿರೂಪಣೆ ಮಾಡಿಕೊಂಡು ಬಂದಿದ್ದಾರೆ. ಬಿಗ್ ಬಾಸ್ ಗೆ ಇಷ್ಟೊಂದು ಪ್ರೇಕ್ಷಕರಿರುವುದಕ್ಕೆ ಕಾರಣ ಕಿಚ್ಚ ಸುದೀಪ್ ಎಂದೂ ಹೇಳಬಹುದು. ಕಿಚ್ಚ ಸುದೀಪ್ ನಿರೂಪಣೆ (Kiccha Sudeep host ) ಮಾಡುತ್ತಿದ್ದಾರೆ ಎನ್ನುವ ವಿಷಯದಿಂದಲೇ ಹಲವು ಜನರು ಬಿಗ್ ಬಾಸ್ ನೋಡಲು ಬಯಸುತ್ತಾರೆ. ಆದರೆ ಇದೀಗ ಕಿಚ್ಚ ಸುದೀಪ್ ಪ್ರೇಕ್ಷಕರಿಗೆ ಬಿಗ್ ಶಾಕ್ ನೀಡಿದ್ದಾರೆ. ಮುಂದಿನ ಸೀಸನ್ ಅಂದರೆ ಬಿಗ್ ಬಾಸ್ 12 ಅನ್ನು ಕಿಚ್ಚ ಸುದೀಪ್ ನಿರೂಪಣೆ ಮಾಡುತ್ತಿಲ್ಲ ಎಂದು ಕಿಚ್ಚ ಸುದೀಪ್ ಅವರೇ ಅಧಿಕೃತ ಘೋಷಣೆ ಮಾಡಿದ್ದಾರೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭ ಆಗುವುದಕ್ಕೂ ಮುನ್ನವೇ ಕೆಲವೊಂದಷ್ಟು ವದಂತಿಗಳು ಸಾಮಾಜಿಕ ಜಾಲತಾಣದಲ್ಲಿ (social media) ಹರಿದಾಡುತ್ತಿದ್ದವು. ಈ ಬಾರಿಯ ಬಿಗ್ ಬಾಸ್ ಶೋ ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಬರುವುದಿಲ್ಲ ಎಂದು ಹರಿದಾಡುತ್ತಿದ್ದಂತಹ ವದಂತಿಗಳಿಗೆ ಕಿಚ್ಚ ಸುದೀಪ್ ತೆರೆ ಎಳೆದಿದ್ದರು. ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 11 ಕಿಚ್ಚ ಸುದೀಪ್ ಅವರ ನಿರೂಪಣೆಯಲ್ಲಿ ಮೂಡಿ ಬರುತ್ತಿದ್ದು, ಈಗಾಗಲೇ ಎರಡು ವಾರ ಕಳೆದಿದೆ. ಇದೇ ಸಮಯದಲ್ಲಿ ಕಿಚ್ಚ ಸುದೀಪ್ ಮುಂದಿನ ಬಿಗ್ ಬಾಸ್ ಸೀಸನ್ 11 ಅನ್ನು ನಾನು ನಡೆಸಿಕೊಡುವುದಿಲ್ಲ ಎಂದು ಅಧಿಕೃತವಾಗಿ ಘೋಷಿಸಿದ್ದಾರೆ.
ಬಿಗ್ ಬಾಸ್ ಕನ್ನಡ 11 ನೇ ಸೀಸನ್ ಅದ್ಭುತವಾಗಿ ಮೂಡಿ ಬರುತ್ತಿದ್ದು, ಕಿಚ್ಚ ಸುದೀಪ್ ಸತತ 11ನೇ ಆವೃತ್ತಿಯಲ್ಲಿ ನಿರೂಪಣೆಯ ಹೊಣೆ ಹೊತ್ತು ಕಾರ್ಯಕ್ರಮವನ್ನು ತುಂಬಾ ಅದ್ಭುತವಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ. ಅದರಲ್ಲೂ ಈ ವಾರ 9.9 ಟಿವಿಆರ್ (Television Rating Point) ಪಡೆಯುವ ಮೂಲಕ ದಾಖಲೆ ಬರೆದಿದೆ. ಇದೆಲ್ಲದರ ನಡುವೆ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಶಾಕ್ ಕೊಟ್ಟಿರುವುದು ಆಶ್ಚರ್ಯಕರವಾಗಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಬೇಸರಪಟ್ಟುಕೊಂಡಿದ್ದಾರೆ. ‘ನಿಮ್ಮನ್ನು ಹೊರತುಪಡಿಸಿ, ಬೇರೆ ಯಾರನ್ನೂ ಆ ಜಾಗದಲ್ಲಿ ನೋಡಲು ಸಾಧ್ಯವಿಲ್ಲ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.
ಟ್ವೀಟ್ ಮಾಡಿ ಕಿಚ್ಚ ಸುದೀಪ್ ಹೇಳಿದ್ದೇನು:?
ಬಿಗ್ ಬಾಸ್’ ಕನ್ನಡ ಸೀಸನ್ 11ಕ್ಕೆ ಉತ್ತಮ ಟಿಆರ್‌ಪಿ(TRP) ಸಿಕ್ಕಿದೆ. ಆ ಖುಷಿ ಸುದ್ದಿಯನ್ನು ಹಂಚಿಕೊಳ್ಳುತ್ತಲೇ ಬಿಗ್ ಬಾಸ್‌ನಿಂದ ಹಿಂದೆ ಸರಿಯುತ್ತಿರುವ ವಿಚಾರವನ್ನು ಸುದೀಪ್ ತಿಳಿಸಿದ್ದಾರೆ. ಈ ಕುರಿತು ಅವರು ಟ್ವೀಟ್ ಮಾಡಿದ ಕಿಚ್ಚ ಸುದೀಪ್ ಬಿಗ್ ಬಾಸ್ ಕನ್ನಡ 11ನೇ ಆವೃತ್ತಿಗೆ ಅಭೂತಪೂರ್ವ ಬೆಂಬಲ ನೀಡಿದ್ದಕ್ಕಾಗಿ ಧನ್ಯವಾದಗಳು. ನೀವು ಕಾರ್ಯಕ್ರಮ ಮತ್ತು ನನ್ನ ಮೇಲೆ ತೋರಿಸಿದ ಅಭಿಮಾನಕ್ಕೆ ಟಿವಿಆರ್ ನಂಬರ್ ಸಾಕ್ಷಿಯಾಗಿದೆ. 10+1 ವರ್ಷಗಳ ಉತ್ತಮ ಪ್ರಯಾಣ ಇದಾಗಿದೆ. ‘ಬಿಗ್ ಬಾಸ್’ನ ನಿರೂಪಕನಾಗಿ ನನ್ನ ಕೊನೆಯ ಸೀಸನ್ ಇದಾಗಿರುತ್ತದೆ. ನನ್ನ ನಿರ್ಧಾರಕ್ಕೆ ಕಲರ್ಸ್ ಕನ್ನಡ ವಾಹಿನಿ (Colors Kannada channel) ಮತ್ತು ಬಿಗ್ ಬಾಸ್ ಕಾರ್ಯಕ್ರಮದ ಅಭಿಮಾನಿಗಳು ಗೌರವ ಕೊಡುತ್ತಾರೆ ಎಂದು ನಾನು ನಂಬಿದ್ದೇನೆ. ಈ ಸೀಸನ್ ಅನ್ನು ಅತ್ಯುತ್ತಮವಾಗಿ ಮಾಡೋಣ ಮತ್ತು ನಾನು ಕೂಡ ಅತ್ಯುತ್ತಮವಾಗಿ ನಿಮ್ಮೆಲ್ಲರನ್ನು ರಂಜಿಸುತ್ತೇನೆ” ಎಂದು ಸುದೀಪ್ ಹೇಳಿದ್ದಾರೆ. ಅಲ್ಲಿಗೆ ಬಿಗ್ ಬಾಸ್ ಕನ್ನಡ ಸೀಸನ್ 11ರ ನಂತರ ಸುದೀಪ್ ಈ ವೇದಿಕೆಯಲ್ಲಿ ನಿರೂಪಕರಾಗಿ ಇರುವುದಿಲ್ಲ ಅನ್ನೋದು ಖಚಿತವಾಗಿದೆ.
ಈ ವಿಚಾರ ಕೇಳಿ ಅಭಿಮಾನಿಗಳು ಶಾಕ್ ಆಗಿದ್ದಾರೆ.!
ಬೇರೆ ಬೇರೆ ಭಾಷೆಗಳ ಬಿಗ್ ಬಾಸ್‌ನಲ್ಲಿ ನಿರೂಪಕರು ಬದಲಾಗಿದ್ದಾರೆ. ಆದರೆ ಕನ್ನಡದಲ್ಲಿ ಮಾತ್ರ ಬದಲಾವಣೆ ಆಗಿರಲಿಲ್ಲ. ತಮ್ಮ ಸ್ಟೈಲಿಶ್ ಲುಕ್(Stylish look), ಖಡಕ್ ಮಾತಿನ ಶೈಲಿಯಿಂದಲೇ ಸುದೀಪ್ ಬಿಗ್ ಬಾಸ್ ಕಾರ್ಯಕ್ರಮವನ್ನು ಜನಕ್ಕೆ ಹತ್ತಿರವಾಗುವಂತೆ ಮಾಡಿದರು. ಕಳೆದ 11 ಸೀಸನ್‌ಗಳು ಮತ್ತು ಒಂದು ಒಟಿಟಿ ಸೀಸನ್(OTT season) ಅನ್ನು ಸುದೀಪ್ ಅವರು ನಿರೂಪಣೆ ಮಾಡಿದ್ದಾರೆ. ಕನ್ನಡದಲ್ಲಿ ಬಿಗ್ ಬಾಸ್ ಎಂದರೆ ಸುದೀಪ್, ಸುದೀಪ್ ಎಂದರೆ, ಬಿಗ್ ಬಾಸ್ ಎಂಬ ವಾತಾವರಣ ಇತ್ತು. ವಾರಪೂರ್ತಿ ಬಿಗ್ ಬಾಸ್ ನೋಡದಿದ್ದರೂ ಕೂಡ ವಾರದ ಎರಡು ದಿನ ಅಂದರೆ ಶನಿವಾರ(Saturday) ಮತ್ತು ಭಾನುವಾರದಂದು(Sunday) ಕಿಚ್ಚ ಸುದೀಪ್ ಅವರ ನಿರೂಪಣೆ ನೋಡಲೆಂದೇ ಬಿಗ್ ಬಾಸ್ ಕಾರ್ಯಕ್ರಮವನ್ನು ಹೆಚ್ಚಿನ ಮಂದಿ ನೋಡುತ್ತಿದ್ದರು. ಆದರೆ ಸುದೀಪ್ ಅವರ ದಿಢೀರ್ ನಿರ್ಧಾರದಿಂದ ಅಭಿಮಾನಿಗಳಿಗೆ ನಿಜಕ್ಕೂ ಶಾಕ್ ಆಗಿದ್ದಾರೆ. ಅಭಿಮಾನಿಗಳು ತೀವ್ರವಾಗಿ ಬೇಸರಗೊಂಡು “ನೀವು ನಡೆಸಿ ಕೊಡದೆ ಹೋದರೆ ಬಿಗ್ ಬಾಸ್ ರಾಜನಿಲ್ಲದ ರಾಜ್ಯ ಅಣ್ಣಾ” ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು, “ಇದು ನಾವು ನೋಡುವ ಬಿಗ್ ಬಾಸ್‌ನ ಕೊನೆಯ ಸೀಸನ್” ಎಂದು ಹೇಳಿದ್ದಾರೆ. ಆದರೆ ಕೆಲವು ಅಭಿಮಾನಿಗಳು ಇದು ಒಳ್ಳೆಯ ಕೆಲಸ ಅಣ್ಣಾ, ನೀವು ಕಾರ್ಯಕ್ರಮ ನಿರೂಪಣೆ ಬಿಟ್ಟು, ವರ್ಷಕ್ಕೊಂದು ಸಿನಿಮಾ ಮಾಡಿ ಎಂದು ಒತ್ತಾಯಿಸಿದ್ದಾರೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group




