ಭಾರತೀಯ ಜೀವ ವಿಮಾ ನಿಗಮ (LIC) ತನ್ನ 2025ರ ನೇಮಕಾತಿ ಅಭಿಯಾನವನ್ನು ಘೋಷಿಸಿದ್ದು, ದೇಶದಾದ್ಯಂತ ಒಟ್ಟು 841 ಹುದ್ದೆಗಳ ಭರ್ತಿಗೆ ಅವಕಾಶ ಕಲ್ಪಿಸಿದೆ. ಇದರಲ್ಲಿ ಸಹಾಯಕ ಆಡಳಿತಾಧಿಕಾರಿ (AAO) ಹಾಗೂ ಸಹಾಯಕ ಎಂಜಿನಿಯರ್ (AE) ಹುದ್ದೆಗಳು ಒಳಗೊಂಡಿದ್ದು, ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆಗಸ್ಟ್ 16, 2025ರಿಂದ ಆರಂಭಗೊಂಡಿದೆ. ಆಸಕ್ತ ಅಭ್ಯರ್ಥಿಗಳು ಸೆಪ್ಟೆಂಬರ್ 8, 2025ರೊಳಗೆ ಅರ್ಜಿ ಸಲ್ಲಿಸಬೇಕು. ಆಸಕ್ತ ಅಭ್ಯರ್ಥಿಗಳು ನಿಗದಿತ ಅವಧಿಯೊಳಗೆ ಆನ್‌ಲೈನ್(Online) ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು. ಈ ನೇಮಕಾತಿ ಕುರಿತು ಸಂಪೂರ್ಣ ಮಾಹಿತಿ, ಅರ್ಜಿ ಸಲ್ಲಿಸುವ ವಿಧಾನ, ಪ್ರಮುಖ ದಿನಾಂಕಗಳು ಮತ್ತು ಇತರ ಎಲ್ಲ ಅಗತ್ಯ ವಿವರಗಳನ್ನು ಕೆಳಗೆ ನೀಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹುದ್ದೆಗಳ ಹಂಚಿಕೆ(Allocation of posts):
ಸಹಾಯಕ ಎಂಜಿನಿಯರ್ (Assistant Engineer, AE): 81 ಹುದ್ದೆಗಳು
ಸಹಾಯಕ ಆಡಳಿತಾಧಿಕಾರಿ (,Assistant Administrative Officer, AAO – ತಜ್ಞರು): 410 ಹುದ್ದೆಗಳು
ಸಹಾಯಕ ಆಡಳಿತಾಧಿಕಾರಿ (AAO – ಸಾಮಾನ್ಯ): 350 ಹುದ್ದೆಗಳು
ಅರ್ಹತೆ ಮತ್ತು ವಯೋಮಿತಿ(Eligibility and Age Limit):
AAO (Generalist): ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಪದವಿ ಅಗತ್ಯ.
ವಯೋಮಿತಿ (01.08.2025ರಂತೆ): ಕನಿಷ್ಠ 21 ವರ್ಷ, ಗರಿಷ್ಠ 30 ವರ್ಷ. (02.08.1995 ರಿಂದ 01.08.2004ರೊಳಗಿನ ಜನ್ಮ ದಿನಾಂಕ ಹೊಂದಿರಬೇಕು.)
ವಯಸ್ಸಿನ ಸಡಿಲಿಕೆ(Age Relaxation):
SC/ST ಅಭ್ಯರ್ಥಿಗಳಿಗೆ – 5 ವರ್ಷ
OBC ಅಭ್ಯರ್ಥಿಗಳಿಗೆ – 3 ವರ್ಷ
PwBD ಅಭ್ಯರ್ಥಿಗಳಿಗೆ – 10 ರಿಂದ 15 ವರ್ಷ
ಮಾಜಿ ಸೈನಿಕರು ಹಾಗೂ ಖಾಯಂಗೊಳಿಸಿದ LIC ಉದ್ಯೋಗಿಗಳಿಗೆ ಹೆಚ್ಚುವರಿ ಅವಕಾಶಗಳು ಲಭ್ಯ.
ಅರ್ಜಿ ಶುಲ್ಕ(Application fee):
SC/ST/PwBD: ₹85 + ವಹಿವಾಟು ಶುಲ್ಕ + GST
ಇತರೆ ಅಭ್ಯರ್ಥಿಗಳು: ₹700 + ವಹಿವಾಟು ಶುಲ್ಕ + GST
ಆಯ್ಕೆ ಪ್ರಕ್ರಿಯೆ(Selection process):
ಈ ನೇಮಕಾತಿ ಮೂರು ಹಂತಗಳಲ್ಲಿ ನಡೆಯಲಿದೆ:
ಪೂರ್ವಭಾವಿ ಪರೀಕ್ಷೆ (Prelims)
ಮುಖ್ಯ ಪರೀಕ್ಷೆ (Mains)
ಸಂದರ್ಶನ ಮತ್ತು ವೈದ್ಯಕೀಯ ಪರೀಕ್ಷೆ
ಪ್ರಾಥಮಿಕ ಪರೀಕ್ಷೆಯ ಅಂಕಗಳನ್ನು ಅಂತಿಮ ಫಲಿತಾಂಶದಲ್ಲಿ ಪರಿಗಣಿಸಲಾಗುವುದಿಲ್ಲ.
ಮುಖ್ಯ ಪರೀಕ್ಷೆ ಮತ್ತು ಸಂದರ್ಶನದಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಅಂತಿಮ ಮೆರಿಟ್ ಪಟ್ಟಿ ತಯಾರಿಸಲಾಗುತ್ತದೆ.
ಹೇಗೆ ಅರ್ಜಿ ಸಲ್ಲಿಸಬೇಕು?
ಅಭ್ಯರ್ಥಿಗಳು LIC ಯ ಅಧಿಕೃತ ವೆಬ್‌ಸೈಟ್ licindia.in ಅಥವಾ ನೇರವಾಗಿ ಅರ್ಜಿ ಸಲ್ಲಿಕೆ ಲಿಂಕ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಸೆಪ್ಟೆಂಬರ್ 8, 2025
LIC ಯಲ್ಲಿ ಉದ್ಯೋಗವು ಕೇವಲ ಆರ್ಥಿಕ ಭದ್ರತೆ ಮಾತ್ರವಲ್ಲ, ಪ್ರತಿಷ್ಠಿತ ಸರ್ಕಾರಿ ಸಂಸ್ಥೆಯಲ್ಲಿ ಭವಿಷ್ಯ ಕಟ್ಟಿಕೊಳ್ಳುವ ಅವಕಾಶವೂ ಹೌದು. ಹೀಗಾಗಿ, LIC AAO ಹಾಗೂ AE ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಛಿಸುವವರು ತಕ್ಷಣವೇ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿ, ಸಮಯಮಿತಿಯೊಳಗೆ ಅರ್ಜಿ ಸಲ್ಲಿಸಬೇಕು.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.