ಹೊಸ ‘ಕಿಯಾ ಕ್ಲಾವಿಸ್’ ಕಾರು, ಇದರ ವಿಶೇಷತೆ, ಹಾಗೂ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಭಾರತೀಯ ವಾಹನ ಮಾರುಕಟ್ಟೆಯಲ್ಲಿ (Vehicles market) ಎಂಪಿವಿಗಳಿಗೆ ಹೆಚ್ಚು ಬೇಡಿಕೆ ಕಂಡುಬರುತ್ತಿದೆ. ಈ ಕಾರಣದಿಂದಾಗಿ ನಾನಾ ಕಾರು ತಯಾರಕರು ವಿಭಿನ್ನ ಆಯಾಮಗಳಲ್ಲಿ ಬೃಹತ್ ಕುಟುಂಬಗಳಿಗೆ ಸೂಕ್ತವಾಗುವ ಮಾದರಿಗಳನ್ನು ಪರಿಚಯಿಸುತ್ತಿದ್ದಾರೆ. ಈ ಪೈಕಿ ಕಿಯಾ ಕಂಪನಿಯು (Kia company) ಈಗಾಗಲೇ ತನ್ನ ಜನಪ್ರಿಯ ‘ಕಾರೆನ್ಸ್’ ಮಾದರಿಯನ್ನು ಹೊಂದಿರುವುದರಿಂದ, ಪ್ರೀಮಿಯಂ ಸೆಗ್ಮೆಂಟಿನಲ್ಲಿ ಕ್ಲಾವಿಸ್ (Clavis) ಎಂಬ ಹೊಸ ಎಂಪಿವಿಯನ್ನು ಪರಿಚಯಿಸಲು ಮುಂದಾಗಿದೆ. ಹಾಗಿದ್ದರೆ ಈ ಹೊಸ ‘ಕಿಯಾ ಕ್ಲಾವಿಸ್’ ಕಾರಿನ ವಿಶೇಷತೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ಬಿಡುಗಡೆ ದಿನಾಂಕದ ವಿವರ (Releasing date) :
ಕಿಯಾ ಇಂಡಿಯಾ ಮೇ 8, 2025 ರಂದು ತನ್ನ ಹೊಸ ಎಂಪಿವಿ ಕಾರು ‘ಕ್ಲಾವಿಸ್’ ಅನ್ನು ಅಧಿಕೃತವಾಗಿ ಅನಾವರಣಗೊಳಿಸಲಿದ್ದರೂ, ಈ ವಾಹನದಿಂದ ಯಾವ ಹೊಸತನ್ನು ನಿರೀಕ್ಷಿಸಬಹುದು ಎಂಬ ಕುತೂಹಲ ಎಲ್ಲರಲ್ಲೂ ನಿರ್ಮಾಣವಾಗಿದೆ.
ಬೆಲೆ ಹಾಗೂ ಪೈಪೋಟಿ (Price and Competition) :
ಕ್ಲಾವಿಸ್ ಕಾರು, ಕಾರೆನ್ಸ್ ಮಾದರಿಯಿಗಿಂತ ಸ್ವಲ್ಪ ಹೆಚ್ಚಿನ ದರ ಹೊಂದಿದ್ದು, ಎಕ್ಸ್ ಶೋರೂಂ ದರವು ಸುಮಾರು ರೂ. 10.6 ಲಕ್ಷದಿಂದ ಆರಂಭಿಸಿ ರೂ. 19.6 ಲಕ್ಷವರೆಗೆ ಇರಲಿದೆ. ಈ ಕಾರು ಮಾರುಕಟ್ಟೆಗೆ ಬಂದ ಬಳಿಕ ಟೊಯೊಟಾ ಇನ್ನೋವಾ ಹೈಕ್ರಾಸ್ (Toyota Innova Highcross) ಹಾಗೂ ಮಾರುತಿ ಸುಜುಕಿ ಇನ್ವಿಕ್ಟೋ ಮಾದರಿಗಳ ಜೊತೆ ತೀವ್ರ ಪೈಪೋಟಿ ನೀಡಲಿದೆ.

ಎಂಜಿನ್ (Engine) ಆಯ್ಕೆ ಮತ್ತು ಸಾಮರ್ಥ್ಯ :
ವಾಹನದ ಶಕ್ತಿಯ ಮೂಲವಾಗಿ, ಕ್ಲಾವಿಸ್‌ಗೆ ಕಾರೆನ್ಸ್‌ನಂತೆಯೇ ಪರೀಕ್ಷಿತ ಮತ್ತು ನಂಬಿಕೆಯಾರ್ಹ ಎಂಜಿನ್ ಆಯ್ಕೆಗಳನ್ನು ನೀಡಲಾಗುವುದು. ಇದರೊಳಗೆ 1.5 ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ (160 ಬಿಹೆಚ್‌ಪಿ ಪವರ್ ಮತ್ತು 253 ಎನ್‌ಎಂ ಟಾರ್ಕ್) ಮತ್ತು 1.5 ಲೀಟರ್ ಡೀಸೆಲ್ ಎಂಜಿನ್ (115 ಬಿಹೆಚ್‌ಪಿ ಪವರ್ ಮತ್ತು 250 ಎನ್‌ಎಂ ಟಾರ್ಕ್) ನ್ನು ನಿರೀಕ್ಷಿಸಬಹುದು.
ಸುರಕ್ಷತೆಗೆ (Safety) ಆದ್ಯತೆ ನೀಡಿದ ವೈಶಿಷ್ಟ್ಯಗಳು :
ಕ್ಲಾವಿಸ್ ಕಾರಿನಲ್ಲಿ ಲೆವೆಲ್ 2 ಎಡಿಎಎಸ್ (Advanced Driver Assistance Systems) ಅಂದರೆ, ಫಾರ್ವರ್ಡ್ ಕೊಲಿಷನ್ ಎವಾಯ್ಡೆನ್ಸ್, ಲೇನ್ ಕೀಪ್ ಅಸಿಸ್ಟ್, ಎಕ್ಸಿಟ್ ವಾರ್ನಿಂಗ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಮತ್ತು ಬ್ಲೈಂಡ್ ಸ್ಪಾಟ್ ಡಿಟೆಕ್ಷನ್ ಸೌಲಭ್ಯಗಳು ಇರಲಿವೆ. ಜೊತೆಗೆ, 360 ಡಿಗ್ರಿ ಕ್ಯಾಮೆರಾ ಮತ್ತು ಆರು ಏರ್ ಬ್ಯಾಗ್‌ಗಳ ಸುರಕ್ಷತಾ ವೈಶಿಷ್ಟ್ಯಗಳೂ ಇರಲಿವೆ.
ಅಷ್ಟೇ ಅಲ್ಲದೆ, ಈ ಕಾರಿನಲ್ಲಿ ಆರು ಏರ್ ಬ್ಯಾಗ್‌ಗಳಂತಹ (Air bags) ಹೆಚ್ಚುವರಿ ಭದ್ರತಾ ವ್ಯವಸ್ಥೆ ಇರಲಿದೆ.
ಐಷಾರಾಮಿ ಅನುಭವ ನೀಡುತ್ತದೆ ಈ ಕಾರು:
ಇಂಟೀರಿಯರ್‌ನಲ್ಲಿ ಕ್ಲಾವಿಸ್ ಕಾರು ಪನೋರಾಮಿಕ್ ಸನ್‌ರೂಫ್, ಡ್ಯುಯಲ್-ಝೋನ್ ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ವೆಂಟಿಲೇಟೆಡ್ ಸೀಟುಗಳು, ಪ್ರೀಮಿಯಂ ಆಡಿಯೋ ಸಿಸ್ಟಮ್, ಆಂಬಿಯೆಂಟ್ ಲೈಟಿಂಗ್, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು 360 ಡಿಗ್ರಿ ಕ್ಯಾಮೆರಾ ವ್ಯವಸ್ಥೆಗಳನ್ನು ಒಳಗೊಂಡಿರುತ್ತದೆ. ಜೊತೆಗೆ, 12.3 ಇಂಚಿನ ಟಚ್‌ಸ್ಕ್ರೀನ್ (Touchscreen) ಇನ್ಫೋಟೈನ್‌ಮೆಂಟ್ ಸಿಸ್ಟಮ್ ಕೂಡ ಲಭ್ಯವಿರುವ ನಿರೀಕ್ಷೆಯಿದೆ.
ಎಕ್ಸ್‌ಟೀರಿಯರ್ ವಿನ್ಯಾಸ (Extirier style) :
ವಾಹನದ ಹೊರಾಂಗಣ ವಿನ್ಯಾಸದ ಕುರಿತು ಮಾತನಾಡುವುದಾದರೆ, ಇದರ ಮುಂಭಾಗವು ನೇರವಾದ ಹೊಸ ಗ್ರಿಲ್ ವಿನ್ಯಾಸ, 3 ಪಾಡ್ ಎಲ್‌ಇಡಿ ಹೆಡ್‌ಲೈಟ್‌ಗಳು ಮತ್ತು ಎಲ್‌ಇಡಿ ಡಿಆರ್‌ಎಲ್‌ಗಳಿಂದ ಕೂಡಿದೆ. ಹಿಂಭಾಗದಲ್ಲಿ ಲೈಟ್ ಬಾರ್ (Light bar) ಜೊತೆ ಸಂಯೋಜನೆಯಾದ ಎಲ್‌ಇಡಿ ಟೈಲ್ ಲೈಟ್‌ಗಳಿದ್ದರೂ, ಸಿಲ್ವರ್ ಫಾಕ್ಸ್ ಸ್ಕಿಡ್ ಪ್ಲೇಟ್ ಹಾಗೂ ಬಲಿಷ್ಟ ಬಂಪರ್ ಈ ಕಾರಿನ ಸ್ಪೋಟಕ ಹೆಜ್ಜೆಯನ್ನು ಹೆಚ್ಚಿಸುತ್ತದೆ.
ಅಲ್ಲದೆ, 16 ಇಂಚುಗಳಿಗಿಂತ ದೊಡ್ಡದಾದ ಹೊಸ ಅಲಾಯ್ ವೀಲ್ ವಿನ್ಯಾಸ ಮತ್ತು ವಿಶಿಷ್ಟ ಬಣ್ಣದ ಆಯ್ಕೆಗಳು ರಸ್ತೆಮೇಲೆ ಕಾರಿನ ಪ್ರಭಾವವನ್ನೇ ಹೆಚ್ಚಿಸುವ ನಿರೀಕ್ಷೆ ಇದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.