govt employees

‘ರಾಜ್ಯ ಸರ್ಕಾರಿ’ ನೌಕರರ ಗಮನಕ್ಕೆ : ಈ ಕೂಡಲೇ ಈ ಮುಖ್ಯ ಕೆಲಸ ಮಾಡುವಂತೆ ಸರ್ಕಾರ ಸೂಚನೆ.!

WhatsApp Group Telegram Group

ಬೆಂಗಳೂರು: ರಾಜ್ಯದ ಸರ್ಕಾರಿ ನೌಕರರು ಪ್ರಮುಖವಾಗಿ ಗಮನಿಸಬೇಕಾದ ವಿಷಯ ಇಲ್ಲಿದೆ. ನಿಮ್ಮ ಬ್ಯಾಂಕ್ ಖಾತೆಯನ್ನು ವೇತನ ಖಾತೆ (Salary Account) ಯೋಜನೆಯಡಿ ಪರಿವರ್ತಿಸಲು ಸರ್ಕಾರವು ಸೂಚನೆ ನೀಡಿದೆ. ಈ ಸೌಲಭ್ಯವು ಎಲ್ಲಾ ಪ್ರಮುಖ ಬ್ಯಾಂಕ್‌ಗಳಲ್ಲಿ ಲಭ್ಯವಿದೆ.

ಸರ್ಕಾರದ ಸೂಚನೆಯ ಪ್ರಕಾರ, ಪ್ರತಿಯೊಬ್ಬ ಸರ್ಕಾರಿ ನೌಕರರು ತಮ್ಮ ESS ಲಾಗಿನ್‌ನಲ್ಲಿ (Employee Self-Service Login) PMJJBY (ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ) ಮತ್ತು PMSBY (ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ) ಕುರಿತ ಮಾಹಿತಿಯನ್ನು ಕಡ್ಡಾಯವಾಗಿ ಭರ್ತಿ ಮಾಡಿ ಸಲ್ಲಿಸಬೇಕು. ಈ ಕುರಿತು ಸಂಪೂರ್ಣವಾದ ಮಾಹಿತಿ ತಿಳಿದುಕೊಳ್ಳಲಾಗಿದೆ.

ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಮತ್ತು ಸುರಕ್ಷಾ ಬಿಮಾ ಯೋಜನೆಗಳು

ಆರ್ಥಿಕ ಇಲಾಖೆಯ ಪತ್ರ ಸಂಖ್ಯೆ: FD-CAM/160/2023, ದಿನಾಂಕ: 06/09/2023 ರ ಅನ್ವಯ, ಪ್ರತಿ ಉದ್ಯೋಗಿಗಳು ಎರಡು ಪ್ರಮುಖ ವಿಮಾ ಯೋಜನೆಗಳಾದ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ (PMJJBY) ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY) ಗಳನ್ನು ಪಡೆಯಲು ಕೋರಲಾಗಿದೆ. ಈ ಯೋಜನೆಗಳ ಸೌಲಭ್ಯವನ್ನು ತಮ್ಮ ವೇತನ ಖಾತೆ ಇರುವ ಬ್ಯಾಂಕ್ ಮೂಲಕ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ನೀವು https://www.jansuraksha.gov.in/ ಲಿಂಕ್ ಅನ್ನು ನೋಡಬಹುದು.

ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ (PMJJBY)

ಇದು ಜೀವ ವಿಮಾ ಯೋಜನೆಯಾಗಿದ್ದು, ವಾರ್ಷಿಕ ಕೇವಲ ರೂ. 436/- ಪ್ರೀಮಿಯಂ ಪಾವತಿಸಬೇಕಾಗುತ್ತದೆ. (ಪ್ರೀಮಿಯಂ ಮೊತ್ತವು ವಿಮಾದಾರರ ಬ್ಯಾಂಕ್ ಖಾತೆಯಿಂದ ಸ್ವಯಂಚಾಲಿತವಾಗಿ ಕಡಿತಗೊಳ್ಳುತ್ತದೆ).

  • ಯಾವುದೇ ಕಾರಣದಿಂದ ಮರಣ ಸಂಭವಿಸಿದರೆ, ಅವಲಂಬಿತ ಕುಟುಂಬ ಸದಸ್ಯರಿಗೆ ರೂ. 2.00 ಲಕ್ಷಗಳ ವಿಮಾ ಮೊತ್ತದ ನೆರವು ದೊರೆಯುತ್ತದೆ.
  • ಈ ಯೋಜನೆ 18 ರಿಂದ 50 ವರ್ಷದೊಳಗಿನ ಜನರಿಗೆ ಮಾತ್ರ ಲಭ್ಯವಿರುತ್ತದೆ.

ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY)

ಇದು ಅಪಘಾತ ವಿಮಾ ಯೋಜನೆಯಾಗಿದ್ದು, ವಾರ್ಷಿಕ ಕೇವಲ ರೂ. 20/- ಪ್ರೀಮಿಯಂ ಪಾವತಿಸಬೇಕಾಗುತ್ತದೆ. (ಪ್ರೀಮಿಯಂ ಮೊತ್ತವು ವಿಮಾದಾರರ ಬ್ಯಾಂಕ್ ಖಾತೆಯಿಂದ ಸ್ವಯಂಚಾಲಿತವಾಗಿ ಕಡಿತಗೊಳ್ಳುತ್ತದೆ).

  • ಒಂದು ವೇಳೆ ಅಪಘಾತದಿಂದ ಮರಣ ಸಂಭವಿಸಿದರೆ ಅಥವಾ ಶಾಶ್ವತ ಸಂಪೂರ್ಣ ಅಂಗವೈಕಲ್ಯ ಉಂಟಾದರೆ ರೂ. 2.00 ಲಕ್ಷಗಳ ವಿಮಾ ನೆರವು ಲಭ್ಯ.
  • ಶಾಶ್ವತ ಭಾಗಶಃ ಅಂಗವೈಕಲ್ಯಕ್ಕೆ ರೂ. 1.00 ಲಕ್ಷದ ವಿಮಾ ನೆರವು ಲಭ್ಯ.
  • ಈ ಯೋಜನೆಯು 18 ರಿಂದ 70 ವರ್ಷದೊಳಗಿನ ಜನರಿಗೆ ಮಾತ್ರ ಲಭ್ಯ.

ಈ ಎರಡೂ ವಿಮಾ ಯೋಜನೆಗಳು ನೌಕರರ ಕುಟುಂಬಗಳಿಗೆ ಬಹಳ ಉಪಯುಕ್ತವಾಗಿವೆ.

ESS ಪೋರ್ಟಲ್‌ನಲ್ಲಿ ಮಾಹಿತಿ ನವೀಕರಿಸುವುದು ಕಡ್ಡಾಯ

ಆರ್ಥಿಕ ಇಲಾಖೆಯ ಮತ್ತೊಂದು ಪತ್ರ ಸಂಖ್ಯೆ: FD-CAM/160/2023, ದಿನಾಂಕ: 02/11/2023 ರ ಅನ್ವಯ, PMJJBY ಮತ್ತು PMSBY ವಿಮಾ ಯೋಜನೆಗಳ ವಿವರಗಳನ್ನು HRMS ESS ಲಾಗಿನ್ ಪೋರ್ಟಲ್ (https://hrmsess.karnataka.gov.in) ನಲ್ಲಿ ದಾಖಲಿಸಲು ಸೂಚಿಸಲಾಗಿದೆ.

ಇದರಂತೆ, ಪ್ರತಿ ಸಿಬ್ಬಂದಿಗಳು ಮತ್ತು ಡಿಡಿಓಗಳು (DDOs) ಈ ವಿಮಾ ಯೋಜನೆಗಳನ್ನು ಕಡ್ಡಾಯವಾಗಿ ಪಡೆದುಕೊಳ್ಳುವುದು ಮತ್ತು ಈ ವಿವರಗಳನ್ನು ESS ಪೋರ್ಟಲ್‌ನಲ್ಲಿ ನವೀಕರಿಸುವುದು ಅವರ ಜವಾಬ್ದಾರಿಯಾಗಿದೆ.

WhatsApp Image 2025 09 05 at 11.51.16 AM 12

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories