Gemini Generated Image 9qcxxf9qcxxf9qcx copy scaled

BIGNEWS: ರಾಜ್ಯದ ಪ್ರಾಥಮಿಕ ಶಿಕ್ಷಕರಿಗೆ ಬಡ್ತಿ ಭಾಗ್ಯ: ಮುಖ್ಯ ಶಿಕ್ಷಕರ ಹುದ್ದೆಯ ಕೌನ್ಸಿಲಿಂಗ್ ವೇಳಾಪಟ್ಟಿ ಪ್ರಕಟ!

Categories:
WhatsApp Group Telegram Group

ಮುಖ್ಯಾಂಶಗಳು:

  • ಜ.31, 2026 ರಂದು ಹಿರಿಯ ಮುಖ್ಯ ಶಿಕ್ಷಕರ ಬಡ್ತಿ ಕೌನ್ಸಿಲಿಂಗ್.
  • 250ಕ್ಕಿಂತ ಹೆಚ್ಚು ಮಕ್ಕಳಿರುವ ಶಾಲೆಗಳಿಗೆ ಮಾತ್ರ ಈ ಹುದ್ದೆ.
  • ಬಡ್ತಿ ನಿರಾಕರಿಸಿದರೆ 1 ವರ್ಷ ‘ನೋ ಪ್ರಮೋಷನ್’ ಶಿಕ್ಷೆ!

ರಾಜ್ಯದ ಸರ್ಕಾರಿ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸಾವಿರಾರು ಶಿಕ್ಷಕರು ಎಷ್ಟೋ ವರ್ಷಗಳಿಂದ ಒಂದು ಸಿಹಿ ಸುದ್ದಿಗಾಗಿ ಕಾಯುತ್ತಿದ್ದರು. “ನಮಗೆ ಯಾವಾಗ ಪ್ರಮೋಷನ್ ಸಿಗುತ್ತೆ? ನಾವು ಯಾವಾಗ ಮುಖ್ಯ ಶಿಕ್ಷಕರಾಗುತ್ತೇವೆ?” ಎಂಬ ಪ್ರಶ್ನೆ ಹಲವರಲ್ಲಿತ್ತು. ಇದೀಗ ಆ ಪ್ರಶ್ನೆಗೆ ಶಿಕ್ಷಣ ಇಲಾಖೆ ಉತ್ತರ ನೀಡಿದೆ.

ರಾಜ್ಯ ಸರ್ಕಾರ ಶಿಕ್ಷಣ ಇಲಾಖೆ ಹೊರಡಿಸಿರುವ ಸುತ್ತೋಲೆಯಲ್ಲಿ ಹೀಗಿದೆ

ಅಧಿಕೃತ ಪ್ರತಿಗಳು ಕೊನೆಯ ಭಾಗದಲ್ಲಿವೆ

ಈ ಕುರಿತಂತೆ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಅಧಿಸೂಚನೆ ಹೊರಡಿಸಿದ್ದು,  ಕರ್ನಾಟಕ ಸರ್ಕಾರಿ ನೌಕರರ(ಜೇಷ್ಟತಾ) ನಿಯಮಗಳು-1957ರ ನಿಯಮಗಳ ಪ್ರಕಾರ 2025-26ನೇ ಸಾಲಿನಲ್ಲಿ ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ (HM) ವೃಂದದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರಿಗೆ ಹಿರಿಯ ಮುಖ್ಯ ಶಿಕ್ಷಕರ (SHM) ವೃಂದಕ್ಕೆ ಸ್ಥಾನಪನ್ನ ಬಡ್ತಿ ನೀಡಲು ಉದ್ದೇಶಿಸಿದೆ. ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರುಗಳಿಗೆ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) ಕಾಯ್ದೆ-2020ರ ಸೆಕ್ಷನ್ 3ರ ಪ್ರಕಾರೆ ‘ಸಿ’ ವೃಂದದ ಹುದ್ದೆಗಳಿಗೆ ಬಡ್ತಿ ನೀಡಲು ಕ್ರಮವಹಿಸಬೇಕಾಗುತ್ತದೆ ಎಂದಿದ್ದಾರೆ.

ಪ್ರಯುಕ್ತ, ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರುಗಳಿಗೆ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು ಜೇಷ್ಟತಾ ನಿಯಮಾನುಸಾರ ಆಯಾ ವೃಂದವಾರು ಪ್ರಕಟಿಸಲಾಗಿರುವ ಜಿಲ್ಲಾ ಅಂತಿಮ ಜೇಷ್ಟತಾ ಪಟ್ಟಿಗೆ ಅನುಗುಣವಾಗಿ ಬಡ್ತಿಯನ್ನು ನೀಡಬೇಕಾಗಿದ್ದು ಪ್ರಕಟಿತ ವೇಳಾಪಟ್ಟಿಯಂತೆ ಜಿಲ್ಲಾ ಹಂತದಲ್ಲಿ ಎಲ್ಲಾ ಪೂರ್ವಭಾವಿ ಕ್ರಮಗಳನ್ನು ಕೈಗೊಂಡು ಬಡ್ತಿಗೆ ಅರ್ಹರಿರುವ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕರ ಜೇಷ್ಟತಾ ಪಟ್ಟಿಯನ್ನು ದಿನಾಂಕ: 01/01/2025 ರಲ್ಲಿದ್ದಂತೆ ಅಂತಿಮಗೊಳಿಸಲು ಸಕ್ಷಮ ಪ್ರಾಧಿಕಾರಿಗಳಿಗೆ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಪ್ರಸ್ತುತ ಲಭ್ಯವಿರುವ ಖಾಲಿ ಹುದ್ದೆಗಳಿಗೆ ಎದುರಾಗಿ ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರಿಗೆ ಹಿರಿಯ ಮುಖ್ಯ ಶಿಕ್ಷಕರ ಹುದ್ದೆಗೆ ಬಡ್ತಿ ನೀಡುವ ಸಕ್ಷಮ ಪ್ರಾಧಿಕಾರಿಗಳಾದ ಆಯಾ ಜಿಲ್ಲಾ ಉಪ ನಿರ್ದೆಶಕರು(ಆಡಳಿತ)ರವರುಗಳ ಹಂತದಲ್ಲಿ ರಾಜ್ಯದಾದ್ಯಂತ ಏಕಕಾಲದಲ್ಲಿ ಕೌನ್ಸಿಲಿಂಗ್‌ ಮೂಲಕ ಬಡ್ತಿ ಪ್ರಕ್ರಿಯೆಗಳು ನಡೆಯುತ್ತವೆ ಎಂದಿದ್ದಾರೆ.

ಈ ಸಂದರ್ಭದಲ್ಲಿ ಎದ್ದುಕಾಣುವ ಅಂಗವೈಕಲ್ಯವನ್ನುಳ್ಳ ವ್ಯಕ್ತಿಗಳಿಗೆ ಮೀಸಲಾತಿಯನ್ನು ಕಲ್ಪಿಸುವ ಬಗ್ಗೆ ಹಾಗೂ ಅಂಗವೈಕಲ್ಯತೆಯನ್ನು ಗುರುತಿಸುವ ಕುರಿತಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರೆ ಸಬಲೀಕರಣ ಇಲಾಖೆ ಅಧಿಸೂಚನೆಯನ್ನು ಹೊರಡಿಸಿ ತಜ್ಞರ ಸಮಿತಿಯ ಸಭೆಯಲ್ಲಿ ಗುರುತಿಸಿರುವ ಅಂಗವೈಕಲ್ಯತೆಯ ವರ್ಗಗಳನ್ನು ನಿಗಧಿಪಡಿಸಲಾಗಿದ್ದು ಅದರಂತೆ ಕ್ರಮವಹಿಸತಕ್ಕದ್ದು ಎಂದು ಸೂಚಿಸಿದ್ದಾರೆ.

ಬಡ್ತಿ ಪ್ರಕ್ರಿಯೆಯ ಕೌನ್ಸಿಲಿಂಗ್ ಕೈಗೊಳ್ಳುವಾಗ ಈ ಕೆಳಕಂಡ ಮಾರ್ಗಸೂಚಿ ಅಂಶಗಳನ್ನು ಅನುಸರಿಸಲು ತಿಳಿಸಿದ್ದಾರೆ.

1. ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು ಶಿಕ್ಷಕರ ವರ್ಗಾವಣಾ ನಿಯಂತ್ರಣ ಕಾಯ್ದೆ-2020ರ ಸೆಕ್ಷನ್-3 ರಂತೆ’ಸಿ’ ವಲಯದಲ್ಲಿನ ಶಾಲೆಗಳಲ್ಲಿ ಸ್ಥಳಾವಕಾಶ ಕಲ್ಪಿಸುವ ದೃಷ್ಟಿಯಿಂದ ‘ಸಿ’ ವಲಯದ ಹಿರಿಯ ಮುಖ್ಯ ಶಿಕ್ಷಕರ ಹುದ್ದೆಗಳನ್ನು ಸಂಬಂಧಿಸಿದ ಶಾಲೆಗಳಲ್ಲಿ ತೆರವುಗೊಳಿಸಬೇಕಿದೆ. ಅಂದರೆ, ‘ಬಿ’ ವಲಯದಲ್ಲಿ ಕರ್ತವ್ಯ ನಿರತ ಹಿರಿಯ ಮುಖ್ಯ ಶಿಕ್ಷಕರನ್ನು ‘ಎ’ ವಲಯದ ಶಾಲೆಗಳಿಗೆ ಹಾಗೂ ‘ಸಿ’ ವಲಯದಲ್ಲಿನ ಕರ್ತವ್ಯನಿರತ ಹಿರಿಯ ಮುಖ್ಯ ಶಿಕ್ಷಕರನ್ನು ‘ಬಿ’ ವಲಯದಲ್ಲಿನ ಶಾಲೆಗೆ ಕೌನ್ಸಿಲಿಂಗ್‌ ಮೂಲಕ ಸ್ಥಳಾಂತರಿಸುವ ಮೂಲಕ ‘ಸಿ’ ವಲಯದಲ್ಲಿ ಖಾಲಿ ಹುದ್ದೆಗಳನ್ನು ಲಭ್ಯಪಡಿಸಬೇಕಾಗುತ್ತದೆ.

2. ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು ಶಿಕ್ಷಕರ ವರ್ಗಾವಣಾ ನಿಯಂತ್ರಣ ಕಾಯ್ದೆ-2020ರ ಸೆಕ್ಷನ್-10 ರ ಪ್ರಕಾರ ವಲಯ ವರ್ಗಾವಣೆಯಲ್ಲಿ ಹಿರಿಯ ಮುಖ್ಯ ಶಿಕ್ಷಕರಿಗೆ ನಿಯಮಾನುಸಾರ ಆದ್ಯತೆಯನ್ನು ಪರಿಗಣಿಸುವುದು.

3. ಬಡ್ತಿಗೆ ಅರ್ಹರಿರುವ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಜೇಷ್ಟತಾ ಪಟ್ಟಿಯನ್ನು ಜಿಲ್ಲಾ ಹಂತದಲ್ಲಿ ಉಪನಿರ್ದೇಶಕರು(ಆಡಳಿತ) ಇವರು ಪ್ರಕಟಿಸತಕ್ಕದ್ದು, ದಿನಾಂಕ: 31/12/2025 ರಲ್ಲಿದ್ದಂತೆ ಜಿಲ್ಲೆಯಲ್ಲಿ ನಿವೃತ್ತಿ ಮರಣ ರಾಜೀನಾಮೆ ಇತ್ಯಾದಿ ಕಾರಣಗಳಿಂದ ತೆರವಾಗಿ ಲಭ್ಯವಿರುವ / ಇ.ಇ.ಡಿ.ಎಸ್ ನಲ್ಲಿ ಇಂದೀಕರಣವಾಗಿರುವ ಹಿರಿಯ ಮುಖ್ಯ ಶಿಕ್ಷಕರ ಖಾಲಿ ಹುದ್ದೆಗಳ ಸಂಖ್ಯೆಯನ್ನು ಮತ್ತು ಈಗಾಗಲೇ ಇಲಾಖೆಯಿಂದ ವರ್ಗಾವಣೆ ನಂತರ ನಿಗಧಿಪಡಿಸಿದ (ತಂತ್ರಾಂಶದಲ್ಲಿ) ಹೊರಡಿಸಲಾಗಿರುವ ಇ-ರಿಜಿಸ್ಟರ್‌ನಲ್ಲಿ ಮಂಜೂರಾಗಿರುವ ವೃಂದವಾರು ತಾಲ್ಲೂಕುವಾರು/ ಜಿಲ್ಲಾವಾರು ಹುದ್ದೆ ಮಂಜೂರಾತಿಯ ಮಿತಿಯೊಳಗೆ ಖಾಲಿಹುದ್ದೆಗಳು ಲಭ್ಯವಿರುವ ಬಗ್ಗೆ ತಂತ್ರಾಂಶದಲ್ಲಿ ಮತ್ತೊಮ್ಮೆ ಪರಿಶೀಲಿಸಿ ಖಚಿತಪಡಿಸಿಕೊಳ್ಳತಕ್ಕದ್ದು.

4. ಉಲ್ಲೇಖ-7 ರ ಪ್ರಕಾರ ಹೆಚ್ಚುವರಿ ಶಿಕ್ಷಕರ ಸಮರ್ಪಕ ಮರುಹೊಂದಾಣಿಕೆ ಕುರಿತ ಅಧಿಸೂಚನೆಯಲ್ಲಿ ನಿಗದಿಪಡಿಸಲಾಗಿರುವ ಕೋಷ್ಟಕದ ಪ್ರಕಾರ 250 ಕ್ಕಿಂತ ಹೆಚ್ಚಿನ ದಾಖಲಾತಿ ಇರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಮಾತ್ರ ಹಿರಿಯ ಮುಖ್ಯ ಶಿಕ್ಷಕರ ಹುದ್ದೆಯನ್ನು ಬಡ್ತಿಗೆ ಪರಿಗಣಿಸತಕ್ಕದ್ದು. ಪ್ರಸ್ತುತ ಯಾವುದೇ ಶಾಲೆಯಲ್ಲಿ 250 ಕ್ಕಿಂತ ಕಡಿಮೆ ಮಕ್ಕಳ ದಾಖಲಾತಿ ಇರುವ ಶಾಲೆಗೆ ಹಿರಿಯ ಮುಖ್ಯ ಶಿಕ್ಷಕರ ಹುದ್ದೆಯನ್ನು ಖಾಲಿ ಹುದ್ದೆ ಎಂದು ಪರಿಗಣಿಸತಕ್ಕದ್ದಲ್ಲ.

5. ಜಿಲ್ಲೆಗಳಲ್ಲಿ ಹಿರಿಯ ಮುಖ್ಯ ಶಿಕ್ಷಕರ ‘ಎ’ ‘ಬಿ’ ‘ಸಿ’ ವಲಯದ ಖಾಲಿ ಹುದ್ದೆಗಳನ್ನು ಮೊದಲು ಗುರುತಿಸಿಕೊಳ್ಳಬೇಕು. ವಲಯದ ವರ್ಗಾವಣೆಯ ಆಗತ್ಯತೆ ಕಂಡುಬಂದಲ್ಲಿ ಹಿರಿಯ ಮುಖ್ಯ ಶಿಕ್ಷಕರ ಜೇಷ್ಟತೆಗೆ ಅನುಗುಣವಾಗಿ ‘ಬಿ’ ವಲಯದಿಂದ ‘ಎ’ ವಲಯಕ್ಕೂ ಮತ್ತು ‘ಸಿ’ ವಲಯದಿಂದ ‘ಬಿ’ ವಲಯಕ್ಕೂ ಶಿಕ್ಷಕರನ್ನು ಸ್ಥಳಾಂತರಿಸುವ ಮೂಲಕ ‘ಸಿ’ ವಲಯದ ಖಾಲಿ ಹುದ್ದೆಯನ್ನು ಸೃಜಿಸಿಕೊಳ್ಳತಕ್ಕದ್ದು.

6. ಬಡ್ತಿಗೆ ಅರ್ಹರಿರುವ ಮುಖ್ಯ ಶಿಕ್ಷಕರ ಅಂತಿಮ ಜೇಷ್ಠತಾ ಪಟ್ಟಿಯನ್ನು ಜಿಲ್ಲಾ ಹಂತದಲ್ಲಿ ಉಪನಿರ್ದೇಶಕರು (ಆಡಳಿತ) ಇವರು ಪ್ರಕಟಿಸತಕ್ಕದ್ದು. ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) ಕಾಯ್ದೆ-2020 ಸೆಕ್ಷನ್-3(2) ಪ್ರಕಾರ’ ಒಬ್ಬ ಶಿಕ್ಷಕನು ವಲಯ-‘ಸಿ’ ನಲ್ಲಿ ನಿರಂತರವಾಗಿ ಹತ್ತು ವರ್ಷಗಳಿಗೂ ಅಥವಾ ಸಂಚಿತವಾಗಿ ವಲಯ”ಸಿ” ನಲ್ಲಿ ಹದಿನೈದು ವರ್ಷಗಳಿಗೂ ಹೆಚ್ಚಾಗಿ ಈಗಾಗಲೇ ಸೇವೆ ಸಲ್ಲಿಸಿದ್ದಲ್ಲಿ ಅಂಥಹ ಶಿಕ್ಷಕರನ್ನು ಬಡ್ತಿಯ ಮೇಲೆ ಖಾಲಿ ಹುದ್ದೆಗಳ ಲಭತೆಗೆ ಒಳಪಟ್ಟು ಕೌನ್ಸಿಲಿಂಗ್ ಮೂಲಕ ವಲಯ” ಬಿ ಅಥವಾ ವಲಯ’ ವ’ ಯಲ್ಲಿನ ಶಾಲೆಗೆ ಸ್ಥಳ ನಿಯುಕ್ತಿ ಮಾಡಬಹುದಾಗಿದೆ.

ಈ ಕುರಿತಂತೆ ಸಕ್ಷಮ ಪ್ರಾಧಿಕಾರಿಗಳು ಪ್ರತಿಯೊಂದು ಶಾಲೆಗಳ ಮಕ್ಕಳ ದಾಖಲಾತಿಯನ್ನು ದಿನಾಂಕ: 31/12/2025 ರಲ್ಲಿದ್ದಂತೆ SATS ನಲ್ಲಿ ಕಡ್ಡಾಯವಾಗಿ ಖಚಿತಪಡಿಸಿಕೊಳ್ಳತಕ್ಕದ್ದು. ಒಂದು ವೇಳೆ ಸದರಿ ಶಾಲೆಯಲ್ಲಿ ನಿಗದಿತ ಮಾನದಂಡಕ್ಕಿಂತ ಮಕ್ಕಳ ಸಂಖ್ಯೆ ಕಡಿಮೆಯಾದಲ್ಲಿ ಮುಂದಿನ ದಿನದಲ್ಲಿ ನಡೆಯುವ ಹೆಚ್ಚುವರಿ (Rationalization) ಪ್ರಕ್ರಿಯೆಯಲ್ಲಿ ನಿಯಮಾನುಸಾರ ಹಿರಿಯ ಮುಖ್ಯಶಿಕ್ಷಕರ ಹುದ್ದೆಯನ್ನು ಹೆಚ್ಚುವರಿ ಎಂದು ಗುರುತಿಸಿ ನಿಯಮಾನುಸಾರ ಅಗತ್ಯವಿರುವೆಡೆ ಸ್ಥಳಾಂತರಗೊಳಿಸಲಾಗುವುದು.

ಉಲ್ಲೇಖ-6 ರ ಪ್ರಕಾರ ಅಂಗವೈಕಲ್ಯತೆಯ ಕುರಿತಾಗಿ ನಮೂನೆ 4, 5 ಮತ್ತು 6 ರಲ್ಲಿ ನಿಗಧಿಪಡಿಸಿರುವ ವೈದ್ಯಕೀಯ ಮಂಡಳಿಯಿಂದ ಪ್ರಮಾಣ ಪತ್ರವನ್ನು ಪಡೆದಿರುವ ಶಿಕ್ಷಕರನ್ನು ಮಾತ್ರ ಅಂಗವೈಕಲ್ಯತೆಯ ಮೀಸಲಾತಿಯಲ್ಲಿ ಅರ್ಹತೆ ಇದಲ್ಲಿ ನಿಯಮಾನುಸಾರ ಪರಿಗಣಿಸುವುದು, ಶಾಶ್ವತ ಅಂಗವಿಕಲತೆಯ ಪ್ರಮಾಣ ಪತ್ರವನ್ನು (UDID) ಪಡೆದಿದ್ದರೂ ಸಹ ಸದರಿ Unique Disability ID ನಲ್ಲಿ ಅಂಗವಿಕಲತೆಯ (CATEGORY ABBREVIATIONS) ವಿಧದ ಬಗ್ಗೆ ಸ್ಪಷ್ಟತೆ ಇಲ್ಲದಿರುವುದರಿಂದ ಹಾಗೂ ಅಂಗವೈಕಲ್ಯತೆಯ Annexure-1 ರಲ್ಲಿ ನಿಗಧಿಪಡಿಸಿರುವ ಅಂಗವೈಕಲ್ಯತೆಯ ಪ್ರಮಾಣ ಮತ್ತು ವಿಧವನ್ನು ಖಚಿತಪಡಿಸಿಕೊಳ್ಳುವ ದೃಷ್ಟಿಯಿಂದ ನಮೂನೆಯಲ್ಲಿರುವಂತೆ ಅಂಗವಿಕಲ ಶಿಕ್ಷಕರು ತ್ರಿಸದಸ್ಯೆ ವೈದ್ಯಕೀಯ ಮಂಡಳಿಯಿಂದ ಪ್ರಮಾಣ ಪತ್ರವನ್ನು ಪಡೆದಿರಬೇಕಾಗುತ್ತದೆ. ಇದನ್ನು ಉಪನಿರ್ದೆಶಕರು ಕಡ್ಡಾಯವಾಗಿ ಖಚಿತಪಡಿಸಿಕೊಳ್ಳತಕ್ಕದ್ದು.

ಯಾವುದೇ ಶಿಕ್ಷಕರು ಸುಳ್ಳು ಮಾಹಿತಿ/ದಾಖಲೆ ನೀಡಿ ಬಡ್ತಿ ಪಡೆದಿದ್ದಲ್ಲಿ ಅಂತಹಾ ಶಿಕ್ಷಕರ ಬಡ್ತಿಯನ್ನು ರದ್ದುಪಡಿಸಲಾಗುವುದು ಹಾಗೂ ಅಂತಹಾ ಶಿಕ್ಷಕರ ವಿರುದ್ಧ ನಿಯಮಾನುಸಾರ ಶಿಸ್ತು ಕ್ರಮವನ್ನು ಕೈಗೊಳ್ಳಲಾಗುವುದು. ಅಂಗವೈಕಲ್ಯತೆ ಹೊಂದಿದ್ದ ಶಿಕ್ಷಕರನ್ನು ಮಾತ್ರ ಬಡ್ತಿಗೆ ನಿಯಮಾನುಸಾರ ಪರಿಗಣಿಸುವುದು, ಶಿಕ್ಷಕರ ಅವಲಂಬಿತರು ಅಂಗವೈಕಲ್ಯತೆಯನ್ನು ಹೊಂದಿದ್ದೆಲ್ಲಿ ಅಧ್ಯತೆಯನ್ನು/ಮೀಸಲಾತಿಯನ್ನು ಬಯಸಿದ್ದಲ್ಲಿ ಅಂತಹ ಪ್ರಕರಣವನ್ನು ಬಡ್ತಿಗೆ ಪರಿಗಣಿಸಲು ಅವಕಾಶವಿರುವುದಿಲ್ಲ.

ಯಾವುದೇ ಮುಖ್ಯ ಶಿಕ್ಷಕರ ವಿರುದ್ಧ ಶಿಸ್ತು ಕ್ರಮ ಜಾರಿಯಲ್ಲಿರುವ ಪ್ರಕರಣಗಳಲ್ಲಿ ಅಂತಹ ಮುಖ್ಯ ಶಿಕ್ಷಕರನ್ನು ಬಡ್ತಿಗೆ ಪರಿಗಣಿಸಲು ಅವಕಾಶವಿರುವುದಿಲ್ಲ.
ಅಂಗವಿಕಲ ಮೀಸಲಾತಿಯಲ್ಲಿ ಬಡ್ತಿ ಪಡೆದ ಶಿಕ್ಷಕರ ತ್ರಿಸದಸ್ಯ ವೈದ್ಯಕೀಯ ಮಂಡಳಿಯ ಪ್ರಮಾಣ ಪತ್ರಗಳನ್ನು ಕಡ್ಡಾಯವಾಗಿ ಉಪನಿರ್ದೇಶರು(ಆಡಳಿತ) ಇವರು ತಮ್ಮ ಕಛೇರಿ ಕಡತದಲ್ಲಿ ಸಂರಕ್ಷಿಸಿಡತಕ್ಕದ್ದು. ಸದರಿ ಪ್ರಮಾಣ ಪತ್ರದ ದೃಢೀಕೃತ ಜೆರಾಕ್ಸ್‌ ಪ್ರತಿಯನ್ನು ಹಾಗೂ ಜಿಲ್ಲಾ ಹಂತದ ಬಡ್ತಿ ಪಕ್ರಿಯೆಯಲ್ಲಿ ಕೈಗೊಂಡ ಕ್ರಮದ ವಿವರವಾದ ಅಂಕಿ ಅಂಶಗಳ ವರದಿಯನ್ನು ಆಯಾ ವ್ಯಾಪ್ತಿಯ ವಿಭಾಗೀಯ ಸಹನಿರ್ದೇಶಕರಿಗೆ ಬಡ್ತಿ ಪ್ರಕ್ರಿಯೆ ಮುಕ್ತಾಯವಾದ ಒಂದು ವಾರದ ಒಳಗಾಗಿ ಕಡ್ಡಾಯವಾಗಿ ವರದಿ ಸಲ್ಲಿಸತಕ್ಕದ್ದು.

ಸಕ್ಷಮ ಪ್ರಾಧಿಕಾರಿಗಳು ಜಿಲ್ಲಾ ಹಂತದಲ್ಲಿ ಬಡ್ತಿ ಕೌನ್ಸಿಲಿಂಗ್‌ಗೆ ಪ್ರಸ್ತುತ ಜಾರಿಯಲ್ಲಿರುವ 100 ಬಿಂದುಗಳ Roster ವರ್ತುಲದಂತೆ ಮೀಸಲಾತಿ ಬಿಂದುವನ್ನು ಗುರುತಿಸಿ ಬಡ್ತಿ ಕೌನ್ಸಿಲಿಂಗ್ 1 : 1 ಅಂತಿಮ ಜೇಷ್ಠತಾ ಪಟ್ಟಿಯನ್ನು ಸಿದ್ಧಪಡಿಸತಕ್ಕದ್ದು. ಸದರಿ ಮುಂಬಡ್ತಿ ಮೀಸಲಾತಿ ಬಿಂದುಗಳು ಪ್ರಸಕ್ತ ಸಾಲಿನ ಬಡ್ತಿಯಿಂದ ಪ್ರಾರಂಭವಾಗುತ್ತದೆ. ಇನ್ನು ಮುಂದೆ ಮುಂದಿನ ಆದೇಶದವರೆಗೆ ಇದೇ ಮಾದರಿಗಳನ್ನು ಮುಂದುವರೆಸಿಕೊಂಡು ಹೋಗತಕ್ಕದ್ದು. Roster ವರ್ತುಲವನ್ನು ಅನುಸರಿಸಿ ಮುಂಬಡ್ತಿ ನೀಡುವಾಗ ಯಾವ ಯಾವ ಬಿಂದುವಿನವರೆಗೆ ಮುಂಬಡ್ತಿ ನೀಡಲಾಗಿತ್ತೋ ಆ ನಂತರದ ಬಿಂದುವಿನಿಂದ ಮುಂದುವರೆಸತಕ್ಕದ್ದು. ಬಿಂದು ಗುರುತಿಸುವಿಕೆಯಲ್ಲಿ ಯಾವುದೇ ವ್ಯತ್ಯಾಸಗಳು ಆಗತಕ್ಕದ್ದಲ್ಲ.

ಮೇಲೆ ವಿವರಿಸಲಾದ ಅಂಶಗಳನುಸಾರ ಸಕ್ಷಮ ಪ್ರಾಧಿಕಾರಿಗಳಾದ ಉಪನಿರ್ದೇಶಕರು(ಆಡಳಿತ) ಇವರ ಹಂತದಲ್ಲೇ ಈ ಕೆಳಕಂಡ ವೇಳಾಪಟ್ಟಿಯನುಸಾರ ಬಡ್ತಿ ಪ್ರಕ್ರಿಯೆಯನ್ನು ರಾಜ್ಯಾದಾದ್ಯಂತ ಏಕಕಾಲಕ್ಕೆ ಕೈಗೊಳ್ಳಲು ಅಧಿಕೃತ ಜ್ಞಾಪನವನ್ನು ಪ್ರಕಟಿಸಲಾಗಿದೆ.

ಹೀಗಿದೆ ಮುಖ್ಯ ಶಿಕ್ಷಕರ ಹುದ್ದೆಯ ಕೌನ್ಸೆಲಿಂಗ್ ವೇಳಾಪಟ್ಟಿ

01/01/2026/ಜಿಲ್ಲೆಯಲ್ಲಿ ಮುಖ್ಯ ಶಿಕ್ಷಕರ ಮತ್ತು ಹಿರಿಯ ಮುಖ್ಯ ಶಿಕ್ಷಕರ ತಾತ್ಕಾಲಿಕ ಜೇಷ್ಟತಾ ಪಟ್ಟಿಯನ್ನು ಪ್ರಕಟಿಸುವುದು. (ದಿನಾಂಕ: 01/01/2026 ರಲ್ಲಿದ್ದಂತೆ)

02/01/2026 : 08/01/2026- ಭಾದಿತ ಮುಖ್ಯ ಶಿಕ್ಷಕರುಗಳು ಪ್ರಕಟಿತ ತಾತ್ಕಾಲಿಕ ಜೇಷ್ಟತಾ ಪಟ್ಟಿಗೆ ಆಕ್ಷೇಪಣೆಗಳನ್ನು ಪೂರಕ To ದಾಖಲೆಗಳೊಂದಿಗೆ ಉಪನಿರ್ದೇಶಕರು(ಆಡಳಿತ) ಇವರಿಗೆ ಸಲ್ಲಿಸಲು ಕಾಲಾವಕಾಶ.

02/01/2026/ಜಿಲ್ಲೆಯಲ್ಲಿ ಲಭವಿರುವ ‘ಎ’ ‘ಬಿ’ ‘ಸಿ’ ವಲಯದಲ್ಲಿನ ಹಿರಿಯ ಮುಖ್ಯ ಶಿಕ್ಷಕರ ಖಾಲಿ ಹುದ್ದೆಗಳ ಪ್ರಕಟಣೆ. 04 03/01/2026/ವಲಯ ವರ್ಗಾವಣೆಗೆ ಇಚ್ಚಿಸುವ ಹಿರಿಯ ಮುಖ್ಯ ಶಿಕ್ಷಕರಿಂದ ಅಭಿಮತ ಸಲ್ಲಿಸಲು ನಿಗಧಿಪಡಿಸಿರುವ  ಅವಧಿ.

05/01/2026 ರಿಂದ 06/01/2026 ವಲಯ ವರ್ಗಾವಣೆಗೆ ಅರ್ಹರಿರುವ ‘ಸಿ’ ಮತ್ತು ‘ಬಿ’ ವಲಯದ ಹಿರಿಯ ಮುಖ್ಯ ಶಿಕ್ಷಕರ ಆದ್ಯತಾ ಪಟ್ಟಿ ಮತ್ತು ಕೌನ್ಸಿಲಿಂಗ್‌ ಜೇಷ್ಟತಾ ಪಟ್ಟಿ ಪ್ರಕಟಣೆ.

07/01/2026 ವಲಯ ವರ್ಗಾವಣೆ ಕೌನ್ಸಿಲಿಂಗ್ ಗೆ (ಅಗತ್ಯವಿದ್ದಲ್ಲಿ) ಅನುವಾಗುವಂತೆ ‘ಎ’ ‘ಬಿ’ ವಲಯದಲ್ಲಿನ ಹಿರಿಯ ಮುಖ್ಯ ಶಿಕ್ಷಕರ ಖಾಲಿ ಹುದ್ದೆಗಳ ಪ್ರಕಟಣೆ. ‘ಬಿ’ ವಲಯದಿಂದ ‘ಎ’ ವಲಯಕ್ಕೆ ಹಿರಿಯ ಮುಖ್ಯ ಶಿಕ್ಷಕರ ವರ್ಗಾವಣೆ ಕೌನ್ಸಿಲಿಂಗ್ ನಡೆಸುವುದು.

08/01/2026  ‘ಸಿ’ ವಲಯದಿಂದ ‘ಬಿ’ ವಲಯಕ್ಕೆ ಹಿರಿಯ ಮುಖ್ಯ ಶಿಕ್ಷಕರ ವರ್ಗಾವಣೆ ಕೌನ್ಸಿಲಿಂಗ್‌ ನಡೆಸುವುದು. 08 09/01/2026/ಬಾದಿತ ಮುಖ್ಯ ಶಿಕ್ಷಕರು ಸಲ್ಲಿಸಿರುವ ಆಕ್ಷೇಪಣೆಗಳ ಪರಿಶೀಲನೆ ಮತ್ತು ಪಟ್ಟಿ ಅಂತಿಮಗೊಳಿಸುವುದು.

16/01/2026/ಅಂಗವಿಕಲ ಮುಖ್ಯ ಶಿಕ್ಷಕರು ಸಲ್ಲಿಸುವ ಅಂಗವಿಕಲ ಪ್ರಮಾಣ ಪತ್ರದನುಸಾರ ಮುಖ್ಯಶಿಕ್ಷಕರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸುವುದು.

20/01/2026 ವೈದ್ಯಕೀಯ ಮಂಡಳಿಯು ನೀಡುವ ಅಂಗವಿಕಲ ಮುಖ್ಯ ಶಿಕ್ಷಕರ ವೈದ್ಯಕೀಯ ಪ್ರಮಾಣ ಪತ್ರದ ಆಧಾರದಲ್ಲಿ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭ್ಯರ್ಥಿಗಳು ಸಲ್ಲಿಸುವ ಜಾತಿ ಪ್ರಮಾಣ ಪತ್ರದ ಆಧಾರದಲ್ಲಿ ಬಡ್ತಿ ಮೀಸಲಾತಿಗೆ ಆರ್ಹತೆ ಇದೆಯೇ? ಅಥವಾ ಇಲ್ಲವೇ? ಎಂಬ ಬಗ್ಗೆ ತೀರ್ಮಾನಿಸಿ ಅಂತಿಮ ಅಧ್ಯತಾಪಟ್ಟಿಯಲ್ಲಿ ಬಡ್ತಿ ಮೀಸಲಾತಿ ಬಿಂದು ಮತ್ತು Roster ಗುರುತಿಸುವಿಕೆಯ ಕ್ರಮವನ್ನು ಅಂತಿಮಗೊಳಿಸುವುದು ಹಾಗೂ ಜಿಲ್ಲಾ ಹಂತದಲ್ಲಿ Departmental Promotion Committee (D.P.C) ಸಭೆಯನ್ನು ನಡೆಸಿ ಬಡ್ತಿಗೆ ಅರ್ಹರಿರುವ ಮುಖ್ಯ ಶಿಕ್ಷಕರ ಪಟ್ಟಿಗೆ ಅನುಮೋದನೆ ಕೈಗೊಳ್ಳುವುದು. 21/01/2026 ಬಡ್ತಿಗೆ ಅರ್ಹರಿರುವ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ 1 : 2 ತಾತ್ಕಾಲಿಕ ಜೇಷ್ಠತಾ ಪಟ್ಟಿ ಪ್ರಕಟಣೆ

22/01/2026/ ರಿಂದ 27/01/2026 ಬಡ್ತಿಗೆ ಅರ್ಹರಿರುವ ಪಾಥಮಿಕ ಶಾಲಾ ಮುಖ್ಯ ಶಿಕ್ಷಕರ 1 : 2 ತಾತ್ಕಾಲಿಕ ಜೇಷ್ಠತಾ ಪಟ್ಟಿಗೆ ಆಕ್ಷೇಪಣೆ to ಸಲ್ಲಿಸಲು ಮುಖ್ಯ ಶಿಕ್ಷಕರಿಗೆ ಅವಕಾಶ ಕಲ್ಪಿಸುವುದು.

28/01/2026/ಆಕ್ಷೇಪಣೆಗಳನ್ನು ಪರಿಶೀಲಿಸಿ ಇತ್ಯರ್ಥ ಪಡಿಸಲು ನಿಗಧಿಪಡಿಸಿದ ದಿನಾಂಕ

29/01/2026/ಬಡ್ತಿ ಕೌನ್ಸಿಲಿಂಗ್‌ಗೆ ಅರ್ಹರಿರುವ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ 1 : 1 ಅಂತಿಮ ಜೇಷ್ಟತಾ ಪಟ್ಟಿ ಪ್ರಕಟಣೆ

30/01/2026 ಅಂತಿಮವಾಗಿ ಬಡ್ತಿಗೆ ಪರಿಗಣಿಸಬೇಕಾದ ‘ಸಿ’ ವಲಯದಲ್ಲಿ ಹಿರಿಯ ಮುಖ್ಯ ಶಿಕ್ಷಕರ ಶಾಲಾವಾರು ಖಾಲಿ ಹುದ್ದೆಗಳ ಪ್ರಕಟಣೆ

31/01/2026|ಮುಖ್ಯ ಶಿಕ್ಷಕರ ವೃಂದದಿಂದ ಹಿರಿಯ ಮುಖ್ಯ ಶಿಕ್ಷಕರ ವೃಂದಕ್ಕೆ ಬಡ್ಡಿ ಕೌನ್ಸಿಲಿಂಗ್‌

ಷರಾ: ಸದರಿ ಬಡ್ತಿ ಆದೇಶವು ಪ್ರಸ್ತುತ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ಬಡ್ಡಿ ಕುರಿತ ಪ್ರಕರಣಗಳ ಅಂತಿಮ ತೀರ್ಪಿನ ಷರತ್ತಿಗೆ ಒಳಪಟ್ಟಿರುತ್ತದೆ.

ಬಡ್ತಿ ನೀಡುವ ಮುನ್ನ ಮುಖ್ಯ ಶಿಕ್ಷಕರ ಸೇವಾ ವಿವರಗಳನ್ನು ಕಡ್ಡಾಯವಾಗಿ ಇ.ಇ.ಡಿ.ಎಸ್‌ ತಂತ್ರಾಂಶದಲ್ಲಿ ಪರಿಶೀಲಿಸಿ ಎಲ್ಲಾ ಮಾಹಿತಿಗಳು ನಿಖರವಾಗಿದೆ ಎಂಬ ಬಗ್ಗೆ ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ದೃಢೀಕರಣ ಪಡೆದು ಖಚಿತಪಡಿಸಿಕೊಂಡ ನಂತರವೇ ಬಡ್ತಿ ನೀಡಲು ಕ್ರಮವಹಿತಕ್ಕದ್ದು.

ಕೌನ್ಸಿಲಿಂಗ್‌ನಲ್ಲಿ ಬಡ್ತಿ ನಿರಾಕರಿಸಿದ ಮುಖ್ಯಶಿಕ್ಷಕರ ಸೇವಾವಹಿಯಲ್ಲಿ ಬಡ್ತಿಯನ್ನು ನಿರಾಕರಿಸಿದ ಬಗ್ಗೆ ಹಾಗೂ ನಿಯಮಾನುಸಾರ ಅಂತಹವರು ಮುಂದಿನ ಒಂದು ವರ್ಷದವರೆಗೆ ಯಾವುದೇ ಬಡ್ತಿಗೆ ಅರ್ಹರಾಗಿರುವುದಿಲ್ಲ ಎಂಬುದನ್ನು ಕಡ್ಡಾಯವಾಗಿ ಕೆಂಪು ಶಾಯಿಯಲ್ಲಿ ಕೌನ್ಸಿಲಿಂಗ್ ದಿನದಂದೇ ಸ್ಪಷ್ಟವಾಗಿ ನಮೂದಿಸತಕ್ಕದ್ದು, ಈ ಬಗ್ಗೆ ವ್ಯಾಪ್ತಿಯ ಕ್ಷೇತ್ರಶಿಕ್ಷಣಾಧಿಕಾರಿಗಳು ಖುದ್ದು ಗಮನಹರಿಸತಕ್ಕದ್ದು.

ಬಡ್ತಿ ಪ್ರಕ್ರಿಯೆಯಲ್ಲಿ ಕಡ್ಡಾಯವಾಗಿ ಜೇಷ್ಟತಾ/ಬಡ್ತಿ ನಿಯಮಗಳನ್ನು ಪಾಲಿಸತಕ್ಕದ್ದು, ಉಲ್ಲೇಖಿತ-1 ರಿಂದ 7 ರವರೆಗಿನ ದಾಖಲೆಗಳಲ್ಲಿರುವ ಎಲ್ಲಾ ಅಂಶಗಳನ್ನು ಕಡ್ಡಾಯವಾಗಿ ಓದಿ ಅರ್ಥೈಸಿಕೊಂಡು ಎಲ್ಲಾ ಸೂಚನೆಗಳನ್ನು ಪಾಲಿಸಿ ಬಡ್ತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯಿಂದ ಯಾವುದೇ ಲೋಪವಾಗದಂತೆ ಕ್ರಮವಹಿಸಲು ಸಕ್ಷಮ ಪ್ರಾಧಿಕಾರಿಗಳಿಗೆ ಸೂಚಿಸಿದೆ. ಮೇಲೆ ವಿವರಿಸಿರುವ ಅಂಶಗಳನ್ನು ಉಲ್ಲಂಘಿಸಿ ಇದರಲ್ಲಿ ಯಾವುದೇ ಲೋಪವಾದಲ್ಲಿ ಸಕ್ಷಮ ಪ್ರಾಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು.

01 2
01 1
01 4
01 3

ಪ್ರಮುಖ ಎಚ್ಚರಿಕೆ: ಒಂದು ವೇಳೆ ಕೌನ್ಸಿಲಿಂಗ್ ಸಮಯದಲ್ಲಿ ನೀವು ಬಡ್ತಿಯನ್ನು ನಿರಾಕರಿಸಿದರೆ (Refuse), ಮುಂದಿನ ಒಂದು ವರ್ಷದವರೆಗೆ ನಿಮಗೆ ಯಾವುದೇ ಬಡ್ತಿ ಸಿಗುವುದಿಲ್ಲ. ಇದನ್ನು ನಿಮ್ಮ ಸೇವಾ ಪುಸ್ತಕದಲ್ಲಿ ‘ಕೆಂಪು ಮಸಿಯಲ್ಲಿ’ ಬರೆಯಲಾಗುತ್ತದೆ!

“ನೀವು ಅಂಗವಿಕಲ ಮೀಸಲಾತಿ ಅಡಿ ಬಡ್ತಿ ಬಯಸುತ್ತಿದ್ದರೆ, ಹಳೆಯ ಪ್ರಮಾಣ ಪತ್ರಗಳ ಜೊತೆಗೆ UDID ಕಾರ್ಡ್ ಇದ್ದರೂ ಸಾಲದು. ಇಲಾಖೆ ಸೂಚಿಸಿರುವ ನಮೂನೆಯಲ್ಲಿ ‘ತ್ರಿಸದಸ್ಯ ವೈದ್ಯಕೀಯ ಮಂಡಳಿ’ಯಿಂದ (Medical Board) ಹೊಸದಾಗಿ ದೃಢೀಕರಣ ಪಡೆಯುವುದು ಕಡ್ಡಾಯ. ಕೊನೆ ಗಳಿಗೆಯಲ್ಲಿ ಪರದಾಡುವ ಬದಲು ಈಗಲೇ ಆಸ್ಪತ್ರೆಗೆ ಹೋಗಿ ರೆಡಿ ಮಾಡಿಕೊಳ್ಳಿ.”

FAQs (ಸಾಮಾನ್ಯ ಪ್ರಶ್ನೆಗಳು):

ಪ್ರಶ್ನೆ 1: ನಮ್ಮ ಶಾಲೆಯಲ್ಲಿ 200 ಮಕ್ಕಳಿದ್ದಾರೆ, ನನಗೆ ಹಿರಿಯ ಮುಖ್ಯ ಶಿಕ್ಷಕನಾಗಿ ಬಡ್ತಿ ಸಿಗುತ್ತಾ?

ಉತ್ತರ: ಇಲ್ಲ. ಸರ್ಕಾರದ ಹೊಸ ಆದೇಶದ ಪ್ರಕಾರ, 250 ಕ್ಕಿಂತ ಹೆಚ್ಚು ಮಕ್ಕಳಿರುವ ಶಾಲೆಗಳಲ್ಲಿ ಮಾತ್ರ ಹಿರಿಯ ಮುಖ್ಯ ಶಿಕ್ಷಕರ ಹುದ್ದೆಯನ್ನು ಸೃಜಿಸಲಾಗುತ್ತದೆ. ಕಡಿಮೆ ಮಕ್ಕಳಿದ್ದರೆ ಆ ಹುದ್ದೆಯನ್ನು ‘ಖಾಲಿ ಹುದ್ದೆ’ ಎಂದು ಪರಿಗಣಿಸುವುದಿಲ್ಲ.

ಪ್ರಶ್ನೆ 2: ಬಡ್ತಿ ಕೌನ್ಸಿಲಿಂಗ್ ಎಲ್ಲೆಡೆ ಒಂದೇ ದಿನ ನಡೆಯುತ್ತಾ?

ಉತ್ತರ: ಹೌದು, ರಾಜ್ಯದ ಎಲ್ಲಾ ಜಿಲ್ಲಾ ಉಪನಿರ್ದೇಶಕರ (ಆಡಳಿತ) ಕಚೇರಿಯಲ್ಲಿ 31/01/2026 ರಂದು ಏಕಕಾಲದಲ್ಲಿ ಕೌನ್ಸಿಲಿಂಗ್ ನಡೆಯಲಿದೆ.

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories